* * * * * * HASSAN DISTRICT POLICE

Thursday, April 15, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 13-04-2021

 

     ಪತ್ರಿಕಾ ಪ್ರಕಟಣೆ         ದಿನಾಂಕ:  13-04-2021

ಜೂಜಾಡುತ್ತಿದ್ದ 10 ಜನರ ಬಂಧನ, ಬಂಧಿತರಿಂದ 8,435/- ನಗದು ವಶ:

     ದಿನಾಂಕ: 12-04-2021 ರಂದು ರಾತ್ರಿ 01-30 ಗಂಟೆ ಸಮಯದಲ್ಲಿ ಶ್ರೀ ಪಿ.ಪಿ. ಸೋಮೇಗೌಡ, ಪಿಐ ಅರಸೀಕೆರೆ ನಗರ ಪೊಲೀಸ್ ಠಾಣೆ. ಸಿಬ್ಬಂದಿಗಳೊಂದಿಗೆ ರೌಂಡ್ಸ್ ನಲ್ಲಿದ್ದಾಗ ಅರಸೀಕೆರೆ ನಗರದ ಸ್ಪೀಪರ್ ಕಾಲೋನಿಯಲ್ಲಿರುವ ಶ್ರೀ ಜಯಕುಮಾರ್, ರವರ ಮನೆಯ ಹತ್ತಿರ ಸೋಲಾರ್ ಲೈಟ್ ಬೆಳಕಿನಲ್ಲಿ ಜೂಜಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಕೃಷ್ಣ ಬಿನ್ ದುರ್ಗಪ್ಪ 39 ವರ್ಷ, 2) ಹರೀಶ್ ಬಿನ್ ಲೇಟ್ ಬಸವರಾಜು, 33 ವರ್ಷ, 3) ವೇಣು ಬಿನ್ ನರಸಿಂಹಯ್ಯ, 32 ವರ್ಷ, 4) ಮಹೇಶ್ ಬಿನ್ ಮಂಜುನಾಥ, 22 ವರ್ಷ 5) ರಘು ಬಿನ್ ನಾರಾಯಣಪ್ಪ, 35 ವರ್ಷ, 6) ಮೂತರ್ಿ ಬಿನ್ ನಾರಾಯಣಪ್ಪ, 38 ವರ್ಷ 7) ವೆಂಕಟೇಶ್ ಬಿನ್ ನೆಲ್ಲಯ್ಯ, 30 ವರ್ಷ 8) ಸಂತೋಷ ಬಿನ್ ಮಾರಪ್ಪ, 28 ವರ್ಷ, 9) ವೆಂಕಟೇಶ್ ಬಿನ್ ಲೇಟ್ ರಂಗಪ್ಪ, 38 ವರ್ಷ 10) ಗೌತಮ್ ಬಿನ್ ಮಹಾಲಿಂಗಪ್ಪ, 24 ವರ್ಷ, ಎಲ್ಲರೂ ಸ್ಪೀಪರ್ ಕಾಲೋನಿ, ಅರಸೀಕೆರೆ ನಗರ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟಿದ್ದ 8,435/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಶಾಲಾ ಕೊಠಡಿ ಬೀಗ ಮುರಿದು 2 ಸಾವಿರ ಬೆಲೆಯ ಹೆಚ್ ಪಿ ಸಿಲಿಂಡರ್ ಕಳವು:

     ದಿನಾಂಕ: 10-04-2021 ರಂದು ಮಧ್ಯಾಹ್ಮ 12-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ರಾಜಗೆರೆ ಗ್ರಾಮದ ಶ್ರೀ ಹುಲಿಕಲ್ಲೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ಬೂವನೇಶ್, ರವರು ಎಂದಿನಂತೆ  ಶಾಲೆ ಮುಗಿಸಿಕೊಂಡು ಶಾಲಾ ಕೊಠಡಿ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ: 12-04-2021 ರಂದು ಬೆಳಿಗ್ಗೆ 9-30 ಗಂಟೆಗೆ ಶಾಲೆಗೆ ಬಂದು ನೋಡಲಾಗಿ ಮುಖ್ಯ ಶಿಕ್ಷಕರ ಕೊಠಡಿ, ಸಹಶಿಕ್ಷಕರ ಕೊಠಡಿ ಹಾಗೂ ಅಕ್ಷರ ದಾಸೋಹ ಕೊಠಡಿಗಳ ಬೀಗವನ್ನು ಮುರಿದು 2 ಸಾವಿರ ಬೆಲೆಯ ಹೆಚ್ಪಿ ಗ್ಯಾಸ್ ಕಂಪನಿಯ ಸಿಲಿಂಡರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀ ಬೂವನೇಶ್, ಮುಖ್ಯೋಪಾಧ್ಯಯರು, ರವರು ದಿನಾಂಕ: 12-04-2021 ರಂದು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಟ್ರ್ಯಾಕ್ಟರ್ ಡಿಕ್ಕಿ, ಪಾದಚಾರಿ ವ್ಯಕ್ತಿ ಸಾವು:

     ದಿನಾಂಕ: 12-04-2021 ರಂದುದ ಸಂಜೆ 6-45 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಕಡುವಿನಕೋಟೆ ಗ್ರಾಮದ ವಾಸಿ ಶ್ರೀ ಮರಿಗೌಡ, ರವರು ಜಮೀನಿಗೆ ಕಬ್ಬು ನಡೆಲು ಹೋಗಿದ್ದು, ವಾಪಸ್ ಮನೆಗೆ ಹೋಗಲು ಹೊಳೆನರಸೀಪುರ ತಾಲ್ಲೂಕು, ಹೆಚ್.ಎಂ. ರಸ್ತೆ, ಕಡುವಿನಕೋಟೆ ಗ್ರಾಮದ ಶ್ರೀ ಲಕ್ಷ್ಮೀ ರಂಗನಾಥಸ್ವಾಮಿ ಏ ಬ್ರಿಡ್ಜ್, ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13, ಟಿ-6207 ರ ಟ್ರ್ಯಾಕ್ಟರ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿಯಾದ ಪರಿಣಾಮ ಶ್ರೀ ಮರಿಗೌಡ, 56 ವರ್ಷ, ಕಡುವಿನಕೋಟೆ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸಿಪುರ ತಾಲ್ಲೂಕು. ರವರು ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಹಾಗೂ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತರ ಮಗ ಶ್ರೀ ಕೆ.ಎಂ. ಅಶೋಕ, ರವರು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಮದುವೆ ವಿಚಾರಕ್ಕೆ ಸೋದರತ್ತೆ ಮಗ ಇಬ್ಬರು ಹುಡುಗಿಯರ ಮೇಲೆ ಮರಣಾಂತಿಕ ಹಲ್ಲೆ:

     ದಿನಾಂಕ: 12-04-2021 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಕುಂಚೇವು ಹೊಸಹಳ್ಳಿ ಗ್ರಾಮದ ವಾಸಿ ಕು|| ಯೋಗಿತಾ, ಮತ್ತು ತಂಗಿ ಕು|| ಪುಷ್ಪ, ರವರುಗಳು ಮನೆಯ ಹತ್ತಿರವಿದ್ದಾಗ ಇವರ ಅಜ್ಜಿ ಶ್ರೀಮತಿ ಪುಟ್ಟಮ್ಮ ಮತ್ತು ಸೋದರತ್ತೆ ಶ್ರೀಮತಿ ಅಕ್ಕಮ್ಮ, ಅಕ್ಕಮ್ಮ ರವರ ಮಗ ಶ್ರೀ ನಾಗರಾಜು, ರವರುಗಳು ಪಿರ್ಯಾದಿಯವರ ಮನೆಯ ಹತ್ತಿರ ಬಂದು ಮದುವೆ ವಿಚಾರ ಮಾತಾನಾಡುತ್ತಾ ಶ್ರೀ ನಾಗರಾಜು, ತಮ್ಮ ದಿನೇಶ್ ನ್ನು ಮದುವೆಯಾಗಲು ಯೋಗಿತಾಳಿಗೆ ಒತ್ತಾಯಿಸಿದ್ದು, ಯೋಗಿತಾ ಮತ್ತು ಪುಷ್ಪ, ರವರುಗಳು ನಾವು ಮದುವೆಯಾಗುವುದಿಲ್ಲವೆಂದು ಹೇಳಿದ್ದಕ್ಕೆ ಅಜ್ಜಿ  ಶ್ರೀಮತಿ ಪುಟ್ಟಮ್ಮ, ರವರು ನಾಗರಾಜನಿಗೆ ಅವಾಚ್ಯಶಬ್ಧಗಳಿಂದ ನಿಂದಿಸಿ, ಶ್ರೀ ನಾಗರಾಜ ತಮ್ಮ ದಿನೇಶ್ ನ್ನು ಮದುವೆಯಾಗದಿದ್ದರೆ ಕೊಲೆ ಮಾಡುತ್ತೇನೆಂದು ಮಚ್ಚಿನಿಂದ ಕುತ್ತಿಗೆಗೆ ಮತ್ತು ಕೈಗೆ ಹೊಡೆದು ಹಾಗೂ ಪುಷ್ಪಳಿಗೂ ಸಹ ಮಚ್ಚಿನಿಂದ ತಲೆಯ ಎಡಭಾಗಕ್ಕೆ ಹೊಡೆದು ಮರಣಾಂತಿಕ ಹಲ್ಲೆ ನಡೆಸಿರುತ್ತಾರೆಂದು ಹಾಗೂ ಆರೋಪಿಗಳಾದ ಶ್ರೀ ನಾಗರಾಜು ಶ್ರೀಮತಿ ಪುಟ್ಟಮ್ಮ & ಅಕ್ಕಮ್ಮ, ರವರುಗಳು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕು|| ಯೋಗಿತಾ, ರವರು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಮನೆಯ ಬೀಗ ಮುರಿದು ಚಿನ್ನಾ ಮತ್ತು ಬೆಳ್ಳಿಯ ಆಭರಣಗಳ ಕಳವು:

     ದಿನಾಂಕ: 12-04-2021 ರಂದು ಮಧ್ಯಾಹ್ನ 11-45 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಕೊಂತಗೌಡನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಸುಮಿತ್ರಾ, ರವರು ಮನೆಗೆ ಬೀಗ ಹಾಕಿಕೊಂಡು ಮಕ್ಕಳೊಂದಿಗೆ ಕೆಲಸ ನಿಮಿತ್ತ ಹಾಸನ ನಗರಕ್ಕೆ ಬಂದಿದ್ದು, ಕೆಲಸ ಮುಗಿಸಿಕೊಂಡು ವಾಪಸ್ ಮನೆಯ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳಪ್ರವೇಶಿಸಿ, ಬೀರುವಿನಲ್ಲಿಟ್ಟಿದ್ದ ಸುಮಾರು 75,000/- ಬೆಲೆಯ 6 1/2  ಗ್ರಾಂ ತೂಕದ ಚಿನ್ನದ 2 ಜೊತೆ ಓಲೆಗಳು 5 ಗ್ರಾಂ ಎರಡು ಚಿನ್ನದ ಉಂಗುರಗಳನ್ನು ಮತ್ತು 50 ಗ್ರಾಂ ತೂಕದ ಬೆಳ್ಳಿಯ ಒಂದು ಜೊತೆ ಕಾಲು ಚೈನ್ ಮತ್ತು ದೀಪ ಕಾಲುಂಗರಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಸುಮಿತ್ರಾ, ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: