* * * * * * HASSAN DISTRICT POLICE

Friday, April 2, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ : 01-04-2021

                     ಪತ್ರಿಕಾ ಪ್ರಕಟಣೆ                                                                  ದಿನಾಂಕ: 01-04-2021. 

ಜೂಜಾಡುತ್ತಿದ್ದ ನಾಲ್ವರ ಬಂಧನ, ಬಂಧಿತರಿಂದ 2,950/- ನಗದು ವಶ:

ದಿನಾಂಕ: 31-03-2021 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಮೇಳೆನಹಳ್ಳಿ ಗ್ರಾಮದ ಕೆರೆಯ ಅಂಗಳದಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಪುರುಷೋತ್ತಮ, ಪಿಎಸ್ಐ, ಅರಸೀಕೆರೆ ಗ್ರಾಮಾಂತರ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ರಂಗನಾಯ್ಕ್ ಬಿನ್ ಸಣ್ಣನಾಯ್ಕ್, 48 ವರ್ಷ, ರಾಂಪುರ ತಾಂಡ್ಯ, ಕಣಕಟ್ಟೆ  ಹೋಬಳಿ, ಅರಸೀಕೆರೆ ತಾಲ್ಲೂಕು 2) ಗಂಗಾಧರ ಬಿನ್ ಲೋಕೇಶ್, 27 ವರ್ಷ, ಮೇಳೆನಹಳ್ಳಿ ಗೊಲ್ಲರಹಟ್ಟಿ ತಾಂಡ್ಯ, ಕಣಕಟ್ಟೆ ಹೋಬಳಿ, ಅರಸೀಕೆರೆ ತಾಲ್ಲೂಕು 3) ದೇವರಾಜನಾಯ್ಕ್ ಬಿನ್ ನೆನದಿಗ ನಾಯ್ಕ್, 40 ವರ್ಷ, ರಾಂಪುರ ತಾಂಡ್ಯ, ಕಣಕಟ್ಟೆ ಹೋಬಳಿ, ಅರಸೀಕೆರೆ ತಾಲ್ಲೂಕು 4) ಉಮೇಶ ಬಿನ್ ದಾನಪ್ಪ, 40 ವರ್ಷ, ರಾಂಪುರ ಗ್ರಾಮ, ಕಣಕಟ್ಟೆ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕಟ್ಕಿದ್ದ 2,950/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಮನೆಯ ಬೀಗ ಮುರಿದು ಚಿನ್ನಾಭರಣ ಕಳವು:

ದಿನಾಂಕ: 30-03-2021 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಬೂವನಹಳ್ಳಿ ವರಳಿಕೊಪ್ಪಲು ಗ್ರಾಮದ ವಾಸಿ ಶ್ರೀ ನಾಗರಾಜು, ರವರು ಮನೆಗೆ ಬೀಗ ಹಾಕಿಕೊಂಡು ಮಾವನ ಮನೆಯಾದ ಶ್ರೀ ರಂಸ್ವಾಮಿ, ರವರ ಮನೆಗೆ ಶುಂಠಿ ಹಾಕಲು ಹೋಗಿದ್ದು, ದಿನಾಂಕ: 31-03-2021 ರಂದು ಬೆಳಿಗ್ಗೆ 9-00 ಗಂಟೆಗೆ ಸಡುಕ ಶ್ರೀ ಚಾಯಪ್ಪ, ರವರು ಮನೆಗೆ ಬಾಗಿಲು ತೆರೆದಿರುವುದಾಗಿ ತಿಳಿಸಿದ ಮೇರೆಗೆ ಮನೆ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಬೀಗವನ್ನು ತೆಗೆದು ಒಳಪ್ರವೇಶಿಸಿ, ಬೀರುವಿನಲ್ಲಿಟ್ಟಿದ್ದ 1,45,000/- ಬೆಲೆಯ 50 ಗ್ರಾಂ ತೂಕದ ಚಿನ್ನದ ನಕ್ಲೇಸ್, 30 ಗ್ರಾಮ ತೂಕದ ಚಿನ್ನದ ಮಕ್ಕಳ ಉಂಗುರ 200 ಗ್ರಾಂ ತೂಕದ ಒಂದು ಜೊತೆ ಬೆಳ್ಳಿದೀಪಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀ ನಾಗರಾಜು, ರವರು ದಿನಾಂಕ:  31-03-2021 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. 

ಮನೆಯ ಮೇಲ್ಛಾವಣೆ ಹಾಕುವ ವಿಚಾರಕ್ಕೆ ಹಲ್ಲೆ ಹಾಗೂ ಕೊಲೆ ಬೆದರಿಕೆ:

ದಿನಾಂಕ: 31-03-2021 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ಕಡಗ ಗ್ರಾಮದ ವಾಸಿ ಶ್ರೀ ರಾಕೇಶ್, ರವರು ಶ್ರೀ ಶಾಂತರಾಜು, ರವರು ಹೊಸ ಮನೆಯನ್ನು ಕಟ್ಟುತ್ತಿದ್ದು, ಮನೆಯ ಮುಂದೆ ಕಾಂಪೌಡ ಕಟ್ಟಿದ್ದು, ಆ ಕಾಂಪೌಂಡಿಗೆ ಮೇಲ್ಚಾವಣಿ ಹಾಕುತ್ತಿದ್ದಾಗ ಪಿರ್ಯಾದಿಯವರ ತಾಯಿ ಶ್ರೀಮತಿ ಮೀನಾಕ್ಷಿ, ರವರು ರಸ್ತೆ ಬದಿಗೆ ಬರುವಂತೆ ಶೀಟ್ನ್ನು ಹಾಕಬೇಡಿ ಎಂದು ಕೇಳಿದ್ದಕ್ಕೆ ಶಾಂತರಾಜು, ರವರು ಪಿರ್ಯಾದಿಯವರ ತಾಯಿಯನ್ನು ಉದ್ದೇಶಿಸಿ ಅವಾವಚ್ಯಶಬ್ಧಗಳಿಂದ ನಿಂದಿಸಿ, ರಾಡಿನಿಂದ ಮೈಕೈಗೆ ಹೊಡೆದು ಬಿಡಿಸಲು ಬಂದ ಶ್ರೀ ರಂಗೇಗೌಡ, ರವರಿಗೆ ರಾಡಿನಿಂದ ತಲೆಗೆ ಕಣ್ಣಿಗೆ ಹೊಡೆದು ರಕ್ತಗಾಯಪಡಿಸಿ, ಶ್ರೀ ವಸಂತ್ಕುಮಾರ್, ಶ್ರೀಮತಿ ಜ್ಯೋತಿ, ಶ್ರೀಮತಿ ಪೂಣರ್ಿಮ ರವರು ಸೇರಿಕೊಂಡು ದೊಣ್ಣೆಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಹಾಗೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀ ರಾಕೇಶ್, ರವರು ನೀಡಿದ ದೂರಿನ ಮೇರೆಗೆ ದೂರು ಪ್ರತಿದೂರು ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕ್ಷುಲ್ಲಕ ಕಾರಣ ಹುಡುಗ ಮೇಲೆ ಹಲ್ಲೆ, ಆಸ್ಪತ್ರೆಗೆ ದಾಖಲು ಚಿಕಿತ್ಸೆ ಫಲಕಾರಿಯಾಗದೇ ಹುಡುಗನ ಸಾವು:

ದಿನಾಂಕ: 30-03-2021 ರಂದು  ಸಂಜೆ 6-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ಐದಳ್ಳ ಕಾವಲ್ ಸಿ ತಾಂಡ್ಯ ಗ್ರಾಮದ ವಾಸಿ ಶ್ರೀಮತಿ ಕಮಲಬಾಯಿ, ರವರ ಮಗ ಶ್ರೀ ಅಶೋಕನಾಯ್ಕ್, ರವರು ನಿಟ್ಟೂರಿನಲ್ಲಿರುವ ಮಹಾಲಕ್ಷ್ಮೀ ವೈನ್ಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ವಾಪಸ್ ಮನೆಗೆ ಬಂದು ಪುನ: ಕೆಲಸಕ್ಕೆ ಹೋಗುತ್ತೇನೆಂದು ಹೋಗಿದ್ದು, ಹೊಳೆನರಸೀಪುರ ತಾಲ್ಲೂಕು, ಹಂಗರಳ್ಳಿ ಗ್ರಾಮದ ವಾಸಿ ಶ್ರೀ ಮೂತರ್ಿನಾಯ್ಕ್, ರವರು ಸಹ ವೈನ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಶ್ರೀ ಅಶೋಕನಾಯ್ಕ್, ರವರು ಶ್ರೀ ಮೂತರ್ಿನಾಯ್ಕ್, ರವರಿಗೆ ಕೆಲಸಕ್ಕೆ ಹೋಗುವಂತೆ ಹೇಳಿದ್ದರಿಂದ ಶ್ರೀ ಮೂತರ್ಿನಾಯ್ಕ್, ರವರು ಕೈಯಿಂದ ಶ್ರೀ ಅಶೋಕನಾಯ್ಕ್, ರವರಿಗೆ ಮೂಗಿಗೆ ಹೊಡೆದು ತೀವ್ರ ಸ್ವರೂಪದವಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ: 31-03-2021 ರಂದು ಶ್ರೀ ಅಶೋಕನಾಯ್ಕ್ ಬಿನ್ ಲೇಟ್ ಪ್ರಕಾಶ್ನಾಯ್ಕ್, 20 ವರ್ಷ, ಐದಳ್ಳಕಾವಲ್ ಸಿ ತಾಂಡ್ಯ ಗ್ರಾಮ, ಸಾಲಗಾಮೆ ಹೋಬಳಿ, ಹಾಸನ ತಾಲ್ಲೂಕು, ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಹಾಗೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತ ತಾಯಿ ಶ್ರೀಮತಿ ಕಮಲಬಾಯಿ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

No comments: