* * * * * * HASSAN DISTRICT POLICE

Monday, March 29, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ:29-03-2021

        ಪತ್ರಿಕಾ ಪ್ರಕಟಣೆ                   ದಿನಾಂಕ: 29-03-2021

 ಜೂಜಾಡುತ್ತಿದ್ದ 6 ಜನರ ಬಂಧನ, ಬಂಧಿತರಿಂದ 7530/- ನಗದು ವಶ

      ದಿನಾಂಕ:28-03-2021 ರಂದು ಸಂಜೆ 06-00 ಗಂಟೆ ಸಮಯದಲ್ಲಿ  ಹೊಳೆನರಸೀಪುರ ತಾಲ್ಲೂಕು, ಹರಳಹಳ್ಳಿ ಗ್ರಾಮದ ಹತ್ತಿರ ಇರುವ ಗಾಡೇನಹಳ್ಳಿ ಮೀಸಲು ಅರಣ್ಯದಲ್ಲಿ ಬಳ್ಳಾರೆ ಕಲ್ಲು ಪ್ರದೇಶದ ಸಮೀಪ ಸಾರ್ವಜನಿಕರು ತಿರುಗಾಡುವ ಮಣ್ಣು ರಸ್ತೆಯಲ್ಲಿ ಅಂದರ್-ಬಾಹರ್ ಜೂಜಾಟ ಆಡುತ್ತಿದ್ದಾರೆಂದು ಪಿಎಸ್ಐ ಶ್ರೀ ವಿನಯ್ಕುಮಾರ್ ಸಿ. ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಮುರಳಿ ಬಿನ್ ಕಂಬೇಗೌಡ 2) ಶೇಖರ ಬಿನ್ ಚಿಕ್ಕವೀರಪ್ಪ, ನರಸಿಂಹನಾಯಕನಗರ, ಹೊಳೆನರಸೀಪುರ 3) ಹರೀಶ ಬಿ.ಎಸ್. ಬಿನ್ ಸ್ವಾಮಿಗೌಡ, ಬೈಚನಹಳ್ಳಿ ಗ್ರಾಮ, ಅರಕಲಗೂಡು ತಾಲ್ಲೂಕು 4) ರವಿ @ ಸಿಲೋನ್ ಬಿನ್ ಹೆಚ್.ಎನ್.ಬಸವರಾಜ, ಕೋಟೆ ಬಳೆಗಾರರ ಬೀದಿ, ಹೊಳೆನರಸೀಪುರ ಪಟ್ಟಣ 5) ಗಣೇಶ ಬಿನ್ ಲೇಟ್ ರಮೇಶ, ಈಡಿಗರಬೀದಿ, ಹೊಳೆನರಸೀಪುರ ಪಟ್ಟಣ 6) ಶರತ್ ಬಿನ್ ನಾಗರಾಜ, ಮೇದರಬೀದಿ, ಹೊಳೆನರಸೀಪುರ ಪಟ್ಟಣ ಎಂದು ತಿಳಿಸಿದವರನ್ನು ದಸ್ತಗಿರಿಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 7530/- ನಗದನ್ನು ಅಮಾನತ್ತುಪಡಿಸಿಕೊಂಡು ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತರಿಂದ 60/-ಬೆಲೆಯ ಮದ್ಯ ವಶ

     ದಿನಾಂಕ: 28-03-2021 ರಂದು ಸಂಜೆ 05-30 ಗಂಟೆ ಸಮಯದಲ್ಲಿ  ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ದಾಸೇನಹಳ್ಳಿ ಗೇಟ್ ಗ್ರಾಮದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ರಾಘವೇಂದ್ರ ಬಿ.ಎನ್. ಗಂಡಸಿ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ  ನವೀನ ಬಿನ್ ಚಿಕ್ಕೇಗೌಡ, 30 ವರ್ಷ, ದಾಸೇನಹಳ್ಳಿ ಗ್ರಾಮ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟಕ್ಕಿಟ್ಟಿದ್ದ 60/-ಬೆಲೆಯ 2 ಮದ್ಯದ ಪ್ಯಾಕೇಟ್ಗಳನ್ನು ಅಮಾನತ್ತುಪಡಿಸಿಕೊಂಡು ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದವನ ಬಂಧನ

     ದಿನಾಂಕ: 28-03-2021 ರಂದು ಸಂಜೆ 07-00 ಗಂಟೆ ಸಮಯದಲ್ಲಿ  ಹೊಳೆನರಸೀಪುರ ತಾಲ್ಲೂಕು, ಸಿಗರನಹಳ್ಳಿ ಗ್ರಾಮದ ಕೃಷ್ಣೇಗೌಡ ರವರ ಮನೆಯ ಮುಂಭಾಗ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆಂದು ಶ್ರೀ ರವಿ ಪಿಸಿ-67 ಹೊಳೆನರಸೀಪುರ ನಗರ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯಪಾನ ಸೇವನೆ ಮಾಡಲು ಅವಕಾಶ ಮಾಡಿಕೊಟ್ಟಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ ಕೃಷ್ಣೇಗೌಡ, 65 ವರ್ಷ,  ಸಿಗರನಹಳ್ಳಿ ಗ್ರಾಮ, ಹೊಳೆನರಸೀಪುರ ನಗರ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 ಮೊಬೈಲ್ ಅಂಗಡಿ ಕಳವು

     ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಗಂಡಸಿ ಗ್ರಾಮದ  ಹಿಪಾಜ್ ಉಲ್ಲಾ ರವರು ಗಂಡಸಿ ಗ್ರಾಮದಲ್ಲಿ ಮೊಬೈಲ್ ಸರ್ವಿಸ್ ಸೆಂಟರ್ ನ್ನು ಇಟ್ಟುಕೊಂಡಿದ್ದು, ದಿನಾಂಕ: 27-03-2021 ರಂದು ರಾತ್ರಿ ಸುಮಾರು 08-30 ಗಂಟೆ ಸಮಯದಲ್ಲಿ ಅಂಗಡಿಗೆ ಬೀಗ ಹಾಕಿಕೊಂಡು ಹೋಗಿದ್ದು, ಬೆಳಿಗ್ಗೆ ಬಂದು ಬಾಗಿಲು ತೆಗೆದು ನೋಡಲಾಗಿ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಅಂಗಡಿಯ ಹೆಂಚನ್ನು ತೆಗೆದು ಇಳಿದು ಅಂಗಡಿಯ್ಲಲಿದ್ದ  ಐಟೆಲ್, ನೋಕಿಯಾ, ಸ್ಯಾಂಸಾಂಗ್ ಮತ್ತು ಇತರೆ ಕಂಪನಿಯ ಹೊಸ ಮೊಬೈಲ್ ಮತ್ತು ರಿಪೇರಿ ಮಾಡಲು ಕೊಟ್ಟಿದ್ದ ಸುಮಾರು 10 ರಿಂದ 12 ಮೊಬೈಲ್ಗಳು ಇವುಗಳ ಬೆಲೆ ಸುಮಾರು 25,000/- ರೂಗಳಾಗಿದ್ದು, ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಹಾಗೂ ಪಕ್ಕದ ಬಾಬು ರವರ ಚಪ್ಪಲಿ ಅಂಗಡಿಯ ಹೆಂಚು ತೆಗೆದು ಒಳಗೆ ನುಗ್ಗಿ ಸುಮಾರು 2 ರಿಂದ 3 ಜೊತೆ ಚಪ್ಪಲಿ ಹಾಗೂ 1000/- ರೂ ಹಣವನ್ನು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಪತ್ತೆ ಮಾಡಿಕೊಡಬೇಕೆಂದು ಶ್ರೀ ಹಿಪಾಜ್ ಉಲ್ಲಾ ರವರು ನೀಡಿದ ದೂರಿನ ಮೇರೆಗೆ  ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 ಯಾರೋ ಅಪರಿಚಿತರು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ

    ದಿನಾಂಕ: 27-03-2021 ರಂದು ಮಂಡ್ಯ ಜಿಲ್ಲೆ, ಕೆ.ಆರ್.ಪೇಟೆ ತಾಲ್ಲೂಕು, ಕಿಕ್ಕೇರಿ ಹೋಬಳಿ, ಅನಗೋಳ ಗ್ರಾಮದ ಪಿರ್ಯಾದಿ ಉಮಾ ರವರು ಸಂಸಾರ ಸಮೇತ ಚನ್ನರಾಯಪಟ್ಟಣ ಕೋಟೆಯಲ್ಲಿ ವಾಸವಾಗಿರುವ ನಾದಿನಿ ಪದ್ಮಾವತಿ ರವರ ಮಗಳ ಆರತಕ್ಷತೆಗೆ ಬಂದಿದ್ದು, ಪದ್ಮಾವತಿರವರ ಮನೆಯಲ್ಲಿದ್ದಾಗ ದಿನಾಂಕ: 29-03-2021 ರಂದು ಬೆಳಗಿನ ಜಾವ ಸುಮಾರು 04-45 ಗಂಟೆ ಸಮಯದಲ್ಲಿ  ಪಿರ್ಯಾದಿ ಮಗಳು ಬಾತ್ ರೂಮ್ ಗೆ ಹೋಗಬೇಕೆಂದಾಗ ಪಿರ್ಯಾದಿಯವರು ಮಗಳನ್ನು ಕರೆದುಕೊಂಡು ಮನೆಯ ಪಕ್ಕದ ಕಾಂಪೌಂಡಿಗೆ ಹೊಂದಿಕೊಂಡಂತೆ ಇರುವ ಬಾತ್ ರೂಂ ಹತ್ತಿರ ಕರೆದುಕೊಂಡು ಹೋಗಿ ಮಗಳನ್ನು ಬಾತ್ರೂಮ್ಗೆ ಕಳುಹಿಸಿ ಪಿರ್ಯಾದಿಯವರು ಕಾಂಪೌಂಡ್ ಹತ್ತಿರ ನಿಂತಿದ್ದಾಗ ಪಿರ್ಯಾದಿಯವರ ಮುಖಕ್ಕೆ  ಯಾರೋ ಅಪರಿಚಿತರು ಕಾರದ ಪುಡಿ ಎರಚಿ ಪಿರ್ಯಾದಿಯವರ ಕುತ್ತಿಗೆಯಲ್ಲಿದ್ದ ಸುಮಾರು 23 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದು, ಪಿರ್ಯಾದಿಯವರು ಗಾಬರಿಯಲ್ಲಿ ಕಣ್ಣು ಉರಿಯುತ್ತಿದುದ್ದರಿಂದ ಸರವನ್ನು ಕಿತ್ತುಕೊಂಡು ಹೋದ ವ್ಯಕ್ತಿಯನ್ನು ನೋಡಿರುವುದಿಲ್ಲ. ಮಾಂಗಲ್ಯ ಸರದ ಬೆಲೆ ಸುಮಾರು 70 ಸಾವಿರ ರೂಗಳಾಗಿರುತ್ತದೆ ಪತ್ತೆ ಮಾಡಿಕೊಡಬೇಕೆಂದು ಶ್ರೀಮತಿ ಉಮಾರವರು ಕೊಟ್ಟ ದೂರಿನ ಮೇರೆಗೆ  ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 



No comments: