* * * * * * HASSAN DISTRICT POLICE

Tuesday, April 6, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ:05-04-2021

 

 ಪತ್ರಿಕಾ ಪ್ರಕಟಣೆ              ದಿನಾಂಕ:-05-04-2021

 

ಜಿಲೆಟಿನ್ ಕಡ್ಡಿಗಳು ಸ್ಪೋಟಗೊಂಡು, ವ್ಯಕ್ತಿಯ ಸಾವು, ಇಬ್ಬರಿಗೆ ಗಂಭೀರ ಗಾಯ.

      ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಚಾಕೇನಹಳ್ಳಿ ಕಟ್ಟೆ ಗ್ರಾಮದ ಸಿ.ಹೆಚ್.ನಾಗೇಶ್ ಎಂಬುವವರು ಕಲ್ಲು ಗಣಿಗಾರಿಕೆಯ ಬ್ಲಾಸ್ಟಿಂಗ್ ಮಾಡುವ ಬಗ್ಗೆ ಪರವಾನಿಗೆಯನ್ನು ಪಡೆದುಕೊಂಡಿದ್ದು, ಅದರಂತೆ ಚಾಕೇನಹಳ್ಳಿಯ ತಮ್ಮ ಜಮೀನಿನಲ್ಲಿ ಎಲೆಕ್ಟ್ರಾನಿಕ್ ಡಿಟೋನೇಟರ್ ಮತ್ತು ಜಿಲೆಟಿನ್ ಕಡ್ಡಿಗಳನ್ನು ಸಂಗ್ರಹಿಸಲು ಗೋಡನ್ ಮಾಡಿಕೊಂಡಿದ್ದು, ದಿನಾಂಕ:04-04-2021 ರಂದು ಮಧ್ಯಾಹ್ನ ಸುಮಾರು 2-30 ರಿಂದ 2-45 ಗಂಟೆಯ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಹೋಬಳಿಯ ಬೆಟ್ಟದಹಳ್ಳಿ ಗ್ರಾಮದ ಸಂಪತ್ ಬಿನ್ ನಾಗರಾಜು, 27 ವರ್ಷ ಮತ್ತು ನಟರಾಜು ಬಿನ್ ನಂಜೇಗೌಡ, 28 ವರ್ಷ ರವರು ಹಾಗೂ ನಾಗೇಶ್ ಬಳಿ ಕೆಲಸ ಮಾಡಿಕೊಂಡಿರುವ ಶಾಂತಿಗ್ರಾಮ ಹೋಬಳಿಯ ಬಿ.ಜೆ.ಮಾರನಹಳ್ಳಿ ಗ್ರಾಮದ ರವಿ ರವರು ಗೋಡನ್ ಹತ್ತಿರ ವಾಹನದಿಂದ ಡಿಟೋನೇಟರ್ ಬಾಕ್ಸ್ಗಳನ್ನು ಇಳಿಸುವಾಗ ಸ್ಪೋಟಗೊಂಡು ಸಂಪತ್ ಬಿನ್ ನಾಗರಾಜು ಸ್ಥಳದಲ್ಲೇ ಮೃತಪಟ್ಟಿದ್ದು, ನಟರಾಜು ಬಿನ್ ನಂಜೇಗೌಡ ರವರಿಗೆ ಸಂಪೂರ್ಣ ಸುಟ್ಟಗಾಯವಾಗಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದು, ಚಿಕಿತ್ಸೆಯನ್ನು ಪಡೆಯುತ್ತಿರುತ್ತಾರೆ. ಹಾಗೂ ರವಿ ರವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಈ ಬಗ್ಗೆ ಹೊಳೇನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೃತ್ಯ ಸ್ಥಳಕ್ಕೆ ಪೊಲೀಸ್ ಮಹಾನಿರೀಕ್ಷಕರು, ದಕ್ಷಿಣ ವಲಯ, ಮೈಸೂರು ರವರು ಮತ್ತು ಪೊಲೀಸ್ ಅಧೀಕ್ಷಕರು, ಹಾಸನ ಜಿಲ್ಲೆ, ಹಾಸನ ಆದ ನಾನು ಹಾಗು ಹೊಳೇನರಸೀಪುರ ಡಿವೈ.ಎಸ್.ಪಿ ಲಕ್ಷ್ಮೇಗೌಡ ರವರುಗಳು ಭೇಟಿ ನೀಡಿದ್ದು, ಸ್ಥಳ ಪರಿಶೀಲನೆ ಮಾಡಿರುತ್ತದೆ. ಪ್ರಕರಣವು ತನಿಖಾ ಹಂತದಲ್ಲ್ಲಿರುತ್ತದೆ.

 

ಮನುಷ್ಯ ಕಾಣೆ.

     ಅಣ್ಣೇಗೌಡ ಹೆಚ್.ಆರ್ ಬಿನ್ ರಂಗೇಗೌಡ, ಕುದುರವಳ್ಳಿ ಗ್ರಾಮ, ಸಕಲೇಶಪುರ ಟೌನ್ ರವರ ಮಗನಾದ ಕೌಶಿಕ ರವರು ಬಾಳುಪೇಟೆಯಲ್ಲಿರುವ ಕಾಫಿ ಮೆಡೋಸ್ ರೆಸಾರ್ಟ್ ನಲ್ಲಿ ಮ್ಯಾನೇಜ್ ಮೆಂಟ್ ಕೆಲಸ ಮಾಡುತ್ತಿದ್ದು, ದಿನಾಂಕ:-03-04-2021 ರಂದು ಬೆಳಿಗ್ಗೆ ಸುಮಾರು 10-30 ಗಂಟೆ ಸಮಯದಲ್ಲಿ ಮನೆಗೆ ಬಂದು ತನ್ನ ತಾಯಿಯ ಯೋಗಕ್ಷೇಮ ವಿಚಾರ ಮಾಡಿಕೊಂಡು, ಬೇರೆ ಬಟ್ಟೆ ತೆಗೆದುಕೊಂಡು ರೆಸಾರ್ಟ್ ಕೆಲಸಕ್ಕೆ ಹೋಗುತ್ತೇನೆಂದು ಮನೆಯಿಂದ ಹೊರಗೆ ಹೋದವ ರಾತ್ರಿಯಾದರೂ ಮನೆಗೆ ಬಾರದೆ, ರೆಸಾರ್ಟ್ ಗೂ ಹೋಗದೇ ಇದ್ದ ಕಾರಣ ದೂರವಾಣಿ ಮುಖಾಂತರ ಸಂಪರ್ಕಿಸಲು ಪ್ರಯತ್ನಿಸಿದರೆ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿರುತ್ತದೆ. ಈ ಬಗ್ಗೆ ಕಾಣೆಯಾಗಿರುವ ಕೌಶಿಕ್ನನ್ನು ಪತ್ತೆಮಾಡಿಕೊಡ ಬೇಕೆಂದು ಪಿರ್ಯಾದಿಯವರು ಸಕಲೇಶಪುರ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿರುತ್ತದೆ.

 

ಕಾಣೆಯಾದವರ ಚಹರೆ.

    ಕೌಶಿಕ, ವಯಸ್ಸು 28 ವರ್ಷ, ತಂದೆ ಅಣ್ಣೇಗೌಡ, 28 ವರ್ಷ, 5'6, ಗೋಧಿ ಮೈಬಣ್ಣ, ದುಂಡು ಮುಖ, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಬಲ್ಲವರಾಗಿದ್ದು, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ನೀಲಿ ಬಣ್ಣದ ಟೀ ಶರ್ಟ್ ಧರಿಸಿದ್ದು, ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಸಕಲೇಶಪುರ ನಗರ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ 08173-244100 ಅಥವಾ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯ ದೂರವಾಣಿ ಸಂಖ್ಯೆ 08172-268845 ಗೆ ಮಾಹಿತಿ ನೀಡಬೇಕಾಗಿ ಮಾಹಿತಿ ಕೋರಿದೆ.

 

ಪ್ರತ್ಯೇಕ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಪ್ರಕರಣಗಳಲ್ಲಿ 9 ಜನರ ಬಂಧನ, ಬಂಧಿತರಿಂದ 22630/- ರೂ  ನಗದು ಹಣ ವಶ.

ಪ್ರಕರಣ 1:- ದಿನಾಂಕ:-04-04-2021 ರಂದು ಮಧ್ಯಾಹ್ನ ಸುಮಾರು 01-30 ಗಂಟೆ ಸಮಯದಲ್ಲಿ ಕೊಣನೂರು ಪೊಲೀಸ್ ಠಾಣಾ ಪಿ.ಎಸ್.ಐ ಅಜಯ್ ಕುಮಾರ್ ರವರು ಠಾಣಾ ವ್ಯಾಪ್ತಿಯ ರಾಮನಾಥಪುರದಲ್ಲಿ ರೌಂಡ್ಸ್ ನಲ್ಲಿದ್ದಾಗ ಯಾರೋ ಸಾರ್ವಜನಿಕರು ರಾಮನಾಥಪುರ ಗ್ರಾಮದ ತಂಬಾಕು ಮಂಡಳಿ ಹಿಂಭಾಗದ ಖಾಲಿ ಜಾಗದಲ್ಲಿ ಸುಮಾರು 4-5 ಜನರು ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟು ಜೂಜಾಟ ಆಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ, ಸಿಬ್ಬಂದಿಗಳೊಂದಿಗೆ ಮೇಲ್ಕಂಡ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ 1)ಶೇಖರ್ ಬಿನ್ ತಿಮ್ಮಯ್ಯ, 35 ವರ್ಷ, ಪ.ಜಾತಿ, ವ್ಯವಸಾಯ, ವಾಸ ಕೋಟವಾಳು ಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು, 2) ಕೃಷ್ಣ ಬಿನ್ ಈರಬೋವಿ, 33 ವರ್ಷ, ಬೋವಿ ಜನಾಂಗ, ವ್ಯಾಪಾರ, ರಾಮನಾಥಪುರ ಗ್ರಾಮ, ಅರಕಲಗೂಡು ತಾಲ್ಲೂಕು 3)ಮಂಜುನಾಥ ಬಿನ್ ರಾಮಶೆಟ್ಟಿ, 46 ವರ್ಷ. ಮಗ್ಗದಶೆಟ್ಟರು, ಹೊಟೆಲ್ ಕೆಲಸ, ವಾಸ ರಾಮನಾಥಪುರ ಗ್ರಾಮ, ಅರಕಲಗೂಡು ತಾಲ್ಲೂಕು, 4) ಕುಮಾರ ಬಿನ್ ಶಿವಣ್ಣೇಗೌಡ, 39 ವರ್ಷ, ವಕ್ಕಲಿಗರು, ವ್ಯವಸಾಯ, ವಾಸ ಹಿರೇಹಳ್ಳಿ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು ರವರನ್ನು ದಸ್ತಗಿರಿ ಮಾಡಿ, ಆರೋಪಿತರುಗಳಿಂದ ಜೂಜಾಟಕ್ಕೆ ಪಣವಾಗಿಟ್ಟುಕೊಂಡಿದ್ದ 6950/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು, ಆರೋಪಿಗಳ ವಿರುದ್ದ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆಯಲ್ಲಿರುತ್ತದೆ.

 

ಪ್ರಕರಣ 2:- ದಿನಾಂಕ:-04-04-2021 ರಂದು ಮಧ್ಯಾಹ್ನ 04-30 ಗಂಟೆ ಸಮಯದಲ್ಲಿ ಕೊಣನೂರು ಠಾಣಾ ಎಸ್.ಹೆಚ್.ಓ ರವರಿಗೆ ಯಾರೋ ಸಾರ್ವಜನಿಕರು ಠಾಣಾ ದೂರವಾಣಿಗೆ ಕರೆ ಮಾಡಿ, ಕೊಣನೂರು ಪೊಲೀಸ್ ಠಾಣಾ ಸರಹದ್ದಿನ ಕೊಣನೂರು ಗ್ರಾಮದ ತೂಗು ಸೇತುವೆ ಪಕ್ಕದಲ್ಲಿ ಖಾಲಿ ಜಾಗದಲ್ಲಿ ಸುಮಾರು 4-5 ಜನರು ಹಣವನ್ನು ಪಣವಾಗಿಟ್ಟುಕೊಂಡು ಅಂದರ್ ಬಾಹರ್ ಜೂಜಾಟ ಆಡುತ್ತಿದ್ದಾರೆೆಂದು ಬಂದ ಮಾಹಿತಿ ಮೇರೆಗೆ ಅರಕಲಗೂಡು ವೃತ್ತ ನಿರೀಕ್ಷಕರಾದ ಸತ್ಯನಾರಾಯಣ ರವರು ಮೇಲ್ಕಂಡ ಸ್ಥಳಕ್ಕೆ ಸಂಜೆ 05-40 ಗಂಟೆ ಗೆ ಹೋಗಿ ಕಾನೂನು ಬಾಹಿರವಾಗಿ ಅಂದರ್ ಬಾಹರ್ ಜೂಜಾಟ ಆಡುತ್ತಿದ್ದುದ್ದನ್ನು ಖಚಿತಪಡಿಸಿಕೊಂಡು ಸಿಬ್ಬಂದಿಗಳೊಂದಿಗೆ ದಾಳಿಮಾಡಿ, 1) ಕುಮಾರ ಬಿನ್ ಈರಬೋಯಿ, 45 ವರ್ಷ, ಬೋಯಿ ಜನಾಂಗ, ವ್ಯಾಪಾರ ವಾಸ ರಾಮನಾಥಪುರ ಗ್ರಾಮ, ಅರಕಲಗೂಡು ತಾಲ್ಲೂಕು, 2) ರಾಜೇಗೌಡ ಬಿನ್ ಲೇ.ಪುಟ್ಟೇಗೌಡ, 40 ವರ್ಷ, ಕುರುಬಜನಾಂಗ, ವ್ಯವಸಾಯ, ವಾಸ ರಾಮನಾಥಪುರ ಗ್ರಾಮ, ಅರಕಲಗೂಡು ತಾಲ್ಲೂಕು, 3) ಕೃಷ್ಣ ಬಿನ್ ಜವರಯ್ಯ, 46 ವರ್ಷ, ಪ.ಜಾತಿ, ವ್ಯವಸಾಯ, ವಾಸ ಯಾಲದಹಳ್ಳಿ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು, 4) ಕುಮಾರ ಬಿನ್ ಲೇ. ಅಣ್ಣಯ್ಯ, 48ವರ್ಷ, ಲಿಂಗಾಯ್ತರು, ವ್ಯವಸಾಯ, ವಾಸ ಕೋಟವಾಳು ಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು, 5) ಸ್ವಾಮಿ ಬಿನ್ ರಂಗಯ್ಯ, 29 ವರ್ಷ, ಕೂಲಿಕೆಲಸ, ವಾಸ ಕೋಟವಾಳು ಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು ರವರುಗಳನ್ನು ದಸ್ತಗಿರಿ ಮಾಡಿ, ಆರೋಪಿತರುಗಳಿಂದ 7840/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡಿದ್ದು, ಈ ಬಗ್ಗೆ ಆರೋಪಿತುಗಳ ವಿರುದ್ದ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.

 

ಅಕ್ರಮ ಮದ್ಯ ಮಾರಾಟ ಪ್ರಕರಣ, ಆರೋಪಿಯ ಬಂಧನ ಬಂಧಿತನಿಂದ 1260/- ರೂ ಬೆಲೆಯ ಮದ್ಯ ವಶ.

     ದಿನಾಂಕ:-04-04-2021 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಅರಕಲಗೂಡು ಪೊಲೀಸ್ ಠಾಣಾ ಪಿ.ಎಸ್.ಐ ಮಾಲ ರವರು ಠಾಣೆಯಲ್ಲಿದ್ದಾಗ ಅರಕಲಗೂಡು ತಾಲ್ಲೂಕು, ದೊಡ್ಡಮಗ್ಗೆ ಹೋಬಳಿ, ಯಗಟಿ ಗ್ರಾಮದ ಸ್ವಾಮಿ ಬಿನ್ ಪುಟ್ಟೇಗೌಡ ರವರ ಮನೆಯ ಮುಂದೆ ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಮೇಲ್ಕಂಡ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ಹೋಗಿ ಮನೆಯ ಮುಂಭಾಗದ ಚಪ್ಪರದ ಕೆಳಗೆ ಖಾಲಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ವಾಮಿ ಬಿನ್ ಪುಟ್ಟೇಗೌಡ, 43 ವರ್ಷ, ವಾಸ ಯಗಟಿ ಗ್ರಾಮ, ದೊಡ್ಡಮಗ್ಗೆ ಹೋಬಳಿ, ಅರಕಲಗೂಡು ತಾಲ್ಲೂಕು ರವರನ್ನು ದಸ್ತಗಿರಿ ಮಾಡಿಕೊಂಡು, ಬಂಧಿತನು ಮಾರಾಟ ಮಾಡಲು ಇಟ್ಟುಕೊಂಡಿದ್ದ 90 ಎಂ.ಎಲ್. ನ 36 ಓರಿಜಿನಲ್ ಚಾಯ್ಸ್ ಡಿಲಕ್ಸ್ ವಿಸ್ಕಿ ಟೆಟ್ರಾ ಪ್ಯಾಕೆಟ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಈ ಬಗ್ಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆಯಲ್ಲಿರುತ್ತದೆ.

 

ಬೈಕ್ ಗೆ ಟ್ರಾಕ್ಟರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು.

     ದಿನಾಂಕ:-04-04-2021 ರಂದು ಸಂಜೆ ಸುಮಾರು 07-00 ಗಂಟೆ ಸಮಯದಲ್ಲಿ ಸುರೇಶ, 55 ವರ್ಷ, ಅಡಗೂರು ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರು ತಮ್ಮ ಬಾಬ್ತು ಕೆಎ-02-ಹೆಚ್.ಎಲ್-8332 ಸಂಖ್ಯೆಯ ಮೋಟಾರು ಬೈಕ್ನಲ್ಲಿ ಚನ್ನರಾಯಪಟ್ಟಣ ಕಡೆಯಿಂದ ಅಡಗೂರಿಗೆ ಹೋಗುತ್ತಿರುವಾಗ ಮಾಳೇನಹಳ್ಳಿ ಹಳ್ಳದ ಹತ್ತಿರ ಮೃತ ಸುರೇಶ್ ರವರ ಮುಂಭಾಗದಲ್ಲಿ ಚಲಿಸುತ್ತಿದ್ದ ಟ್ರಾಕ್ಟರ್ ನಂಬರ್ ಕೆಎ-13-ಟಿ,ಎ-5225 ಮತ್ತು ಟ್ರಾಲಿ ನಂಬರ್ ಕೆಎ-11-ಟಿ-2031 ರ ಚಾಲಕ ಅತಿವೇಗ ಹಾಗು ಅಜಾಗರೂಕತೆಯಿಂದ ಟ್ರಾಕ್ಟರ್ ಮತ್ತು ಟ್ರೇಲರ್ ಅನ್ನು ಚಾಲನೆ ಮಾಡಿಕೊಂಡು ಹೋಗುತ್ತಿದ್ದು, ಯಾವುದೇ ಸೂಚನೆ ನೀಡದೆ ಟ್ರಾಕ್ಟರ್ ಟ್ರೇಲರ್ ಅನ್ನು ಬಲಗಡೆಗೆ ತಿರುಗಿಸಲು ಪ್ರಯತ್ನಿಸಿದ್ದರಿಂದ ಹಿಂದಿನಿಂದ ಬರುತ್ತಿದ್ದ ಸುರೇಶ ರವರು ತಮ್ಮ ಮೋಟಾರು ಬೈಕ್ ಅನ್ನು ಟ್ರಾಕ್ಟರ್ ಟ್ರೇಲರ್ ಗೆ ಡಿಕ್ಕಿ ಹೊಡೆದಿದ್ದರಿಂದ ಸುರೇಶ ರವರು ಬೈಕ್ ನಿಂದ ರಸ್ತೆಯ ಮೇಲೆ ಬಿದಿದ್ದರಿಂದ ತಲೆಗೆ ಹಾಗು ದೇಹದ ಭಾಗಗಳಿಗೆ ತೀವ್ರ ಸ್ವರೂಪದ ಪೆಟ್ಟಾಗಿ ಆಸ್ಪತ್ರೆಗೆ ಸಾಗಿಸುತ್ತಿರುವಾಗ ದಾರಿ ಮಧ್ಯೆ ಮೃತಪಟ್ಟಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಮೃತ ಸುರೇಶ ರವರ ಬಾವ ಮಂಜೇಗೌಡ ಬಿನ್ ಲಕ್ಷ್ಮೇಗೌಡ, ವಾಸ ಕೆ.ಸಿಂಗೇನಹಳ್ಳಿ ಗ್ರಾಮ, ದಂಡಿಗನಹಳ್ಳಿ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.

 


 


No comments: