* * * * * * HASSAN DISTRICT POLICE

Friday, April 2, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ : 02-04-2021

                                 ಪತ್ರಿಕಾ ಪ್ರಕಟಣೆ                                        ದಿನಾಂಕ:-02-04-2021

 ಮನೆಯ ಬಾಗಿಲು ಮುರಿದು ಚಿನ್ನಾಭರಣ ಕಳವು ಪ್ರಕರಣ.

      ದಿನಾಂಕ:-24-03-2021 ರಂದು ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ಲೋಕೇಶ ಬಿನ್ ಸಿದ್ದೇಗೌಡ, ಕಾರನಹಳ್ಳಿ ಗ್ರಾಮ, ಹೆತ್ತೂರು ಹೋಬಳಿ, ಸಕಲೇಶಪುರ ತಾಲ್ಲೂಕು ರವರು ಕೆಲಸದ ನಿಮಿತ್ತ ಬ್ಯಾಕರವಳ್ಳಿ ಗ್ರಾಮಕ್ಕೆ ಹಾಗು ಅವರ ಪತ್ನಿಯು ಸಹ ಕೂಲಿ ಕೆಲಸಕ್ಕೆ ಹೋಗಲು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು, ಪಿರ್ಯಾದಿಯ ಹೆಂಡತಿ ಸಾಕಮ್ಮ ಕೂಲಿ ಕೆಲಸ ಮುಗಿಸಿಕೊಂಡು ವಾಪಸ್ಸು ಸಂಜೆ 04-45 ಗಂಟೆಗೆ ಮನೆಗೆ ಬಂದು ಬೀಗ ತೆಗೆದು ಮನೆಯ ಒಳಕ್ಕೆ ಹೋಗಿ ನೋಡಿದಾಗ ಮನೆಯ ಹಿಂಬಾಗಿಲನ್ನು ಯಾರೋ ಕಳ್ಳರು ತೆಗೆದು, ಮನೆಯ ಒಳಗೆ ಬೀರುವಿನಲ್ಲಿಟ್ಟಿದ್ದ 1) ಒಂದು ಜೊತೆ ಚಿನ್ನದ ಓಲೆ, 2) 2 ಚಿನ್ನದ ಉಂಗುರ, 3) 3 ಸೆಟ್ ಬೆಳ್ಳಿಯ ಕಾಲು ಬಳೆ 4) ಎರಡು ಜೊತೆ ಬೆಳ್ಳಿಯ ದೀಪ ಮತ್ತು 5) 20,000/- ರೂ ನಗದು ಹಣವನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳ್ಳತನ ಮಾಡಿಕೊಂಡು ಹೋಗಿರುವ ಚಿನ್ನದ ಆಭರಣಗಳನ್ನು ಪತ್ತೆ ಮಾಡಿ, ಕಳವು ಮಾಡಿರುವವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ಪಿರ್ಯಾದಿ ಲೋಕೇಶ ಬಿನ್ ಸಿದ್ದೇಗೌಡ ರವರು ಯಸಳೂರು ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.

 ಬೈಕ್ ನಿಯಂತ್ರಣ ತಪ್ಪಿ ಬೈಕ್ ನಿಂದ ಬಿದ್ದು, ಬೈಕ್ ಸವಾರನ ಸಾವು.

        ದಿನಾಂಕ:-29-03-2021 ರಂದು ರಾತ್ರೊ ಸುಮಾರು 11-45 ಗಂಟೆ ಸಮಯದಲ್ಲಿ ಪಿರ್ಯಾದಿಯ ಶೇರ್ಖಾನ್ ಬಿನ್ ಫಕ್ರುದ್ದೀನ್, ಅಂಬೇಡ್ಕರ್ ನಗರ, 31ನೇ ವಾಡರ್್, ಹಾಸನ ನಗರ ರವರ ತಮ್ಮ ಅಲ್ಲಾವುದ್ದೀನ್ ರವರು ಇತ್ತೀಚೆಗೆ ಖರೀದಿಸಿದ್ದ ಕೆಎ-04-ಹೆಚ್.ಜೆ-2813 ಸಂಖ್ಯೆಯ ಬೈಕ್ ನಲ್ಲಿ ಹಾಸನದ ನಗರದ ಎಂ.ಜಿ ರಸ್ತೆಯಲ್ಲಿರುವ ಡಾಂಗೇ ಆಸ್ಪತ್ರೆಯ ಮುಂಭಾಗ ಆದಿಚುಂಚನಗಿರಿ ಕಲ್ಯಾಣ ಮಂಟಪದ ಕಡೆಯಿಂದ ರಿಂಗ್ ರಸ್ತೆಯ ಕಡೆಗೆ ಹೋಗುತ್ತಿದ್ದಾಗ ಅಲ್ಲಾವುದ್ದೀನ್ ತನ್ನ ಬೈಕ್ ಅನ್ನು ಅತಿವೇಗ ಹಾಗು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ರಸ್ತೆಯಲ್ಲಿದ್ದ ಹಂಪ್ಸ್ ಅನ್ನು ಜೋರಾಗಿ ನೆಗೆಸಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ, ಬೈಕ್ ನಿಂದ ಹಾರಿ ರಸ್ತೆಯ ಮೇಲೆ ಬಿದ್ದಿದ್ದರಿಂದ ತಲೆಗೆ ಹಾಗು ದೇಹದ ಭಾಗಗಳಿಗೆ ಪೆಟ್ಟಾಗಿ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗೆ ಹಾಸನದ ಸಕರ್ಾರಿ ಆಸ್ಪತ್ರೆ ಹಾಗು ಬೆಂಗಳೂರಿನ ಸಾಯಿ ಅಂಬಿಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಅಲ್ಲಾವುದ್ದೀನ್ ಬಿನ್ ಫಕ್ರುದ್ದೀನ್, ವಯಸ್ಸು 26 ವರ್ಷ, ಮುಸ್ಲಿಂ ಜನಾಂಗ, ಕೂಲಿಕೆಲಸ, ವಾಸ ಅಂಬೇಡ್ಕರ್ ನಗರ, 31 ನೇ ವಾಡರ್್, ಹಾಸನ ನಗರ  ರವರು ದಿನಾಂಕ:-01-04-2021 ರಂದು ಬೆಳಗಿನ ಜಾವ ಸುಮಾರು 05-15 ಗಂಟೆ ಸಮಯದಲ್ಲಿ ಮೃತಪಟ್ಟಿದ್ದು, ಈ ಬಗ್ಗೆ ಕಾನೂನು ಕ್ರಮ ಜರುಗಿಸಬೇಕೆಂದು ಹಾಸನದ ಸಂಚಾರಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ.

 ಹೊಂಡಾಯೂನಿ ಕಾನರ್್ ಬೈಕ್ ಕಳವು.

       ದಿನಾಂಕ:-30-03-2021 ರಂದು ಬೆಳಿಗ್ಗೆ 08-30 ಗಂಟೆ ಸಮಯದಲ್ಲಿ ಜನಾರ್ಧನ ಬಿನ್ ದೊಡ್ಡೇಗೌಡ, ವಾಸ ಹಳುವಳ್ಳಿ ಗ್ರಾಮ, ಪಾಳ್ಯ ಹೋಬಳಿ, ಆಲೂರು ತಾಲ್ಲೂಕು ರವರು ತಮ್ಮ ಬಾಬ್ತು ಕೆಎ-13-ಯು-5184 ಸಂಖ್ಯೆಯ ಹೊಂಡಾ ಯೂನಿ ಕಾನರ್್ ಮೋಟಾರು ಬೈಕ್ ಅನ್ನು ತಾವು ಕೆಲಸ ಮಾಡುವ ಹಾಸನ ನಗರದ ಶಂಕರಿ ಮಠದ ರಸ್ತೆಯಲ್ಲಿರುವ ಮುಕುಂದ ಬೇಕರಿಯ ಮುಂಭಾಗ ನೆರಳಿನಲ್ಲಿ ಬೈಕ್ ಅನ್ನು ನಿಲ್ಲಿಸಿ, ಬೈಕ್ ಅನ್ನು ಇಗ್ನಿಷನ್ ಲಾಕ್ ಮಾಡಿಕೊಂಡು ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಮತ್ತು ಸಂಜೆ ಬೈಕ್ ಅನ್ನು ಗಮನಿಸಿದ್ದು, ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಸಂಜೆ 07-00 ಗಂಟೆ ಸಮಯದಲ್ಲಿ ಬೈಕ್ ಅನ್ನು ತೆಗೆದುಕೊಳ್ಳಲು ಬಂದಾಗ ಬೈಕ್ ನಿಲ್ಲಿಸಿದ್ದ ಜಾಗದಲ್ಲಿ ಇಲ್ಲದೇ ಇದ್ದು, ಇಲ್ಲಿಯವರೆವಿಗೂ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಇದ್ದು, ಬೈಕ್ನ ಬೆಲೆ 30,000/- ರೂ ಗಳಾಗಿದ್ದು, ಕಳುವಾಗಿರುವ ಬೈಕ್ ಅನ್ನು ಪತ್ತೆ ಮಾಡಿಕೊಡಬೇಕೆಂದು ಹಾಸನದ ಬಡಾವಣೆ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ. 

 

ಮಟ್ಕಾ ಜೂಜಾಟ ಪ್ರಕರಣ, ಆರೋಪಿಯ ಬಂಧನ ಬಂಧಿತನಿಂದ 2260/- ರೂ ನಗದು ವಶ.

 

ದಿನಾಂಕ:-01-04-2021 ರಂದು ರಾತ್ರಿ ಸುಮಾರು 08-00 ಗಂಟೆ ಸಮಯದಲ್ಲಿ ಬೇಲೂರು ಪೊಲೀಸ್ ಠಾಣಾ ಪಿ.ಎಸ್.ಐ ಶಿವನಗೌಡ ಜಿ ಪಾಟೀಲ್ ರವರಿಗೆ ಬೇಲೂರು ತಾಲ್ಲೂಕು ಬಂಟೇನಹಳ್ಳಿ ಬಳಿ ಒಬ್ಬ ವ್ಯಕ್ತಿಯು 1 ರೂಪಾಯಿಗೆ 80 ರೂ ಎಂದು ಅಕ್ರಮವಾಗಿ ಮಟ್ಕಾ ಆಡಿಸುತ್ತಿದ್ದಾನೆಂದು ದೂರವಾಣಿ ಮೂಲಕ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಮೇಲ್ಕಂಡ ಗ್ರಾಮಕ್ಕೆ ಹೋಗಿ ನೋಡಲಾಗಿ ಗ್ರಾಮದ ಒಂದು ಟೈಲರ್ ಅಂಗಡಿಯ ಮುಂದೆ ನಾಗೇಂದ್ರ ಬಿನ್ ಚಿನ್ನಸ್ವಾಮಿ, 50 ವರ್ಷ, ತಮಿಳು ಬೋವಿ ಜನಾಂಗ, ಟೈಲರ್ ಕೆಲಸ, ದೇವರಾಜಪುರ ಗ್ರಾಮ, ಬೇಲೂರು ತಾಲ್ಲೂಕು ಈತನು 1 ರೂಪಾಯಗೆ 80 ರೂಪಾಯಿ ಎಂದು ಅಕ್ರಮವಾಗಿ ಜನರಿಂದ ಹಣ ಪಡೆದು, ಮಟ್ಕಾ ಜೂಜಾಟ ಆಡಿಸುತ್ತಿದ್ದು, ಈತನನ್ನು ದಸ್ತಗಿರಿ ಮಾಡಿ, ಆತನ ಬಳಿ ಇದ್ದ 2260/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು, ಆತನ ವಿರುದ್ದ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದು, ತನಿಖೆಯಲ್ಲಿರುತ್ತದೆ.

ವ್ಯಕ್ತಿ ಕಾಣೆ

ದಿನಾಂಕ:-13-03-2021 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಸುನಿಲ್ ಬಿನ್ ರವರು ಚನ್ನರಾಯಪಟ್ಟಣದಲ್ಲಿ ಕೆಲಸವಿದೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ಹೋದವರು ರಾತ್ರಿಯಾದರೂ ಸಹ ಮನೆಗೆ ಬಾರದ ಕಾರಣ ಅವರ ಮೊಬೈಲ್ ನಂಬರ್ ಗೆ ಫೋನ್ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಪತ್ತೆ ಮಾಡಿಕೊಡಬೇಕೆಂದು ಕಾಣೆಯಾಗಿರುವ ಸುನಿಲ್ ರವರನ್ನು ಪತ್ತೆ ಮಾಡಿಕೊಡಬೇಕೆಂದು ಅವರ ಪತ್ನಿ ಪರಿಣಿತ, ವಾಸ ಕುರುವಂಕ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದ್ದು, ತನಿಖೆಯಲ್ಲಿರುತ್ತದೆ. 

ಕಾಣೆಯಾಗಿರುವವರ ಚಹರೆ ಗುರುತು

ಸುನಿಲ್, 5'6 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಧೃಡಕಾಯ ಶರೀರ, ಬಲಗೈ ಉಂಗುರು ಬೆರಳಿನಲ್ಲಿ ಹಳೆಯ ಗಾಯದ ಗುರುತು, ನೀಲಿಬಣ್ಣದ ಟೀ ಶಟರ್್, ಕಪ್ಪು ಬಣ್ಣದ ಪ್ಯಾಂಟ್, ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಟ್ಟಣ ನಗರ ಪೊಲೀಸ್ ಠಾಣಾ ದೂರವಾಣಿ ಸಂಖ್ಯೆ  08176-252333 ಗೆ ಅಥವಾ ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 08172-268845 ಗೆ ಮಾಹಿತಿ ನೀಡಬೇಕಾಗಿ ಕೋರಿದೆ. 


No comments: