* * * * * * HASSAN DISTRICT POLICE

Monday, March 29, 2021

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ:28-03-2021

 

              ಪತ್ರಿಕಾ ಪ್ರಕಟಣೆ               ದಿನಾಂಕ: 28-03-2021

 ಹೆಂಗಸು ಕಾಣೆ:

    ಹಾಸನ ತಾಲ್ಲೂಕ್, ಶಾಂತಿಗ್ರಾಮ ಹೋಬಳಿ, ಕೌಶಿಕ ಶೆಟ್ಟಿಹಳ್ಳಿ ಗ್ರಾಮದ ಶ್ರೀಮತಿ ಲತಾ ರವರ ಮೈದುನ ಮನೋಹರ @ ಕಾಂತರಾಜು ಎಂಬುವವರಿಗೆ ದಿನಾಂಕ: 26-05-2014 ರಂದು ಶೃತಿ ಎಂಬುವವರೊಂದಿಗೆ ವಿವಾಹವಾಗಿದ್ದು,  ಈಗ್ಗೆ ಒಂದು ವರ್ಷದಿಂದ ಗಂಡ ಹೆಂಡತಿಯರಲ್ಲಿ ಅನ್ಯೂನ್ಯತೆ ಇಲ್ಲದ ಕಾರಣ ಮನೋಹರ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಶೃತಿಯು  ಪಿರ್ಯಾದಿ ಲತಾರವರ ಮನೆಯಲ್ಲಿಯೇ ವಾಸವಾಗಿದ್ದಳು. ಹೀಗಿರುವಾಗ ದಿನಾಂಕ: 26-03-2021 ರಂದು ರಾತ್ರಿ ಸುಮಾರು 12-00 ಗಂಟೆಯಲ್ಲಿ ಎಲ್ಲರೂ ಮಲಗಿದ್ದಾಗ ಯಾರಿಗೂ ತಿಳಿಯದಂತೆ ಮನೆ ಬಿಟ್ಟು ಹೋಗಿರುತ್ತಾಳೆ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಬೇಕೆಂದು ಶ್ರೀಮತಿ ಲತಾ ಕೋಂ ಮೋಹನ್ ರವರು ನೀಡಿದ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ. ಕಾಣೆಯಾದ ಹೆಂಗಸಿನ ಚಹರೆ :- ಶ್ರೀಮತಿ ಶೃತಿ ಕೋಂ ಮನೋಹರ @ ಕಾಂತರಾಜು, 25 ವರ್ಷ, ದುಂಡು ಮುಖ, ಸಾಧಾರಣ ಮೈಕಟ್ಟುಇ ಹೊಂದಿದ್ದು, ಕನ್ನಡ ಬಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಚೂಡಿಧಾರ್ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ 08172-268630 ಕ್ಕೆ ಸಂಪರ್ಕಿಸುವುದು.

 ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿದ್ದ 13 ಜನರ ಬಂಧನ, ಬಂಧಿತರಿಂದ 5910/- ನಗದು ವಶ,

     ದಿನಾಂಕ: 27-03-2021 ರಂದು ಸಂಜೆ 5-00 ಗಂಟೆಯಲ್ಲಿ ಅರಸೀಕೆರರೆ ತಾಲ್ಲೂಕ್, ಜಾವಗಲ್ ಹೋಬಳಿ, ಕೋಳಗುಂದ ಗ್ರಾಮದ ಬೈರವೇಶ್ವರ ದೇವಸ್ಥಾನದ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟು ಜೂಜಾಟ ಆಡುತ್ತಿರುವುದಾಗಿ ಶ್ರೀ ಆನಂದ, ಪಿಎಸ್ಐ, ಜಾವಗಲ್ ಪೊಲೀಸ್ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ಆಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಕುಮಾರ ಬಿನ್ ಮಲ್ಲಪ್ಪಶೆಟ್ಟಿ, 50 ವರ್ಷ, ವ್ಯವಸಾಯ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕ್, 2) ರವಿ ಬಿನ್ ಚನ್ನಪ್ಪ, 50 ವರ್ಷ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕ್, 3) ರಾಜಶೇಖರಪ್ಪ ಬಿನ್ ಗಿರಿಯಪ್ಪ, 75 ವರ್ಷ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕ್, 4) ನಾರಾಯಣಶೆಟ್ಟಿ ಬಿನ್ ಶಂಕರಶೆಟ್ಟಿ, 70 ವರ್ಷ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕ್, 5) ವಿರೂಪಾಜಕ್ಷ ಬಿನ್ ಶಿವಣ್ಣ, 62 ವರ್ಷ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕ್, 6) ಪರಮೇಶ ಬಿನ್ ಪಾಪಣ್ಣ, 53 ವರ್ಷ, ಮಾವುತನಹಳ್ಳಿ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕ್, 7) ಚಿಕ್ಕಮಲ್ಲಪ್ಪ ಬಿನ್ ಮಲ್ಲಪ್ಪ, 70 ವರ್ಷ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕ್,  8) ಕುಮಾರ ಬಿನ್ ರಾಮಲಿಂಗಾಶೆಟ್ಟಿ, 50 ವರ್ಷ 9) ನಾಗಭೂಷಣ ಬಿನ್ ಮರಿಸಿದ್ದಪ್ಪ, 65 ವಷ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕ್, 10) ನಾಗಣ್ಣ ಬಿನ್ ಪುಟ್ಟಶೆಟ್ಟಿ, 62 ವರ್ಷ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕ್, 12) ಜಗದೀಶ ಬಿನ್ ಸಿದ್ದಪ್ಪ, 60 ವರ್ಷ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕ್, 13) ಶಂಕರಶಟ್ಟಿ ಬಿನ್ ಸಿದ್ದಲಿಂಗಶೆಟ್ಟಿ, 70, ವರ್ಷ, ಕೋಳಗುಂದ ಗ್ರಾಮ, ಜಾವಗಲ್ ಹೋಬಳಿ, ಅರಸೀಕೆರೆ ತಾಲ್ಲೂಕ್ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿ ಅವರ ವಶದಲ್ಲಿದ್ದ 5910/- ನಗದನ್ನು ಅಮಾನತ್ತುಪಡಿಸಿಕೊಂಡು ಬಂದು ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 ಹುಡುಗಿ ಕಾಣೆ

ನುಗ್ಗೇಹಳ್ಳಿ ಟೌನ್, ಕುರುಬರ ಬೀದಿಯ ವಾಸಿ ಶ್ರೀ ನವೀದ್ ರವರ ಮಗಳು ಕುಮಾರಿ ನಿಧಾ ಫಾತೀಮ ಹಾಸನದ ಆರ್ ಸಿ ರಸ್ತೆಯಲ್ಲಿರುವ ಮಲ್ನಾಡ್ ಕೋಚಿಂಗ್ ಸೆಂಟರ್ ನಲ್ಲಿ ನೀಟ್ ಪರೀಕ್ಷೆಗೆ ತರಭೇತಿ ಪಡೆದುಕೊಂಡು ಶ್ರೀನಿವಾಸ ಕಲ್ಯಾಣ ಮಂಟಪದ ಹತ್ತಿರ ಇರುವ ಸೂರ್ಯ ಎಂಬುವವರ ಮನೆಯಲ್ಲಿ ಬಾಡಿಗೆಗೆ ರೂಂ ಮಾಡಿಕೊಂಡು ತನ್ನ ಸ್ನೇಹಿತೆಯರೊಂದಿಗೆ ವಾಸವಾಗಿದ್ದು, ಈಗ್ಗೆ 15 ದಿನಗಳ ಹಿಂದೆ ಆರೋಗ್ಯ ಸರಿಯಿಲ್ಲದ ಕಾರಣ ನುಗ್ಗೇಹಳ್ಳಿಗೆ ಹೋಗಿ ಅಲ್ಲಿಯೇ ಇದ್ದಳೂ. ದಿನಾಂಕ: 25-03-2021 ರಂದು ಬೆಳಿಗ್ಗೆ ನಿಧಾಫಾತಿಮ ಕಾಲೇಜಿಗೆ ಹೋಗುವುದಾಗಿ ಮನೆಯಲ್ಲಿ ತಿಳಿಸಿ ಹೋಗಿದ್ದು, ದಿನಾಂಕ: 27-03-2021 ರಂದು ಪಿರ್ಯಾದಿ ನವೀದ್ರವರು ಅವಳ ಮೊಬೈಲ್ ಗೆ ಕರೆಮಾಡಲಾಗಿ ಸ್ವಿಚ್ ಆಫ್ ಆಗಿದ್ದರಿಂದ ಗಾಬರಿಗೊಂಡು ಹಾಸನಕ್ಕೆ ಬಂದು ಕಾಲೇಜು ಮತ್ತು ಅವಳು ಬಾಡಿಗೆ ಇದ್ದ ಮನೆಯಲ್ಲಿ ವಿಚಾರ ಮಾಡಲಾಗಿ ದಿನಾಂಕ: 25-03-2021 ರಿಂದಲೂ ಮನೆಗೂ ಹೋಗದೆ, ಕಾಲೇಜಿಗೂ  ಹೋಗಿರುವುದಿಲ್ಲ ಎಂಬ ವಿಚಾರ ತಿಳಿದು ಎಲ್ಲಾ  ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಬೇಕೆಂದು ಶ್ರೀ ನವೀದ್ ರವರು ನೀಡಿದ ದೂರಿನ ಮೇರೆಗೆ ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ. ಕಾಣೆಯಾದ ಹುಡುಗಿಯ ಚಹರೆ :- ಕುಮಾರಿ ನಿಧಾ ಫಾತಿಮಾ  ಬಿನ್ ನವೀದ್, 19 ವರ್ಷ, 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಬಣ್ಣ ಹೊಂದಿದ್ದು, ಕನ್ನಡ, ಇಂಗ್ಲೀಷ್ ಮತ್ತು ಉರ್ದು ಬಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಳದಿ ಬಣ್ಣದ ಚೂಡಿಧಾರ್ ಮತ್ತು ಕಪ್ಪು ಬಣ್ಣದ ಬುರ್ಕಾ ಧರಿಸಿರುತ್ತಾರೆ. ಈಕೆಯ ಬಗ್ಗೆ ಸುಳಿವು ಸಿಕ್ಕಲ್ಲಿ 08176-233033 ಕ್ಕೆ ಸಂಪರ್ಕಿಸುವುದು.

 ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ,

     ದಿನಾಂಕ: 26-03-2021 ರಂದು ರಾತ್ರಿ ಆಲೂರು ತಾಲ್ಲೂಕ್, ಪಾಳ್ಯ ಹೋಬಳಿ, ಬೊಮ್ಮನಮನೆ ಗ್ರಾಮದಲ್ಲಿ ಶ್ರೀ ಬನಶಂಕರಿ ದೇವಿಯ ಜಾತ್ರೆ ಇದ್ದರಿಂಧ ಬಂದೋಬಸ್ತ್ ಕರ್ತವ್ಯಕ್ಕೆ ಆಲೂರು ಠಾಣೆಯ ಮಹಮ್ಮದ್ ಅಹಮ್ಮದ್ ಹೆಚ್ ಸಿ 134, ಶೇಖರ ಪಿಸಿ 364, ವಸಂತ್ ಕುಮಾರ್ ಪಿಸಿ 226, ವಿಜಯಕುಮಾರ ಪಿಸಿ 176, ರಾಕೇಶ ಪಿಸಿ 15 ರವರನ್ನು ನೇಮಕ ಮಾಡಿದ್ದು, ಸದರಿಯವರು ಸಮವಸ್ತ್ರದಲ್ಲಿ ದಿನಾಂಕ: 27-03-2021 ರಂದು ಬೆಳಗಿನ ಜಾವ 00-30 ಗಂಟೆಯಲ್ಲಿ ಕರ್ತವ್ಯದಲ್ಲಿದ್ದಾಗ ಪಟಾಕಿ ಹೊಡೆಯುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಉಂಟಾಗಿದ್ದು, ಕರ್ತವ್ಯದಲ್ಲಿದ್ದ ಸಿಬ್ಬಂದಿಯವರು ಜಗಳ ಬಿಡಿಸಲು ಹೋದಾಹ ಕೆರಗೂರು ಗ್ರಾಮದ ಸಂತೋಷ ಆತನ ತಮ್ಮ ಸಂಪತ್ ಹಾಗೂ ಬೊಮ್ಮನಮನೆ ಗ್ರಾಮದ ಪಾಲಾಕ್ಷ ಹಾಗೂ ಇತರರು ಸರ್ಕಾರಿ ಕೆಲಸವನ್ನು ಮಾಡದಂತೆ ಅಡ್ಡಿಪಡಿಸಿ ಪೊಲೀಸರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಪಿಸಿ 176 ವಿಜಯ್ ಕುಮಾರ್ ರವರ ಸಮವಸ್ರ್ತವನ್ನು ಹಿಡಿದು ಹರಿದುಹಾಕಿ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಅಲ್ಲೆ ಬಿದ್ದಿದ್ದ ಕಲ್ಲನ್ನು ತೆಗೆದುಕೊಂಡು ತಲೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಬಿಡಿಸಲು ಬಂದ ಇತರೆ ಸಿಬ್ಬಂದಿಯರನ್ನು ಸಹ ಹಿಡಿದು ಎಳೆದಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ತನ್ನ ಬಳಿ ಇದ್ದ ಸ್ಮಾರ್ಟ್  ಫೋನ್ ನ್ನು ಕಿತ್ತುಕೊಂಡಿರುವುದಾಗಿ ಶ್ರೀ ವಿಜಯ್ ಕುಮಾರ್, ಪಿಸಿ 176 ರವರು ಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ  ಹೇಳಿಕೆ ಮೇರೆಗೆ ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

 


 


No comments: