* * * * * * HASSAN DISTRICT POLICE

Friday, January 31, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 31-01-2020




                             ಪತ್ರಿಕಾ ಪ್ರಕಟಣೆ                            ದಿನಾಂಕ: 31-01-2020

ಮನೆಯ ಬೀಗ ಮುರಿದು ನಗದು ಮತ್ತು ಚಿನ್ನಾಭರಣ ಕಳವು:
     ದಿನಾಂಕ: 21-01-2020  ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಸಕಲೇಶಪುರ ಪಟ್ಟಣದ ಲಕ್ಷ್ಮೀಪುರ ಬಡಾವಣೆಯ ಫಾರೆಸ್ಟ್ ಆಫೀಸ್ ಎದುರು ವಾಸಿ ಶ್ರೀ ಬಿ.ಬಿ. ಸುಮಂತ್, ಮನೆಗೆ ಬೀಗ ಹಾಕಿಕೊಂಡು ತಮಿಳುನಾಡು ಗೋಬಿಚಟ್ಟಿ ಪಾಳ್ಯಂ ಬೆಂಗಳೂರು ಹಾಗೂ ಮೈಸೂರು ಕಡೆಗೆ ಹೋಗಿದ್ದು, ಮನೆಯನ್ನು ನೋಡಿಕೊಳ್ಳಲು ಪರಿಚಯವಿದ್ದ ಶ್ರೀ ಬಸವಣ್ಣ ಹಾಗೂ ಅವರ ತಾಯಿ ಶ್ರೀಮತಿ ಸರೋಜಮ್ಮ, ರವರುಗಳಿಗೆ ತಿಳಿಸಿ ಹೋಗಿದ್ದು, ಶ್ರೀ ಬಸವಣ್ಣ, ಪಿರ್ಯಾದಿಗೆ ಫೋನ್ ಮಾಡಿ 29-01-2020 ರಂದು ನಾವುಗಳು ಮನೆಯಲ್ಲಿ ಮಲಗಿರಲಿಲ್ಲವೆಂದು ತಿಳಿಸಿದ್ದು, ದಿನಾಂಕ: 30-01-2020 ರಂದು ಮನೆಯ ಬಾಗಿಲು ತೆರೆದಿರುವುದಾಗಿ ತಿಳಿಸಿದ್ದು, ಅಂದೆ ವಾಪಸ್ ಮನೆ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲ ಬೀಗವನ್ನು ಮುರಿದು ಒಳ ಪ್ರವೇಶಿಸಿ, ಬೀರುವಿನಲ್ಲಿಟ್ಟಿದ್ದ 50 ಸಾವಿರ ನಗದು, 1) 35 ಗ್ರಾಂ ತೂಕದ ಚಿನ್ನದ ಕರಿಮಣಿ ಸರ 2) ಒಂದು ಚಿನ್ನದ ಲಕ್ಷ್ಮೀಪೆಂಡೆಂಟ್ 3) ಒಂದು ಜೊತೆ ಚಿನ್ನದ ಬಳೆಗಳು 4) ಒಂದು ಜೊತೆ ಕರಿಮಣಿ ಮಿಶ್ರಿತ ಚಿನ್ನದ ಬಳೆ 5) ಒಂದು ಜೊತೆ ಚಿನ್ನದ ಹವಳದ ಬಳೆ 6) ಎರಡು ಚಿನ್ನದ ಸರಗಳು 7) ಒಂದು ಜೊತೆ ಚಿನ್ನದ ಜುಮುಕಿಗಳು 8) ನಾಲ್ಕು ಚಿನ್ನದ ಉಂಗುರಗಳು 9) ಒಂದು ಕರಿಮಣಿ ಮಾಂಗಲ್ಯಸರ 10) ಹರಳು ಮಿಶ್ರಿತ ಎರಡು ಚಿನ್ನದ ಉಂಗುರಗಳು 11) ಮೂರು ಎಳೆ ಬಳ್ಳಿಯ ಕೊರಳ ಬೆಳ್ಳಿಯ ಚೈನುಗಳು 12) 3 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಬಿ.ಬಿ. ಸುಮಂತ್, ರವರು ದಿನಾಂಕ: 30-01-2020 ರಂದು ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕಾರು-ಕಾರಿಗೆ ಡಿಕ್ಕಿ ಕಾರು ಚಾಲಕ ಸಾವು:
     ದಿನಾಂಕ: 30-01-2020 ರಂದು ಸಂಜೆ 4-50 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಬೈರಗೊಂಡನಹಳ್ಳಿ ಗ್ರಾಮದ ವಾಸಿ ಶ್ರೀ ಬಿ.ಎನ್. ರವಿ, ರವರ ಬಾಬ್ತು ಕೆಎ-13, ಪಿ-5633 ರ ಕಾರಿನಲ್ಲಿ ಹಾಸನ ನ್ಯಾಯಾಲಯದ ಕಲಾಪಗಳನ್ನು ಮುಗಿಸಿಕೊಂಡು ಕೆಲಸ ನಿಮಿತ್ತ ಕಿರಿಯ ವಕೀಲರಾದ ರಾಧ, ರವರೊಂದಿಗೆ ಚನ್ನರಾಯಪಟ್ಟಣಕ್ಕೆ ಹೋಗಲು ಬುರುಡಾಳು ಬಾರೆ ಹತ್ತಿರ ಕಾರನ್ನು ನಿಲ್ಲಿಸಿ, ಧರಿಸಿದ್ದ ಕೋಟ್ನ್ನು ಬಿಚ್ಚಿ ಕಾರಿನ ಹಿಂಭಾಗ ಡೋರನ್ನು ತೆಗೆಯುತ್ತಿದ್ದಾಗ ಹಿಂದಿನಿಂದ ಬಂದ ಕೆಎ-51, ಎನ್-8445 ರ ಕಾರಿನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಶ್ರೀ ರವಿ ಬಿನ್ ನಂಜೇಶ್ಪ್ಪ, 58ವರ್ಷ,  ಬೈರಗೊಂಡನಹಳ್ಳಿ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ವಿವೇಕ್, ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. 

ಪತಿ ಪತ್ನಿಯ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ
     ದಿನಾಂಕ: 30-01-2020 ರಂದು ಬೆಳಗಿನ ಜಾವ 1-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಬಳ್ಳೂರು ಪಾಳ್ಯ ಗ್ರಾಮದ ವಾಸಿ ಶ್ರೀಮತಿ ರಾಧ, ರವರ ಪತಿ ಶ್ರೀ ಕುಮಾರ, ರವರು ಪಿರ್ಯಾದಿಯ ಅಣ್ಣ-ಅತ್ತಿಗೆ ಮನೆಗೆ ಬಂದಿದ್ದು, ಏಕಾ-ಏಕಿ ಜಗಳ ತೆಗೆದು ಅವಾಚ್ಯಶಬ್ಧಗಳಿಂದ ನಿಂದಿಸಿದ್ದು, ಬೇರೆ ಹೆಣ್ಣಿನ ಜೊತೆ ಅನೈತಿಕ ಸಂಬಂಧವಿಟ್ಟುಕೊಂಡಿದ್ದು, ಈ ವಿಷಯ ಪಿರ್ಯಾದಿ ಅಣ್ಣ ಕೇಳಲು ಹೋದಾಗ ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿ ಮನೆಯಲ್ಲಿದ್ದ ಸಾಮಾನುಗಳನ್ನು ಹೊಡೆದು ಹಾಕಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಹಾಗೂ ಪತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀಮತಿ ರಾಧ, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


ಕೆಎಸ್ಆರ್ ಟಿಸಿ ಬಸ್ ಡಿಕ್ಕಿ, ಮಹೀಂದ್ರಾ ಸುಪ್ರೋ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸಾವು ಹಲವಾರು ಜನರಿಗೆ  ರಕ್ತಗಾಯ:
     ದಿನಾಂಕ: 30-01-2020 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ತಿಪಟೂರು ತಾಲ್ಲೂಕು, ಹೊನ್ನವಳ್ಳಿ ಹೋಬಳಿ, ಚಿಕ್ಕಬಿದ್ರೆ ಗ್ರಾಮದ ವಾಸಿ ಶ್ರೀ ರಮೇಶ್, ರವರ ಬಾಬ್ತು ಕೆಎ-44, 7819 ರ ಮಹೀಂದ್ರಾ ಸುಪ್ರೋ ವಾಹನದಲ್ಲಿ ಪ್ರಯಾಣಿಕರಾದ ಶ್ರೀ ಬಸವರಾಜು, ಶ್ರೀ ಯಲ್ಲಯ್ಯ, ಶ್ರೀಚಿಕ್ಕಣ್ಣ, ಶ್ರೀ ಶಂಕರ, ಶ್ರೀಮತಿ ಪುಪ್ಪಾವತಿ ಶ್ರೀಮತಿ ಭಾರತಿ, ಶ್ರೀ ಸದಾಶಿವ, ಶ್ರೀಮತಿ ರೇಖಾ, ಶ್ರೀ ರವಿಕುಮಾರ್, ಶ್ರೀ ಶಿವಕುಮಾರ್, ರವರುಗಳನ್ನು ಕೂರಿಸಿಕೊಂಡು ತಿಪಟೂರಿಗೆ ಬಾಡಿಗಿಗೆ ಹೋಗಲು ಅರಸೀಕೆರೆ-ತಿಪಟೂರು ಎನ್ ಹೆಚ್-206 ರಸ್ತೆ, ಸೂಳೆಕೆರೆ ಗೇಟ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-27, ಎಫ್-733 ರ ಕೆಎಸ್ಆರ್ ಟಿಸಿ ಬಸ್ಸಿನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಕೆಎ-13, ಬಿ-2535 ರ ಅಶೋಕ ಲೈಲ್ಯಾಂಡ್ ಮಿನಿ ಗೂಡ್ಸ್ ವಾಹನಕ್ಕೆ ಡಿಕ್ಕಿ ಮಾಡಿ, ನಂತರ ಮಹೀಂದ್ರಾ ಸುಪ್ರೋ ವಾಹನಕ್ಕೆ ಡಿಕ್ಕಿ ಮಾಡಿದ ಪರಿಣಾಮ ವಾಹನದಲ್ಲಿದ್ದ ಶ್ರೀ ಬಸವರಾಜು ಬಿನ್ ಕೆಂಚಯ್ಯ, ಒಟ್ಟಿಕಲ್ಲಹಟ್ಟಿ ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು ರವರು ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಮತ್ತು  ಶ್ರೀ ಯಲ್ಲಯ್ಯ ಬಿನ್ ಸಿದ್ದಯ್ಯ, 70 ವರ್ಷ, ಕಬ್ಬಿನಕೆರೆ ಗ್ರಾಮ, ಹೊನ್ನವಳ್ಳಿ, ತಿಪಟೂರು ತಾಲ್ಲೂಕು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಇನ್ನೂ ಹಲವಾರು ಜನರು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಗಾಯಾಳು ಶ್ರೀ ಚಿಕ್ಕಣ್ಣ, ರವರು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.



No comments: