* * * * * * HASSAN DISTRICT POLICE

Monday, April 12, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 09-04-2021

 

   ಪತ್ರಿಕಾ ಪ್ರಕಟಣೆ                       ದಿನಾಂಕ: 09-04-2021

 ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನ ಬಂಧನ, 1590/- ಬೆಲೆಯ ಮದ್ಯ ವಶ:

     ದಿನಾಂಕ: 08-04-2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಶ್ರೀ ಮಹೇಶ್  ಜೆ.ಇ., ಪಿಎಸ್ಐ, ಅರೇಹಳ್ಳಿ ಪೊಲೀಸ್ ಠಾಣೆ. ರವರು ಸಿಬ್ಬಂದಿಗಳೊಂದಿಗೆ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ನೆರಳಕಟ್ಟೆ ಗ್ರಾಮದ ಕಡೆ ಗಸ್ತು ಕರ್ತವ್ಯದಲ್ಲಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ಜಗದೀಶ್ @ ದಿನೇಶ್, ರವರ ಮನೆಯ ಮುಂಭಾಗ ಸಾರ್ವಜನಿಕರ ಸ್ಥಳದಲ್ಲಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಜಗದೀಶ್ @ ದಿನೇಶ್ ಬಿನ್ ಆನಂದ, 40 ವರ್ಷ, ನೇರಳಕಟ್ಟೆ ಗ್ರಾಮ, ಅರೇಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಸ್ಥಳದಲ್ಲಿದ್ದ 1590/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಬೈಕ್ ಗಳ ಡಿಕ್ಕಿ ಬೈಕ್ ಸಾವರ ಸಾವು:

     ದಿನಾಂಕ: 08-04-2021 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು. ಕಸಬಾ ಹೋಬಳಿ, ತಿರುಮಲಾಪುರ ಗ್ರಾಮದ ವಾಸಿ ಶ್ರೀ ಯೋಗೇಶ್, ರವರು ತಾಯಿ ಶ್ರೀಮತಿ ಮಂಜಮ್ಮ, ರವರೊಂದಿಗೆ ಕೆಎ-13, ಇಜಿ-0076 ರ ಬೈಕ್ ನಲ್ಲಿ ಹೊಳೆನರಸೀಪುರಕ್ಕೆ ಹೋಗಿ ವಾಪಸ್ ಊರಿಗೆ ಹೋಗಲು ಹೊಳೆನರಸೀಪುರ ತಾಲ್ಲೂಕು, ಹೊಳೆನರಸೀಪುರ-ಚನ್ನರಾಯಪಟ್ಟಣ ಕಡೆಯಿಂದ ಕೆಎ-13, ಜೆ-4807 ರ ಬೈಕ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಡಿಕ್ಕಿಯಾದ ಪರಿಣಾಮ ಶ್ರೀ ಯೋಗೇಶ್, ರವರ ತಲೆಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಶ್ರೀ ಯೋಗೇಶ್, ರವರನ್ನು ಹೊಳೆನರಸೀಪುರ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಯೋಗೇಶ್ ಬಿನ್ ಲೇಟ್ ವರದಯ್ಯ, 29 ವರ್ಷ, ತಿರುಮಲಾಪುರ ಗ್ರಾಮ, ಕಸಬಾ ಹೋಬಳಿ, ಹೊಳೆನರಸೀಪುರ ತಾಲ್ಲೂಕು, ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಹಾಗೂ  ಶ್ರೀಮತಿ ಮಂಜಮ್ಮ, ರವರಿಗೆ ಸಣ್ಣ-ಪುಟ್ಟ ರಕ್ತಗಾಯಗಳಾಗಿದ್ದು, ಆರೋಪಿ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 15 ಲಕ್ಷಕ್ಕೆ 6% ರಂತೆ ಲೋನ್ ಕೊಡಿಸುವುದಾಗಿ ನಂಬಿಸಿ 47,300/- ನಗದು ವಂಚನೆ:

     ದಿನಾಂಕ: 30-11-2020 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಹಾಸನದ # 2126/2, ಆರ್ ಸಿ ರಸ್ತೆ ವಾಸಿ ಶ್ರೀಮತಿ ಹೆಚ್.ಆರ್. ಅಕ್ಷತಾ, ರವರಿಗೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ದೂರವಾಣಿ ಕರೆ ಮಾಡಿ 15 ಲಕ್ಷ ಹಣವನ್ನು 6% ರಂತೆ ಲೋನ್ ಕೊಡುವುದಾಗಿ 47,300/- ನಗದನ್ನು ಖಾತೆ ಜಮಾ ಮಾಡಿಸಿಕೊಂಡು ನಂಬಿಸಿ ವಂಚಿಸಿರುತ್ತಾರೆಂದು ಶ್ರೀಮತಿ ಅಕ್ಷತಾ, ರವರು ದಿನಾಂಕ: 08-04-2021 ರಂದು ಕೊಟ್ಟ ದೂರಿನ ಮೇರೆಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿ ತನಿಖೆಯಲ್ಲಿರುತ್ತೆ.

 ಮಾಂಗಲ್ಯ ಸರ ಕಿತ್ತುಕೊಂಡು ಮಹಿಳೆಯ ಹತ್ಯೆ:

     ದಿನಾಂಕ: 07-04-2021 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ಆಂದಲೆ ಗ್ರಾಮದ ವಾಸಿ ಶ್ರೀ ರಂಗೇಗೌಡ, ರವರ ಪತ್ನಿ ಶ್ರೀಮತಿ ಪುಟ್ಟಮ್ಮ, ರವರು ದನಕರುಗಳು ಮತ್ತು ಓತಗಳನ್ನು ಮೇಯಿಸಿಕೊಂಡು ಬರಲು ಜಮೀನಿನ ಹತ್ತಿರ ಹೋಗಿದ್ದು, ಸಂಜೆಯಾದರೂ ವಾಪಸ್ ಮನೆಗೆ ಬಾರದೆ ಕಾರಣ ಹುಡುಕಿಕೊಂಡು ಹೋದಾಗ ದನಕರುಗಳಿದ್ದವು. ದಿನಾಂಕ: 08-02021 ರಂದು ಬೆಳಿಗ್ಗೆ 10-00 ಗಂಟೆಗೆ ಜಮೀನಿನ ಹತ್ತಿರ ಹುಡುಕುತ್ತಿದ್ದಾಗ ಶ್ರೀಮತಿ ಪುಟ್ಟಮ್ಮ, ರವರ ಮೊಬೈಲ್ ಸಿಕ್ಕಿದ್ದು, ಸ್ವಲ್ಪ 200 ಮುಂದೆ ಅದೇ ಗ್ರಾಮದ ಶ್ರೀ ಗೋಪಿನಾಥ, ರವರು ಪಾಳು ಬಿದ್ದಿರುವ ಮಾವಿನ ತೋಪಿನ ಜಮೀನಿನಲ್ಲಿ ತರಗು ಮತ್ತು ಒಣಕಡ್ಡಿಗಳನ್ನು ಗುಡ್ಡೆ ಮಾಡಿದ್ದು ಕೆದಕಿ ನೋಡಲಾಗಿ ಕೆಂಪು ಸೀರೆ ಧರಿಸಿದ್ದು, ಪತ್ತೆಯಾಗಿದ್ದು, ಕೊರಳಿನಲ್ಲಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಮತ್ತು 10 ಗ್ರಾಂ ತೂಕದ ಚಿನ್ನದ ಕಿವಿಯ ಓಲೆಗಳಿದ್ದು, ಯಾರೋ ದುಷ್ರ್ಕಮಿಗಳು 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕೊಲೆ ಮಾಡಿರುವುದನ್ನು ಮರೆಮಾಚುವ ಉದ್ದೇಶದಿಂದ ಗುಂಡಿ ತೆಗೆದು ಮುಚ್ಚಿರುತ್ತಾರೆಂದು ಹಾಗೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತಳ ಪತಿ ಶ್ರೀ ರಂಗೇಗೌಡ, ರವರು ದಿನಾಂಕ: 08-04-2021 ರಂದು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಅಕ್ರಮವಾಗಿ ಟ್ರ್ಯಾಕ್ಟರ್ಗಳಿಗೆ ಮರಳು ತುಂಬುತ್ತಿದ್ದ ಇಬ್ಬರ ಬಂಧನ, ಮರಳು ಸಮೇತ 2 ಟ್ರ್ಯಾಕ್ಟರ್ಗಳ ವಶ:

     ದಿನಾಂಕ: 09-04-2021 ರಂದು ಬೆಳಗಿನಜಾವ 4-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಹೊನ್ನೇನಹಳ್ಳಿ ಕಾವಲು ಬುಗುಡಿ ಚಾನಲ್ ಹತ್ತಿರ ಟ್ರ್ಯಾಕ್ಟರ್ ಗೆ ಮರಳು ತುಂಬುತ್ತಿದ್ದಾರೆಂದು ಶ್ರೀ ಶಿವನಗೌಡ ಜಿ ಪಾಟೀಲ್, ಪಿಎಸ್ಐ ಬೇಲೂರು ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ 1) ಕೆಎ-46, ಟಿ-6553 ರ ಟ್ರೇಲರ್ 2) ಕೆಎ-46, ಟಿ-6648 ರ ಟ್ರ್ಯಾಕ್ಟರ್ಗಳಿಗೆ ಮರಳು ತುಂಬುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಹರೀಶ್ ಬಿನ್ ಕುಮಾರ, 35 ವರ್ಷ, ಮಾಳೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಬೇಲೂರು ತಾಲ್ಲೂಕು 2) ಆನಂದ ಬಿನ್ ಚೆನ್ನಯ್ಯ, 31 ವರ್ಷ, ಮಾಳೇನಹಳ್ಳಿ ಗ್ರಾಮ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮರಳು ಸಮೇತ 2 ಟ್ರ್ಯಾಕ್ಟರ್ಗಳನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


No comments: