* * * * * * HASSAN DISTRICT POLICE

Tuesday, March 24, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿ : 22-03-2020


ಪತ್ರಿಕಾ ಪ್ರಕಟಣೆ                              ದಿನಾಂಕ: 22-03-2020

ಕಾಲೇಜಿನ ಬೀಗ ಮುರಿದು 2,45,200/- ಬೆಲೆಯ ವಸ್ತುಗಳ ಕಳವು :-
ದಿನಾಂಕ: 20.03.2020 ರಂದು ರಾತ್ರಿ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರಿಸಾವೆ ಗ್ರಾಮದಲ್ಲಿ ಯಾರೋ ಕಳ್ಳರು ಸಕರ್ಾರಿ ಪದವಿ ಪೂರ್ವ ಕಾಲೇಜಿನ ಬೀಗ ಮುರಿದು  ಕಾಲೇಜಿಗೆ ಸೇರಿದ 16 ಬ್ಯಾಟರಿಗಳನ್ನು ಹಾಗೂ ಪ್ರೌಢಶಾಲಾ ವಿಭಾಗಕ್ಕೆ ಸೇರಿದ 16 ಬ್ಯಾಟರಿ ಮತ್ತು ಅದಕ್ಕೆ ಸಂಬಂಧಿಸಿದ ಇನ್ನೂಂದು ರೂಂಮಿನಲ್ಲಿದ್ದ ಡಿ.ವಿ.ಆರ್ ಸಿ.ಸಿ ಕ್ಯಾಮರ, ಮಾನಿಟರ್, ಹಾರ್ಡ ಡಿಸ್ಕ್ ಗಳನ್ನು  ಕಳುವು ಮಾಡಿಕೊಂಡು ಹೋಗಿದ್ದು, ಎರಡು ವಿಭಾಗಕ್ಕೆ ಸೇರಿದ ಒಟ್ಟು ವಸ್ತುಗಳ ಬೆಲೆ 2,45,200/- ರೂಗಳಾಗುತ್ತೆ ಪತ್ತೆಮಾಡಿಕೊಡಬೇಕೆಂದು ಕಾಲೇಜಿನ ಪ್ರಾಂಶುಪಾಲರಾದ ಸ್ಮಿತಾ ರವರು ಕೊಟ್ಟ ದೂರಿನ ಮೇರೆಗೆ ಹಿರಿಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಜಮೀನಿನ ವಿಚಾರವಾಗಿ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ :-
ದಿನಾಂಕ:-21-03-2020 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಲ್ಲೇನಹಳ್ಳಿ ಗ್ರಾಮದ ಫಯಾಜ್ ಪಾಷ ರವರು  ಅದೇ ಗ್ರಾಮದ ಅಲ್ತಾಫ್ ರವರ ಮನೆಯ ಹತ್ತಿರ ಬರುತ್ತಿದ್ದಾಗ ಅತಾವುಲ್ಲಾ ಮತ್ತು ಅತನ ಮಗ ಅಬ್ದುಲ್ ರೋಪ್ ಹಾಗೂ ಹಾಸನದಿಂದ ಬಂದ ಇತರರು ಅವರನ್ನು  ಅಡ್ಡಗಟ್ಟಿ  ಕೊಲೆ ಮಾಡುವ ಉದ್ದೇಶದಿಂದ ಬಂದು  ಮಚ್ಚನ್ನು ತೆಗೆದುಕೊಂಡು ಬೀಸಿದಾಗ  ಮಚ್ಚಿನ  ತುದಿ ತಗಲಿ ಫಯಾಜ್ ಪಾಷರವರ ಎಡ ಪಕ್ಕೆಗೆ ತರಚಿದ ಗಾಯವಾಗಿದ್ದು  ನಂತರ ಇತರರು ದೊಣ್ಣೆಯಿಂದ ಎದೆಗೆ ಮೈ ಕೈಯಿಗೆ ಹೊಡೆದು ನೋವುಂಟು ಮಾಡಿರುತ್ತಾರೆಂದು ಫಯಾಜ್ ಪಾಷರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹೊಂಡಾ ಆಕ್ಟೀವಾ ಸ್ಕೂಟರ್ ಕಳವು :-

ದಿನಾಂಕ 09-03-2020 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಹಾಸನದ ದೇವಮ್ಮ ಬಡಾವಣೆಯ ವಾಸಿ ತಿರುಮಲೇಗೌಡ ರವರು ಹಾಸನದ ಕುವೆಮಪುನಗರದ ಎಲ್ಐಸಿ ಕಛೇರಿಯ ಪಾಕರ್ಿಂಗ್ ಸ್ಥಳದಲ್ಲಿ ತಮ್ಮ ಕೆ.ಎ-13-ಇಹೆಚ್-3270 ರ ಹೊಂಡಾ ಆಕ್ಟೀವಾ ಸ್ಕೂಟರ್ನ್ನು ನಿಲ್ಲಿಸಿ ನಂತರ 05-00 ಗಂಟೆಗೆ ವಾಪಸ್ ಬಂದು ನೋಡಲಾಗಿ ಸ್ಕೂಟರ್ ಇರುವುದಿಲ್ಲ ಯಾರೋ ಕಳ್ಳರು ಸ್ಕೂಟರ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆಮಾಡಿಕೊಡ ಬೇಕೆಂದು ತಿರುಮಲೇಗೌಡರವರು ರವರು ಕೊಟ್ಟ ದೂರಿನ ಮೇರೆಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ :-
ದಿನಾಂಕ 20-03-2020 ರಂದು ಸಂಜೆ 05-45 ಗಂಟೆ ಸಮಯದಲ್ಲಿ  ಬೇಲೂರು ತಾಲ್ಲೂಕು ದೊಡ್ಡಬ್ಯಾಡಿಗೆರೆ ಗ್ರಾಮದ ಬಸವೇಗೌಡರವರು ಜಮೀನಿನ ಹತ್ತಿರ ಕೆಲಸ ಮುಗಿಸಿಕೊಂಡು ಮನೆಗೆ ಸಿದ್ದಪ್ಪನವರ ಮನೆಯ ಹತ್ತಿರ ನಡೆದುಕೊಂಡು ಬರುತ್ತಿರುವಾಗ ಇದೇ ಗ್ರಾಮದ ಉಮೇಶನು ಅಡ್ಡಹಾಕಿ ಏಕಾಏಕಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಹಿಡಿದು ಎಳೆದಾಡಿ ಕೈಗಳಿಂದ ಮೈ ಕೈಗೆ ಹೊಡೆದು ಕೊಲೆ ಬೆದರಿಕೆ ಹಾಕಿರುತ್ತಾನೆಂದು ಬಸವೇಗೌಡರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವರ ಬಂಧನ
ದಿನಾಂಕ: 21-03-2020 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಸುಳದಿಮ್ಮನಹಳ್ಳಿ ಗ್ರಾಮದ ವಾಸಿ ಶಿವಮ್ಮ ಕೋಂ ಗಿರೀಶ ರವರು ತಮ್ಮ ಮನೆಯ ಮುಂದೆ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂದು ಶ್ರೀ ಅರುಣ್ಕುಮಾರ್ ಪಿಎಸ್ಐ ಬಾಣಾವರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟ ಶಿವಮ್ಮ ರವರನ್ನು ದಸ್ತಗಿರಿ ಮಾಡಿಕೊಂಡು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪತ್ನಿಗೆ ಪತಿಯ ಕಿರುಕುಳ
ಅರಸೀಕೆರೆ ತಾಲ್ಲೂಕು, ಮಂಗಳಾಪುರ ಗ್ರಾಮದ ಅನಿತಾರವರು ಅದೇ ಗ್ರಾಮದ ಲೋಕೇಶ ರವರೊಂದಿಗೆ ಈಗ್ಗೆ ಸುಮಾರು 4 ವರ್ಷದ ಹಿಂದೆ ಮದುವೆಯಾಗಿದ್ದು, ಒಂದು ಗಂಡು ಸಹ ಇರುತ್ತೆ. ಅನಿತಾ ಮೇಲೆ ಲೋಕೇಶನು ಯಾವಾಗಲೂ ಅನುಮಾನ ಪಟ್ಟು ಪ್ರತಿ ದಿನ ಕುಡಿದುಕೊಂಡು ಬಂದು ಮಾನಸಿಕವಾಗಿ ಹಿಂಸೆ ಕಿರುಕುಳವನ್ನು ನೀಡುತ್ತಿದ್ದು. ಈ ವಿಚಾರವಾಗಿ ಪಿರ್ಯಾದಿ ಸಂಬಂಕರುಗಳು ಸೇರಿ ಪಂಚಾಯ್ತಿಯನ್ನು ಮಾಡಿದ್ದರು. ಆದರೂ ಸಹ ಲೋಕೇಶ ಬದಲಾವಣೆಯಾಗದೇ ಅನಿತಾರವರಿಗೆ ದಿನಾಂಕ:-20/03/2020 ರಂದು ರಾತ್ರಿ ಸುಮಾರು 8-30 ಗಂಟೆ ಸಮಯದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆಯನ್ನು ನೀಡಿದ್ದರಿಂದ ಅನಿತಾರವರು ಇದೇ ಬೇಸರದಿಂದ ಮಾತ್ರೆಯನ್ನು ನುಂಗಿದ್ದರಿಂದ ಹಾಸನದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಅನಿತಾ ರವರು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ  ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ :
ದಿನಾಂಕ: 19-03-2020 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ತಿಮ್ಲಾಪುರ ಗ್ರಾಮದ ವಾಸಿ ಶ್ರೀ ಅಣ್ಣೆಗೌಡರರವರ ಮಗಳು ಮೇಘ ಮನೆಯಿಂದ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಮೇಘಳ ತಂದೆ ಅಣ್ಣೇಗೌಡ ರವರು, ರವರು   ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಮೇಘ ಬಿನ್ ಅಣ್ಣೇಗೌಡ, 23 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ತಿಳಿನೀಲಿ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-268845 ಕ್ಕೆ ಸಂಪರ್ಕಿಸುವುದು.

ಆಸ್ತಿಯ ವಿಚಾರವಾಗಿ ಸಹೋದರಿಯ ಮೇಲೆ ಸಹೋದರರಿಂದ ಹಲ್ಲೆ
ದಿನಂಕ 21-03-2020 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ತಾವರೆಕೆರೆ ಗ್ರಾಮದ ನಿಂಗಮ್ಮ ರವರು ತನ್ನ ತವರು ಮನೆಗೆ ಹೋಗಿ ಸಹೋದರರಾದ ಬೋರಯ್ಯ ಮತ್ತು ಸೋಮಶೇಖರ ರವರಿಗೆ ನಮ್ಮ ತಾಯಿ ಇನ್ನೂ ಯಾರಿಗೂ ಪಾಲು ಕೊಟ್ಟಿಲ್ಲ ಯಾಕೆ ಮನೆಯನ್ನು ಕಟ್ಟುತ್ತಿದ್ದೀರಾ ಎಂದು ಕೆಳಿದ್ದಕ್ಕೆ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಸೋಮಶೇಖರನು ಎಡಮಟ್ಟೆಯಿಂದ ತಲೆಗೆ ಹೊಡೆದು ನೋವುಂಟು ಪಡಿಸಿ, ಗಿರೀಶನು ಸಿಮೆಂಟ್ ಇಟ್ಟಿಗೆಯನ್ನು ಎತ್ತಿಹಾಕುತ್ತೇನೆಂದು ಬೆದರಿಕೆ ಹಾಕಿರುತ್ತಾರೆಂದು ನಿಂಗಮ್ಮರವರು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: