* * * * * * HASSAN DISTRICT POLICE

Thursday, January 30, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 30-01-2020




                               ಪತ್ರಿಕಾ ಪ್ರಕಟಣೆ                         ದಿನಾಂಕ: 30-01-2020

2 ಲಕ್ಷ ಬೆಲೆಯ ಮಾರುತಿ ಕಾರು ಕಳವು:
     ದಿನಾಂಕ:28-01-2020 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಆಲೂರು ಪೊಲೀಸ್ ಠಾಣೆ ಸಿಬ್ಬಂದಿ ಶ್ರೀ ಪ್ರವೀಣ್, ರವರ ಬಾಬ್ತು ಕೆಎ-03, ಎಂ.ಎಲ-6516 ರ ಮಾರುತಿ ಕಾರನ್ನು ಆಲೂರು ಪೊಲೀಸ್ ವಸತಿ ಗೃಹದ ಬಳಿ ನಿಲ್ಲಿಸಿದ್ದು, ದಿನಾಂಕ: 29-01-2020 ರಂದು ಬೆಳಿಗ್ಗೆ 7-00 ಗಂಟೆಗೆ ಹೋಗಿ ನೋಡಲಾಗಿ ಕಾರ್ ಇರಲಿಲ್ಲ, ಯಾರೋ ಕಳ್ಳರು ಸುಮಾರು  2 ಲಕ್ಷ ಬೆಲೆಯ ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀ ಪ್ರವೀಣ್, ಪೊಲೀಸ್ ಕಾನ್ಸಸ್ಟೇಬಲ್, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.  
 
ಮನೆಯ ಬೀಗ ಮುರಿದು 198 ಗ್ರಾಂ ತೂಕದ 5,14,000/- ಬೆಲೆಯ ಚಿನ್ನಾಭರಣಗಳ ಕಳವು:
     ದಿನಾಂಕ: 28-01-2020 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ದಿಂಡಗೂರು ಸಂತೇನಹಳ್ಳಿ ಗ್ರಾಮದ ವಾಸಿ ಶ್ರೀ ಕೃಷ್ಣೇಗೌಡ, ರವರು ಮನೆಗೆ ಬೀಗ ಹಾಕಿಕೊಂಡು ಮಗಳ ಮನೆಗೆ ಬೆಂಗಳೂರಿಗೆ ಹೋಗಿದ್ದು, ದಿನಾಂಕ: 29-01-2020 ರಂದು ಬೆಳಿಗ್ಗೆ 10-00 ಗಂಟೆಗೆ ಪಿರ್ಯಾದಿ ಮಗಳು ಮನೆಯ ಹತ್ತಿರ ಹೋಗಿ ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ ಬೀರುವಿನಲ್ಲಿಟ್ಟಿದ್ದ ಒಟ್ಟು 198 ಗ್ರಾಂ ತೂಕದ 5,14,000/- ಬೆಲೆಯ 1) 50 ಗ್ರಾಂ ತೂಕದ 2 ಜೊತೆ ಚಿನ್ನದ ಬಳೆಗಳು 2) 50 ಗ್ರಾಂ ತೂಕದ 1 ಲಾಂಗ್ ನಕ್ಲೇಸ್ 3) 25 ಗ್ರಾಂ ತೂಕದ1 ನಕ್ಲೇಸ್ 4) 10 ಗ್ರಾಂ ತೂಕದ ಒಂದು ಕೈ ಬಳೆ 5) 8 ಗ್ರಾಂ ತೂಕದ 1 ಕೈ ಚೈನು 6) 8 ಗ್ರಾಂ ತೂಕದ 1 ಜೊತೆ ಜುಮುಕಿ 7) 12 ಗ್ರಾಂ ತೂಕದ 3 ಜೊತೆ ಓಲೆಗಳು 8) 6 ಗ್ರಾಂ ತೂಕದ ಒಂದು ಉಂಗುರ 9) 14 ಗ್ರಾಂ ತೂಕದ 2 ಜೊತೆ ಓಲೆಗಳು 10) 10 ಗ್ರಾಂ ತೂಕದ 3 ಜೊತೆ ಮಕ್ಕಳ ಓಲೆಗಳು 11) 5 ಗ್ರಾಂ ತೂಕದ 3 ಮಗುವಿನ ರಿಂಗ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಕೃಷ್ಣೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಕಳವು:
     ದಿನಾಂಕ: 20-01-2020 ರಂದು ರಾತ್ರಿ 7-30 ಗಂಟೆ ಸಮಯದಲ್ಲಿ ಹಾಸನದ 2ನೇ ಕ್ರಾಸ್ ಅರಳೇಪೇಟೆ ಗ್ರಾಮದ ವಾಸಿ ಶ್ರೀ ಕಿರಣ್ ಮೋರೆ, ರವರ ಬಾಬ್ತು ಕೆಎ-13, ಎಕ್ಸ್-2753 ರ ಸ್ಲೆಂಡರ್ ಬೈಕ್ ನ್ನು ಹಾಸನದ ಹಳೆ ಬಸ್ ನಿಲ್ದಾಣದ ರಸ್ತೆ, ಪಿಚ್ಚರ್ ಪ್ಯಾಲೆಸ್ ಎದುರು ಶಿವಾಜಿ ಪ್ರಾವಿಜನ್ ಸ್ಟೋರ್ ಹಿಂಭಾಗ ಬೈಕ್ ನ್ನು ನಿಲ್ಲಿಸಿ, ಅಂಗಡಿಗೆ ಹೋಗಿ ವಾಪಸ್ ಬಂದು ನೋಡಲಾಗಿ ಬೈಕ್ ಇರಲಿಲ್ಲ, ಯಾರೋ ಕಳ್ಳರು ಸುಮಾರು 15 ಸಾವಿರ ಬೆಲೆಯ ಬೈಕ್ನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಪತ್ತೆ ಮಾಡಿಕೊಡಬೇಕೆಂದು ಶ್ರೀ ಕಿರಣ್ ಮೋರೆ, ರವರು ದಿನಾಂಕ: 29-01-2020 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮನೆಯ ಬೀಗ ಮುರಿದು ಬೆಳ್ಳಿ-ಚಿನ್ನಾಭರಣಗಳ ಕಳವು:
     ದಿನಾಂಕ: 29-01-2020 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಹಾಸನದ ಮರಿಯಪ್ಪನಗಲ್ಲಿ ಪೋಸ್ ಆಫೀಸ್ ಹತ್ತಿರದ ವಾಸಿ ಶ್ರೀಮತಿ ಮಂಜುಳ, ರವರು ಮನೆಗೆ ಬೀಗ ಹಾಕಿಕೊಂಡು ಮಕ್ಕಳೊಂದಿಗೆ ಕವಳಿಕೆರೆ ಗ್ರಾಮಕ್ಕೆ ಹೋಗಿದ್ದು, ಅದೇ ದಿನ ಸಂಜೆ 6-30 ಗಂಟೆಗೆ ಮನೆಯ ಹತ್ತಿರ ಹೋಗಿ ನೋಡಲಾಗಿ ಯಾರೋ ಕಳ್ಳರು ಮನೆಯ ಹಿಂಭಾಗದ ಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ, ಬ್ಯಾಗಿನಲ್ಲಿಟ್ಟಿದ್ದ ಸುಮಾರು 20 ಸಾವಿರ ಬೆಲೆಯ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಹಾಗೂ ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಮಂಜುಳ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಪರಿಚಿತ ಮಹಿಳೆಯ ಶವಪತ್ತೆ
     ದಿನಾಂಕ: 29-01-2020 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಡವಿನಕೋಟೆ ಗ್ರಾಮದ ಮೊಗಣ್ಣಗೌಡರ ಜಮೀನಿನ ನೇರದ ಹೇಮಾವತಿ ನದಿಯ ನೀರಿನಲ್ಲಿ ಯಾವುದೋ ಅಪರಿಚಿತ ಹೆಂಗಸಿನ ಶವವು ಮಕಾಡೆಯಾಗಿ ತೇಲುತ್ತಿರುವುದಾಗಿ ಗ್ರಾಮದ ಗಸ್ತಿನ ಬೀಟ್ ಸಿಬ್ಬಂದಿ ಶ್ರೀ ಕುಮಾರ, ಸಿಪಿಸಿ-83, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಸುಮಾರು 30 ರಿಮದ 35 ವರ್ಷ ವಯಸ್ಸಿನ ಅಪರಿಚಿತ ಹೆಂಗಸಿನ ಮಹಿಳೆಯ ಶವವಾಗಿದ್ದು, ಸದರಿ ಶವದ ಮೈ ಮೇಲೆ ಹಸಿರು ಬಣ್ಣದ ಲೆಗಿನ್ಸ್ ಧರಿಸಿದ್ದು, ದುಂಡು ಮುಖ, ದೃಢಕಾಯ ಶರೀರ, ಎಡ ಕೈಯಲ್ಲಿ ರಂಗೋಲಿ ಅಚ್ಚೆ ಗುರುತಿರುತ್ತೆ. ಎದೆ ಮತ್ತು ಸೊಂಟದ ಭಾಗಕ್ಕೆ ತಂತಿ ಕಲ್ಲು ಕಂಭವನ್ನು ಹಗ್ಗ ಕಟ್ಟಿ ಶವ ಮೇಲೇಳದಂತೆ ಯಾರೋ ದುರಾತ್ಮರು ಯಾವುದೋ ಕೊಲೆ ಮಾಡಿರುವುದನ್ನು ಮರೆಮಾಚುವ ಉದ್ದೇಶದಿಂದ ನೀರಿನೊಳಗೆ ತಂದು ಬಿಸಾಕಿದ್ದು, ಈ ಸಂಬಂಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಂಗಸು ಕಾಣೆ
     ದಿನಾಂಕ: 28-01-2020 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೊಬಳಿ, ಗುಂಡ್ಕಾನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಕಾವ್ಯ, ಮತ್ತು 7 ವರ್ಷದ ಮಗ ಬೇಬಿ ದೀಕ್ಷಿತ್ ನೊಂದಿಗೆ ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಕಾವ್ಯ, ರವರ ಪತಿ ಶ್ರೀ ಮಧು ಜಿ.ಎಸ್. ರವರು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸು ಮತ್ತು ಮಗುವಿನ ಚಹರೆ: ಶ್ರೀಮತಿ ಕಾವ್ಯ ಕೋಂ ಮದು ಜಿ.ಎಸ್, 29 ವರ್ಷ, 5 ಅಡಿ ಎತ್ತರ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಬೇಬಿ ದೀಕ್ಷಿತ್ ಬಿನ್ ಮಧು ಜಿ.ಎಸ್, 7 ವರ್ಷ, ಇವರ ಸುಳಿವು ಸಿಕ್ಕಲ್ಲಿ 08174-220630 ಕ್ಕೆ ಸಂರ್ಪಕಿಸುವುದು.

1 comment:

Tejas kumar said...

Good initiative by Hassan police to disseminate information and create public awareness. Thank you .