* * * * * * HASSAN DISTRICT POLICE

Tuesday, March 24, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿ : 21-03-2020


ಪತ್ರಿಕಾ ಪ್ರಕಟಣೆ                                  ದಿನಾಂಕ: 21-03-2020

ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನ ಬಂಧನ, ಬಂದಿತನಿಂದ  90 ಎಂಎಲ್ನ ಮದ್ಯ ವಶ:
ದಿನಾಂಕ: 20-03-2020 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಹೆತ್ತೂರು ಹೋಬಳಿ, ಹಡ್ಲಳ್ಳಿ ಗ್ರಾಮದ ಒಂದು ಅಂಗಡಿಯಲ್ಲಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂದು ಶ್ರೀ ಸುಬ್ಬಯ್ಯ, ಪಿಎಸ್ಐ, ಯಸಳೂರು ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಕುಮಾರ ಬಿನ್ ಲೇಟ್ ಕಾಳೇಗೌಡ, 45 ವರ್ಷ, ಹಡ್ಲಳ್ಳಿ ಗ್ರಾಮ, ಹೆತ್ತೂರು ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಸ್ಥಳದಲ್ಲಿ 90 ಎಂಎಲ್ ನ ಕೋಡೈಸ್ ಬ್ರಾಂಡಿಯ ಬಾಟಲಿಯನ್ನು ಅಮಾನತ್ತುಪಡಿಸಿಕೊಂಡು ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನ ಬಂಧನ
ದಿನಾಂಕ: 20-03-2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಶ್ರೀ ಆರೋಕಿಯಪ್ಪ, ಪಿಎಸ್ಐ, ಹಾಸನ ಗ್ರಾಮಾಂತರ ಪೊಲೀಸ್ ಠಾಣೆ. ಸಿಬ್ಬಂದಿಗಳೊಂದಿಗೆ ನಾಗತ್ವಹಳ್ಳಿ, ಸಮುದ್ರವಳ್ಳಿ, ಪಿರುಮೇನಹಳ್ಳಿ, ಸಿಂಗಪಟ್ಟಣ ಬಿದ್ರಿಕೆರೆ, ಮಾರಿಗುಡಿಕೊಪ್ಪಲು ಗ್ರಾಮಗಳ ಕಡೆ ರೌಂಡ್ಸ್ನಲ್ಲಿ ಹಾಸನ ತಾಲ್ಲೂಕು, ಹನುಮಂತಪುರ ವೃತ್ತದಲ್ಲಿರುವ ಶ್ರೀ ಆನೆಕೆರೆ ಅಮ್ಮ ಪೋರ್ಕ್ ಹೋಟೆಲ್ ನ ಪಕ್ಕದ ಸಾರ್ವಜನಿಕರು ಓಡಾಡುವ ಖಾಲಿ ಜಾಗದಲ್ಲಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಅನಿಲ್ ಕುಮಾರ್ ಬಿನ್ ಕೆಂಪೇಗೌಡ, 38 ವರ್ಷ, ದೊಡ್ಡಬೀಕನಹಳ್ಳಿ ಗ್ರಾಮ, ಕಿತ್ತಾನೆ ಪೋಸ್ಟ್, ಕಟ್ಟಾಯ ಹೋಬಳಿ, ಹಾಸನ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲಿರುತ್ತೆ.

ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನ ಬಂಧನ, ಸ್ಥಳದಲ್ಲಿಟ್ಟಿದ್ದ 738/- ಬೆಲೆಯ ಮದ್ಯ ವಶ:

ದಿನಾಂಕ: 20-03-2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಹಾನುಬಾಳು ಹೋಬಳಿ, ಕ್ಯಾಮನಹಳ್ಳಿ ಗ್ರಾಮದ ವಾಸಿ ಶ್ರೀ ಪ್ರಸಾದ್, ರವರ ಬಾಬ್ತು ಅಂಗಡಿಯ ಮುಂದೆ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂದು ಶ್ರೀ ಗೋಪಿ, ಡಿವೈಎಸ್ಪಿ, ಸಕಲೇಶಪುರ ಉಪ-ವಿಭಾಗ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಪ್ರಸಾದ್ ಬಿನ್ ಗಿರಿಯಪ್ಪ ಪೂಜಾರಿ, 30 ವರ್ಷ, ಕ್ಯಾಮನಹಳ್ಳಿ ಗ್ರಾಮ, ಹಾನುಬಾಳು ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಸ್ಥಳಲ್ಲಿಟ್ಟಿದ್ದ ಸುಮಾರು 738/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಮರಣಾಂತಿಕ ಹಲ್ಲೆ:
ದಿನಾಂಕ: 18-03-2020 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಕೇರಳ ಜಿಲ್ಲೆ,ಸುಲ್ತಾನ್ ಬಥೇರಿ ತಾಲ್ಲೂಕು, ವಾಗೇರಿ ಹೋಬಳಿ, ಮಾದೂರು ಕಾಲೋನಿ ವಾಸಿ ಶ್ರೀ ಸುಜಾತ, ರವರ ಪತಿ ಶ್ರೀ ಕೃಷ್ಣ, ರವರನ್ನು ಸಂಬಂಧಿಯಾದ ಶ್ರೀ ಗೋಪಿ, ರವರು ಅರಕಲಗೂಡು ತಾಲ್ಲೂಕು, ಮಲ್ಲಿಪಟ್ಟಣ ಗ್ರಾಮದ ವಾಸಿ ಶ್ರೀ ಕೃಷ್ಣಮೂತರ್ಿ, ರವರ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿಯವರನ್ನು ತೋಟಕ್ಕೆ ಕರೆಸಿಕೊಂಡಿದ್ದು, ಅದೇ ದಿನ ರಾತ್ರಿ ಪಿರ್ಯಾದಿ ಮತ್ತು ಪತಿ ಶ್ರೀ ಕೃಷ್ಣ, ರವರು ಕಾಫಿ ತೋಟದ ಶೆಡ್ಡ್ನಲ್ಲಿದ್ದಾಗ ಆರೋಪಿ ಶ್ರೀ ಗೋಪಿ, ರವರು ಶೆಡ್ಡ್ ಹತ್ತಿರ ಬಂದು ನೆನ್ನೆ ಮೊನನೆ ಕೆಲಸಕ್ಕೆ ಬಂದು ನನಗೆ ಬುದ್ದಿ ಹೇಳಲು ಬಂದಿದ್ದೀಯಾ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಮಚ್ಚಿನಿಂದ ಶ್ರೀ ಕೃಷ್ಣ, ರವರ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದು ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿರುತ್ತೇವೆಂದು ಹಾಗೂ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಾಯಾಳು ಪತ್ನಿ ಶ್ರೀಮತಿ ಸುಜಾತ, ರವರು ದಿನಾಂಕ: 20-03-2020 ರಂದು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಯಾರೋ ಅಪರಿಚಿತ ವ್ಯಕ್ತಿ ಬ್ಯಾಂಕ್ ಖಾತೆ ನಂಬರ್ ಪಡೆದು 25 ಸಾವಿರ ನಗದು ವಂಚನೆ:
ದಿನಾಂಕ: 02-01-2020 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಜಾವಗಲ್ ಗ್ರಾಮದ ವಾಸಿ ಶ್ರೀ ಹೆಚ್.ಬಿ. ನಾಗರಾಜ, ರವರು ಜಾವಗಲ್ ಎಸ್ಬಿಐ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದು, ಯಾರೋ ಒಬ್ಬ ವ್ಯಕ್ತಿ ದೂರವಾಣಿ ಕರೆ ಮಾಡಿ ಶೂ ಖರೀದಿ ಮಾಡಿರುವ ಹಣವನ್ನು ವಾಪಸ್ ನಿಮ್ಮ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿ ಜಾವಗಲ್ ಎಸ್ಬಿಐ ಬ್ಯಾಂಕ್ ಖಾತೆ ನಂಬರ್ ಪಡೆದು ಆನ್ ಲೈನ್ ಮೂಲಕ 25 ಸಾವಿರ ನಗದು ವಂಚಿಸಿರುತ್ತಾರೆಂದು ಹಾಗೂ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀ ಹೆಚ್.ಬಿ. ನಾಗರಾಜ, ರವರು ದಿನಾಂಕ: 20-03-2020 ರಂದು ಕೊಟ್ಟ ದೂರಿನ ಮೇರೆಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಗಂಡಸು ಕಾಣೆ

ದಿನಾಂಕ: 02-03-2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ನಾರಾಯಣಪುರ ಜನತಾ ಕಾಲೋನಿ ವಾಸಿ ಶ್ರೀ ರಂಗಸ್ವಾಮಿ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತೆಮಾಡಿಕೊಡಬೇಕೆಂದು ಶ್ರೀ ರಂಗಸ್ವಾಮಿ, ರವರ ಪತ್ನಿ ಶ್ರೀಮತಿ ಜ್ಯೋತಿ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ರಂಗಸ್ವಾಮಿ, 50 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಶಟರ್್ ಮತ್ತು ಬಿಳಿ ಪಂಚೆ ಧರಿಸಿರುತ್ತಾರೆ.

ಹೆಂಗಸು ಕಾಣೆ
ದಿನಾಂಕ: 07-03-2020 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ಸಾಣೇನಹಳ್ಳಿ ಗ್ರಾಮದ ವಾಸಿ ಶ್ರೀ ಉಮೇಶ್, ರವರ ಪತ್ನಿ ಶ್ರೀಮತಿ ರಶ್ಮಿ, ಮನೆಯಿಂದ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ರಶ್ಮಿಯ ಪತಿ ಶ್ರೀ ಉಮೇಶ್, ರವರು ದಿನಾಂಕ: 20-03-2020 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ರಶ್ಮಿ ಕೋಂ ಉಮೇಶ್, 23 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-268333 ಕ್ಕೆ ಸಂಪರ್ಕಿಸುವುದು.

1 comment:

Unknown said...

ನಮಸ್ಕಾರ ಸರ್
ಹಾಸನದ 80 ಫೀಟ್ ರಸ್ತೆಯಲ್ಲಿ ಹಾಗು ಟಿಪ್ಪುನಗರ ಮುಖ್ಯ ರಸ್ತೆಯಲ್ಲಿ ವೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ...ಈಗಾಗಲೇ ಎರೆಡು ತಿಂಗಳ ಹಿಂದೆ ವೀಲಿಂಗ್ ನಿಂದ ನಾಲ್ಕು ವರ್ಷದ ಮಗುವೊಂದು ಮೃತಪಟ್ಟಿದ್ದು..ಮುಂದಾಗುವ ಅನಾಹುತಗಳನ್ನು ತಡೆಗಟ್ಟುವರೆಂಬ ನಂಬಿಕೆಯೊಂದಿಗೆ
ತಮ್ಮ ವಿಧೆಯ
ಮೊಹಮ್ಮದ್ ಷಫಿ