* * * * * * HASSAN DISTRICT POLICE

Saturday, April 17, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿ: 15-04-2021

                                                  ಪತ್ರಿಕಾ ಪ್ರಕಟಣೆ         ದಿನಾಂಕ:  15-04-2021

ಜಿಲ್ಲೆಯ ಅರಸೀಕೆರೆ ತಾಲ್ಲೂಕು, ಮಲ್ಲದೇವಿಹಳ್ಳಿ ಗೇಟ್, ಹಳೇಬಂಡೀಹಳ್ಳಿ, ಬೆಂಡೆಕೆರೆ, ದೊಡ್ಡೇನಹಳ್ಳಿ ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಗದ್ದೆಬಿಂಡೇನಹಳ್ಳಿ ಗ್ರಾಮಗಳಲ್ಲಿ ಜೂಜಾಡುತ್ತಿದ್ದ 32 ಜನರ ಬಂಧನ, 51,980/- ನಗದು ವಶ:

 

ಪ್ರಕರಣ-01 : ದಿನಾಂಕ: 14-04-2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಮಲ್ಲದೇವಿಹಳ್ಳಿ ಗೇಟ್ ಹತ್ತಿರ ರಸ್ತೆಯ ಪಕ್ಕದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಅರುಣ್, ಪಿಎಸ್ಐ ಜಾವಗಲ್ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರಾಜು ಬಿನ್ ಲೇಟ್ ಬೊಮ್ಮನಾಯ್ಕ, 52 ವರ್ಷ, ಕುರದಹಳ್ಳಿ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು 2) ಪ್ರಸನ್ನ ಬಿನ್ ಲೇಟ್ ರಂಗಪ್ಪ, 29 ವರ್ಷ ಕಣಕಟ್ಟೆ ಗ್ರಾಮ, ಬಾಣಾರ ಹೋಬಳಿ, ಅರಸೀಕೆರೆ ತಾಲ್ಲೂಕು 3) ಚೇತನ್ ಬಿನ್ ಲೇಟ್ ವಸಂತ್ ಕುಮಾರ್, 31 ವರ್ಷ, ಕುರದಹಳ್ಳಿ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು 4) ಪ್ರಕಾಶ್ ಬಿನ್ ಲೇಟ್ ಬಸವೇಗೌಡ, 55 ವರ್ಷ, ಚಟ್ಟನಹಳ್ಳಿ ಗ್ರಾಮ, ಹಳೇಬೀಡು ಹೋಬಳಿ, ಬೇಲೂರು ತಾಲ್ಲೂಕು 5) ಮಂಜು ಬಿನ್ ಶಿವಣ್ಣ, 30 ವರ್ಷ, ಜಾವಗಲ್ ಟೌನ್ ಅರಸೀಕೆರೆ ತಾಲ್ಲೂಕು 6) ವಿರೂಪಾಕ್ಷ್ ಬಿನ್ ಧರ್ಮಪ್ಪ, 40 ವರ್ಷ, ಮಾವುತನಹಳ್ಳಿ ಗ್ರಾಮ, ಜಾವಗಲ್ ಹೋಬಳಿ ಅರಸೀಕೆರೆ ತಾಲ್ಲೂಕು 7) ಬಸವರಾಜು ಬಿನ್ ಲೇಟ್ ಸಿದ್ದಯ್ಯ, 65 ವರ್ಷ, ಹುಂಡಿಗನಾಳು ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು 8) ರಾಮಸ್ವಾಮಿ ಬಿನ್ ಖಂಡಿಸಿದ್ದಯ್ಯ, 44 ವರ್ಷ, ಹುಂಡಿಗನಾಳು ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು 9) ದೊರೆ ಬಿನ್ ಕೃಷ್ಣನಾಯ್ಕ್, 24 ವರ್ಷ, ದೇಶಾಣಿ ಗೊಲ್ಲರಹಟ್ಟಿ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕಟ್ಟಿದ್ದ 31,000/-ನಗದನ್ನು ಅಮಾನತ್ತುಪಡಿಸಿಕೊಂಡು ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

 

ಪ್ರಕರಣ-02 : ದಿನಾಂಕ: 14-04-2021 ರಂದು ಮಧ್ಯಾಹ್ನ 3-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಹಳೇಬಂಡೀಹಳ್ಳಿ ಗ್ರಾಮದ ಮಧ್ಯಭಾಗದಲ್ಲಿರುವ ಬೇವಿನಮರದ ಕಟ್ಟೆಯ ಹತ್ತಿರ ಹಾಗೂ ಕಾಟೀಕೆರೆ ಗ್ರಾಮದ ಅಂಬೇಡ್ಕರ್ ಭವನ್ ಮುಂಭಾಗ ಜೂಜಾಡುತ್ತಿದ್ದಾರೆಂದು ಶ್ರೀ ಪುರುಷೋತ್ತಮ್, ಪಿಎಸ್ಐ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಮಂಜುನಾಥ ಬಿನ್ ಚಿಕ್ಕೇಗೌಡ, 48 ವರ್ಷ 2) ರಮೇಶ್ ಬಿನ್ ನಂಜುಂಡಪ್ಪ, 30 ವರ್ಷ  3) ರಮೇಶ್ ಬಿನ್ ನಂಜಪ್ಪ,44 ವರ್ಷ. 4) ಚೇತನ ಬಿನ್ ಬಸವರಾಜು, 29 ವರ್ಷ 5) ಧರಣೇಶ್ ಬಿನ್ ತಿರುಮಲೇಗೌಡ, 38 ವರ್ಷ, 6) ರೇಣುಕಪ್ಪ ಬಿನ್ ರಂಗೇಗೌಡ, 48 ವರ್ಷ, 7) ಸುರೇಶ್ ಬಿನ್ ನಂಜುಂಡಪ್ಪ, 38 ವರ್ಷ ಎಲ್ಲೂಕು ಹಳೇಬಂಡೀಹಳ್ಳಿ ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು 8) ರಾಜನಾಯ್ಕ್ ಬಿನ್ ಭೀಮನಾಯ್ಕ್, 32 ವರ್ಷ, ಬಸವನಪುರ ತಾಂಡ್ಯ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು 9) ಮನು ಬಿನ್ ಶಿವಕುಮಾರ, 25 ವರ್ಷ, ಕಟ್ಟಿಕೆರೆ ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು 10) ದೇವರಾಜು ಬಿನ್ ನಾಗೇಗೌಡ, 53 ವರ್ಷ, ಬಿಸ್ಲೆಹಳ್ಳಿ ಗ್ರಾಮ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 7,380/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

 

ಪ್ರಕರಣ-03 : ದಿನಾಂಕ: 14-04-2021 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಬೆಂಡೆಕೆರೆ ತಾಂಡ್ಯ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಜೂಜಾಡುತ್ತಿದ್ದಾರೆಂದು ಕು|| ಭಾರತಿರಾಯನಗೌಡ, ಪಿಎಸ್ಐ, ಬಾಣಾವರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಮಂಜುನಾಯ್ಕ್ ಬಿನ್ ರಾಮನಾಯ್ಕ್, 36 ವರ್ಷ, ಕುರುಬರಹಳ್ಳಿ ತಾಂಡ್ಯ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು. 2) ರಾಜನಾಯ್ಕ್ ಬಿನ್ ಸೌಮ್ಯನಾಯ್ಕ್, 39 ವರ್ಷ, 3) ಧನುನಾಯಕ್ ಬಿನ್ ಶೇಖರ್ನಾಯ್ಕ್, 26 ವರ್ಷ, 4) ರೂಪೇಶ್ ನಾಯಕ್ ಬಿನ್ ಜಯಣ್ಣ ನಾಯಕ್, 21 ವರ್ಷ, ಮೂವರು ಬೆಂಡೆಕೆರೆ ತಾಂಡ್ಯ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 1800/-ನಗದನ್ನು ಅಮಾನತ್ತುಪಡಿಸಿಕೊಂಡು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

 

ಪ್ರಕರಣ-04 : ದಿನಾಂಕ: 14-04-2021 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ದೊಡ್ಡೇನಹಳ್ಳಿ ಗ್ರಾಮದ ಸಕರ್ಾರಿ ಶಾಲೆಯ ಹತ್ತಿರ ಜೂಜಾಡುತ್ತಿದ್ದಾರೆಂದು ಶ್ರೀ ಆನಂದ್, ಪಿಎಸ್ಐ (ಕ್ರೈಂ) ಬಾಣಾವರ ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ನಾಗರಾಜು ಬಿನ್ ಹುಚ್ಚಪ್ಪ, 40 ವರ್ಷ, 2) ಸ್ವಾಮಿ ಬಿನ್ ಚಂದ್ರಪ್ಪ, 32 ವರ್ಷ, 3) ಜಗದೀಶ್ ಬಿನ್ ಗೋವಿಂದಪ್ಪ, 32 ವರ್ಷ, ಮೂವರು ದೊಡ್ಡೇನಹಳ್ಳಿ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 4,000/-ನಗದನ್ನು ಅಮಾನತ್ತುಪಡಿಸಿಕೊಂಡು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 

ಪ್ರಕರಣ-05 : ದಿನಾಂಕ: 14-04-2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಗದ್ದೆಬಿಂಡೇನಹಳ್ಳಿ ಗ್ರಾಮ, ಕೋಟೆ ಸೀನಣ್ಣ, ರವರ ಬಾಬ್ತು ಜಮೀನಿನ ಪಕ್ಕ ಸಾರ್ವಜನಿಕರ ಸ್ಥಳದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಸುಬ್ರಹ್ಮಣ್ಯ, ಸಿಪಿಐ, ಚನ್ನರಾಯಪಟ್ಟಣ ವೃತ್ತ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಸಂತೋಷ @ ಅಯ್ಯಪ್ಪ ಬಿನ್ ಲೇಟ್ ಶ್ರೀನಿವಾಸ, 35 ವರ್ಷ, ಮೇಘಲಕೇರಿ ಚನ್ನರಾಯಪಟ್ಟಣ ಟೌನ್ 2) ರಮೇಶ್ ಬಿನ್ ಜವರೇಗೌಡ, 45 ವರ್ಷ, ನಾಗಸಮುದ್ರ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು 3) ಚೇತನ್ ಬಿನ್ ಮಂಜಪ್ಪ, 28 ವರ್ಷ, ಡಿ. ಕಾಳೇನಹಳ್ಳಿ ಗ್ರಾಮ, ಕಸಬಾ ಹೋಬಳಿ,  ಚನ್ನರಾಯಪಟ್ಟಣ ತಾಲ್ಲೂಕು 4) ಭವಿತ್ ಬಿನ್ ರಂಗಸ್ವಾಮಿ, 23 ವರ್ಷ, ಗಾಯ್ರಿತಿ ಬಡಾವಣೆ, ಚನ್ನರಾಯಪಟ್ಟಣ ಟೌನ್ 5) ಶರತ್ ಬಿನ್ ಮಂಜಶೆಟ್ಟಿ, 26 ವರ್ಷ, ದೊಡ್ಡಗನ್ನಿ ಗ್ರಾಮ ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು 6) ದೀನದಯಾಳು ಬಿನ್ ಚಂದ್ರಪ್ಪ, 23 ವರ್ಷ, ನಾಗಸಮುದ್ರ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 7800/- ನಗದನ್ನು ಅಮಾನತ್ತುಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ನ ನಿಯಂತ್ರಣ ತಪ್ಪಿ, ಬೈಕ್ ಹಿಂಬದಿ ಕುಳಿತಿದ್ದವನ ಸಾವು:

ದಿನಾಂಕ: 14-04-2021 ರಂದು ಮಧ್ಯಾಹ್ನ 12-45 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಗುಡ್ಡದ ತೆರಣ್ಯ ಗ್ರಾಮದ ವಾಸಿ ಶ್ರೀ ನಾಗರಾಜು, ರವರು ಸ್ನೇಹಿತನಾದ ಶ್ರೀ ಯಶವಂತ್, ರವರ ಬಾಬ್ತು ಕೆಎ-13, ಇಎಲ್-6435 ರ ಬೈಕ್ನಲ್ಲಿ ಹಾಸನ ತಾಲ್ಲೂಕು, ಉಳುವಾರೆ-ಮರ್ಕುಲಿ ರಸ್ತೆ, ಭಂಟರಬಾರೆ ಹತ್ತಿರ ಹೋಗುತ್ತಿದ್ದಾಗ ಬೈಕ್ನ ನಿಯಂತ್ರಣದ ತಪ್ಪಿದ ಪರಿಣಾಮ ಬೈಕ್ ಹಿಂಬಂದಿ ಕುಳಿತಿದ್ದ ಶ್ರೀ ನಾಗರಾಜು ಬಿನ್ ಬಸವರಾಜು, ಗುಡ್ಡದತೆರಣ್ಯ ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು ರವರು ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಹಾಗೂ ಬೈಕ್ ಚಾಲಕ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತರ ಪತ್ನಿ ಶ್ರೀಮತಿ. ಪೂರ್ಣೀಮ ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಲಾರಿ ಡಿಕ್ಕಿ ಪಾದಚಾರಿ ಸಾವು:

ದಿನಾಂಕ: 13-04-2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಅರಸೀಕೆರೆ ನಗರದ ಹಾಸನ ರಸ್ತೆ, ಬಲಭಾಗ 1ನೇ ಕ್ರಾಸ್, ವಾಸಿ ಶ್ರೀ ಹರೀಶ್, ರವರು ಅರಸೀಕೆರೆ ನಗರದ ಮೆಜೆಸ್ಟಿಕ್ ಹೋಟೆಲ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬಂದಿಯಿಂದ ಬಂದ ಕೆಎ-14, ಬಿ-5346 ರ ಲಾರಿ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು  ಶ್ರೀ ಹರೀಶ್, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಅರಸೀಕೆರೆ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ಹರೀಶ್ ಬಿನ್ ಗಂಗಾಧರ್, 43 ವರ್ಷ, ಹಾಸನ ರಸ್ತೆ, 1ನೇ ಕ್ರಾಸ್, ಬಲಭಾಗ ಅರಸೀಕೆರೆ ಟೌನ್ ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಹಾಗೂ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತರ ಪತ್ನಿ ಶ್ರೀಮತಿ ಸುಮಾ, ರವರು ದಿನಾಂಕ: 14-03-2021 ರಂದು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಪೂರೈಸುತ್ತಿದ್ದವನ ಬಂಧನ:

ದಿನಾಂಕ: 14-04-2021 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಮರಟಗೆರೆ ಬೋವಿ ಕಾಲೋನಿ ಗ್ರಾಮದ ಸಾರ್ವಜನಿಕ ರಸ್ತೆಯಲ್ಲಿ  ಸಾರ್ವಜನಿಕರಿಗೆ ಮದ್ಯ ಪೂರೈಸುತ್ತಿದ್ದಾರೆಂದು ಕು|| ಭಾರತಿ ರಾಯನಗೌಡ, ಪಿಎಸ್ಐ ಬಾಣಾವರ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾವನಿಗೆಲ್ಲದೆ ಅಕ್ರಮವಾಗಿ ಮದ್ಯ ಪೂರೈಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಪುರಂದನಾಯ್ಕ್ ಬಿನ್ ಲೇಟ್ ಸೋಮನಾಯ್ಕ್, 40 ವರ್ಷ, ಮರಟಿಗೆರೆ ಗ್ರಾಮ, ಬೋವಿ ಕಾಲೋನಿ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ವಿತರಿಸುತ್ತಿದ್ದವನ ಬಂಧನ, 595/- ಬೆಲೆಯ ಮದ್ಯ ವಶ:

ದಿನಾಂಕ: 14-04-2021 ರಂದು ಮಧ್ಯಾಹ್ನ 4-30 ಗಂಟೆ ಸಮಯದಲ್ಲಿ ಶ್ರೀ ಆನಂದ್, ಪಿಎಸ್ಐ, ಬಾಣಾವರ ಪೊಲೀಸ್ ಠಾಣೆ. ರವರು ಸಿಬ್ಬಂದಿಗಳೊಂದಿಗೆ ಬಾಣಾವರ ಟೌನ್ನಲ್ಲಿ ಗಸ್ತಿನಲ್ಲಿದ್ದಾಗ  ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಕೆ.ಜಿ. ಅಗ್ರಹಾರ ಗ್ರಾಮದ ಒಳಗೆ ಸಾರ್ವಜನಿಕರ ಸ್ಥಳದಲ್ಲಿ ಮದ್ಯವನ್ನಿಟ್ಟುಕೊಂಡು ಸಾರ್ವಜರಿಗೆ ವಿತರಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ವಿತರಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಹರೀಶ್ ಬಿನ್ ಪ್ರಸನ್ನಕುಮಾರ, 31 ವರ್ಷ, ಕೆ.ಜಿ. ಅಗ್ರಹಾರ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಸ್ಥಳದಲ್ಲಿದ್ದ 595/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: