* * * * * * HASSAN DISTRICT POLICE

Wednesday, January 29, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 29-01-2020




       ಪತ್ರಿಕಾ ಪ್ರಕಟಣೆ                      ದಿನಾಂಕ: 29-01-2020

ಯಾರೋ ಕಳ್ಳರು ದೇವಸ್ಥಾನದ ಹುಂಡಿ ಮುರಿದು 4 ಲಕ್ಷ ನಗದು ಕಳವು:
     ದಿನಾಂಕ: 27-01-2020 ರಂದು ಸಂಜೆ 5-30 ಗಂಟೆಗೆ ಹಾಸನ ತಾಲ್ಲೂಕು, ದುದ್ದ ಹೋಬಳಿ, ದುದ್ದ ಆರ್.ಎಸ್ ಗ್ರಾಮದಲ್ಲಿರುವ ಶ್ರೀ ಕರೆಬೀರೇಶ್ವರ ದೇವಸ್ಥಾನ ಮತ್ತು ಬಿಸಲೇಹಳ್ಳಿ ಅಮ್ಮನವರ ದೇವಸ್ಥಾನ ಆರ್ಚಕರಾದ ಶ್ರೀ ಡಿ. ನಾಗರಾಜ, ರವರು ಎಂದಿನಂತೆ ದೇವಸ್ಥಾನ ಪೂಜೆ ಮುಗಿಸಿಕೊಂಡು ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗಿದ್ದು, ದಿನಾಂಕ: 28-01-2020 ರಂದು ಬೆಳಿಗ್ಗೆ 6-30 ಗಂಟೆಗೆ ದೇವಸ್ಥಾನಕ್ಕೆ ಪೂಜೆಗೆ ಹೋದಾಗ ಯಾರೋ ಕಳ್ಳರು ದೇವಸ್ಥಾನದ ಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ, ದೇವಸ್ಥಾನದಲ್ಲಿಟ್ಟಿದ್ದ ಕಾಣಿಕೆ ಹುಂಡಿಯನ್ನು ಹೊಡೆದು ಸುಮಾರು 4,00,000/- ನಗದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಡಿ. ನಾಗರಾಜ, ರವರು ಕೊಟ್ಟ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ 10 ಗ್ರಾಂ ತೂಕದ ಚಿನ್ನದ ಉಂಗುರ ಕಳವು:      
      ದಿನಾಂಕ: 23-01-2020 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಹಾಸನದ ವಿದ್ಯಾನಗರ ಬಡಾವಣೆ ವಾಸಿ ಶ್ರೀ ತೀರ್ಥಪ್ರಸಾದ್, ರವರ ತಂದೆ ಶ್ರೀ ಶಿವಪ್ಪ, ರವರಿಗೆ ಸ್ಟ್ರೋಕ್ ಆಗಿದ್ದು, ಚಿಕಿತ್ಸೆ ಹಾಸನದ ಸ್ವರ್ಶ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಲ್ಲಿಯೇ ಇದ್ದು, ದಿನಾಂಕ: 25-01-2020 ರಂದು ಸಂಜೆ 5-30 ಗಂಟೆಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಹೊರಡುವ ವೇಳೆಯಲ್ಲಿ ಶ್ರೀ ಶಿವಪ್ಪ, ರವರು ಕೈಯಲ್ಲಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಉಂಗುರ ಇರಲಿಲ್ಲ, ಆಸ್ಪತ್ರೆಯ ಐಸಿಯು ವಾರ್ಡ್ ಸಿಬ್ಬಂದಿ ಮತ್ತು ರಿಸೆಪ್ಷನ್ ರವರನ್ನು ಕೇಳಲಾಗಿ ನಮಗೆ ಗೊತ್ತಿಲ್ಲವೆಂದು ತಿಳಿಸಿದ್ದು, ಪತ್ತೆಮಾಡಿಕೊಡಬೇಕೆಂದು ಶ್ರೀ ತೀರ್ಥಪ್ರಸಾದ್, ರವರು ದಿನಾಂಕ; 28-01-2020 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕಾರು ಬೈಕ್ ಗೆ ಡಿಕ್ಕಿ ಬೈಕ್ ಸವಾರ ಸಾವು:
      ದಿನಾಂಕ: 28-01-2020 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೊಬಳಿ, ಸಂಕೇನಹಳ್ಳಿ ಗ್ರಾಮದ ವಾಸಿ ಶ್ರೀ ಕಾಂತರಾಜು, ರವರ ಬಾಬ್ತು ಕೆಎ-13, ಇಡಿ-4026 ರ ಬೈಕ್ನಲ್ಲಿ ಬಿಟ್ಟಗೌಡನಹಳ್ಳಿಗೆ ಹೋಗಲು ಹಾಸನ ತಾಲ್ಲೂಕು, ಕಸಬಾ ಹೋಬಳಿ, ಗವೇನಹಳ್ಳಿ ಬೈಪಾಸ್ ಗೆಂಡೇಕಟ್ಟೆ ಫಾರೆಸ್ಟ್ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-51, ಎಂ.ಡಿ. 7357 ರ ಕಾರಿನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿಯಾದ ಪರಿಣಾಮ ಶ್ರೀ ಕಾಂತರಾಜು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಿ, ಶ್ರೀ ಕಾಂತರಾಜು ಬಿನ್ ಲೇಟ್ ರಂಗೇಗೌಡ, 28 ವರ್ಷ, ಸಂಕೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕು, ರವರು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಮೃತ ಅಣ್ಣ ಶ್ರೀ ಆಶೋಕ, ರವರು ದಿನಾಂಕ: 28-01-2020 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನ ವಿರುದ್ಧ ಪ್ರಕರಣ ದಾಖಲು ಟ್ರ್ಯಾಕ್ಟರ್ ಮತ್ತು ಟ್ರೇಲರ್ ಸಮೇತ ಮರಳು ವಶ:
     ದಿನಾಂಕ: 28-01-2020 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಸಿ.ಹೊಸಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆಂದು ಶ್ರೀ ಅಜಯ್ಕುಮಾರ್, ಪಿಎಸ್ಐ ಬೇಲೂರು ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ನೊಂದಣಿ ಇಲ್ಲದ ಟ್ರ್ಯಾಕ್ಟರ್ ಮತ್ತು ಟ್ರೇಲರ್ ನಲ್ಲಿ ಮರಳು ತುಂಬಿಕೊಂಡು ಹೋಗುತ್ತಿದ್ದು, ಸಮವಸ್ತ್ರದಲ್ಲಿದ್ದರವನ್ನು ನೋಡಿ ಓಡಿಹೋಗಿದ್ದು, ಆತನ ಹೆಸರು ವಿಳಾಸ ಕೇಳಲಾಗಿ  ಪ್ರತಾಪ್, ಸಿ ಹೊಸಹಳ್ಳಿ ಗ್ರಾಮ, ಕಸಬಾ ಹೋಬಳಿ, ಬೇಲೂರು ತಾಲ್ಲೂಕು ಎಂದು ತಿಳಿಸಿದ್ದು, ಹಣ ಸಂಪಾದನೆಗಾಗಿ ಮರಳು ತುಂಬಿಸಿ ಸಾಗಿಸುತ್ತಿದ್ದ ಮರಳು ಸಮೇತ ಟ್ರ್ಯಾಕ್ಟರ್ ನ್ನು ಮರಳನ್ನು ಅಮಾನತ್ತುಪಡಿಸಿಕೊಂಡು ಆರೋಪಿ ವಿರುದ್ಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಟ್ರ್ಯಾಕ್ಟರ್ ಬೈಕ್ ಗೆ   ಡಿಕ್ಕಿ, ಒಂದು ಸಾವು, ಒಬ್ಬರಿಗೆ ಗಾಯ:
     ದಿನಾಂಕ: 28-01-2020 ರಂದು ಸಂಜೆ 6-45 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಬೀಡು ಹೋಬಳಿ, ಅರೇಕಲ್ಲು ಹೊಸಳ್ಳಿ ಗ್ರಾಮದ ವಾಸಿ ಶ್ರೀ ವಸಂತ, ರವರ ಬಾಬ್ತು ಕೆಎ-02, ಹೆಚ್ ವಿ-6519 ರ ಬೈಕ್ ನಲ್ಲಿ ಭಾವ ಮೈದುನ ಶ್ರೀ ಪಣಿರಾಜ, ರವರೊಂದಿಗೆ ಚನ್ನರಾಯಪಟ್ಟಣಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಕಲ್ಲೇನಹಳ್ಳಿ ಗೇಟ್, ಚನ್ನರಾಯಪಟ್ಟಣ-ಹೊಳೆನರಸೀಪುರ ರಸ್ತೆ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಕೆಎ-13, ಟಿಬಿ-9257 ರ ಟ್ರ್ಯಾಕ್ಟರ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ವಸಂತ್ ಮತ್ತು ಶ್ರೀ ಫಣಿರಾಜ್, ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನದ ಸ್ವರ್ಶ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ವಸಂತ ಬಿನ್ ಜಗದೀಶ್, 21 ವರ್ಷ, ಅರೇಕಲ್ಲು ಹೊಸಳ್ಳಿ ಗ್ರಾಮ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ತಾಲ್ಲೂಕು. ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಹಾಗೂ ಶ್ರೀ ಫಣಿರಾಜ್, ರವರು ಚಿಕಿತ್ಸೆ ಪಡೆಯುತ್ತಿದ್ದಾರೆಂದು ಮತ್ತು ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೃತರ ತಂದೆ ಶ್ರೀ ಸುರೇಶ್,ರವರು ಕೊಟ್ಟ ದೂರಿನ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮನುಷ್ಯ ಕಾಣೆ
     ದಿನಾಂಕ:20-01-2020 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಣಕಟ್ಟೆ ಹೋಬಳಿ, ಕೋಳಗುಂದ ಗ್ರಾಮದ ವಾಸಿ ಶ್ರೀ ಕೃಷ್ಣಮೂರ್ತಿ, ರವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಮಾಡಿಕೊಡಬೇಕೆಂದು ಶ್ರೀ ಕೃಷ್ಣಮೂರ್ತಿ, ರವರ ಮಗ ಶ್ರೀ ನವೀನ್, ರವರು ದಿನಾಂಕ: 28-01-2020 ರಂದು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಶ್ರೀ ಕೃಷ್ಣಮೂರ್ತಿ, 57 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಣ್ಣದ ಚೆಕ್ಸ್ ಶರ್ಟ್ ಮತ್ತು ಹಸಿರು ಸ್ವೆಟರ್ ಮತ್ತು ನೀಲಿ ಪಂಚೆ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08174-235633 ಕ್ಕೆ ಸಂಪರ್ಕಿಸುವುದು.

ಹೆಂಗಸು ಕಾಣೆ
     ದಿನಾಂಕ: 23-01-2020 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಮೈಸೂರು ಜಿಲ್ಲೆ, ಕೆ.ಆರ್. ತಾಲ್ಲೂಕು, ಹೊಸಅಗ್ರಹಾರ ಹೋಬಳಿ, ಗುಲುವಿನ ಅತ್ತಿಗುಪ್ಪೆ ಗ್ರಾಮದ ವಾಸಿ ಶ್ರೀ ಜಿ.ಆರ್. ಮಹೇಶ್, ರವರ ಪತ್ನಿ ಶ್ರೀಮತಿ ಛಾಯ, ರವರು ತವರು ಮನೆಯಾದ ಹೊಳೆನರಸೀಪುರ ಇಂಡಸ್ಟ್ರೀಯಲ್ ಏರಿಯಾದ ಚಿಟ್ಟನಹಳ್ಳಿ ಗ್ರಾಮಕ್ಕೆ ಹೋಗುತ್ತೇನೆಂದು ಹೇಳಿದಕ್ಕೆ ಪಿರ್ಯಾದಿಯವರು ಪತ್ನಿ ಶ್ರೀಮತಿ ಛಾಯ, ರವರನ್ನು ಹೊಳೆನರಸಿಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ದೊಡ್ಡಹಳ್ಳಿ ಬಾರೆಂಸತೆ ಬಸ್ ನಿಲ್ದಾಣಕ್ಕೆ ಬಿಟ್ಟು ಹೋಗಿದ್ದು, ರಾತ್ರಿ 11-00 ಗಂಟೆಗೆ ಫೋನ್ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿದ್ದು, ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಛಾಯ, ರವರ ಪತಿ ಶ್ರೀ ಜಿ.ಆರ್. ಮಹೇಶ್, ರವರು ದಿನಾಂಕ; 28-01-2020 ರಂದು ಕೊಟ್ಟ ದೂರಿನ ಮೇರೆಗೆ ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಛಾಯ ಕೋಂ ಜಿ.ಆರ್. ಮಹೇಶ್, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08176-254933 ಕ್ಕೆ ಸಂಪರ್ಕಿಸುವುದು.

No comments: