* * * * * * HASSAN DISTRICT POLICE

Saturday, January 18, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 18-01-2020
ಪತ್ರಿಕಾ ಪ್ರಕಟಣೆ              ದಿನಾಂಕ: 18-01-2020

2,84,000/- ಹಣ ಕಳವು
     ಸಕಲೇಶಪುರ ಪಟ್ಟಣ, ಬಿ.ಎಂ.ರಸ್ತೆ, ನಂಜಂಪ್ಪಕಾಂಪೌಂಡ್ ನಲ್ಲಿರುವ ಎಸ್ಕೆ.ಕಾಫಿ ಲಿಂಕ್ಸ್ ನಲ್ಲಿ ಪಿರ್ಯಾದಿ ಮಹಮದ್ ಸೈಫುಲ್ಲಾರವರು ಕಾಳು ಮೆಣಸು ವ್ಯಾಪಾರವನ್ನು ಮಾಡಿಕೊಂಡಿದ್ದು, ದಿನಾಂಕ: 17-01-2020 ರಂದು ಬೆಳಿಗ್ಗೆ ವ್ಯಾಪಾರಕ್ಕೆಂದು 3 ಲಕ್ಷ ರೂಗಳನ್ನು ಹೊಂದಿಸಿಕೊಂಡು  ತಮ್ಮ ಮಳಿಗೆಗೆ ಬಂದಿದ್ದು, ತಮ್ಮ ಕ್ಯಾಷ್ ಟೇಬಲ್ ನ ಡ್ರಾಯರ್ ಒಳಗೆ ಇಟ್ಟಿದ್ದು, ಈ ಹಣದ ಪೈಕಿ 16 ಸಾವಿರ ರೂಪಾಯಿಗಳನ್ನು ಗ್ರಾಹಕರಿಗೆ ನೀಡಿ, ಉಳಿದ 2,84,000/- ಹಣವನ್ನು ಕ್ಯಾಷ್ ಟೇಬಲ್ ಒಳಗೆ ಇಟ್ಟಿದ್ದು, ಬೆಳಿಗ್ಗೆ ಸುಮಾರು 09-45 ಗಂಟೆ ಸಮಯದಲ್ಲಿ  ಪಿರ್ಯಾದಿಯವರು ತಮ್ಮಅಂಗಡಿಗೆ ಹೊಂದಿಕೊಂಡಿರುವ ಧರ್ಮಪ್ರಕಾಶ್ ರವರ ಅಂಗಡಿಗೆ ಹೋಗಿ ಮಾತನಾಡಿಸಿಕೊಂಡು ಬಂದು ಬೆಳಿಗ್ಗೆ 10-15 ಗಂಟೆಗೆ ಗ್ರಾಹಕರೊಬ್ಬರಿಗೆ ಪಾವತಿಸಬೇಕಾಗಿದ್ದ ಹಣವನ್ನು ನೀಡಲೆಂದು ಕ್ಯಾಷ್ ಟೇಬಲ್ ಒಳಗೆ ನೋಡಿದಾಗ ಕ್ಯಾಷ್ ಕೌಂಟರ್ ನಲ್ಲಿದ್ದ 2,84,000/- ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಮಹಮ್ಮದ್ ಸೈಫುಲ್ಲಾರವರುಕೊಟ್ಟದೂರಿನ ಮೇರೆಗೆ  ಸಕಲೇಶಪುರ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.

18000/- ಬೆಲೆಯ ಬೆಳ್ಳಿಯ ವಸ್ತುಗಳ ಕಳವು
     ದಿನಾಂಕ: 03-01-2020 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ವಿದ್ಯಾನಗರ ವಾಸಿ ಶ್ರೀನಿವಾಸ ರವರು ಬೆಂಗಳೂರಿಗೆ ಮಗಳನ್ನು ನೋಡಿಕೊಂಡು ಬರಲು ಪತ್ನಿಯೊಂದಿಗೆ ಹೋಗಿ ವಾಪಸ್ ದಿನಾಂಕ: 15-01-2020 ರಂದು ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ಮನೆಯ ಹತ್ತಿರ ಬಂದು ನೋಡಲಾಗಿ ಮನೆಯ ಮುಂಭಾಗದ ಗೇಟಿನ ಬೀಗವನ್ನು ಹೊಡೆದು ಮನೆಯ ಮುಂಭಾಗದ ಬಾಗಿಲಿನ  ಡೋರ್ ಲಾಕ್ ನ್ನು ಮೀಟಿ ಮನೆಯೊಳಗೆ ಹೋಗಿ  ಬೀರುವಿನಲ್ಲಿದ್ದ ಒಂದು ಬೆಳ್ಳಿಯ ಚೊಂಬು, 2 ಜೊತೆ ಬೆಳ್ಳಿಯ ದೀಪಾಲೆ ಕಂಬ, ಬೆಳ್ಳಿಯ ಲಕ್ಷ್ಮಿದೇವರ ಮುಖವಾಡ, ಒಂದು ಸಣ್ಣ ಬೆಳ್ಳಿಯ ದೀಪ ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ 18000/- ರೂಗಳಾಗಿರುತ್ತದೆ. ಪತ್ತೆ ಮಾಡಿಕೊಡಬೇಕೆಂದು ಶ್ರೀ ಶ್ರೀನಿವಾಸ ರವರು ದಿನಾಂಕ: 17-01-2020 ರಂದುಕೊಟ್ಟದೂರಿನ ಮೇರೆಗೆಚನ್ನರಾಯಪಟ್ಟಣ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ. 

ಕ್ಷುಲ್ಲಕಕಾರಣ ಮಾರಣಾಂತಿಕ ಹಲ್ಲೆ
     ದಿನಾಂಕ: 16-01-2020 ರಂದುರಾತ್ರಿ 11-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ, ಮದಘಟ್ಟಗ್ರಾಮದ ಪಿರ್ಯಾದಿ ಮಲ್ಲಿಕಾರ್ಜುನ ರವರು ತಮ್ಮ ಬಾಬ್ತು ಕೆಎ-46-ಕೆ-7611 ರ ಸ್ಕೂಟಿಯಲ್ಲಿ ಚಿಕ್ಕಮಗಳೂರು ಮುಗುಳುವಳ್ಳಿ ಗ್ರಾಮದ ಸಿಎನ್ ಕಾಫಿ ವರ್ಕನಿಂದ ಮಧಘಟ್ಟಕ್ಕೆ ಹೋಗಲು ಬೇಲೂರು ಪಟ್ಟಣ ಕಾಪೋರೇಷನ್ ಬ್ಯಾಂಕಿನ ಮುಂಭಾಗ ಹೋಗುತ್ತಿರುವಾಗ ಮೀನು ಮಾರುಕಟ್ಟೆ ಕಡೆಯಿಂದ ಬಂದ ಕೋಟೆ ವಾಸಿ ಶಶಿ ಎಂಬುವರು ಪಿರ್ಯಾದಿಯವರಿಗೆ  ಬೈಕಿನಲ್ಲಿ ಗುದ್ದಿಸುವ ರೀತಿ ಬಂದು ಅಡ್ಡ ಹಾಕಿದ್ದು, ಪಿರ್ಯಾದಿಯವರು ಕೇಳಿದ್ದಕ್ಕೆ  ಜಗಳ ತೆಗೆದು ಆವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಬಲಭಾಗಕ್ಕೆ  ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿ ಕೊಲೆ ಬೆದರಿಕೆ ಹಾಕಿರುತ್ತಾನೆಂದು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀ ಮಲ್ಲಿಕಾರ್ಜುನರವರು ಕೊಟ್ಟ ಹೇಳಿಕೆ ಮೇರೆಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.

ಮನುಷ್ಯಕಾಣೆ
     ದಿನಾಂಕ: 13-12-2019 ಮಧ್ಯಾಹ್ನ 02-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು ದಂಡಿಗನಹಳ್ಳಿ ಹೋಬಳಿ, ಕಾಚೇನಹಳ್ಳಿ ಗ್ರಾಮದ ಗಿಡ್ಡೇಗೌಡರವರ ಮಗ ಧರ್ಮರಾಜ ಡ್ರೈವಿಂಗ್ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದವನು ವಾಪಸ್ ಮನೆಗೆ ಬಂದಿರುವುದಿಲ್ಲ. ಫೋನ್ ಕೂಡ ಮಾಡಿರುವುದಿಲ್ಲ. ಎಲ್ಲಾ ಕಡೆ ವಿಚಾರಿಸಿದರೂ ಸಿಕ್ಕಿರುವುದಿಲ್ಲ ಕಾಣೆಯಾಗಿರುತ್ತಾನೆಂದು  ಶ್ರೀ ಗಿಡ್ಡೇಗೌಡರವರು ದಿನಾಂಕ: 17-01-2020 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಮನುಷ್ಯನಚಹರೆ: ಧರ್ಮರಾಜಕೆ.ಜಿ ಬಿನ್ ಗಿಡ್ಡೇಗೌಡ, 31 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಫೋನ್ ನಂ.08176-254933 ಕ್ಕೆ ಸಂಪರ್ಕಿಸುವುದು.

ಚೈನ್ನಿಂದ ಹೊಡೆದು ಹಲ್ಲೆ
     ದಿನಾಂಕ: 17-01-2020 ರಂದು ಮಧ್ಯಾಹ್ನ 01-30 ಗಂಟೆ ಸಮಯದಲ್ಲಿ ಬೇಲೂರು ಪಟ್ಟಣ ಮುಸ್ತಾಪ ಬೀದಿ ವಾಸಿ ಅನ್ವರ್ ಪಾಷಾ ರವರು ಜಾವಗಲ್ ಖಲಂದರ್ ನಗರದ ದರ್ಗಾದ ಮುಂಭಾಗದ ಫಾತಿಮಾ ಕ್ಯಾಂಟೀನ್ ಮುಂಭಾಗದಲ್ಲಿ ಆಟೋವನ್ನು ನಿಲ್ಲಿಸಿ ನಮಾಜ್ಗೆ ಹೋಗುವಾಗ ಪುಟ್ಪಾತ್ನಲ್ಲಿ ಅಂಗಡಿ ಇಟ್ಟುಕೊಂಡಿರುವ ನೇಮತ್, ಇಮ್ರಾನ್ ಹಾಗೂ ಇತರೆಯವರು ಸೇರಿಕೊಂಡು ಅನ್ವರ್ ಪಾಷಾ ರವರಿಗೆ  ಬಾಯಿಗೆ ಬಂದಂತೆ ಆವಾಚ್ಯ ಶಬ್ದಗಳಿಂದ ಬೈದು ನೇಮತ್ ಎಂಬುವನು ಕೈಯಲ್ಲಿದ್ದ ಚೈನ್ ಹಿಡಿದು ಮುಷ್ಠಿಯಿಂದ ಬಲವಾಗಿ ಹೊಡೆದ ಪರಿಣಾಮ, ಹಲ್ಲುಗಳು ಮುರಿದು ಹೋಗಿರುತ್ತವೆ ಹಾಗೂ ಎದೆಯ ಮುಂಭಾಗಕ್ಕೆ ಕಾಲಿನಿಂದ ತುಳಿದು ನೋವುಂಟು ಮಾಡಿದ್ದರಿಂದ ಅನ್ವರ್ ಪಾಷಾ, 56 ವರ್ಷರವರು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಅನ್ವರ್ ಪಾಷಾ ರವರ ಮಗ ಶ್ರೀ ಇನಾಯತ್ ಪಾಷಾ ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್ ಠಾಣಡಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.


Friday, January 17, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 17-01-2020
      ಪತ್ರಿಕಾ ಪ್ರಕಟಣೆ                  ದಿನಾಂಕ: 17-01-2020

ಜೂಜಾಡುತ್ತಿದ್ದ ನಾಲ್ವರ ಬಂಧನ, ಬಂಧಿತರಿಂದ 5,800/- ನಗದು ವಶ:
     ದಿನಾಂಕ: 16-01-2020 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ದಮ್ಮನಿಂಗಲ ಗ್ರಾಮದ ವಾಸಿ ಶಿವೇಗೌಡ, ರವರ ಜಮೀನಿನಲ್ಲಿರುವ ಬಸರೀಮರದ ಕೆಳಗೆ ಜೂಜಾಡುತ್ತಿದ್ದಾರೆಂದು ಶ್ರೀ ಬಿ. ಜಿ. ಕುಮಾರ್, ಸಿಪಿಐ ಚನ್ನರಾಯಪಟ್ಟಣ ವೃತ್ತ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸೃಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರಾಮಚಂದ್ರ ಬಿನ್ ಕೃಷ್ಣೇಗೌಡ, 41 ವರ್ಷ, ದಮ್ಮಿನಿಂಗಲ ಗ್ರಾಮ, 20 ವರ್ಷ, 2) ರಾಜೇಶ್ ಬಿನ್ ಮರಿಯಪ್ಪ, 28 ವರ್ಷ, 3) ರವಿ ಬಿನ್ ಅಭಿಮನ್ಯು, 32 ವರ್ಷ, 4) ಮಂಜುನಾಥ ಬಿನ್ ಸುಬ್ಬೇಗೌಡ, 38 ವರ್ಷ, ಎಲ್ಲರೂ ದಮ್ಮಿನಿಂಗಲ ಗ್ರಾಮ, ಶ್ರವಣಬೆಳಗೊಳ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು 5,800/- ನಗದನ್ನು ಅಮಾನತ್ತುಪಡಿಸಿಕೊಂಡು ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಪರಿಚಿತರಿಂದ ಮಹಿಳೆಯ ಹತ್ಯೆ
     ಹಾಸನ ತಾಲ್ಲೂಕು ಕಸಬಾ ಹೋಬಳಿ, ದೊಡ್ಡಪುರಗೇಟ್ ರಾಮೇಶ್ವರನಗರ ವಾಸಿ ಮೃತೆ ಹೇಮಾವತಿ ಸಿ.ಪಿ. ರವರಿಗೆ ಎರಡು ಜನ ಮಕ್ಕಳಿದ್ದು, ಅದರಲ್ಲಿ ಮಗಳು ಶ್ವೇತಾ ಪಿಡಿಓ ಆಗಿದ್ದು, ಶ್ವೇತಾರವರ ಮದುವೆ ವಿಚಾರದಲ್ಲಿ ಮೃತೆ ಹೇಮಾವತಿ ಮತ್ತು ಪತಿ ರುದ್ರಪ್ಪರವರಿಗೆ  ವೈಮನಸ್ಸುಂಟಾಗಿ ಈಗ್ಗೆ 08 ವರ್ಷಗಳಿಂದ ರುದ್ರಪ್ಪರವರು ಮಗಳು ಶ್ವೇತಾ ಜೊತೆ ಬೆಳಗಾಂನಲ್ಲಿದ್ದು, ಮಗ ನಾಗೇಶ್ ಬೆಂಗಳೂರಿನಲ್ಲಿ ಇಂಜಿನಿಯರಾಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಹೇಮಾವತಿ ತಮಗೆ ಇದ್ದ ಜಮೀನನ್ನು ನೋಡಿಕೊಂಡು ಒಬ್ಬರೆ ಮನೆಯಲ್ಲಿದ್ದರು. ಹೇಮಾವತಿರವರು ಮನೆಯಲ್ಲಿ ಒಬ್ಬರೆ ಇದ್ದಾಗ ದಿನಾಂಕ: 14-01-2020 ರ ರಾತ್ರಿ ಸುಮಾರು     09-40 ರಿಂದ ದಿನಾಂಕ: 16-01-2020 ರ ಮಧ್ಯಾಹ್ನ 12-00 ಗಂಟೆಯ ಒಳಗೆ ಯಾವುದೋ ವೇಳೆಯಲ್ಲಿ ಮನೆಯ ಹಾಲಿನ ಮದ್ಯದಲ್ಲಿ ಇರುವ ರೂಮಿನಲ್ಲಿ ಕುತ್ತಿಗೆಗೆ ಟವೆಲ್ ಬಿಗಿದು, ಕುತ್ತಿಗೆಗೆ ಕಟ್ಟಿದ್ದ ಟವೆಲ್ ನ್ನು ರೂಮಿನಲ್ಲಿದ್ದಕ ಬ್ಬಿಣದ ರಾಡಿಗೆ ಕಟ್ಟಿ ಹೇಮಾವತಿ ಕೋಂ ರುದ್ರಪ್ಪ, 58 ವರ್ಷರವರನ್ನು ಯಾರೋ ಕೊಲೆ ಮಾಡಿ ಹೋಗಿರುತ್ತಾರೆಂದು ಮೃತೆ ಹೇಮಾವತಿ ಮಗ ಶ್ರೀ ನಾಗೇಶ್ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಡಿವೈ.ಎಸ್.ಪಿ. ಶ್ರೀ ಪುಟ್ಟಸ್ವಾಮಿಗೌಡ, ಹಾಸನ ಉಪ-ವಿಭಾಗ ರವರು ಮತ್ತು ಪಿಎಸ್ಐ ಶ್ರೀ ಆರೋಕಿಯಪ್ಪ, ಹಾಸನ ಗ್ರಾಮಾಂತರಠಾಣೆರವರು ಭೇಟಿ ನೀಡಿದ್ದು, ತನಿಖೆಕೈಗೊಂಡಿರುತ್ತದೆ.

ಶಿಕ್ಷಕಿ ಮನನೊಂದು ಔಷಧಿ ಸೇವಿಸಿ ಆತ್ಮಹತ್ಯೆ:
     ದಿನಾಂಕ: 07-01-2020 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಮಡಬಲು ಪೋಸ್ಟ್, ಮಂಜಲಗೋಡು ಗ್ರಾಮದ ವಾಸಿ ಕು|| ರಾಣಿ, ಎಂ.ಸಿ. ರವರು ಶಿಕ್ಷಕಿಯಾಗಿದ್ದು, ಬೇಲೂರಿನ ವೈಕುಂಠ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಯಾವುದೋ ವಿಷ ಸೇವಿಸಿದ್ದು, ಚಿಕಿತ್ಸೆಗಾಗಿ ಹಾಸನ ಸ್ವರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಕು|| ಎಂ.ಸಿ. ರಾಣಿ ಬಿನ್ ಚಂದ್ರಶೇಖರ, 32 ವರ್ಷ, ಮಂಜಲಗೋಡು ಗ್ರಾಮ, ಮಡಬಲು ಪೋಸ್ಟ್, ಆಲೂರು ತಾಲ್ಲೂಕು ರವರು ಚಿಕತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ.  ದಿನಾಂಕ: 11-01-2020 ರಂದು ಶ್ರೀ ಧನಂಜಯ, ಶಿಕ್ಷಕ, ರವರು  ಕು|| ರಾಣಿ, ಎಂ.ಸಿ. ರವರ ಮೊಬೈಲ್ ನ್ನು ತಂದು ಕೊಟ್ಟಿದ್ದು, ಅದರಲ್ಲಿರುವ ಮೇಸೆಜ್, ಟ್ರೋ ಕಾಲರ್ ಹಿಸ್ಟರಿ ಮೇಸೆಜ್ ನ್ನು ಡಿಲೀಟ್ ಮಾಡಿ ಕೊಟ್ಟಿರುತ್ತಾರೆ. ಮೃತೆ ಕು|| ರಾಣಿ, ಎಂ.ಸಿ. ರವರನ್ನು ಶ್ರೀ ಧನಂಜಯ, ರವರು ಹಣ ಕಾಸಿನ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದು ಹಾಗೂ ಮಾನಸಿಕ ಹಾಗೂ ದೈಹಿಕವಾಗಿ ಬಳಸಿಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದರಿಂದ ಮನನೊಂದು ಯಾವುದೋ ಔಷಧಿ ಸೇವಿಸಿ ಮೃತಪಟ್ಟಿರುತ್ತಾರೆಂದು ಹಾಗೂ ಸಾವಿಗೆ ಕಾರಣನಾದ ಆರೋಪಿ ಶ್ರೀ ಧನಂಜಯನ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಮೃತಳ ತಮ್ಮ ಶ್ರೀ ರಾಕೇಶ್, ರವರು ದಿನಾಂಕ: 16-01-2020 ರಂದು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಜಮೀನಿನ ಮೇಲೆ ಎಮ್ಮೆ ಕಟ್ಟಿರುವ ವಿಚಾರಕ್ಕೆ ಮಹಿಳೆಯ ಮೇಲೆ ಹಲ್ಲೆ:
    ದಿನಾಂಕ: 16-01-2020 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಚಿಕ್ಕೊಂಡನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಸರೋಜಮ್ಮ, ರವರು ಜಮೀನಿನಲ್ಲಿ ಕೆಲಸಕ್ಕೆಂದು ಹೋದಾಗ ಪಿರ್ಯಾದಿ ಮೈದುನ ಶ್ರೀ ಉದಯಕುಮಾರ್, ರವರು ಪಿರ್ಯಾದಿಯವರ ಜಮೀನಿನಲ್ಲಿ ಕಬ್ಬಿಗೆ ಎಮ್ಮೆ ಕಟ್ಟಿ ಕಬ್ಬನೆಲ್ಲ ತಿನ್ನಿಸಿ ಜಮೀನಿನ ಮೇಲೆ ಟ್ರ್ಯಾಕ್ಟರ್ ಓಡಿಸಿದ್ದ ವಿಚಾರ ಕೇಳಿದ್ದಕ್ಕೆ  ಆರೋಪಿ ಶ್ರೀ ಉದಯ್ ಕುಮಾರ್ ಮತ್ತು ಪತ್ನಿ ಶ್ರೀಮತಿ ಭಾಗ್ಯ ರವರುಗಳು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಪಿರ್ಯಾದಿಯ ಜುಟ್ಟು ಹಿಡಿದು ಕೆಳಕ್ಕೆ ಕೆಡವಿದ್ದು, ಕಾಲಿನಿಂದ ಒದ್ದು, ಗುದ್ದಲಿಯಿಂದ ಮೈ ಕೈ ಹಾಗೂ ಬೆನ್ನಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಶ್ರೀಮತಿ ಸರೋಜಮ್ಮ, ರವರು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಂಗಸು ಕಾಣೆ
     ದಿನಾಂಕ: 11-01-2020 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಪೊನ್ನಾಥಪುರ ಗ್ರಾಮದ ವಾಸಿ ಶ್ರೀ ಶಿವಕುಮಾರ್, ರವರ ಪತ್ನಿ ಶ್ರೀಮತಿ ಗೀತಾ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಗೀತಾ, ರವರ ಪತಿ ಶಿವಕುಮಾರ್, ರವರು ದಿನಾಂಕ: 16-01-2020 ರಂದು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಗೀತಾ ಕೋಂ ಶಿವಕುಮಾರ್, 28 ವರ್ಷ, 5 ಅಡಿ ಎತ್ತರ ಎಣ್ಣೆಗೆಂಪು ಬಣ್ಣ ಸಾಧಾರಣಾ ಮೈಕಟ್ಟು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08177-273201 ಕ್ಕೆ ಸಂಪರ್ಕಿಸುವುದು.

Thursday, January 16, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 16-01-2020
     ಪತ್ರಿಕಾ ಪ್ರಕಟಣೆ                 ದಿನಾಂಕ: 16-01-2020

ಯಾವುದೋ ವಾಹನ ಡಿಕ್ಕಿ, ವ್ಯಕ್ತಿ ಸಾವು:
     ದಿನಾಂಕ: 15-01-2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಹೊಲೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಕಡವಿನಕೋಟೆ ಗ್ರಾಮದ ವಾಸಿ ಶ್ರೀ ರಾಜೇಗೌಡ, ರವರ ಬಾಬ್ತು ಕೆಎ-13, ಎಲ್ 1382 ರ ಬಜಾಜ್ ಬಾಕ್ಸರ್ ಬೈಕ್ನಲ್ಲಿ ಹೊಳೆನರಸೀಪುರಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಹೋಗಲು ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಹಾಸನ-ಮೈಸೂರು ರಸ್ತೆ, ಕೆ.ಇ.ಬಿ. ಕ್ರಾಸ್, ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಯಾವುದೋ ವಾಹನದ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ರಾಜೇಗೌಡ, ರವರಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಹೊಳೆನರಸೀಪುರ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕೆರೆದುಕೊಂಡು ಹೋಗುತ್ತಿದ್ದಾಗ ಶ್ರೀ ರಾಜೇಗೌಡ ಬಿನ ಸ್ವಾಮಿಗೌಡ, 58 ವರ್ಷ, ಕಡವಿನಕೋಟೆ ಗ್ರಾಮ, ಹಳೇಕೊಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು. ರವರು ಮಾರ್ಗ ಮಧ್ಯೆ ಮೃತಪಟ್ಟಿರುತ್ತಾರೆಂದು ಸಂಬಂಧಿಕರಾದ ಶ್ರೀ ಗಣೇಶ್, ರವರು ಕೊಟ್ಟ ದೂರಿನ ಮೇರೆಗೆ  ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ದನ ಮೇಯಿಸುವ ವಿಚಾರಕ್ಕೆ ವ್ಯಕ್ತಿಯ ಮೆಲೆ ಹಲ್ಲೆ:
     ದಿನಾಂಕ: 09-01-2020 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಕೊಂಡಬಾಗಿಲು ಗ್ರಾಮದ ವಾಸಿ ಶ್ರೀ ಶೇಖರಪ್ಪ, ರವರು ದನ ಮೇಯಿಸಲು ಹೋದಾಗ ಅದೇ ಗ್ರಾಮದ ವಾಸಿ ಶ್ರೀ ನವೀನ್ ಮತ್ತು ವಿನೋಧ್, ರವರುಗಳು ದನ ಮೇಯಿಸಲು ಬಿಡದೇ ಅವಾಚ್ಯ ಶಬ್ಧಗಳಿಂದ ನಿಂದಿಸಿ, ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀ ಶೇಖರಪ್ಪ, ರವರು ದಿನಾಂಕ: 15-01-2020 ರಂದು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ವಾಹನದ ನಿಯಂತ್ರಣ ತಪ್ಪಿ, ವ್ಯಕ್ತಿಗೆ ತೀವ್ರ ಸ್ವರೂಪದ ರಕ್ತಗಾಯ:
     ದಿನಾಂಕ: 09-01-2020 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ ಬಾಗಲಕೋಟೆ ಜಿಲ್ಲೆ, ಮುಡೋಲ್ ತಾಲ್ಲೂಕು, ರಂಜನಂಗಿ ಗ್ರಾಮದ ವಾಸಿ ಶ್ರೀ ಹನುಮಂತ, ರವರು ಈಗ್ಗೆ 1 ತಿಂಗಳಿನಿಂದ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಎ-03, ಎಹೆಚ್-4345 ರ ವಾಹನದ ಚಾಲಕ ಶ್ರೀ ದಿಲೀಪ, ರವರೊಂದಿಗೆ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಎನ್ಹೆಚ್-75 ಬಿ.ಎಂ. ರಸ್ತೆ, ದಂಡಿಗನಹಳ್ಳಿ ಗೇಟ್ ಹತ್ತಿರ ನಿರ್ಲಕ್ಷ್ಯತೆಯಿಂದ ಓಡಿಸಿದ್ದ ಪರಿಣಾಮ ಶ್ರೀ ಹನುಮಂತ ಬಿನ್ ನಾಗಪ್ಪ, 48 ವರ್ಷ, ರಂಜನಂಗಿ ಗ್ರಾಮ, ಮುಂಡೋಲ್ ತಾಲ್ಲೂಕು, ಬಾಗಲಕೋಟೆ ಜಿಲ್ಲೆ. ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿರುತ್ತದೆಂದು ಹಾಗೂ ಚಾಲಕನ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಶ್ರೀ ನಾಗಪ್ಪ, ರವರು ದಿನಾಂಕ: 15-01-2020 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಪತಿ ಪತ್ನಿಗೆ ವಿಚ್ಛೇದನ ನೀಡುವಂತೆ ಹಲ್ಲೆ ಹಾಗೂ ಕೊಲೆ ಬೆದರಿಕೆ:
     2004 ರಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ದಮ್ಮನಿಂಗಲ ಗ್ರಾಮದ ವಾಸಿ ಶ್ರೀಮತಿ ಗೀತಾ, ರವರು ಕೆ.ಆರ್. ಪೇಟೆ ತಾಲ್ಲೂಕು, ದಬ್ಬೇಘಟ್ಟ ಗ್ರಾದಮ ವಾಸಿ ಶ್ರೀ ಶ್ರೀಧರ, ರವರನ್ನು ವಿವಾಹವಾಗಿದ್ದು, ಶ್ರೀ ಶ್ರೀಧರ್, ರವರು ಸೀಮಾ ಎಂಬಾಕೆಯನ್ನು ವಿವಾಹವಾಗಿದ್ದು, ಈ ವಿಷಯ ಹೇಳಿದೆ ಪಿರ್ಯಾದಿಯನ್ನು ಮದುವೆಯಾಗಿದ್ದು, ಮದುವೆಯಾದಗಿನಿಂದ ಸರಿಯಾಗಿ ನೋಡಿಕೊಳ್ಳದೇ ತಂದೆ ತಾಯಿ ಜೊತೆ ಮಾತನಾಡಲು ಬಿಡದೆ ತವರು ಮನೆಗೆ ಹೋಗುವಂತೆ ಧಮ್ಕಿ ಹಾಕಿ, ಅತ್ತೆ ಶ್ರೀಮತಿ ಜವರಮ್ಮ ಮತ್ತು ಅತ್ತಿಗೆ ಶ್ರೀ ಸವಿತಾ ಹಾಗೂ ಮೈದನ ಶ್ರೀ ರವಿ, ರವರುಗಳು ಪಿರ್ಯಾದಿಯನ್ನು ಬಿಡು ಬೇರೆ ಮದುವೆ ಮಾಡುತ್ತೇವೆಂದು ಕುಮ್ಮಕು ನೀಡಿರುತ್ತಾರೆ ದಿನಾಂಕ: 14-10-2019 ರಂದು ಮಧ್ಯಾಹ್ನ 12-15 ಗಂಟೆ ಸಮಯದಲ್ಲಿ ಪಿರ್ಯಾದಿ ಮನೆಯ ಹತ್ತಿರ ಬಂದು ವಿಚ್ಛೇದನ ನೀಡುವಂತೆ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀಮತಿ ಗೀತಾ, ರವರು ದಿನಾಂಕ: 15-01-2020 ರಂದು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 15-01-2020       ಪತ್ರಿಕಾ ಪ್ರಕಟಣೆ                    ದಿನಾಂಕ: 15-01-2020

ಅಕ್ರಮ ಮಧ್ಯ ಮಾರಾಟ, ವ್ಯಕ್ತಿಯ ಬಂಧನ, ಬಂಧಿತನಿಂದ ರೂ 122/- ಬೆಲೆಯ ಮಧ್ಯ ವಶ,
     ದಿನಾಂಕ: 14-01-2020 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಅರಕಲಗೂಡು ತಾಲ್ಲೂಕ್, ಕೊಣನೂರು ಹೋಬಳಿ, ಕಾರ್ಗಲ್ ಸರ್ಕಲ್ ನಲ್ಲಿರುವ ಸ್ವಾಮಿಗೌಡ ಎಂಬುವವರ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಶ್ರೀ ಪ್ರಹ್ಲಾದ, ಎಎಸ್ಐ, ಕೊಣನೂರು ಪೊಲೀಸ್ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಓಡಿ ಹೋಗಿದ್ದು, ಅಂಡಿಯಲ್ಲಿದ್ದ ವ್ಯಕ್ತಿಯನ್ನು ಹಿಡಿದು ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ವಿಚಾರ ಮಾಡಲಾಗಿ ಸರಿಯಾದ ಮಾಹಿತಿ ನೀಡದೆ ಇದ್ದು, ಹೆಸರು ವಿಳಾಸ ಕೇಳಲಾಗಿ ಸ್ವಾಮಿಗೌಡ ಬಿನ್ ಕರಿಗೌಡ, 50 ವರ್ಷ, ವಕ್ಕಲಿಗರು, ವ್ಯವಸಾಯ, ತರಿಗಳಲೆ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕ್ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ 90 ಎಂಎಲ್ನ 4 ಒರಿಜಿನಲ್ ಚಾಯ್ಸ್ ಟೆಟ್ರಾ ಪ್ಯಾಕೇಟ್, ಒಂದು ನೀರಿನ ಪ್ಲಾಸ್ಟಿಕ್ ಬಾಟಲ್ಗಳನ್ನು ಅಮಾನತ್ತು ಪಡಿಸಿಕೊಂಡು ಬಂದು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ,

ಮಹಿಳೆಗೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ, ರಕ್ತಗಾಯ,
     ದಿನಾಂಕ: 13-01-2020 ರಂದು ಹೊಳೆನರಸೀಪುರ ತಾಲ್ಲೂಕ್, ಹಳ್ಳಿಮೈಸೂರು ಹೋಬಳಿ, ಕುಪ್ಪೆ ಗ್ರಾಮದ ಶ್ರೀಮತಿ ಬೊಮ್ಮಮ್ಮರವರು ಸೀಗೋಳು ಗ್ರಾಮಕ್ಕೆ ಹೋಗಲು ಮನೆಯಿಂದ ಹೊರಟು ಬೆಳಿಗ್ಗೆ 11-30 ಗಂಟೆಯಲ್ಲಿ ಊರಿನಲ್ಲಿ ಕೇರಳಾಪುರ ಕಡೆಗೆ ಹೋಗುವ ಕೆಎ-13-ಎಫ್-1933 ಬಸ್ನ್ನು ಹತ್ತಲು ಹೋದಾಗ ಬಸ್ ಚಾಲಕನು ನಿರ್ಲಕ್ಷತನದಿಂದ ಬಸ್ನ್ನು ಚಾಲನೆ ಮಾಡಿ ಶ್ರೀಮತಿ ಬೊಮ್ಮಮ್ಮರವರಿಗೆ ಗುದ್ದಿಸಿದ ಪರಿಣಾಮ ಎಡಗಾಲು ಸಂಪೂರ್ಣವಾಗಿ ರಕ್ತಗಾಯವಾಗಿದ್ದು ಬಲಗಾಲಿನ ಹಿಮ್ಮಡಿ ಮತ್ತು ತಲೆಗೆ ರಕ್ತಗಾಯವಾಗಿದ್ದು, ಏಟಾಗಿದ್ದ ಬೊಮ್ಮಮ್ಮರವರನ್ನು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿ ಗಾಯಾಳು ಶ್ರೀಮತಿ ಬೊಮ್ಮಮ್ಮರವರ ಮಗ ಶ್ರೀ ಸ್ವಾಮಿರವರು ನೀಡಿದ ದೂರಿನ ಮೇರೆಗೆ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮೋಟಾರ್ ಬೈಕ್ ಕಳವು
     ದಿನಾಂಕ: 22-12-2019 ರಂದು ಹಾಸನ ತಾಲ್ಲೂಕ್, ಕಸಬಾ ಹೋಬಳಿ, ಹನುಮಂತಪುರ ಗ್ರಾಮದ ಶ್ರೀ ರಾಮಚಂದ್ರರವರು ಕೆಲಸದ ನಿಮಿತ್ತ ತಮ್ಮ ಬಾಬ್ತು ಕೆಎ-13-ಇಕ್ಯೂ-5098 ಸ್ಪ್ಮೆಂಡರ್ ಬೈಕಿನಲ್ಲಿ ಹಾಸನಕ್ಕೆ ಬಂದು ಸಂಜೆ 7-00 ಗಂಟೆಯಲ್ಲಿ ಹಾಸನ ಸುಭಾಷ್ ಚೌಕದಲ್ಲಿರುವ ವಿಮಲ್ ಜ್ಯೋತಿ ಅಂಗಡಿ ಮುಂದೆ ಬೈಕನ್ನು ನಿಲ್ಲಿಸಿ ಹೋಗಿದ್ದು, ವಾಪಸ್ 7-45 ಗಂಟೆಗೆ ಬಂದು ನೋಡಲಾಗಿ ಸದರಿ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಎಲ್ಲಾ ಕಡೆ ಹುಡುಕಿದರೂ ಸಿಗದಿದ್ದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಕಳುವಾದ ಮೋಟಾರ್ ಬೈಕಿನ ಬೆಲೆ ಸುಮಾರು 49,000/- ರೂಗಳಾಗಿದ್ದು, ಪತ್ತೆಮಾಡಿಕೊಡಬೇಕೆಂದು ಶ್ರೀ ರಾಮಚಂದ್ರರವರು ನೀಡಿದ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.