* * * * * * HASSAN DISTRICT POLICE

Wednesday, March 31, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ:30-03-2021

 

  ಪತ್ರಿಕಾ ಪ್ರಕಟಣೆ                  ದಿನಾಂಕ: 30-03-2021

 

ಜೂಜಾಡುತ್ತಿದ್ದ ಮೂವರ ಬಂಧನ, ಬಂಧಿತರಿಂದ 1150/- ನಗದು ವಶ:

     ದಿನಾಂಕ: 29-03-2021 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ತಪ್ಪಲಿನ ಹತ್ತಿರ ಇಸ್ಪೀಟ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಪುರುಷೋತ್ತಮ್ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಪರ್ವಯ್ಯ ಬಿನ್ ಲೇಟ್ ಪರಮೇಶ್ವರಯ್ಯ, 65 ವರ್ಷ, ಮುರುಂಡಿ ಗ್ರಾಮ ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು 2) ರಾಜಣ್ಣ ಬಿನ್ ಲೇಟ್ ರಾಮಣ್ಣ, 56 ವರ್ಷ, ಜವೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು 3) ರವಿ ಬಿನ್ ಬೋವಿ, 30 ವರ್ಷ, ಮಾದೇನೂರು ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಅವರ ವಶದಲ್ಲಿದ್ದ 1150/- ನಗದನ್ನು ಅಮಾನತ್ತುಪಡಿಸಿಕೊಂಡು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 

2.73.000/- ಬೆಲೆಯ ಶುಂಠಿ ತೊಳೆಯುವ ಯಂತ್ರ ಹಾಗೂ ಇತರೆ ವಸ್ತುಗಳ ಕಳವು

     ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಎಂ.ಕೆ.ಕೊಪ್ಪಲು ಗ್ರಾಮದ ಪಿರ್ಯಾದಿ ತಜ್ಮಲ್ ಪಾಷಾ ರವರು  ಬೆಲೂರು ತಾಲ್ಲೂಕು ಸೂರಾಪುರ ಗ್ರಾಮದ ಮಹೇಶಪ್ಪ ರವರ ಜಮೀನನ್ನು ಬಾಡಿಗೆಗೆ ಮಾಡಿಕೊಂಡಿದ್ದು, ಸದರಿ ಜಮೀನಿನಲ್ಲಿ ಶುಂಠಿ ತೊಳೆಯುವ ಯಂತ್ರವನ್ನು ಅಳವಡಿಸಿಕೊಂಡಿದ್ದು, ಕಳೆದ 20 ದಿನಗಳ ಹಿಂದೆ ಸೀಜನ್ ಇಲ್ಲದ ಕಾರಣ ಕೆಲಸಗಾರರು ಅವರ ಊರಿಗೆ ಹೋದ ಕಾರಣ ಶುಂಠಿ ಪಾಯಿಂಟ್ನಲ್ಲಿ ಕೆಲಸ ಮಾಡುವ ಯಂತ್ರಗಳನ್ನು ರೂಂನಲ್ಲಿಟ್ಟು ಪಿರ್ಯಾದುದಾರರು ದಿನಾಂಕ: 05-3-2021  ರಂದು ಸಂಜೆ 05-00 ಗಂಟೆ ಸಮಯದಲ್ಲಿ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ: 27-03-2021 ರಂದು ಪಿರ್ಯಾದುದಾರರು ಶುಂಠಿ ಪಾಯಿಂಟ್ಗೆ ಹೋಗಿ ನೋಡಲಾಗಿ ಬೀಗ ಮುರಿದಿದ್ದು ಕಂಡು ಬಂತು ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದು ಕಂಡು ಬಂದಿತು ನಂತರ ರೂಂನಲ್ಲಿಟ್ಟದ್ದ ಯಂತ್ರಗಳನ್ನು ನೋಡಲಾಗಿ 2 ಸಿಸಿ ಕ್ಯಾಮೆರಾಗಳು, ಎಲ್ಇಡಿ  ಟಿವಿ ಒಂದು, ಒಂದು ಡಿವಿಆರ್ ಮತ್ತು ಹಾರ್ಡ್ ಡಿಸ್ಕ್, ಸ್ಟಾಕ್ ಮೋಟಾರ್ಸ್,  ಕ್ರಾಪ್ಟನ್ ಮೋಟಾರ್, ಜನರೇಟರ್ ಬ್ಯಾಟರಿ, ಯುಪಿಎಸ್, ಯುಪಿಎಸ್ ಬ್ಯಾಟರಿ ಒಂದು, ಡಿಸೇಲ್ ಲಂಬಾಣಿ ಮೋಟಾರ್ ಒಂದು, ಎಲೆಕ್ಟ್ರಾನಿಕ್ ಸ್ಕೇಲ್ ಮೂರು,  ವೆಲ್ಡಿಂಗ್ ಮಿಷನ್, ಕಟಿಂಗ್ ಮಿಷನ್, ಹೋಲ್ ಮಿಷನ್, ಗ್ರೈಂಡಿಂಗ್ ಮಿಷನ್, ಟೂಲ್ ಬಾಕ್ಸ್, ಪಂಪ್ ಸೆಟ್ ಮೋಟಾಸರ್್ ಎರಡು, ಬೆಲ್ಟ್ ಮೋಟಾಆರ್ ಜರಡಿ ಗೇರ್ ಬಾಕ್ಸ್ ಮೋಟಾರ್, 5 ಹೆಚ್ ಕ್ರಾಪ್ಟನ್ ಮೋಟಾರ್ ಹಾಆಗೂ ಇತರೆ ವಸ್ತುಗಳನ್ನು ರಾತ್ರಿ ವೇಳೆಯಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಅಂದಾಜು ಮೌಲ್ಯ 2,73,000/- ರೂಗಳಾಗಿರುತ್ತದೆ. ಪತ್ತೆ ಮಾಡಿಕೊಡಬೇಕೆಂದು ಶ್ರೀ ತಜ್ಮಲ್ ಪಾಷಾ ರವರು ದಿನಾಂಕ: 29-03-2021 ರಂದು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 

ಲಾರಿ ಟಿವಿಎಸ್ ಬೈಕಿಗೆ ಡಿಕ್ಕಿ ಬೈಕಿನಲ್ಲಿದ್ದ ಒಬ್ಬರ ಸಾವು ಇನ್ನೊಬ್ಬರಿಗೆ ರಕ್ತಗಾಯ

     ದಿನಾಂಕ: 28-03-2021 ರಂದು ಸಂಜೆ 07-45 ಗಂಟೆ ಸಮಯದಲ್ಲಿ  ಚಿಕ್ಕಮಗಳೂರು ತಾಲ್ಲೂಕು, ಲಕ್ಯಾ ಹೋಬಳಿ, ಗಾಳಿಹಳ್ಳಿ ಗ್ರಾಮದ ಮಲ್ಲಯ್ಯ ರವರು ತಮ್ಮ ಬಾಬ್ತು  ಕೆಎ-18-ಇಎ-2915 ರ ಟಿವಿಎಸ್ ಎಕ್ಸ್ಎಲ್ ಮೋಟಾರ್ ಸೈಕಲ್ ನಲ್ಲಿ ಸಂಬಂಧಿಕರಾದ ಮರ್ಲೆ ಗ್ರಾಮದ ದೇವರಾಜು ರವರನ್ನು ಬೈಕಿನಲ್ಲಿ ಕೂರಿಸಿಕೊಂಡು ಬೇಲೂರು ಚಿಕ್ಕಮಗಳೂರು ರಸ್ತೆಯ ಕೊರಟಗೆರೆ ಗ್ರಾಮದ ಗಡಿಯ ಸಮೀಪ ಬೇಲೂರು ಕಡೆಗೆ ಹೋಗುತ್ತಿರುವಾಗ ಬೇಲೂರು ಕಡೆಯಿಂದ ಬಂದ  ಕೆಎ-53-2204 ರ ಲಾರಿ ಚಾಲಕ ತನ್ನ ಲಾರಿಯನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿದ ಪರಿಣಾಮ ಲಾರಿಯ ಮುಂಭಾಗಕ್ಕೆ ಟಿವಿಎಸ್ ಮೋಟಾರ್ ಸೈಕಲ್ ಸಿಕ್ಕಿ ಹಾಕಿಕೊಂಡ ಪರಿಣಾಮ ಮಲ್ಲಯ್ಯರವರಿಗೆ ತಲೆಗೆ ಕಾಲಿಗೆ, ಹಣೆಗೆ ಹಾಗೂ ಮೈಕೈಗೆ ಪೆಟ್ಟಾಗಿದ್ದು, ಸಂಬಂಧಿಕರಾದ ದೇವರಾಜು ರವರಿಗೆ ತಲೆಗೆ ಮುಖಕ್ಕೆ ಮೈಕೈಗೆ ಏಟಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗಮದ್ಯೆ ಮಲ್ಲಯ್ಯ, 60 ವರ್ಷ ರವರು ಮೃತಪಟ್ಟಿದ್ದು, ಗಾಯಗೊಂಡಿದ್ದ ದೇವರಾಜು ರವರು ಹಾಸನ ನಗರದ ಎಸ್ಎಸ್ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಮೃತರ ಸಂಬಂಧಿಕರಾದ  ಶ್ರೀ ಮೋಹನ ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 

ಗಂಡಸು ಕಾಣೆ

 

     ದಿನಾಂಕ: 24-03-2021 ರಂದು ಮಧ್ಯಾಹ್ನ 02-00 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಗುಂಡಶೆಟ್ಟಿಹಳ್ಳಿ ಗ್ರಾಮದ ರಘು ರವರು  ಮೆಳೆಯಮ್ಮ ದೇವಸ್ಥಾನದ ಬಳಿ ಬೀಗರ ಊಟಕ್ಕೆ ಹೋಗುತ್ತೇನೆಂದು ಮನೆಯಿಂದ ಹೋದವನು ವಾಪಸ್ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ರಘು ರವರ ತಂದೆ ಶ್ರೀ ಸಣ್ಣೇಗೌಡ ರವರು ದಿನಾಂಕ: 29-03-2021 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ರಘು ಬಿನ್ ಸಣ್ಣೇಗೌಡ, 33 ವರ್ಷ, 5'5'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ.  ಮನೆಯಿಂದ ಹೋಗುವಾಗ ನೀಲಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ನಗರ ಠಾಣೆ ಪೋನ್ ನಂ. 08176-252333 ಕ್ಕೆ ಸಂಪರ್ಕಿಸುವುದು.

 

ಗಂಡಸು ಕಾಣೆ

     ಚನ್ನರಾಯಪಟ್ಟಣದ ಮಕಾನ್ ರಸ್ತೆ ವಾಸಿ ಶ್ರೀನಿವಾಸ ರವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದು, ವಾರಕ್ಕೆ ಒಂದು ದಿನ ಚನ್ನರಾಯಪಟ್ಟಣಕ್ಕೆ ಬಂದು ತನ್ನ ಹೆಂಡತಿ ಮಕ್ಕಳೊಂದಿಗೆ ಇದ್ದು ಹೋಗುತ್ತಿದ್ದು, ದಿನಾಂಕ: 27-03-2021 ರಂದು ಚನ್ನರಾಯಪಟ್ಟಣಕ್ಕೆ ಬಂದು ತನ್ನ ಹೆಂಡತಿ ಮಕ್ಕಳೊಂದಿಗೆ ಇದ್ದು, ದಿನಾಂಕ: 28-03-2021 ರಂದು ಸಂಜೆ 05-00 ಗಂಟೆಗೆ ತಮ್ಮ ಸ್ವಂತ ಊರಾದ ನುಗ್ಗೇಹಳ್ಳಿ ಹೋಬಳಿ, ಕಗ್ಗೆರೆ ಗ್ರಾಮಕ್ಕೆ ಹೋಗಿ ತಂದೆ ಜೊತೆಯಲ್ಲಿ ಮನೆಯಲ್ಲಿದ್ದು, ನಂತರ ಮಟ್ಟನವಿಲೆ ಗ್ರಾಮಕ್ಕೆ ಹೋಗಿ ಬರುತ್ತೇನೆಂದು ತಂದೆಗೆ ಹೇಳಿ ಕೆಎ-13-ಎನ್-7244ರ ಕಾರಿನಲ್ಲಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಶ್ರೀನಿವಾಸ ರವರ ತಂದೆ ಶ್ರೀ ಬೆಟ್ಟೇಗೌಡ ರವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಶ್ರೀನಿವಾಸ ಬಿನ್ ಬೆಟ್ಟೇಗೌಡ, 37 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಹಿರೀಸಾವೆ ಪೊಲೀಸ್ ಠಾಣೆ ಪೋನ್ ನಂ. 08172-226888  ಕ್ಕೆ ಸಂಪರ್ಕಿಸುವುದು. 



No comments: