* * * * * * HASSAN DISTRICT POLICE

Tuesday, April 6, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ:03-04-2021

 

  ಪತ್ರಿಕಾ ಪ್ರಕಟಣೆ                       ದಿನಾಂಕ:-03-04-2021

 ಕೊಲೆ ಮಾಡುವ ಉದ್ದೇಶದಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ.

     ದಿನಾಂಕ:-02-04-2021 ರಂದು ರಾತ್ರಿ ಸುಮಾರು 10-15 ಗಂಟೆ ಸಮಯದಲ್ಲಿ ವಾಸೀಂ ಬಿನ್ ಲೇ. ಶಬ್ಬೀರ್ ಅಹಮದ್, ಟಿಪ್ಪು ನಗರ, 2 ನೇ ಕ್ರಾಸ್, ಅರಸೀಕೆರೆ ಟೌನ್ ರವರಿಗೆ ನದೀಂ ರವರು ಕರೆ ಮಾಡಿ ಮಟನ್ ಮಾರ್ಕೆಟ್ ಹತ್ತಿರ ಬರಲು ಕರೆದಾಗ ರಾತ್ರಿ 10-30 ಗಂಟೆಗೆ ಮಟನ್ ಮಾರ್ಕೇಟ್ ನಲ್ಲಿರುವ ಟೀ ಅಂಗಡಿ ಹತ್ತಿರ ಬಂದಾಗ ನದೀಂ ಅಂಗಡಿಯ ಹತ್ತಿರ ಇಲ್ಲದೇ ಇದ್ದು, ಅಮ್ಜು, ಅಜ್ಗರ್ ರವರಿದ್ದು, ಅಮ್ಜು ಏಕಾಏಕಿ ಏನೋ ಬೋಳಿ ಮಗನೇ ಮುಚ್ಚಿಕೊಂಡು ಇರುವುದಕ್ಕೆ ಆಗಲ್ವ ಸೂಳೆಮಗನೇ ನಮಗೆ ಅಕ್ಕಿ ಕೊಡಬೇಡಿ ಎಂದು ಹೇಳಿ ತೊಂದರೆ ಕೊಡುತ್ತೀಯಾ ನೀನು ಬದುಕಿದ್ದರೆ ತಾನೆ ತೊಂದರೆ, ನಿನಗೆ ಗತಿ ಕಾಣಿಸುತ್ತೇನೆಂದು ಕೊಲೆ ಮಾಡುವ ಉದ್ದೇಶದಿಂದ ಅಂಗಡಿಯಲ್ಲಿದ್ದ ಒಂದು ಸೆವೆನ್ ಅಪ್ ಬಾಟಲಿಯನ್ನು ತೆಗೆದುಕೊಂಡು ಒಡೆದುಕೊಂಡು ಚುಚ್ಚಲು ಬಂದಾಗ ತಪ್ಪಿಸಿಕೊಂಡಿದ್ದು, ಆ ಏಟು ಬಲಭಾಗದ ಕೆನ್ನೆಗೆ ಬಿದ್ದು ರಕ್ತಗಾಯವಾಗಿದ್ದು, ಅಷ್ಟರಲ್ಲಿ ಮುಸೇಜ್ ಎಂಬುವವರು ಬಂದು ಜಗಳ ಬಿಡಿಸಿದ್ದು, ಮತ್ತೊಂದು ದಿನ ಸಿಕ್ಕರೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ವಾಸೀಂ ರವರು ಅರಸೀಕೆರೆ ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.

 ಸುಲಿಗೆ ಪ್ರಕರಣ.

      ದಿನಾಂಕ:-02-04-2021 ರಂದು ಪುಷ್ಪಲತಾ ಕೋಂ ಚಂದ್ರೇಗೌಡ, ಅಗ್ರಹಾರ ಸರ್ಕಲ್ ಹತ್ತಿರ, ಕೋಟೆ ಚಿಕ್ಕಮಗಳೂರು ರವರು ತನ್ನ ಮಗಳಾದ ಹರ್ಷಿತಾ ರವರೊಂದಿಗೆ ಕೆಎ-18-ಇ.ಜಿ-6570 ಡಿಯೋ ಸ್ಕೂಟರ್ ನಲ್ಲಿ ಚಿಕ್ಕಮಗಳೂರು ನಿಂದ ತನ್ನ ತವರು ಮನೆಯಾದ ಬೇಲೂರು ತಾಲ್ಲೂಕು ಹಳೇಬೀಡು ಹೋಬಳಿ, ಕೊಮ್ಮಾರನಹಳ್ಳಿ ಗ್ರಾಮಕ್ಕೆ ಹೋಗಲು ಬೇಲೂರಿಗೆ ಬಂದು ಬೇಲೂರು-ಹಾಸನ ರಸ್ತೆಯಲ್ಲಿರುವ ಸಂಕೇನಹಳ್ಳಿಯಿಂದ ಯಲಹಂಕ ಮಾರ್ಗವಾಗಿ ಹೆಚ್ ಮಲ್ಲಾಪುರದ ಕಡೆಗೆ ಪಿರ್ಯಾದಿಯವರು ಸ್ಕೂಟರ್ ಅನ್ನು ಓಡಿಸಿಕೊಂಡು ಬರುತ್ತಿದ್ದಾಗ ಸಿದ್ದನಹಳ್ಳಿ-ಮಲ್ಲಾಪುರ ಮಧ್ಯೆ ಕೆರೆ ಏರಿಯ ಮೇಲೆ ರಸ್ತೆಯಲ್ಲಿ ಬೆಳಿಗ್ಗೆ ಸುಮಾರು 09-40 ಗಂಟೆ ಸಮಯದಲ್ಲಿ ಬರುತ್ತಿದ್ದಾಗ ಪಿರ್ಯಾದಿಯವರ ಸ್ಕೂಟರ್ ಹಿಂದೆ ಬಂದ ಪಲ್ಸರ್ ಬೈಕ್ ನಲ್ಲಿದ್ದವರು ಪಿರ್ಯಾದಿಯವರ ಬೈಕ್ ಪಕ್ಕಕ್ಕೆ ಬಂದು ಪಲ್ಸರ್ ಬೈಕ್ನ ಹಿಂಭಾಗ ಕುಳಿತಿದ್ದವನು ಬೈಕಿನಿಂದ ನೆಗೆದು, ಪಿರ್ಯಾದಿಯವರ ಕುತ್ತಿಗೆಗೆ ಕೈ ಹಾಕಿ ಪಿರ್ಯಾದಿಯವರು ಧರಿಸಿದ್ದ 22 ಗ್ರಾಂ ತೂಕದ ಸಣ್ಣ ಚಿನ್ನದ ಚೈನ್ ಅನ್ನು ಕಿತ್ತುಕೊಂಡು ಪಿರ್ಯಾದಿಯವರನ್ನು ದೂಕಿದ್ದರಿಂದ ಪಿರ್ಯಾದಿಯವರು ಹಾಗು ಅವರ ಮಗಳು ಬೈಕ್ ನಿಂದ ಕೆಳಗೆ ಬಿದ್ದಿದ್ದು, ಆಗ ಪುನಃ ಅದೇ ವ್ಯಕ್ತಿ ಪಿರ್ಯಾದಿಯವರ ಬಳಿ ಬಂದು ಪಿರ್ಯಾದಿಯವರು ಧರಿಸಿದ್ದ 40 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡಿದ್ದು, ಆಗ ಪಿರ್ಯಾದಿಯವರಯ ಆ ವ್ಯಕ್ತಿಯ ಕೊರಳ ಪಟ್ಟಿಯನ್ನು ಹಿಡಿದುಕೊಂಡು ಕಿರುಚಾಡಿದಾಗ ಎದುರಿನಿಂದ ಬೈಕಿನಲ್ಲಿ ಬಂದ ಯಲಹಂಕ ಗ್ರಾಮದ ಹೇಮಂತ್ ರವರು ಅವರುಗಳನ್ನು ಹಿಡಿಯಲು ಪ್ರಯತ್ನಿಸಿದಾಗ ಬೈಕ್ ಹತ್ತಿಕೊಂಡು ತಪ್ಪಿಸಿಕೊಂಡು ಹೋಗಿದ್ದು, ಕಿತ್ತುಕೊಂಡು ಹೋಗಿರುವ ಒಟ್ಟು 62 ಗ್ರಾಂ ತೂಕದ ಚಿನ್ನದ ಚೈನ್ ಗಳ ಒಟ್ಟು ಬೆಲೆ 2,60,000/- ರೂ ಆಗಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿಯವರು ಹಳೇಬೀಡು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.

 ಕಾರು ಕಳವು ಪ್ರಕರಣ

     ಹರ್ಷ ಬಿನ್ ಮುನಿಸ್ವಾಮಿ, ಅಗ್ರಹಾರ ಬಡಾವಣೆ, ದೇವನೂರು ರಸ್ತೆ, ಬಾಣಾವಾರ ರವರು ತಾವು ವಾಸವಿರುವ ಮನೆಯ ಮುಂಭಾಗ ಎಂದಿನಂತೆ ದಿನಾಂಕ:-30-03-2021 ರಂದು ರಾತ್ರಿ ಸುಮಾರು 08-30 ಗಂಟೆ ಸಮಯದಲ್ಲಿ ತಮ್ಮ ಬಾಬ್ತು ಕೆಎ-17-ಎಂ-7100 ಸಂಖ್ಯೆಯ ಹುಂಡೈ ವರ್ಣ ಕಾರನ್ನು ಲಾಕ್ ಮಾಡಿ ನಿಲ್ಲಿಸಿದ್ದು, ದಿನಾಂ:31-03-2021 ರಂದು ಬೆಳಿಗ್ಗೆ 05-00 ಗಂಟೆಯಲ್ಲಿ ಕಾರನ್ನು ನೋಡಲಾಗಿ ಕಾರು ಇಲ್ಲದೇ ಇದ್ದು, ಎಲ್ಲಾ ಕಡೆಗಳಲ್ಲೂ ಹುಡುಕಿದರೂ ಕಾರು ಸಿಗದೇ ಇದ್ದು, ಕಾರು 2006 ನೇ ಮಾಡಲ್ ಆಗಿದ್ದು, ಸುಮಾರು 1,48,000/- ರೂ ಬೆಲೆಯಾಗಿದ್ದು, ಕಾರಿನ ಇಂಜಿನ್ ನಂಬರ್ D4FA60023678 ಮತ್ತು ಚಾಸಿಸ್ ನಂಬರ್ MAICM41VR6M006374 ಆಗಿದ್ದು, ಇಲ್ಲಿಯವರೆವಿಗೂ ಹುಡುಕಿದರೂ ಪತ್ತೆಯಾಗದ ಕಾರಣ ಪತ್ತೆ ಮಾಡಿಕೊಡಬೇಕೆಂದು ಬಾಣಾವಾರ ಪೊಲೀಸ್ ಠಾಣೆಗೆ ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.

 ಮೋಟಾರು ಬೈಕ್ ಕಳವು ಪ್ರಕರಣ.

     ದಿನಾಂಕ:25-03-2021 ರಂದು ಮಧ್ಯಾಹ್ನ ಸುಮಾರು 12-00 ಗಂಟೆ ಸಮಯದಲ್ಲಿ ಯೋಗೇಶ ಬಿನ್ ಲೇ.ಹನುಮೇಗೌಡ, ನೈಗೆರೆ ಗ್ರಾಮ, ಕಸಬಾ ಹೋಬಳಿ, ಅರಕಲಗೂಡು ತಾಲ್ಲೂಕು ರವರು ತಮ್ಮ ಬಾಬ್ತು ಕೆಎ-13-ಯು-2906 ಸಂಖ್ಯೆಯ ಸ್ಪ್ಲೆಂಡರ್ ಮೋಟಾರು ಬೈಕ್ ಅನ್ನು ಅರಕಲಗೂಡು ಪಟ್ಟಣದ ಆರ್.ಆರ್ ಗೋಲ್ಡ್ ಅಂಗಡಿಯ ಮುಂಭಾಗದಲ್ಲಿ ನಿಲ್ಲಿಸಿ ಕೆಲಸದ ನಿಮಿತ್ತ ಹಾಸನಕ್ಕೆ ಹೋಗಿ ನಂತರ ಸಂಜೆ ಸುಮಾರು 05-30 ಗಂಟೆ ಸಮಯದಲ್ಲಿ ವಾಪಸ್ಸು ಬಂದು ನೋಡಿದಾಗ ನಿಲ್ಲಿಸಿದ್ದ ಬೈಕ್ ಕಳ್ಳತನವಾಗಿದ್ದು, ಇದರ ಬೆಲೆ 35,000/- ರೂ ಗಳಾಗಿದ್ದು, ಪತ್ತೆ ಮಾಡಿಕೊಡಬೇಕೆಂದು ಅರಕಲಗೂಡು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.

 ಮದ್ಯಪಾನ ಮಾಡಲು ಹಣ ಕೊಡದೇ ಇದ್ದುದ್ದಕ್ಕೆ ಕೊಲೆ ಮಾಡಲು ಯತ್ನ

     ಶ್ರೀಧರ @ ಅಪ್ಪು ಬಿನ್ ವೆಂಕಟರಮಣೇಗೌಡ, ಗುಡ್ಡೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು ರವರು ಹಾಸನದ ಆರ್.ಎಂ.ಸಿ ಯಾರ್ಡ್ ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ:02-04-2021 ರಂದು ಬೆಳಿಗ್ಗೆ 09-00 ಗಂಟೆಗೆ ಆರ್.ಎಂ.ಸಿ ಯಾರ್ಡ್ ಗೆ ಬಂದು ಗೊಬ್ಬರ ತುಂಬಿಕೊಂಡು ಬಿಕ್ಕೋಡಿಗೆ ಹೋಗಿ ಅನ್ ಲೋಡ್ ಮಾಡಿ ವಾಪಸ್ಸು ಹಾಸನಕ್ಕೆ ಬಂದು ರಾತ್ರಿ ಸುಮಾರು 10-00 ಗಂಟೆ ಸಮಯದಲ್ಲಿ ಹಾಸನದ ವೆಂಕಟಾದ್ರಿ ಪೆಟ್ರೋಲ್ ಬಂಕ್ ಹತ್ತಿರ ನಡೆದುಕೊಂಡು ಬರುತ್ತಿದ್ದಾಗ ಅದೇ ಸಮಯಕ್ಕೆ ಹಾಸನಾಂಭ ದೇವಸ್ಥಾನದ ಕಡೆಯಿಂದ ಬರುತ್ತಿದ್ದ ಅಜರ್ುನ ಮತ್ತು ಆಟೋ ಚಾಲಕ ವಿಕಾಸ @ ವಿಕ್ಕಿ ಎಂಬುವವರು ಪಿರ್ಯಾದಿಯವರನ್ನು ತಡೆದು, ಹಣವನ್ನು ಕೊಡು ಎಂದು ಕೇಳಿದ್ದು, ಇಲ್ಲ ಎಂದು ಹೇಳಿದ್ದಕ್ಕೆ ಇಬ್ಬರೂ ಈ ಸೂಳೆ ಮಗ ನಾವು ಹಣವನ್ನು ಕೇಳಿದರೆ ಕೊಡುತ್ತಿಲ್ಲಾ ಎಂದು ಕೈಯಿಂದ ಹೊಡೆದು, ಇಬ್ಬರು ಕೊಲೆ ಮಾಡದೇ ಬಿಡುವುದು ಬೇಡ ಎಂದು ಕೊಲೆ ಮಾಡುವ ಉದ್ದೇಶದಿಂದ ಅಜರ್ುನ ಅವನ ಹಿಂಬದಿಯಲ್ಲಿಟ್ಟುಕೊಂಡಿದ್ದ ಮಚ್ಚನ್ನು ತೆಗೆದುಕೊಂಡು ತಲೆಗೆ ಹಾಗು ಎಡಕಿವಿಗೆ ಹೊಡೆದಿದ್ದರಿಂದ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು ಅಲ್ಲಿಗೆ ಬಂದ ದಾಸರಕೊಪ್ಪಲು ಅಭಿಷೇಕ ಮತ್ತು ಕಿಶೋರ್ ರವರು ಬಂದು ಜಗಳ ಬಿಡಿಸಿದ್ದು, ಈ ಬಗ್ಗೆ ನನ್ನನ್ನು ಕೊಲೆ ಮಾಡಲು ಯತ್ನಿಸಿದ ಮೇಲ್ಕಂಡವರುಗಳ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಹೇಳಿಕೆ ಮೇರೆಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.

 


No comments: