* * * * * * HASSAN DISTRICT POLICE

Tuesday, April 6, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ:04-04-2021

 

       ಪತ್ರಿಕಾ ಪ್ರಕಟಣೆ              ದಿನಾಂಕ:-04-04-2021

 ಹಾಸನ ಸಂಚಾರಿ ಪೊಲೀಸ್ ಠಾಣೆಯ ಹೆಡ್ಕಾನ್ಸ್ಟೇಬಲ್ ಅಪಘಾತದಲ್ಲಿ ಸಾವು

      ದಿನಾಂಕ: 03-04-2021 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಸಿ.366 ಶ್ರೀ ಮಧೂಸೂದನ್ ರವರು ಠಾಣೆಯ ಎಎಸ್ಐ ಕೃಷ್ಣನಾಯಕ ಹೆಚ್.ಟಿ. ರವರೊಂದಿಗೆ ಇಂಟರ್ ಸೆಪ್ಟರ್ ವಾಹನ ಸಂಖ್ಯೆ ಕೆಎ-13-ಜಿ-805 ವಾಹನಕ್ಕೆ ಐಎಂವಿ ಪ್ರಕರಣಗಳನ್ನು ದಾಖಲಿಸಲು ತೆರಳಿ  ಹಾಸನ ಎನ್ ಹೆಚ್-75 ಬಿಎಂ ರಸ್ತೆಯ ಗಾಡೇನಹಳ್ಳಿ ಕ್ರಾಸ್ ಹಾಗೂ ಪವರ್ ಗ್ರೀಡ್ ಮಧ್ಯದಲ್ಲಿ ಮಧುಸೂದನ್ ಹಾಗೂ ಎಎಸ್ಐ ಕೃಷ್ಣನಾಯಕ ರವರು ವಾಹನಗಳನ್ನು ತಡೆದು ಐಎಂವಿ ಪ್ರಕರಣಗಳನ್ನು ದಾಖಲಿಸುವ ಸಂದರ್ಭದಲ್ಲಿ ಹಾಸನ ಕಡೆಯಿಂದ ಬಂದಂತಹ ಯಾವುದೋ ವಾಹನದ ಚಾಲಕ ತನ್ನ ಕಾರನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಅಪಘಾತ ಮಾಡಿ ತನ್ನ ಕಾರನ್ನು ನಿಲ್ಲಿಸದೆ ಹೋಗಿದ್ದು, ಅಪಘಾತ ಮಾಡಿದ ಪರಿಣಾಮ ಮಧುಸೂದನ ರವರು ರಸ್ತೆಯ ಮೇಲೆ ಕೆಳಕ್ಕೆ ಬಿದ್ದಿದ್ದು, ಕೆಳಕ್ಕೆ ಬಿದ್ದಾಗ ತಲೆಗೆ, ಎದೆಯ ಭಾಗಕ್ಕೆ ತಲೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ಪೆಟ್ಟು ಬಿದ್ದು, ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನದ ಸ್ಪರ್ಶ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಧುಸೂದನ್, 44 ವರ್ಷ, ಹಾಸನ ಸಂಚಾರಿ ಪೊಲೀಸ್ ಠಾಣೆ, ವಾಸ ವಿಜಯನಗರ, 2 ನೇ ಹಂತ, 2 ನೇ ಕ್ರಾಸ್, ಹಾಸನ ರವರು ಮೃತಪಟ್ಟಿರುತ್ತಾರೆಂದು ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಶ್ರೀ ಕೃಷ್ಣನಾಯಕ್ ಹೆಚ್.ಟಿ. ರವರು ಕೊಟ್ಟ ದೂರಿನ ಮೇರೆಗೆ  ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 ಬೈಕ್ ಡಿಕ್ಕಿ ಪಾದಾಚಾರಿ ವ್ಯಕ್ತಿ ಸಾವು

     ದಿನಾಂಕ: 03-04-2021 ರಂದು ಬೆಳಿಗ್ಗೆ 08-30 ಗಂಟೆ ಸಮಯದಲ್ಲಿ  ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ಸುಂಡಹಳ್ಳಿ ಗ್ರಾಮದ ರಾಜಯ್ಯ ರವರು ಕಾಫಿ ತೋಟಕ್ಕೆ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುತ್ತಿದ್ದಾಗ ಸುಂಡಳ್ಳಿ ಗ್ರಾಮದ ಸರ್ಕಲ್ ಹತ್ತಿರ ಕೆಎ-46-ಜೆ-7955 ರ ಮೋಟಾರ್ ಸೈಕಲ್ ಸವಾರ ತನ್ನ ಮೋಟಾರ್ ಬೈಕ್ ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ  ರಾಜಯ್ಯ, 55 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಲೀಲಮ್ಮ ರವರು ಕೊಟ್ಟ ದೂರಿನ ಮೇರೆಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರ ಬಂಧನ, ಬಂಧಿತರಿಂದ 105/- ಬೆಲೆಯ ಮದ್ಯ ವಶ

     ದಿನಾಂಕ: 04-04-2021 ರಂದು  ಬೆಳಿಗ್ಗೆ 09-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ದೊಡ್ಡಬೀಕನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದಾರೆಂದು ಪಿಎಸ್ಐ ಶ್ರೀ ಸಾಗರ್ ಎಸ್.ಎಲ್. ಗೊರೂರು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಳೊಂದಿಗೆ ಸ್ಥಳಕ್ಕೆ ಹೋಗಿ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಕೃಷ್ಣೇಗೌಡ ಬಿನ್ ಲೇಟ್ ತಿಮ್ಮೇಗೌಡ, 45 ವರ್ಷ, ದೊಡ್ಡಬೀಕನಹಳ್ಳಿ ಗ್ರಾಮ, ಕಟ್ಟಾಯ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟ ಮಾಡಲು ಇಟ್ಟುಕೊಂಡಿದ್ದ 105/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 ಹೆಂಗಸು ಕಾಣೆ

     ದಿನಾಂಕ: 01-04-2021 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಹಾಸನ, ದೇವೇಗೌಡ ನಗರ ವಾಸಿ ದೇವರಾಜು ರವರ ತಾಯಿ ಶ್ರೀಮತಿ ನಿಂಗಮ್ಮ ರವರು ಮನೆಯಲ್ಲಿ ಯಾರೂ ಇಲ್ಲದೆ ಇರುವಾಗ ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ನಿಂಗಮ್ಮ ರವರ ಮಗ ದೇವರಾಜು ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ  ಹೆಂಗಸಿನ ಚಹರೆ: ನಿಂಗಮ್ಮ ಕೋಂ ಲೇಟ್ ಚಲುವೇಗೌಡ, 77 ವರ್ಷ, 5'' ಅಡಿ ಎತ್ತರ, ಸಾದಾರಣ ಮೈಕಟ್ಟು, ಕೆಂಪು ಮೈ ಬಣ್ಣ, ಮನೆಯಿಂದ ಹೋಗುವಾಗ ಕಪ್ಪು ಸೀರೆ ಹಾಗೂ ರವಿಕೆ ಧರಿಸಿದ್ದು, ಎಡಕೈ ಬೆರಳಿನಲ್ಲಿ ಚಿನ್ನದ ಉಂಗುರ ಕಿವಿಯಲ್ಲಿ ಚಿನ್ನದ ಓಲೆ, ಮಾಟಿ, ಕೊರಳಲ್ಲಿ ಚಿನ್ನದ ಗುಂಡು ಕರಿಮಣಿಸರ ಹಾಗೂ ಎರಡು ಕೈಯಲ್ಲಿ 4 ಬೆಳ್ಳಿ ಬಳೆಗಳಿರುತ್ತವೆ. ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ಪೋನ್ ನಂ. 08172-268630  ಕ್ಕೆ ಸಂಪರ್ಕಿಸುವುದು.

 ಕಾರು ಬೈಕಿಗೆ ಡಿಕ್ಕಿ  ಬೈಕಿನಲ್ಲಿದ್ದ ಒಬ್ಬರ ಸಾವು ಇನ್ನೊಬ್ಬರಿಗೆ ರಕ್ತಗಾಯ

     ದಿನಾಂಕ: 03-04-2021 ರಂದು ಮಧ್ಯಾಹ್ನ 02-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ, ಬಿಕ್ಕೋಡು ಗ್ರಾಮದ ಜನಾರ್ಧನ ಆಚಾರ್ಯ ರವರು ಪಕ್ಕದ ಗ್ರಾಮದ ಚೋಕನಹಳ್ಳಿ ಮೋಹನ್ ರವರ ಬಾಬ್ತು ಕೆಎ-01-ಇಡಿ-3098 ರ ಬೈಕಿನ ಹಿಂಬದಿಯಲ್ಲಿ ಕುಳಿತುಕೊಂಡು ಆಲೂರು-ಬಿಕ್ಕೋಡು ರಸ್ತೆ ಕಾರ್ಜುವಳ್ಳಿ ಗೇಟ್ನಿಂದ ಸ್ವಲ್ಪ ಹಿಂದೆ ರಸ್ತೆಯ ಎಡಬದಿಯಲ್ಲಿ ಹೋಗತ್ತಿರುವಾಗ ಹಿಂಬದಿಯಿಂದ ಬಂದ ಕೆಎ-02-ಎಂಎಂ-4996 ರ ಕಾರಿನ ಚಾಲಕ ತನ್ನ ಕಾರನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಬೈಕಿನಿಂದ ಕೆಳಕ್ಕೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಜನಾರ್ಧನ ಆಚಾರ್ಯ, 56 ವರ್ಷ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಬೈಕ್ ಓಡಿಸುತ್ತಿದ್ದ ಮೋಹನ್ ರವರಿಗೆ ಬಲಕೈ ಬಲಕಾಲಿಗೆ ತಲೆಗೆ ಪೆಟ್ಟು ಬಿದ್ದು ಹಾಸನ ಜನಪ್ರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಜನಾರ್ಧನ ಆಚಾರ್ಯ ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 


 

No comments: