* * * * * * HASSAN DISTRICT POLICE

Monday, April 12, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 11-04-2021

 

 ಪತ್ರಿಕಾ ಪ್ರಕಟಣೆ                 ದಿನಾಂಕ:-11-04-2021

 ಬೈಕ್ ಗಳ ಮುಖಾಮುಖಿ ಡಿಕ್ಕಿ, ಒಬ್ಬರ ಸಾವು.

     ದಿನಾಂಕ:-07-04-2021 ರಂದು ಮಧ್ಯಾಹ್ನ ಸುಮಾರು 01-00 ಗಂಟೆ ಸಮಯದಲ್ಲಿ ಪುಟ್ಟಸ್ವಾಮಿ, 52 ವರ್ಷ, ಮುತ್ತಿಗೆಹಿರೇಹಳ್ಳಿ ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು ರವರು ತಮ್ಮ ಗ್ರಾಮದಿಂದ ಬಿಜೆಮಾರನಹಳ್ಳಿ ಗ್ರಾಮಕ್ಕೆ ಹೋಗಲು ಹೊಳೇನರಸೀಪುರ ತಾಲ್ಲೂಕು, ಚಾಕೇನಹಳ್ಳಿ ಗ್ರಾಮದ ಸರ್ಕಾರಿ ಆಸ್ಪತ್ರೆಯ ಮುಂದಿನ ರಸ್ತೆಯಲ್ಲಿ ತಮ್ಮ ಬಾಬ್ತು ಕೆಎ-13-ಹೆಚ್-1553 ಹಿರೋಹೊಂಡಾ ಬೈಕ್ನಲ್ಲಿ ಹೋಗುತ್ತಿದ್ದಾಗ ಆಸ್ಪತ್ರೆಯ ಕಡೆಯಿಂದ ಬಂದ ಕೆಎ-05-ಇವಿ-4687 ಸಂಖ್ಯೆಯ ಬೈಕ ಅನ್ನು ಅದರ ಚಾಲಕ ಅತಿವೇಗವಾಗಿ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂದು ಬಂದು ಪುಟ್ಟಸ್ವಾಮಿ ರವರ ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಪುಟ್ಟಸ್ವಾಮಿ ರವರು ಬೈಕ್ ನಿಂದ ರಸ್ತೆಯ ಮೇಲೆ ಬಿದ್ದಿದ್ದರಿಂದ ತಲೆಗೆ ಹಾಗು ದೇಹದ ಭಾಗಗಳಿಗೆ ಪೆಟ್ಟಾಗಿ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರುಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ, ಹಾಸನಕ್ಕೆ ಕರೆದುಕೊಂಡು ಚಿಕಿತ್ಸೆ ಕೊಡಿಸುತ್ತಿದ್ದು, ಫಲಕಾರಿಯಾಗದೇ ಪುಟ್ಟಸ್ವಾಮಿ ರವರು ದಿನಾಂಕ:-10-04-2021 ರಂದು ಮಧ್ಯಾಹ್ನ 01-10 ಗಂಟೆ ಸಮಯದಲ್ಲಿ ಮೃತರಾಗಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಮೃತ ಪುಟ್ಟಸ್ವಾಮಿ ರವರ ಮಗ ಯೋಗೇಶ ಬಿನ್ ಪುಟ್ಟಸ್ವಾಮಿ ರವರು ಹೊಳೇನರಸೀಪುರ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.

 ಮದ್ಯಪಾನ ಮಾಡಲು ಸ್ಥಳಾವಕಶ, ಒಬ್ಬನ ಬಂಧನ.

     ದಿನಾಂಕ:-10-04-2021 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಕೊಣನೂರು ಪೊಲೀಸ್ ಠಾಣಾ ಪಿ.ಎಸ್.ಐ ಅಜಯ್ ಕುಮಾರ್ ರವರಿಗೆ ಬಾತ್ಮೀದಾರರಿಂದ ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯ ಅಗ್ರಹಾರ ಗ್ರಾಮದ ರಾಜೇಗೌಡ @ ರೊಟ್ಟಿ ಬಸಪ್ಪ ರವರ ಮನೆಯ ಮುಂಭಾಗದಲ್ಲಿ ಅಕ್ರಮವಾಗಿ ಮದ್ಯ ಸೇವನೆ ಮಾಡಿಸುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ ಸಂಜೆ 04-20 ಗಂಟೆಗೆ ಹೋಗಿ ದಾಳಿ ಮಾಡಿ, ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿದ್ದ ಶಂಕರ್ ಬಿನ್ ರಾಜೇಗೌಡ @ ರೊಟ್ಟಿ ಬಸಪ್ಪ, 39 ವರ್ಷ, ವಕ್ಕಲಿಗರು, ವ್ಯವಸಾಯ, ಅಗ್ರಹಾರ ಗ್ರಾಮ, ದೊಡ್ಡಮಗ್ಗೆ ಹೋಬಳಿ ಅರಕಲಗೂಡು ತಾಲ್ಲೂಕು ರವರ ಬಳಿ ಮದ್ಯಪಾನ ಮಾಡಲು ಸ್ಥಳವಕಾಶ ಮಾಡಿಕೊಡಲು ಯಾವುದೇ ಪರವಾನಗಿ ಇಲ್ಲದೇ ಇದ್ದುದ್ದರಿಂದ ದಸ್ತಗಿರಿ ಮಾಡಿ, ಆತನ ವಿರುದ್ದ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆಯಲ್ಲಿರುತ್ತದೆ. 


No comments: