* * * * * * HASSAN DISTRICT POLICE

Monday, April 12, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 10-04-2021

 

         ಪತ್ರಿಕಾ ಪ್ರಕಟಣೆ                  ದಿನಾಂಕ:  10-04-2021

 ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆಯ ಮಾಂಗಲ್ಯ ಸರ ದೋಚಿ ಪರಾರಿ

    ದಿನಾಂಕ: 09.04.2021 ರಂದು ಬೆಳಗ್ಗೆ ಸುಮಾರು 11.30 ಗಂಟೆ ಸಮಯದಲ್ಲಿ ಹಾಸನದ ಹಾಲುವಾಗಿಲು ರಸ್ತೆಯ 2ನೇ ಕ್ರಾಸ್, ತಣ್ಣೀರುಹಳ್ಳದ ವಾಸಿ ಪಲ್ಲವಿ ಕೋಂ ವಿಜಯಕುಮಾರ್ ರವರು ಮನೆಯನ್ನು ಸ್ವಚ್ಚಗೊಳಿಸಿ ಮ್ಯಾಟನ್ನು ತಂದು ಹೊರಗಡೆ ಕೊಡವುತ್ತಿರುವಾಗ ಯಾರೋ 5 ರಿಂದ 6 ಜನರು ಹಿಂದಿಯಲ್ಲಿ  ಅಡ್ರಸ್ ಕೇಳುವವರಂತೆ ಹತ್ತಿರಕ್ಕೆ ಬಂದು ಕೊರಳಿನಲ್ಲಿದ್ದ 20 ಗ್ರಾಂ ತೂಕದ ಸುಮಾರು 80,000/- ಬೆಲೆಯ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆ ಪತ್ತೆ ಮಾಡಿಕೊಡಬೇಕೆಂದು ಪಲ್ಲವಿರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಮರಕ್ಕೆ ಕಾರ್ ಡಿಕ್ಕಿ ಕಾರು ಚಾಲಕನ ಸಾವು

     ದಿನಾಂಕ:09/04/2021 ರಂದು ಮಧ್ಯಾಹ್ನ 01-00 ಗಂಟೆ ಸಮಯದಲ್ಲಿ ಹಾಸನದ ಹುಣಸಿನಕೆರೆಯ ವಾಸಿ ಅಬ್ರಾರ್ ಪಾಷ ರವರು ಕೆಎ-01-ಎಂ.ಬಿ-7796 ರ ಕಾರಿನಲ್ಲಿ ಅರೆಹಳ್ಳಿಗೆ ಹೋಗಿ ವಾಪಸ್ ಹಾಸನಕ್ಕೆ ಹೋಗಲು ಆಲೂರು ತಾಲೂಕು ಪಾಳ್ಯ ಹೋಬಳಿ ಕಾರ್ಜುವಳ್ಳಿ ಹತ್ತಿರ ಆಲೂರು-ಬಿಕ್ಕೋಡು ರಸ್ತೆಯಲ್ಲಿ ಕಾರನ್ನು ಚಾಲನೆ ಮಾಡಿಕೊಂಡು ಬರುವಾಗ ರಸ್ತೆ ಮಧ್ಯೆ ನಾಯಿ ಅಡ್ಡ ಬಂದಿದ್ದು, ನಾಯಿಗೆ ಅಪಘಾತವಾಗುವುದನ್ನು ತಪ್ಪಿಸುವುದಕ್ಕಾಗಿ ರಸ್ತೆಯ ಬಲಬದಿಯ ಮರಕ್ಕೆ  ತನ್ನ ಕಾರನ್ನು ಗುದ್ದಿಸಿದ ಪರಿಣಾಮ ಅಬ್ರಾರ್ ಪಾಷ ರವರ ತಲೆ, ಎದೆ, ಎಡಗೈಗೆ ಮತ್ತು ದೇಹದ ಇತರೆ ಭಾಗಗಳಿಗೆ ತೀವ್ರ ಪೆಟ್ಟಾಗಿ ಕೂಡಲೇ ಹಿಂದೆ ಬೈಕಿನಲ್ಲಿ ಬರುತ್ತಿದ್ದ ರಿಜ್ವಾನ್ ಪಾಷ ರವರು ಅಬ್ರಾರ್ ಪಾಷ ರವರನ್ನು ಆಲೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ಅಬ್ರಾಂ ಪಾಷನು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆಂದು, ರಿಜ್ವಾನ್ ಪಾಷ ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಬಲಿಜ ಸಂಘದ ಕಛೇರಿಯ ಬೀಗಮುರಿದು 28,808/- ರೂ ನಗದು ಹಾಗೂ ಸಿಸಿ ಕ್ಯಾಮೆರಾ ಡಿವಿಆರ್ ಕಳ್ಳತನ

     ದಿನಾಂಕ 07-04-2021 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಹಾಸನ ಜಿಲ್ಲಾ ಬಲಿಜ ಸಂಘದ ಪದಾಧಿಕಾರಿಗಳು ಎಂದು ಹೇಳುತ್ತಿರುವ 1) ಶಾಂತಶೆಟ್ಟಿ ಬಿನ್ ಲೇ|| ವೀರಣ್ಣಶೆಟ್ಟಿ, 2) ಹೆಚ್.ಜಿ ಜಗನ್ನಾಥ್ ಬಿನ್ ಹೆಚ್.ಕೆ ಗೋಪಾಲಶೆಟ್ಟಿ, 3) ರವಿಶಂಕರ ಹೆಚ್.ಆರ್ ಬಿನ್ ಲೇ|| ಹೆಚ್.ಕೆ ರಾಮಚಂದ್ರಯ್ಯ, 4) ಧರ್ಮರಾಜ ಬಿನ್ ಲೇ|| ಕೇಶವಯ್ಯ, 5) ನಾಗರಾಜು ಹೆಚ್.ಆರ್ ಬಿನ್ ರಾಮಣ್ಣ ಎಂಬುವವರು ಹಾಸನದ ರವೀಂದ್ರನಗರದಲ್ಲಿರುವ ಹಾಸನ ಜಿಲ್ಲಾ ಬಲಿಜ ಸಂಘದ (ಯೋಗಿನಾರಾಯಣ ಸಮುದಾಯ ಭವನ) ಕಛೇರಿಗೆ ಏಕಾಏಕಿ ನುಗ್ಗಿ ದಾಂದಲೆ ನಡೆಸಿ ಕಛೇರಿಯ ಬೀಗ ಮುರಿದು, ಕಛೇರಿಯ ಅಲ್ಮೇರಾದಲ್ಲಿದ್ದ 28,808/- ರೂ ನಗದು ಹಣ ಹಾಗೂ ಸಿಸಿ ಕ್ಯಾಮರ ಡಿ.ವಿ.ಆರ್ ಅನ್ನು ಕಳ್ಳತನ ಮಾಡಿರುತ್ತಾರೆಂದು ಸಂಘದ ಅಧ್ಯಕ್ಷರಾದ ವೆಂಕಟೇಶ್ ಎಸ್.ಆರ್ ಬಿನ್ ಲೇ|| ರಂಗಸ್ವಾಮಿ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 5 ಜನರ ಬಂಧನ ಹಾಗೂ 02 ಟ್ರಾಕ್ಟರ್ ಮತ್ತು ಟ್ರೈಲರ್ ವಶ

     ದಿನಾಂಕ 09-04-2021 ರಂದು ಬೆಳಗ್ಗೆ 04-45 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು ಹೊನ್ನೇನಹಳ್ಳಿ ಕಾವಲಿನ 02 ಕಿ ಮೀ ಮುಂದಿರುವ ಬುಗುಡಿ ಕಾಲುವೆ ಬಳಿ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದರೆಂದು   ಬೇಲೂರು ಠಾಣೆಯ ಪಿಎಸ್ಐ ಶ್ರೀ ಶಿವನಗೌಡ ಜಿ ಪಾಟೀಲ್ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ  ಸ್ಥಳಕ್ಕೆ  ಹೋಗಿ ದಾಳಿ ಮಾಡಿ ಅಕ್ರಮವಾಗಿ ಮರಳು ತುಂಬುತ್ತಿದ್ದ           1)ಕೆಎ-46 ಟಿ-6553 ರ ಟ್ರಾಕ್ಟರ್  ಮತ್ತು ಟ್ರೈಲರ್ 2) ಕೆಎ-46 ಟಿ-6648 ಟ್ರಾಕ್ಟರ್ ಮತ್ತು ಟ್ರೈಲರ್ ಅಮಾನತ್ತು ಮಾಡಿ ಅಕ್ರಮವಾಗಿ ಮರಳು ತುಂಬುತ್ತಿದ್ದ 05 ಜನರನ್ನು ವಶಪಡಿಸಿಕೊಂಡು ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಮಹಿಳೆ ಕಾಣೆ

     ದಿನಾಂಕ 07-04-2021 ರಂದು ಬೆಳಿಗ್ಗೆ 8.30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಸೋಮನಾಥನಹಳ್ಳಿ ಗ್ರಾಮದ ಹಾಲಿ ಚನ್ನರಾಯಪಟ್ಟಣದ ಕೋಟೆಯಲ್ಲಿರುವ ಕೊಳದ ಬೀದಿಯಲ್ಲಿ ವಾಸವಾಗಿರುವ ಲಕ್ಷ್ಮೀ ಬಿನ್ ಚಿಕ್ಕಿರೇಗೌಡ ರವರು ಎಂದಿನಂತೆ ಶೆಟ್ಟಿಹಳ್ಳಿಯ ಡೈರಿಗೆ  ಕೆಲಸಕ್ಕೆ ಹೋದವಳು ವಾಪಸ್ಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ತಂದೆ ಚಿಕ್ಕಿರೇಗೌಡ ರವರು ಕೊಟ್ಟ ದೂರಿನ ಮೇರೆಗೆ ಹಾಸನ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಮಹಿಳೆಯ ಚಹರೆ: ಲಕ್ಷ್ಮೀ ಬಿನ್ ಚಿಕ್ಕಿರೇಗೌಡ, 36 ವರ್ಷ, 5'3' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ  ಅರಿಶಿಣ ಬಣ್ಣದ ಚೂಡಿದಾರ್ ಮತ್ತು ಅರಿಶಿಣ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-268845ಕ್ಕೆ ಸಂಪರ್ಕಿಸುವುದು.


No comments: