* * * * * * HASSAN DISTRICT POLICE

Saturday, April 17, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ : 16-04-2021

                                                        ಪತ್ರಿಕಾ ಪ್ರಕಟಣೆ         ದಿನಾಂಕ:  16-04-2021

ಜಿಲ್ಲೆಯಲ್ಲಿ ಹಾಸನ ನಗರದ ಹಾಸನಾಂಭ ದೇವಸ್ಥಾನದ ರಸ್ತೆ, ಸಿದ್ದೇಶ್ವರ ಕಾಂಪ್ಲೆಕ್ಸ್ ದುಗರ್ಾ ಎಂಟರ್ ಪ್ರೈಸಸ್ ಮಟ್ಕಾ & ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಹಾಗೂ ಸುಪ್ರಿಯಾ ಲಿಕ್ಕರ್ಸ್ ಹಿಂಭಾಗ, ಹಾಸನ ತಾಲ್ಲೂಕು, ಚಿಟ್ಟನಹಳ್ಳಿ ಬಾರೆ & ಚಿಕ್ಕನಾಯನಹಳ್ಳಿ ಗ್ರಾಮ, ಹೊಳೆನರಸೀಪುರ ತಾಲ್ಲೂಕು, ಅಗ್ರಹಾರಗೇಟ್, ಅರಸೀಕೆರೆ ತಾಲ್ಲೂಕು, ರಂಗನಾಯಕನಕೊಪ್ಪಲು ಗ್ರಾಮಗಳ ಕಡೆ ಜೂಜಾಡುತ್ತಿದ್ದ 38 ಜನರ ಬಂಧನ, ಬಂಧಿತರಿಂದ 1,30,615/- ನಗದು ವಶ:

 

ಪ್ರಕರಣ-01 :  ದಿನಾಂಕ: 15-04-2021 ರಂದು ರಾತ್ರಿ 10-45 ಗಂಟೆ ಸಮಯದಲ್ಲಿ ಹಾಸನಾಂಭ ದೇವಸ್ಥಾನದ ರಸ್ತೆಯ ಗಣಪತಿ ದೇವಸ್ಥಾನದ ಬಳಿ ಸಿದ್ದೇಶ್ವರ ಕಾಂಪ್ಲೆಕ್ಸ್ನ ದುರ್ಗಾ ಎಂಟರ್ ಪ್ರೈಸಸ್ಸ್ ನ್ನಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಮಟ್ಕಾ-ಜೂಜಾಡುತ್ತಿದ್ದಾರೆಂದು ಶ್ರೀ ಅಭಿಜಿತ್ ಎಸ್, ಪಿಎಸ್ಐ ಹಾಸನ ನಗರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ವೆಂಕಟೇಶ್ ಬಿನ್ ಕೃಷ್ಣಚಾರಿ, 33 ವರ್ಷ, ಸಿದ್ದೇಶ್ವರ ಕಾಂಪ್ಲೆಕ್ಸ್ ಗಣಪತಿ ದೇವಸ್ಥಾನದ ಹತ್ತಿರ ಹಾಸನ 2) ಪೃಥ್ವಿ ರಾಘವ್ ಬಿನ್ ಅಂದಾನಿಗೌಡ, 32 ವರ್ಷ, ಪಾಂಡುರಂಗ ದೇವಸ್ಥಾನದ ಹಿಂಭಾಗ ಹಾಸನ. 3) ರವಿ ಬಿನ್ ಜವರಯ್ಯ, 33 ವರ್ಷ, ದೊಡ್ಡಗರಡಿ ಬೀದಿ, ಹಾಸನ 4) ಹರೀಶ್ ಬಿನ್ ವಾಸು, 26 ವರ್ಷ, ದುರ್ಗಾಂಭ ದೇವಸ್ಥಾನದ ಹತ್ತಿರ ಹಾಸನ 5) ರೋಹಿತ್ ಬಿನ್ ಭಗವಾನ್, 33 ವರ್ಷ, ಕಾಳಿಕಾಂಭ ದೇವಸ್ಥಾನದ ಹತ್ತಿರ ಹಾಸನ 6) ತೇಜೇಶ್ ಬಿನ್ ಶ್ರೀನಿವಾಸ, 33 ವರ್ಷ, ಪಾಂಡುರಂಗ ದೇವಸ್ಥಾನದ ಹತ್ತಿರ ಹಾಸನ 7) ಪ್ರಕಾಶ್ ಬಿನ್ ಬೆಟ್ಟೇಗೌಡ, 50 ವರ್ಷ, ಹುಣಸಿನಕೆರೆ ಹಾಸನ. ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 1,00120/-ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-02 : ದಿನಾಂಕ: 15-04-2021 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಶ್ರೀ ಕೃಷ್ಣರಾಜು, ಪಿಐ, ಹಾಸನ ಬಡಾವಣೆ ಠಾಣೆ. ರವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಹಾಸನದ ರಿಂಗ್ ರಸ್ತೆಯ ಸುಪ್ರಿಯ ಲಿಕ್ಕರ್ಸ್  ಹಿಂಭಾಗ ವಿದ್ಯುತ್ ಬೆಳಕಿನಲಿ ಜೂಜಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸೃಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶಿವಕುಮಾರ ಬಿನ್ ಲೇಟ್ ದಾಸೇಗೌಡ, 37 ವರ್ಷ, ಚಿಕ್ಕಹೊನ್ನೇನಹಳ್ಳೀ ಗರಾಮ, ಹಾಸನ ತಾಲ್ಲೂಕು 2) ಕಿರಣ್ ಗೌಡ ಬಿನ್ ರಂಗಸ್ವಾಮಿ, 26 ವರ್ಷ, ದಾಸರಕೊಪ್ಪಲು ಹಾಸನ 3) ವಸಂತ್ ಕುಮಾರ್ ಬಿನ್ ಸೋಮೇಗೌಡ, 30 ವರ್ಷ, ಗುಂಡೇಗೌಡನ ಕೊಪ್ಪಲು ಹಾಸನ 4) ರಕ್ಷಿತ್ ಬಿನ್ ಆನಂದ, 26 ವರ್ಷ, ಕೆ,ಆರ್.ಪುರಂ ಹಾಸನ 5) ಕುಮಾರಸ್ವಾಮಿ ಬಿನ್ ಲಕ್ಷ್ಮೇಗೌಡ, 36 ವರ್ಷ, ಗುಂಡೇಗೌಡನಕೊಪ್ಪಲು, ಹಾಸನ. 7) ಚಂದನ್ ಬಿನ್ ಗಣೇಶ್, 26 ವರ್ಷ ಗುಂಡೇಗೌಡನಕೊಪ್ಪಲು ಹಾಸನ 8) ಸುನಿಲ್ ಬಿನ್ ಲೇಟ್ ಮಹೇಶ್, 23 ವರ್ಷ, ದಾಸರಕೊಪ್ಪಲು, ಹಾಸನ 9) ವಿಷ್ಣು ಬಿನ್ ಚುಂಚೇಗೌಡ, 46 ವರ್ಷ, ವಿದ್ಯಾನಗರ ಹಾಸನ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 8,850/-ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-03 : ದಿನಾಂಕ: 15-04-2021 ರಂದು ಸಂಜೆ 7-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಚಿಟ್ಟನಹಳ್ಳಿ ಬಾರೆ ಹತ್ತಿರವಿರುವ ಹಳ್ಳದ ಪಕ್ಕದಲ್ಲಿ ಹಲಸಿನ ಮರದ ಕೆಳಗೆ ಜೂಜಾಡುತ್ತಿದ್ದಾರೆಂದು ಶ್ರೀ ಬಿ. ಬವರಾಜು, ಪಿಎಸ್ಐ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಮಲ್ಲಪ್ಪ ಬಿನ್ ಮಲ್ಲೇಶಪ್ಪ, 33 ವರ್ಷ, ಕೆಎಸ್ಆರ್ಟಿಸಿ ವಸತಿ ಗೃಹ ಹಾಸನ. 2) ಲಕ್ಷ್ಮಣ ಬಿನ್ ಲೇಟ್ ಕೆಂಪಯ್ಯ, 44 ವರ್ಷ, ವಲ್ಲಬಾಯಿ ರಸ್ತೆ, ಪೆನ್ಷನ್ ಮೊಹಲ್ಲಾ, ಹಾಸನ 3) ಗೋಪಾಲ ಕೃಷ್ಣ ಬಿನ್ ಲೇಟ್ ರಂಗೇಗೌಡ, 49 ವರ್ಷ, ದೊಡ್ಡಕೊಂಡಗುಳ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು 4) ವೇಣುಗೋಪಾಲ ಬಿನ್ ಅಣ್ಣೇಗೌಡ, 40 ವರ್ಷ, ದೊಡ್ಡಕೊಂಡಗುಳ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು 5) ಶಂಕರ ಬಿನ್ ಲೇಟ್ ಜವರೇಗೌಡ, 40 ವರ್ಷ, ದೊಡ್ಡಕೊಂಡಗುಳ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 8145/- ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

 

ಪ್ರಕರಣ-04 : ದಿನಾಂಕ: 15-04-2021 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಶ್ರೀ ಕೃಷ್ಣರಾಜು, ಪಿಐ, ಹಾಸನ ಬಡಾವಣೆ ಠಾಣೆ. ರವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಹಾಸನದ ರಿಂಗ್ ರಸ್ತೆಯ ಸುಪ್ರಿಯ ಲಿಕ್ಕರ್ಸ್ ಹಿಂಭಾಗ ವಿದ್ಯುತ್ ಬೆಳಕಿನಲಿ ಜೂಜಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸೃಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶಿವಕುಮಾರ ಬಿನ್ ಲೇಟ್ ದಾಸೇಗೌಡ, 37 ವರ್ಷ, ಚಿಕ್ಕಹೊನ್ನೇನಹಳ್ಳೀ ಗರಾಮ, ಹಾಸನ ತಾಲ್ಲೂಕು 2) ಕಿರಣ್ಗೌಡ ಬಿನ್ ರಂಗಸ್ವಾಮಿ, 26 ವರ್ಷ, ದಾಸರಕೊಪ್ಪಲು ಹಾಸನ 3) ವಸಂತ್ಕುಮಾರ್ ಬಿನ್ ಸೋಮೇಗೌಡ, 30 ವರ್ಷ, ಗುಂಡೇಗೌಡನ ಕೊಪ್ಪಲು ಹಾಸನ 4) ರಕ್ಷಿತ್ ಬಿನ್ ಆನಂದ, 26 ವರ್ಷ, ಕೆ,ಆರ್.ಪುರಂ ಹಾಸನ 5) ಕುಮಾರಸ್ವಾಮಿ ಬಿನ್ ಲಕ್ಷ್ಮೇಗೌಡ, 36 ವರ್ಷ, ಗುಂಡೇಗೌಡನಕೊಪ್ಪಲು, ಹಾಸನ. 7) ಚಂದನ್ ಬಿನ್ ಗಣೇಶ್, 26 ವರ್ಷ ಗುಂಡೇಗೌಡನಕೊಪ್ಪಲು ಹಾಸನ 8) ಸುನಿಲ್ ಬಿನ್ ಲೇಟ್ ಮಹೇಶ್, 23 ವರ್ಷ, ದಾಸರಕೊಪ್ಪಲು, ಹಾಸನ 9) ವಿಷ್ಣು ಬಿನ್ ಚುಂಚೇಗೌಡ, 46 ವರ್ಷ, ವಿದ್ಯಾನಗರ ಹಾಸನ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 8,850/-ನಗದನ್ನು ಅಮಾನತ್ತುಪಡಿಸಿಕೊಂಡು ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-05: ದಿನಾಂಕ: 15-04-2021 ರಂದು ರಾತ್ರಿ 9-05 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಅಗ್ರಹಾರ್ಗೇಟ್ ಸಮೀಪದ ಹಳ್ಳಿ ಮನೆ ಡಾಬಾಕ್ಕೆ ಹೋಗುವ ರಸ್ತೆಯ ಹತ್ತಿರ ಚಾಲನ್ ಏರಿಯಾ ಮೇಲೆ ಜೂಜಾಡುತ್ತಿದ್ದಾರೆಂದು ಶ್ರೀ ಕುಮಾರ, ಪಿಎಸ್ಐ ಹೊಳೆನರಸೀಪುರ ನಗರ ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ  1) ರವಿ ಬಿನ್ ಚಿಕ್ಕೇಗೌಡ, 49 ವರ್ಷ 2) ಕೃಷ್ಣೇಗೌಡ ಬಿನ್ ಲೇಟ್ ಪುಟ್ಟೇಗೌಡ, 62 ವರ್ಷ,  ಕೆ.ಕೆ. ಹೊಸೂರು ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು  3) ದೇವರಾಜ ಬಿನ್ ನಂಜೇಗೌಡ, 50 ವರ್ಷ  ಕೋಡಿಹಳ್ಳಿ ಗ್ರಾಮ,  ಹಳೇಕೋಟೆ ಹೋಬಳಿ, ಹೊಳೆನರಸಿಪುರ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 2500/- ನಗದನ್ನು ಅಮಾನತ್ತುಪಡಿಸಿಕೊಂಡು ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

 

ಪ್ರಕರಣ-06 : ದಿನಾಂಕ: 15-04-2021 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ರಂಗನಾಯ್ಕನಕೊಪ್ಪಲು ಗ್ರಾಮದ ಸಮುದಾಯ ಭವನದ ಮುಂಭಾಗ ಜೂಜಾಡುತ್ತಿದ್ದಾರೆಂದು ಕು|| ಭಾರತಿ ರಾಯನಗೌಡರ, ಪಿಎಸ್ಐ ಬಾಣಾವರ ಪೊಲೀಸ್ ಠಾಣೆ. ರವರಿಗೆ ಬಂದ ಖಿಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಜಯದೇವಮೂತರ್ಿ ಬಿನ್ ಮರಳಪ್ಪ, 49 ವರ್ಷ,  2) ಚಿಕ್ಕರಂಗಪ್ಪ ಬಿನ್ ಗವಿರಂಗಪ್ಪ, 40 ವರ್ಷ 3) ರಾಜೇಶ್ ಬಿನ್ ಪಾಪ್ಣ್ಣ, 28 ವರ್ಷ, 4) ಓಂಕಾರಮೂತರ್ಿ ಬಿನ್ ದೊಡ್ಡಲಿಂಗಪ್ಪ, 37 ವರ್ಷ, 5) ಕೀತರ್ಿಕುಮಾರ ಬಿನ್ ಕುಮಾರನಾಯ್ಕ, 28 ವರ್ಷ, 6) ರಾಜೀವ್ ಬಿನ್ ಗವಿರಂಗಪ್ಪ, 45 ವರ್ಷ, 7) ದೇರಾಜು ಬಿನ್ ತಿಮ್ಮಪ್ಪ, 44 ವರ್ಷ, 8) ಕುಮಾರಸ್ವಮಿ ಬಿನ್ ರುದ್ರಪ್ಪ, 45 ವರ್ಷ 9) ಮಂಜುನಾಥ ಬಿನ್ ರಂಗಪ್ಪ, 40 ವರ್ಷ, 10) ಹರೀಶ್ ಬಿನ್ ಗವಿರಂಗಪ್ಪ, 29 ವರ್ಷ, 11) ಕುಂಬೇರನಾಯ್ಕ್ ಬಿನ್ ಲಾಲ್ಯಾನಾಯ್ಕ್, 45 ವರ್ಷ, ಎಲ್ಲರೂ ರಂಗನಾಯಕನಕೊಪ್ಪಲು ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 10,150/- ನಗದನ್ನು ಅಮಾನತ್ತುಪಡಿಸಿಕೊಂಡು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಮಹಿಳೆಯ ಬಂಧನ, ಮಾರಾಟಕ್ಕಿಟ್ಟಿದ್ದ 2,143/- ಬೆಲೆಯ ಮದ್ಯ ವಶ:

ದಿನಾಂಕ: 15-04-2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಮುತ್ತತ್ತಿ ಗ್ರಾಮದ ವಾಸಿ ಶ್ರೀಮತಿ ಸುರಕ್ಷಣಿ, ರವರ ಬಾಬ್ತು ಮನೆಯ ಜಗುಲಿಯ ಮೇಲೆ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಕು|| ಎಂ.ಸಿ. ಮಧು, ಪಿಎಸ್ಐ ದುದ್ದ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀಮತಿ ಸುರಕ್ಷಿಣಿ ಕೋಂ ಲಿಂಗರಾಜು, 35 ವರ್ಷ, ಮುತ್ತತ್ತಿ ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ 2,143/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

4600/- ಬೆಲೆಯ 2 ಸಿಲಿಂಡರ್ ಕಳವು:

ದಿನಾಂಕ: 14-04-2021 ರಂದು ಬೆಳಿಗ್ಗೆ 8-00 ಗಂಟೆಗೆ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಜೋಡಿಗುಬ್ಬಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಶಾಲೆಯಲ್ಲಿ ಡಾ|| ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಿಸಿ, ಎಂದಿನಂತೆ ಶಾಲಾ ಕೊಠಡಿಗಳಿಗೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ: 15-04-2021 ರಂದು ಶಾಲೆಗೆ ಬಂದು ನೋಡಲಾಗಿ ಶಾಲೆಯ ಅಕ್ಷರ ದಾಸೋಹದ ಕೊಠಡಿಯ ಬೀಗವನ್ನು ಮುರಿದು 4600 ಸಾವಿರ ಬೆಲೆಯ 2 ಸಿಲಿಂಡರ್ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀ ಟಿ.ಎನ್. ಲೋಕೇಶ್, ಶಾಲೆಯ ಮುಖ್ಯೋಪಾಧ್ಯಯರು, ರವರು ದಿನಾಂಕ: 15-04-2021 ರಂದು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 

21,000/- ಬೆಲೆಯ ಹೆಚ್.ಪಿ. ಮೋಟಾರ್ ಕಳವು:

ದಿನಾಂಕ: 13-04-2021 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕಸಬಾ ಹೋಬಳಿ, ಸುಗ್ಗನಹಳ್ಳಿ ಗ್ರಾಮದ ವಾಸಿ ಶ್ರೀ ಶಂಕರ, ರವರು ಬಾಬ್ತು ಜಮೀನಿಗೆ ಗ್ರೀವ್ಸ್ ಕಂಪನಿಯ 5 ಹೆಚ್ಪಿಯ ಡೀಸೆಲ್ ಮೋಟಾರ್ನ್ನು ತಂದು ಪಿರ್ಯಾದಿಯವರ ಜಮೀನಿನ ಪಕ್ಕದಲ್ಲಿರುವ ಉಮೇಶ್, ರವರ ಜಮೀನಿನಲ್ಲಿ ಮೋಟಾರ್ನ್ನಿಟ್ಟು ನೀರು ಹಾಯಿಸುತ್ತಿದ್ದು, ದಿನಾಂಕ: 14-04-2021 ರಂದು ಜಮೀನಿನ ಹತ್ತಿರ ಹೋಗಿ ನೋಡಲಾಗಿ ಸುಮಾರು 21,000/-ಬೆಲೆಯ ಮೋಟಾರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀ ಶಂಕರ, ರವರು ದಿನಾಂಕ: 15-04-2021 ರಂದು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 

ಅಕ್ರಮವಾಗಿ ಮದ್ಯ & ನೀರು ಪೂರೈಸುತ್ತಿದ್ದ ಇಬ್ಬರ ಬಂಧನ, 350/- ಬೆಲೆಯ ಮದ್ಯ ವಶ:

ದಿನಾಂಕ: 15-04-2021 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಯಡೇಹಳ್ಳಿ ಗ್ರಾಮದಲ್ಲಿರುವ ಪ್ಲಾಂಟಸರ್್ ಕ್ಲಬ್ನ ಮುಂಭಾಗ ಖಾಲಿ ಜಾಗದಲ್ಲಿ ಮದ್ಯ ಮತ್ತು ನೀರು ವಿತರಿಸುತ್ತಿದ್ದಾರೆಂದು ಶ್ರೀ ಬಿ.ಆರ್. ಗೋಪಿ, ಡಿವೈಎಸ್ಪಿ ಸಕಲೇಶಪುರ ಉಪ-ವಿಭಾಗ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ & ನೀರು ವಿತರಿಸುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶ್ರೀ ನಾಗರಾಜು ಬಿನ್ ಲೇಟ್ ಬಿ.ಎಸ್. ದೊಡ್ಡಪ್ಪಗೌಡ, ಬನವಾಸೆ ಗ್ರಾಮ, ಬೆಳಗೋಡು ಹೋಬಳಿ, ಸಕಲೇಶಪುರ ತಾಲ್ಲೂಕು 2) ಬಾಲು ಬಿನ್ ಮಾವಿನಕೆರೆಗೌಡ, ಬೂವನಹಳ್ಳಿ ಕೂಡಿಗೆ ಗ್ರಾಮ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು 350/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

 

ಹೆಂಗಸು ಕಾಣೆ

ದಿನಾಂಕ: 14-04-2021 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕಸಬಾ ಹೋಬಳಿ, ಯಡೂರು ಗ್ರಾಮದ ವಾಸಿ ಶ್ರೀ ವೈ.ಡಿ. ಭರತ್, ರವರು ಪತ್ನಿ ಶ್ರೀಮತಿ ಮಂಜುಳ, ರವರು ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಮಂಜುಳ, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಮಂಜುಳ ಕೋಂ ಭರತ್ ವೈ.ಡಿ., 21 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಕೆಂಪು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹೆಂಗಸಿನ ಸುಳವು ಸಿಕ್ಕಲ್ಲಿ 08170-218231 ಕ್ಕೆ ಸಂಪರ್ಕಿಸುವುದು.

No comments: