* * * * * * HASSAN DISTRICT POLICE

Monday, April 12, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 08-04-2021

 

 ಪತ್ರಿಕಾ ಪ್ರಕಟಣೆ               ದಿನಾಂಕ: 08-04-2021

 

ಅಕ್ರಮವಾಗಿ ಗಾಂಜ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ, 15 ಸಾವಿರ ಬೆಲೆಯ 1 ಕೆ.ಜಿ. 10 ಗ್ರಾಂ ತೂಕದ ಗಾಂಜ ವಶ:

     ದಿನಾಂಕ: 07-04-2021 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಶ್ರೀ ವೆಂಕಟೇಶ್ವರ ಪಿಯು ಕಾಲೇಜು ಹತ್ತಿರ ಶ್ರೀ ಹೃತಿಕ್ @ ಹರ್ಷ, ಸಿದ್ದಾಪುರ ಗ್ರಾಮ ಮತ್ತು ಶ್ರೀ ಸಂತೋಷ @ ಸಂತೋಷ ಪೂಜಾರಿ, ರವರು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಗಾಂಜಾ ಸೇವನೆ ಮಾಡಿಕೊಂಡು ಗಾಂಜಾ ಪ್ಯಾಕೇಟ್ಗಳನ್ನು ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಅಜಯ್ಕುಮಾರ್, ಪಿಎಸ್ಐ ಕೊಣನೂರು ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಹೃತಿಕ್ @ ಹರ್ಷ ಬಿನ್ ರಾಮಚಂದ್ರ, 20 ವರ್ಷ, ಸಿದ್ದಾಪುರ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು 2) ಸಂತೋಷ ಬಿನ್ ಲೇಟ್ ರಾಜಪ್ಪ, 22 ವರ್ಷ, ದೊಡ್ಡಬೊಮ್ಮನಹಳ್ಳಿ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು 15 ಸಾವಿರ ಬೆಲೆಯ 1 ಕೆಜಿ 10 ಗ್ರಾಂ ತೂಕದ ಗಾಂಜಾವನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತರಿಂದ 3860/- ಬೆಲೆಯ ಮದ್ಯ ವಶ

     ದಿನಾಂಕ: 07-04-2021 ರಂದು ಸಂಜೆ 06-30 ಗಂಟೆ ಸಮಯದಲ್ಲಿ  ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಪ್ರಸಾದಿಹಳ್ಳಿ ಗ್ರಾಮದ ಹತ್ತಿರ  ಚಿಲ್ಲರೆ ಅಂಗಡಿಯ ಮುಂಭಾಗದಲ್ಲಿ  ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಪಿಎಸ್ಐ  ಶ್ರೀ ಶಿವಣ್ಣಗೌಡ ಜಿ. ಪಾಟೀಲ್  ಬೇಲೂರು ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಪರ್ವತೇಗೌಡ ಬಿನ್ ಲೇಟ್ ರಾಮೇಗೌಡ, 56 ವರ್ಷ, ಪ್ರಸಾದಿಹಳ್ಳಿ ಗ್ರಾಮ, ಕಸಬಾ ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು  ಮದ್ಯ ಮಾರಾಟಕ್ಕಿಟ್ಟಿದ್ದ 3860/-ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು  ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 ಕ್ಯಾಂಟರ್ ಲಾರಿ ಕಳವು

     ಹಾಸನ  ನಗರ  ಅಗ್ರಹಾರ ಬೀದಿ, ಬಹಾರ್ ಪೇಟೆ ವಾಸಿ  ನಾಗರಾಜು ಕೆ.ಬಿ ರವರು  ಕೆಎ-27-ಬಿ-5613 ಈಚರ್ ಪ್ರೋ 1110 ಕ್ಯಾಂಟರ್ ಲಾರಿಯನ್ನು ಹೊಂದಿದ್ದು, ಕ್ಯಾಂಟರ್ ಲಾರಿಯ ಚಾಲಕನಾಗಿ ಗೋಪಾಲೇಗೌಡ ರವರು ಈಗ್ಗೆ ಸುಮಾರು 09 ತಿಂಗಳಿನಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದು,  ಲಾರಿಯನ್ನು ಪ್ರತಿದಿನ ಬಾಡಿಗೆ ಮುಗಿದ ನಂತರ ಗೋಪಾಲೇಗೌಡರ ಮನೆಯ ಮುಂಭಾಗ ನಿಲ್ಲಿಸುತ್ತಿದ್ದು, ದಿನಾಂಕ: 06-04-2021 ರಂದು ರಾತ್ರಿ ಸುಮಾರು 08-00 ಗಂಟೆಗೆ ಗೋಪಾಲೇಗೌಡ ಲಾರಿಯನ್ನು ಬೇಲೂರು ರಸ್ತೆಯಲ್ಲಿರುವ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದು, ಮರುದಿನ ದಿನಾಂಕ: 07-04-2021 ರಂದು ಬೆಳಿಗ್ಗೆ 05-30 ಗಂಟೆಗೆ ಬಾಡಿಗೆ ಹೋಗಲು ಬಂದು ನೋಡಿದಾಗ ಕ್ಯಾಂಟರ್ ಲಾರಿಯು ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲವೆಂದು ಗೋಪಾಲೇಗೌಡ ಪೋನ್ ಮಾಡಿ ತಿಳಿಸಿದ್ದು, ತಕ್ಷಣ ಹೋಗಿ ಎಲ್ಲಾ ಕಡೆ ಹುಡುಕಿದರೂ ಎಲ್ಲಿಯೂ ಸಿಕ್ಕಿರುವುದಿಲ್ಲ. ಕ್ಯಾಂಟರ್ ಲಾರಿಯ ಅಂದಾಜು ಬೆಲೆ 8,00,000/- ರೂಗಳಾಗಿದ್ದು, ಕಳುವಾಗಿರುವ ಕ್ಯಾಂಟರ್ ಲಾರಿಯನ್ನು ಪತ್ತೆಮಾಡಿಕೊಡಬೇಕೆಂದು ಶ್ರೀ ನಾಗರಾಜು ಕೆ.ಬಿ ರವರು ಕೊಟ್ಟ ದೂರಿನ ಮೇರೆಗೆ  ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 ಬೈಕಿಗೆ ಬೈಕ್ ಡಿಕ್ಕಿ ಒಬ್ಬರ ಸಾವು, ಇಬ್ಬರಿಗೆ ರಕ್ತಗಾಯ

     ದಿನಾಂಕ: 06-04-2021 ರಂದು ರಾತ್ರಿ 09-00 ಗಂಟೆ ಸಮಯದಲ್ಲಿ  ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಚಿಕ್ಕಬೊಮ್ಮೇನಹಳ್ಳಿ ಗ್ರಾಮದ ಕೃಷ್ಣೇಗೌಡ ರವರು ನಾಗೇಶ್ ರವರ ಬಾಬ್ತು ಕೆಎ-13-ಡಬ್ಲ್ಯೂ-7395 ರ ಹೀರೋ ಹೊಂಡಾ ಗ್ಲಾಮರ್ ಬೈಕಿನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ಮುಗಳಿ ಗ್ರಾಮಕ್ಕೆ ದೇವರ ಕಾರ್ಯಕ್ಕೆ ಹೋಗಲೆಂದು ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಅತ್ತಿಮರದಕೊಪ್ಪಲು ಗ್ರಾಮದ ಹತ್ತಿರ ವಾಸಣ್ಣರವರ ಮನೆಯ ಹತ್ತಿರ ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ  ಕೆಎ-04-ಜೆಎ-7468 ರ ಬೈಕಿನ ಚಾಲಕ ದೊಳ್ಳೇಗೌಡ ರವರು ಹಿಂಬದಿಯಲ್ಲಿ ಅಪ್ಪಣ್ಣ ರವರನ್ನು ಕೂರಿಸಿಕೊಂಡು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ರಸ್ತೆಗೆ ಬಿದ್ದು, ಕೃಷ್ಣೇಗೌಡ, ನಾಗೇಶ್ ಮತ್ತು ಅಪ್ಪಣ್ಣ ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ  ಚಿಕಿತ್ಸೆಗಾಗಿ ಕೊಣನೂರು ಆಸ್ಪತ್ರೆಗೆ ಸೇರಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅರಕಲಗೂಡು ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ  ಕೃಷ್ಣೇಗೌಡ ಬಿನ್ ತಿಮ್ಮೇಗೌಡ, 40 ವರ್ಷ ರವರು ಮೃತಪಟ್ಟಿದ್ದು, ಗಾಯಾಳುಗಳಾದ ನಾಗೇಶ ಮತ್ತು ಅಪ್ಪಣ್ಣ ರವರು ಹಾಸನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತರ ಸಂಬಂಧಿ  ಶ್ರೀ ಮಲ್ಲಪ್ಪ ರವರು ಕೊಟ್ಟ ದೂರಿನ ಮೇರೆಗೆ  ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.


No comments: