* * * * * * HASSAN DISTRICT POLICE

Sunday, December 31, 2017

PRESS NOTE : 31-12-2017

ಪತ್ರಿಕಾ ಪ್ರಕಟಣೆ               ದಿನಾಂಕ: 31-12-2017

ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನ ಬಂಧನ, ಮರಳು ಸಮೇತ ಓಮಿನಿ ವ್ಯಾನ್ ವಶ:
ದಿನಾಂಕ: 30/31-12-2017 ರಂದು ಬೆಳಗಿನ ಜಾವ 3-15 ಗಂಟೆ ಸಮಯದಲ್ಲಿ ಶ್ರೀ ಬಾಲಕೃಷ್ಣ, ಎಎಸ್ಐ, ಸಕಲೇಶಪುರ ನಗರ ಠಾಣೆ ರವರು ಸಿಬ್ಬಂದಿಗಳೊಂದಿಗೆ ರಾತ್ರಿ ರೌಂಡ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾಗ  ಸಕಲೇಶಪುರ ತಾಲ್ಲೂಕು, ದೊಡ್ಡನಾಗರ ಗ್ರಾಮದ ಹೇಮಾವತಿ ನದಿ ತೀರದಲ್ಲಿ ಅಕ್ರಮವಾಗಿ ಮರಳನ್ನು ಓಮ್ನಿನಿ ವಾಹನದಲ್ಲಿ ಮರಳು ಸಾಗಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಗಿಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಸುನೀಲ್@ ಕುಮಾರ್ ಬಿನ್ ಸಂಗಯ್ಯ, 32 ವರ್ಷ, ಬೈಕೆರೆ ಗ್ರಾಮ, ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮರಳು ಸಮೇತ ಓಮಿನಿ ವ್ಯಾನ್ನ್ನು ಅಮಾನತ್ತು ಪಡಿಸಿಕೊಂಡು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಬೈಕ್ ಡಿಕ್ಕಿ, ಪಾದಚಾರಿ ಸಾವು
ದಿನಾಂಕ: 30-12-2017 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಇಬ್ಬೀಡು ಗ್ರಾಮದ ವಾಸಿ ಶ್ರೀ ನಾರಾಯಣಸ್ವಾಮಿ, ರವರು ಹಾಸನ ನಗರದ ಆರ್.ಸಿ. ರಸ್ತೆಯ ಮಾತಾಶ್ರಮ ಕ್ರಾಸ್ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ನೊಂದಣಿಯಾಗದ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ನಾರಾಯಣಸ್ವಾಮಿ ಬಿನ್ ರಾಜು, 50 ವರ್ಷ, ಇಬ್ಬೀಡು ಗ್ರಾಮ, ಮಾದಿಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು, ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ಐ.ಆರ್. ರಮೇಶ್, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್ ಡಿಕ್ಕಿ, ಪಾದ ಚಾರಿ ಸಾವು
ದಿನಾಂಕ: 30-12-2017 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಹೋಬಳಿ, ಮುಸವತ್ತೂರು ಗ್ರಾಮದ ವಾಸಿ ಶ್ರೀ ಪುಟ್ಟಸ್ವಾಮಿಗೌಡ, ರವರು ಅರಕಲಗೂಡಿನಿಂದ ಹೊನ್ನವಳ್ಳಿ ಗ್ರಾಮದಕ್ಕೆ ಹೋಗಲು ಅರಕಲಗೂಡು ತಾಲ್ಲೂಕು, ಅರಕಲಗೂಡು-ಹೊಳೆನರಸೀಪುರ ರಸ್ತೆ, ಹೊನ್ನವಳ್ಳಿ ಗ್ರಾಮದ ಹೇಮಾವತಿ ಶಾಲೆಯ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-18, ಕೆ-8610 ರ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಪುಟ್ಟಸ್ವಾಮಿ ರವರಿಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಪುಟ್ಟಸ್ವಾಮಿ ಬಿನ್ ಮರಿಹುಚ್ಚಯ್ಯ, 40 ವರ್ಷ, ಮುಸವತ್ತೂರು ಗ್ರಾಮ, ಮಲ್ಲಿಪಟ್ಟಣ ಹೋಬಳಿ, ಅರಕಲಗೂಡು ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಗೀತಾ, ರವರು ಕೊಟ್ಟ ದೂರಿನ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

PRESS NOTE : 30-12-2017

ಪತ್ರಿಕಾ ಪ್ರಕಟಣೆ          ದಿನಾಂಕ: 30-12-2017
ಕೆಎಸ್ಆರ್ಟಿಸಿ ಹರಿದು ಬೈಕ್ ಚಾಲಕ ಸಾವು : ದಿನಾಂಕ: 29-12-2017 ರಂದು ಸಂಜೆ 6-20 ಗಂಟೆ ಸಮಯದಲ್ಲಿ  ಅರಸೀಕೆರೆ ತಾಲ್ಲೂಕು, ಜೇನುಕಲ್ಲು ಸಿದ್ದಾಪುರ ಗ್ರಾಮದ ವಾಸಿ ಶ್ರೀ ಚಂದ್ರಪ್ಪ, ರವರು ಕೆಎ-04 ಹೆಚ್ಯು-4626 ರ ಪಲ್ಸರ್ ಬೈಕ್ನಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಅರಸೀಕೆರೆ-ಹಾಸನ ರಸ್ತೆ, ಗೀಜಿಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಕೆಎಸ್ಆರ್ಟಿಸಿ ಬಸ್ಸನ್ನು ಓವರ್ ಟೇಕ್ ಮಾಡಿಕೊಂಡು ಪಿರ್ಯಾದಿ ಶ್ರೀ ದಯಾನಂದ, ರವರ ಬೈಕ್ಗೆ ಡಿಕ್ಕಿ, ಮಾಡಿ ಪರಿಣಾಮ ಶ್ರೀ ಚಂದ್ರಪ್ಪ, ರವರು ಬೈಕ್ ಸಮೇತ ರಸ್ತೆಗೆ ಬಿದ್ದ ತಕ್ಷಣ ಅರಸೀಕೆರೆ ಕಡೆಯಿಂದ ಬಂದ ಕೆಎಸ್ಆರ್ಟಿಸಿ ಬಸ್ಸ್ ಆತನ ಮೇಲೆ ಹರಿದು ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಿ ಶ್ರೀ ಚಂದ್ರಪ್ಪ ಬಿನ್ ಲೇಟ್ ಬಸಪ್ಪ, ಜೇನುಕಲ್ಲು ಸಿದ್ದಾಪುರ ಗ್ರಾಮ, ಅರಸೀಕೆರೆ ತಾಲ್ಲೂಕು ರವರು ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಪ್ರತ್ಯಕ್ಷದರ್ಶಿ ಶ್ರೀ ದಯಾನಂದ, ರವರು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.



ಹುಡುಗ ಕಾಣೆ ದಿನಾಂಕ: 22-12-2017 ರಂದು ಸಕಲೇಶಪುರ ತಾಲ್ಲೂಕು, ಹೆಬ್ಬಸಾಲೆ ಗ್ರಾಮದ ವಾಸಿ ಶ್ರೀ ಗಿರೀಶ್, ರವರು ರಾತ್ರಿ ಊಟ ಮಾಡಿಕೊಂಡು ಮನೆಯಲ್ಲಿ ಮಲಗಿದ್ದು, ಬೆಳಿಗ್ಗೆ ಎದ್ದು ನೋಡಲಾಗಿ ಮನೆಯಲ್ಲಿ ಇರಲಿಲ್ಲ, ಎಲ್ಲಾ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಗಿರೀಶ್ನ ಅಣ್ಣ ಶ್ರೀ ಹರೀಶ್, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಶ್ರೀ ಗಿರೀಶ್ ಬಿನ್ ಕುಮಾರ್, 20 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ನೀಲಿ ಬಣ್ಣದ ಶರ್ಟ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಈ ಹುಡುಗನ ಸುಳಿವು ಸಿಕ್ಕಲ್ಲಿ 08173-244100 ಕ್ಕೆ ಸಂಪರ್ಕಿಸುವುದು.

PRESS NOTE : 29-12-2017

        ಪತ್ರಿಕಾ ಪ್ರಕಟಣೆ                                                ದಿನಾಂಕ: 29-12-2017.

ಬೈಕ್ ಮರಕ್ಕೆ ಡಿಕ್ಕಿ ಬೈಕ್ ಸವಾರನ ಸಾವು  :     ದಿನಾಂಕ: 28-12-2017 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಮಂಡ್ಯ ಜಿಲ್ಲೆ, ಅಕ್ಕಿಹಬ್ಬಾಳು ಹೋಬಳಿ, ಅಲಾಂಬಡಿ ಕಾವಲು ಗ್ರಾಮದ ಸೋಮಶೇಖರ್ ಪಿ ರವರು ಹೊಳೆನರಸೀಪುರ ತಾಲ್ಲೂಕು ಬಾಗೀವಾಳು ಗ್ರಾಮಕ್ಕೆ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಊರಿಗೆ ಹೋಗಲು ತಮ್ಮ ಬಾಬ್ತು ನಂಬರ್ ಇಲ್ಲದ ಮೋಟಾರ್ ಬೈಕಿನಲ್ಲಿ  ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿದೊಡ್ಡಹಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ರಸ್ತೆಯ ಬಲಬದಿಯ ಹತ್ತಿರವಿರುವ ಮರಕ್ಕೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸೋಮಶೇಖರ್ ಪಿ., 51 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಲಲ್ಲು ಶೇಖರ್ ಎ.ಎಸ್. ರವರು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ. 


ಮನುಷ್ಯ ಕಾಣೆ :        ದಿನಾಂಕ; 12-05-2017 ರಂದು ಹಾಸನದ ಶ್ರೀನಗರ ವಾಸಿ ಜಮೃದ್ಖಾನ್ ರವರು ಮನೆಯಿಂದ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಜಮೃದ್ಖಾನ್ ರವರ  ತಂದೆ ಶ್ರಿ ಗೌಸ್ಖಾನ್ ರವರು ದಿನಾಂಕ: 28-12-2017 ರಂದು ಕೊಟ್ಟ ದೂರಿನ ಮೇರೆಗೆ  ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಜಮೃದ್ ಖಾನ್ ಬಿನ್ ಗೌಸ್ ಖಾನ್, 36 ವರ್ಷ, 5'6'' ಅಡಿ ಎತ್ತರ, ಕನ್ನಡ ಮತ್ತು ಉದರ್ು ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ನಗರ ಠಾಣೆ ಫೋನ್ ನಂ. 08172-268333 ಕ್ಕೆ ಸಂಪರ್ಕಿಸುವುದು.

Saturday, December 30, 2017

PRESS NOTE 28-12-2017

                       

                       ಪತ್ರಿಕಾ ಪ್ರಕಟಣೆ                        ದಿನಾಂಕ: 28-12-2017

ಮಟ್ಕಾ-ಜೂಜಾಡುತ್ತಿವನ ಬಂಧನ, ಬಂಧಿತನಿಂದ ಸುಮಾರು 1,220/- ನಗದು ವಶ:

        ದಿನಾಂಕ: 27-12-2107 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ  ಹಾಸನದ ಹೊಸಲೈನ್ ರಸ್ತೆಯಲ್ಲಿರುವ ಸುಮಂತ, ರವರ ಕ್ಯಾಂಟೀನ್ ಮುಂಭಾಗದಲ್ಲಿರುವ ಸಾರ್ವಜನಿಕರ ಸ್ಥಳದಲ್ಲಿ ಮಟ್ಕಾ ಜೂಜಾಡುತ್ತಿದ್ದಾರೆಂದು ಶ್ರೀ ಡಿ. ಸತೀಶ್, ಪಿಐ, ಸಿಇಎನ್, ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮಟ್ಕಾ-ಜೂಜಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ರಂಜು ಬಿನ್ ಕೆ.ಬಿ. ಕಾಳಪ್ಪ, 21 ವರ್ಷ, ಕ್ಯಾಂಟೀನ್ ಕೆಲಸ, ಬನಶಂಕರಿ ಕಲ್ಯಾಣ ಮಂಟಪದ ಹತ್ತಿರ ವಲ್ಲಭಾಯಿ ರಸ್ತೆ, ಹಾಸನ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಜಾಟಾದಲ್ಲಿ ಪಣಕ್ಕಿಟ್ಟಿದ್ದ ಸುಮಾರು 1,220/-ನಗದನ್ನು ಅಮಾನತ್ತುಪಡಿಸಿಕೊಂಡು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ
ಬೈಕ್ಗೆ ಬೈಕ್ ಡಿಕ್ಕಿ, ಒಂದು ಸಾವು ಒಬ್ಬರಿಗೆ ಸಾವು

        ದಿನಾಂಕ: 27-12-2017 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಚೀರನಹಳ್ಳಿ ಹೊಸೂರು ಗ್ರಾಮದ ವಾಸಿ ಶ್ರೀ ಕೇಶವಶೆಟ್ಟಿ ರವರ ಬಾಬ್ತು ಕೆಎ-13 ಇಎ-965 ರ ಬೈಕ್ನಲ್ಲಿ ಅಕ್ಕನ ಮಗಳಾದ ಕು|| ಕಲ್ಪನಾಳನ್ನು ಕೂರಿಸಿಕೊಂಡು ಅಣ್ಣೇನಹಳ್ಳಿ ಗ್ರಾಮಕ್ಕೆ ಹೋಗಲು, ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಅಣ್ಣೇನಹಳ್ಳಿ ಗೇಟ್, ಎನ್ ಹೆಚ್-75, ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13 ಇಎ-965 ರ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಕೇಶವಶೆಟ್ಟಿ ಬಿನ್  ದೊಡ್ಡಯ್ಯಶೆಟ್ಟಿ, 25 ವರ್ಷಚೀರನಹಳ್ಳಿ ಹೊಸೂರು ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಹಾಗೂ ಗಾಯಗೊಂಡ ಕು|| ಕಲ್ಪನಾ, ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ಧರ್ಮಶೆಟ್ಟಿ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನ ಬಂಧನ, ಬಂಧಿತನಿಂದ ಸುಮಾರು 3,403/- ಬೆಲೆಯ ಮದ್ಯ ವಶ:
ದಿನಾಂಕ: 27-12-2017 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಉಳ್ಳೇನಹಳ್ಳಿ ಸೇತುವೆ ಹತ್ತಿರ ಯಾರೋ ಒಬ್ಬ ವ್ಯಕ್ತಿ ಬ್ಯಾಗಿನಲ್ಲಿ ಮದ್ಯ ಪಾಕೇಟ್ಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆಂದು ಶ್ರೀ ರಾಜನಾಯ್ಕ್, ಪಿಎಸ್ಐ, ಕೊಣನೂರು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಕುಮಾರ ಬಿನ್ ಮಾಳೇಗೌಡ, 36 ವರ್ಷ, ಸೀಗೋಡು ಗ್ರಾಮ, ಸಾಲಿಗ್ರಾಮ ಹೋಬಳಿ, ಕೆ.ಆರ್. ನಗರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಸುಮಾರು 3,403/- ಬೆಲೆಯ 121 ಟೆಟ್ರಾ ಪ್ಯಾಕೇಟ್ ಗಳನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಮನುಷ್ಯ ಕಾಣೆ
ದಿನಾಂಕ: 23-10-2017 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕುಂದೂರು ಹೋಬಳಿ, ಮಂದಿರ ಗ್ರಾಮದ ವಾಸಿ ಶ್ರೀ ಪುಟ್ಟಣ್ಣಯ್ಯ, ರವರು ವೈದ್ಯಾಪ್ಪ ವೇತನವನ್ನು ನೋಡಿಕೊಂಡು ಬರಲು ಬ್ಯಾಡರಹಳ್ಳಿ ಗ್ರಾಮದ ವಾಸಿ ಶ್ರೀ ಸೋಮಶೇಖರ್, ರವರ ಬೈಕ್ನಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಶೆಟ್ಟಿಹಳ್ಳಿ ಗ್ರಾಮಕ್ಕೆ ಹೋಗಿದ್ದು, ವಾಪಸ್ ಇದುವರೆವಿಗೂ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಪುಟ್ಟಣ್ಣಯ್ಯ, ರವರ ಸಂಬಂಧಿಕರಾದ ಶ್ರೀ ಬಸವಲಿಂಗಪ್ಪ, ರವರು ಕೊಟ್ಟ ದೂರಿನ ಮೇರೆಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀ ಪುಟ್ಟಣ್ಣಯ್ಯ, 75 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಾಣ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಬಿಳಿ ಪಂಚೆ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-225475 ಕ್ಕೆ ಸಂಪರ್ಕಿಸುವುದು.

PRESS NOTE 27-12-2017

                                            ಪತ್ರಿಕಾ ಪ್ರಕಟಣೆ            ದಿನಾಂಕ: 27-12-2017

ಬೈಕ್  ನಿಯಂತ್ರಣ ತಪ್ಪಿ, ಬೈಕ್ ಹಿಂಬದಿ ಕುಳಿತಿದ್ದ ವ್ಯಕ್ತಿ ಸಾವು

ದಿನಾಂಕ: 23-12-2017 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ದಿಂಡಗೂರು ಗ್ರಾಮದ ವಾಸಿ ಶ್ರೀ ಕೃಷ್ಣಮೂರ್ತಿ, ರವರು  ಅಳಿಯ ಶ್ರೀ ಮಂಜುನಾಥ್, ರವರ ಬಾಬ್ತು ಕೆಎ-02- ಹೆಚ್ಕ್ಯೂ-8518 ರ ಬೈಕ್ನಲ್ಲಿ ಚನ್ನರಾಯಪಟ್ಟಣಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಗೇಟ್ ಬಳಿ ಎನ್ ಹೆಚ್-75, ಬಿ.ಎಂ. ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಸೋಲಾರ್ ಲೈಟ್ ಕಂಬಕ್ಕೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಶ್ರೀ ಕೃಷ್ಣಮೂರ್ತಿ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಳಾಗಿದ್ದು, ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಿನಾಂಕ: 25-12-2017 ರಂದು  ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಶ್ರೀ ಕೃಷ್ಣಮೂರ್ತಿ, 50 ವರ್ಷ, ದಿಂಡಗೂರು ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಪ್ರೇಮ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.

Tuesday, December 26, 2017

PRESS NOTE 26-12-2017

                                                          

                                                            ಪತ್ರಿಕಾ ಪ್ರಕಟಣೆ                      ದಿನಾಂಕ: 26-12-2017

ಬೈಕ್ಗೆ ಬೈಕ್ ಡಿಕ್ಕಿ, ಒಬ್ಬನ ಸಾವು, ಒಬ್ಬರಿಗೆ ಗಾಯ:

ದಿನಾಂಕ: 24-12-2107 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಸಿಗರನಹಳ್ಳಿ ಗ್ರಾಮದ ವಾಸಿ ಶ್ರೀ ಲೋಕೇಶ್, ರವರು ಸ್ನೇಹಿತರಾದ ಶ್ರೀ ವಿಜಯ್ಕುಮಾರ್, ರವರ ಬಾಬ್ತು ಕೆಎ-13 ಇಹೆಚ್-5103 ರ ಬೈಕ್ನಲ್ಲಿ ಹೊಳೆನರಸೀಪುರ ತಾಲ್ಲೂಕು, ಹಾಸನ-ಮೈಸೂರು ರಸ್ತೆ, ನ್ಯಾಮನಹಳ್ಳಿ ಗ್ರಾಮ ಕ್ರಶರ್ ಹತ್ತಿರ ಹೋಗುತ್ತಿದ್ದಾಗ ಬೈಕ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಮುಂದೆ ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಮಾಡಿದ  ಪರಿಣಾಮ ಶ್ರೀ ಲೋಕೇಶ್ ಮತ್ತು ಶ್ರೀ ವಿಜಯ ಕುಮಾರ್, ರವರು ಬೈಕ್ ಸಮೇತ ಕೆಳಕ್ಕೆ ಬಿದಿದ್ದು, ಶ್ರೀ ಲೋಕೇಶ್ ಬಿನ್ ವೆಂಕಟೇಶ್, 22ವರ್ಷ, ಸಿಗರನಹಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಗಾಯಗೊಂಡ ಶ್ರೀ ವಿಜಯ ಕುಮಾರ್, ರವರು ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಪ್ರತ್ಯಕ್ಷದಶರ್ಿ ಶ್ರೀ ಶ್ರೀಧರ್, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಂಗಸು ಕಾಣೆ



ದಿನಾಂಕ: 18-12-2017 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ಚನ್ನರಾಯಪ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಕೋಡಿಬೆಳಗೊಳ ಗ್ರಾಮದ ವಾಸಿ ಶ್ರೀಮತಿ ಕಮಲಮ್ಮ, ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೂಲಿ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಕಮಲಮ್ಮ, ರವರ ಪತಿ ಶ್ರೀ ರಾಮಚಂದ್ರಯ್ಯ, ರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಕಮಲಮ್ಮ ಕೋಂ ರಾಮಚಂದ್ರಯ್ಯ, 55 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣ ಸೀರೆ ಮತ್ತು ರವಿಕೆ ಧಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08176-257229 ಕ್ಕೆ ಸಂಪಕರ್ಿಸುವುದು.

PRESS NOTE 25-12-2017

                                         

                                          ಪತ್ರಿಕಾ ಪ್ರಕಟಣೆ                                    ದಿನಾಂಕ:25-12-2017

ಟ್ರಾಕ್ಟರ್ ಮಗುಚಿ ಒಂದು ಸಾವು :
 ದಿನಾಂಕ: 24-12-2017 ರಂದು ಮಧ್ಯಾಹ್ನ 1.00  ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕ್ ಅಂಜನಹೊಸಳ್ಳಿಗ್ರಾಮದ ರಾಮಚಂದ್ರೇಗೌಡರ ಮಗ ಮಹೇಶ ಮತ್ತು ಕೆಎ-13-ಟಿಬಿ-5694-95 ರ ಟ್ರಾಕ್ಟರ್ ಚಾಲಕ ಇಬ್ಬರು  ಅಂಜನಹೊಸಳ್ಳಿಯಿಂದ ಮುದುಗನೂರಿಗೆ ಕ್ರಷರ್ನಿಂದ ಜಲ್ಲಿ ತರಲು ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಅಂದರೆ ಸುಬ್ಬೇಗೌಡರ ಜಮೀನಿನ ಹತ್ತಿರ ರಸ್ತೆಯಲ್ಲಿ ಟ್ರಾಕ್ಟರ್ ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಟ್ರಾಕ್ಟರ್ ಮಗುಚಿದ ಕಾರಣ ಮಹೇಶ ಬಿನ್ ರಾಮಚಂದ್ರೇಗೌಡ, 28ವರ್ಷ, ಅಂಜನಹೊಸಳ್ಳಿಗ್ರಾಮ, ಅರಕಲಗೂಡು ತಾಲ್ಲೂಕ್ ರವರು ಸ್ಥಳದಲ್ಲಿ ಮೃತಪಟ್ಟಿರುತ್ತಾರೆಂದು ಮೃತರ ತಂದೆ ರಾಮಚಂದ್ರೇಗೌಡ ರವರು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.
ಬೈಕಿಗೆ ಹಾಲಿನ ಗೂಡ್ಸ್ ವಾಹನ ಡಿಕ್ಕಿ ಬೈಕ್ ಚಾಲಕ ಸಾವು :
ದಿನಾಂಕ: 24-12-2017 ರಂದು ಸಂಜೆ 7.30  ಗಂಟೆ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕ್ ಉಗನೆಹಳ್ಳಿಗ್ರಾಮದ ವಾಸಿ ಕಾಂತರಾಜು ರವರ ಅಕ್ಕನ ಮಗ ರಂಜಿನ್ ತನ್ನ ಬಾಬ್ತು ಕೆಎ-13-ಇಜೆ-6657 ರ ಬೈಕಿನಲ್ಲಿ ಚಿಕ್ಕಮಗಳೂರಿಗೆ ಹೋಗಿ ವಾಪಸ್ಸು ಹಾಸನಕ್ಕೆ ಬರಲು ಕಾಂತರಾಜು ರವರ ಮಗ ರಕ್ಷಿತನನ್ನು ಬೈಕಿನ ಹಿಂಭಾಗದಲ್ಲಿ ಕೂರಿಸಿಕೊಂಡು ಬೇಲೂರು ಹಾಸನ ರಸ್ತೆ ಸಂಕೇನಹಳ್ಳಿ ರಸ್ತೆ ಕ್ರಾಸ್ ಹತ್ತಿರ ಹಾಸನ ಕಡೆಯಿಂದ ಅಂದರೆ ಎದುರುಗಡೆಯಿಂದ ಕೆಎ-04-ಟಿಆರ್-001321 ಟೆಂಪ್ರವರಿ ನಂಬರಿನ ಹಾಲಿನ ಗೂಡ್ಸ್ ವಾಹನದ ಚಾಲಕ ಅತಿವೇಗ ಮತ್ತು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಇಬ್ಬರು ರಸ್ತೆ ಮೇಲೆ ಬಿದ್ದಾಗ ಚಿಕಿತ್ಸೆಗೆಂದು ಹಾಸನದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ರಂಜಿತ ಬಿನ್ ರವಿಕುಮಾರ, 22 ವರ್ಷ, ಕಸಿಗೆ, ಚಿಕ್ಕಮಗಳೂರು ಜಿಲ್ಲೆ ರವರು ಮೃತಪಟ್ಟಿರುತ್ತಾರೆಂದು ಮೃತರ ಮಾವ ಕಾಂತರಾಜು ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತದೆ.

ಜೂಜಾಡುತ್ತಿದ್ದ 5 ಜನರ ಬಂಧನ 5523/- ನಗದು ವಶ
      ದಿನಾಂಕ:24-12-2017 ರಂದು ರಾತ್ರಿ 9.00 ಗಂಟೆ ಸಮಯದಲ್ಲಿ ಹಾಸನ ನಗರದ ಜಿ.ಎಂ.ಶಾಲೆಯ ಎದುರು ಇರುವ ಕಬರ್ಸ್ಥಾನದ ಖಾಲಿ ಜಾಗದಲ್ಲಿ ಲೈಟ್ ಬೆಳಕಿನಲ್ಲಿ ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಪೆನ್ಷನ್ಮೊಹಲ್ಲಾ ಠಾಣೆಯ ಎಎಸ್ಐ ಶ್ರೀ.ಚಿಕ್ಕಣ್ಣ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ ಹೆಸರು ವಿಳಾಸ ಕೇಳಲಾಗಿ 1) ಸುಹಿಲ್ ಪಾಷ ಬಿನ್ ಮಮ್ತಾಜ್ ಅಹಮದ್, 36ವರ್ಷ, ಮಟನ್ ಮಾಕರ್ೆಟ್, ಹಾಸನ  2) ಮುನ್ನಾ ಬಿನ್ ದಸ್ತಗಿರ, 30ವರ್ಷ, ಮಟನ್ ಮಾಕರ್ೆಟ್, ಹಾಸನ  3) ಕಬೀರ್ ಬಿನ್ ಅಬ್ದುಲ್ ರೋಪ್, 30ವರ್ಷ, ಮೆಹಬೂಬ್ನಗರ, ಹಾಸನ 4) ಸುಹಿಲ್ ಬಿನ್ ಮಹಮದ್ ಪೀರ್, 38ವರ್ಷ, ಮಟನ್ ಮಾಕರ್ೆಟ್, ಹಾಸನ  5) ಬಾಬು ಬಿನ್ ಮಹಮದ್ ಗೌಸ್, 48ವರ್ಷ, ಮಟನ್ ಮಾಕರ್ೆಟ್, ಹಾಸನ  ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು  ಜೂಜಾಟದಲ್ಲಿ ಪಣಕ್ಕಿಟ್ಟಿದ್ದ  5523=00 ನಗದನ್ನು ಅಮಾನತ್ತುಪಡಿಸಿಕೊಂಡು ಪೆನ್ಷನ್ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.
ಜೂಜಾಡುತ್ತಿದ್ದ 5 ಜನರ ಬಂಧನ 1100/- ನಗದು ವಶ


      ದಿನಾಂಕ:24-12-2017 ರಂದು ಸಂಜೆ 5.30 ಗಂಟೆ ಸಮಯದಲ್ಲಿ ಅರಸೀಕೆರೆ ನಗರದ ಗುಂಡ್ಕಾನಹಳ್ಳಿ ರೈಲ್ವೆ ಟ್ರಾಕ್ ಹತ್ತಿರ ಅಂದರ್-ಬಾಹರ್ ಜೂಜಾಟಾಡುತ್ತಿದ್ದಾರೆಂದು ಅರಸೀಕೆರೆ ನಗರ ಠಾಣೆಯ ಪಿಐ ಶ್ರೀ.ಪ್ರಭಾಕರ್ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರ ಮೇಲೆ ದಾಳಿ ಮಾಡಿ ಹೆಸರು ವಿಳಾಸ ಕೇಳಲಾಗಿ 1)ಸತ್ತಾರ್ ಬಿನ್ ರಹೀಂಸಾಬ್, 34ವರ್ಷ, ಜೇನುಕಲ್ ನಗರ, ಅರಸೀಕೆರೆ  2) ಜಮೀಲ್ಪಾಷ ಬಿನ್ ಮಹಮದ್ ರಸೂಲ್ಸಾಬ್, 29ವರ್ಷ, ಮುಜಾವರ್ಮೊಹಲ್ಲಾ, ಅರಸೀಕೆರೆ 3) ಮೆಹಬೂಬ್ಪಾಷ ಬಿನ್ ಮಹಮದ್ ಇಸಾಕ್, 34ವರ್ಷ, ಮುಜಾವರ್ಮೊಹಲ್ಲಾ, ಅರಸೀಕೆರೆ 4) ಬಾಬು ಬಿನ್ ಸೈಯದ್ ಖಲಂದರ್, 34ವರ್ಷ, ಮುಜಾವರ್ಮೊಹಲ್ಲಾ, ಅರಸೀಕೆರೆ 5) ಮಂಜುನಾಥ ಬಿನ್ ಕರೀಗೌಡ, 47ವರ್ಷ, ಕಂತೇನಹಳ್ಳಿ, ಅರಸೀಕೆರೆ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು  ಜೂಜಾಟದಲ್ಲಿ ಪಣಕ್ಕಿಟ್ಟಿದ್ದ  1100=00 ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.