* * * * * * HASSAN DISTRICT POLICE

Wednesday, April 7, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ:07-04-2021

 

            ಪತ್ರಿಕಾ ಪ್ರಕಟಣೆ                   ದಿನಾಂಕ: 07-04-2021

ಪತಿಯಿಂದ ವರದಕ್ಷಿಣೆ ಕಿರುಕುಳ ಪತ್ನಿ ಆತ್ಮಹತ್ಯೆ:

     ಈಗ್ಗೆ ಒಂದು ವರ್ಷದ ಹಿಂದೆ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಹರಿಹರಪುರ ಗ್ರಾಮದ ವಾಸಿ ಶ್ರೀ ರಾಜೇಗೌಡ, ರವರ ಮಗಳು ಆಶಾಳನ್ನು ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಕೋಳಗುಂದ ಗೊಲ್ಲರಹಟ್ಟಿ ಗ್ರಾಮದ ವಾಸಿ ಶ್ರೀ ಚಂದ್ರಪ್ಪ, ರವರ ಮಗ ಶ್ರೀ ಮಹೇಶ್ @ ಬಾಬು ಎಂಬುವವನಿಗೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಶ್ರೀಮತಿ ಆಶಾಳ ಪತಿ ಶ್ರೀ ಮಹೇಶ್ @ ಬಾಬು, ತವರು ಮನೆಯಿಂದ ವರದಕ್ಷಿಣೆ ಹಾಗೂ ಚಿನ್ನದ ಉಂಗುರವನ್ನು ತವರುವಂತೆ ಒತ್ತಾಯಿಸಿ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಿದ್ದು, ಗ್ರಾಮಸ್ಥರೊಂದಿಗೆ ತಿಳುವಳಿಕೆ ನೀಡಿದ್ದರೂ ಸಹ ದಿನಾಂಕ: 05-04-2021 ರಂದು ಸಂಜೆ 6-00 ಗಂಟೆಗೆ ಶ್ರೀಮತಿ ಆಶಾಳ ಪತಿ ಶ್ರೀ ಮಹೇಶ್ @ ಬಾಬು ವರಕ್ಷಿಣಿಯಾಗಿ ಕೊಡಬೇಕಾಗಿದ್ದ ಒಂದು ಚಿನ್ನದ ಉಂಗುರ ಮತ್ತು ಹಣವನ್ನು ತರುವಂತೆ ಒತ್ತಾಯಿಸಿ ಅವಾಚ್ಯಶಬ್ಧಗಳಿಂದ ನಿಂದಿಸಿದ್ದರಿಂದ ಮನನೊಂದು ಶ್ರೀಮತಿ ಆಶಾ ಕೊಂ ಮಹೇಶ್ @ ಬಾಬು, 22 ವರ್ಷ, ರವರು ತೋಟದ ಮನೆಯ ಕೊಟ್ಟಿಗೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆಂದು ಹಾಗೂ ಕಾರಣನಾದ ಮೃತಳ ಪತಿ ಶೀ ಮಹೇಶ್ @ ಬಾಬು, ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತೆ ಶ್ರೀಮತಿ ಆಶಾಳ ತಂದೆ ಶ್ರೀ ರಂಗೇಗೌಡ, ರವರು ದಿನಾಂಕ: 06-04-2021 ರಂದು ಕೊಟ್ಟ ದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಯಾರೂ ದುಷ್ಕರ್ಮಿಗಳು ಮನೆಯೊಳಗೆ ನುಗ್ಗಿ 1,40,000/- ಬೆಲೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ:

     ದಿನಾಂಕ: 06/7-04-2021 ರಂದು ರಾತ್ರಿ 00-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕುಂದೂರು ಹೋಬಳಿ, ಕುಂದೂರು ಗ್ರಾಮದ ವಾಸಿ ಶ್ರೀ ಸುಧೀರ್, ಇವರ ತಾಯಿ ಶ್ರೀಮತಿ ಮಂಜುಳ, ರವರು ರೂಮಿನಲ್ಲಿ ಹಾಗೂ ತಂದೆ ಶ್ರೀ ಮನ್ಮಥ ರಾಜ್, ರವರು ಮನೆಯ ಹಾಲ್ ನಲ್ಲಿ ಬಾಗಿಲು ಹಾಕದೇ ಮಲಗಿದ್ದು, ಟಾರ್ಚ್ ಬೆಳಕಿನಲ್ಲಿ ಯಾರೋ ದುಷ್ಕಿರ್ಮಿಗಳು ಬಂದು ಮನೆಯೊಳಗೆ ನುಗ್ಗಿ ಶ್ರೀ ಸುಧೀರ್ ರವರಿಗೆ ದೊಣ್ಣೆಯಿಂದ ಹೊಡೆದಾಗ ಕಿರುಚಿಕೊಂಡಿದ್ದರಿಂದ ಶ್ರೀ ಮಂಜುಳ, ರವರು ರೂಮಿನಿಂದ ಹೊರಗೆ ಬಂದಾಗ ಅವರಿಗೂ ಸಹ ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿ, ಕೊರಳನಲ್ಲಿದ್ದ 1,40,000/- ಬೆಲೆಯ 35 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀ ಸುಧೀರ್, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

 ಮನುಷ್ಯ ಕಾಣೆ

     ದಿನಾಂಕ: 23-03-2021 ರಂದು ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಕಸಬಾ ಹೋಬಳಿ, ಬೈಕೆರೆ ಪೋಸ್ಟ್, ಕೆಲಗಳಲೆ ಗ್ರಾಮದ ವಾಸಿ ಶ್ರೀ ಅಣ್ಣಪ್ಪ, ರವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಅಣ್ಣಪ್ಪ, ರವರ ಮಗ ಅಶೋಕ, ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಅಣ್ಣಪ್ಪ ಬಿನ್ ದ್ಯಾವಯ್ಯ, 51 ವರ್ಷ, 6' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕೋಲುಮುಖ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08173-245183 ಕ್ಕೆ ಸಂಪರ್ಕಿಸುವುದು.


No comments: