* * * * * * HASSAN DISTRICT POLICE

Tuesday, January 21, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿ: 19-01-2020

ಪತ್ರಿಕಾ ಪ್ರಕಟಣೆ                                  ದಿನಾಂಕ: 19-01-2020
                                         
ಬೈಕ್ಗೆ ಹಿಂಬದಿಯಿಂದ ಕಾರು ಢಿಕ್ಕಿ ಬೈಕ್ ಸವಾರನ ಸಾವು  :

ದಿನಾಂಕ : 17/01/2020 ರಂದು ಅರಕಲಗೂಡು ತಾಲ್ಲೂಕು ದೊಡ್ಡಗಾವನಹಳ್ಳಿ ಗ್ರಾಮದ ಆದರ್ಶ ಬಿನ್ ಪುಟ್ಟೇಗೌಡ ರವರು ಮೋಕಲಿ ಗ್ರಾಮದ ರಘು ರವರೊಂದಿಗೆ  ಮೋಕಲಿ ಗ್ರಾಮಕ್ಕೆ ಹೋಗಲು ತನ್ನ  ಕೆಎ-13-ಎಸ್-1128 ರ ಬೈಕಿನ ಹಿಂಬದಿಯಲ್ಲಿ ರಘು ರವರನ್ನು   ಕೂರಿಸಿಕೊಂಡು ರಾತ್ರಿ ಸುಮಾರು 11.30 ಗಂಟೆ ಸಮಯದಲ್ಲಿ ಅರಕಲಗೂಡು-ರಾಮನಾಥಪುರ ಮುಖ್ಯ ರಸ್ತೆಯ ಮುತ್ತಿಗೆ ಗೇಟ್ ಹತ್ತಿರ ರಸ್ತೆಯ ಎಡಬಾಗದಲ್ಲಿ ಹೋಗುತ್ತಿರುವಾಗ ಹಿಂಬದಿಯಿಂದ ಬರುತ್ತಿದ್ದ ಕೆ ಎ-13 ಬಿ-7543 ರ ಕಾರಿನ ಚಾಲಕ ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಸದರಿ ಬೈಕಿಗೆ ಡಿಕ್ಕಿ ಮಾಡಿದ್ದರಿಂದ ಬೈಕಿನಲ್ಲಿ ಕುಳಿತಿದ್ದ ಆದರ್ಶ ಮತ್ತು ರಘು ರವರು ಕೆಳಕ್ಕೆ ಬಿದ್ದ ಪರಿಣಾಮ ಆದರ್ಶ ರವರಿಗೆ ತಲೆ, ಕೈಕಾಲು ಗಳಿಗೆ ರಕ್ತಗಾಯವಾಗಿ ಸ್ಥಳದಲ್ಲೆ ಮೃತರಾಗಿದ್ದು, ಗಾಯಗೊಂಡಿದ್ದ ರಘುರವರನ್ನು ಅರಕಲಗೂಡು ಸರ್ಕಾರಿ ಸೇರಿಸಿದ್ದು ಹೆಚ್ಚಿನ ಚಿಕಿತ್ಸೆಗೆ ವೈದ್ಯರ ಸಲಹೆಯ ಮೇರೆಗೆ ಹಾಸನದ ಸ್ವರ್ಶ ಆಸ್ವತ್ರೆಗೆ ದಾಖಲಿಸಲಾಗಿರುತ್ತದೆ ಎಂದು ಮೃತ ಆದರ್ಶ ರವರ ಸಹೋದರ ಅಭಿಲಾಶ್ ರವರು ನೀಡಿದ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಬೈಕ್ ಸ್ಕಿಡ್ ಆಗಿ ಬಿದ್ದು ಹಿಂಬದಿ ಸವಾರನ ಸಾವು

ದಿನಾಂಕ : 17/01/2020 ರಂದು ಸಂಜೆ 04-00 ಗಂಟೆ ಸಮಯದಲ್ಲಿ ಹಾಸನ ತಾಲ್ಲುಕು, ಸಿದ್ದಾಪುರ ಗ್ರಾಮದ ಯುವರಾಜ ಬಿನ್ ಶಿವೇಗೌಡ ರವರು ಹುಲ್ಲೇನಹಳ್ಳಿ ಗ್ರಾಮದ ರಾಮಚಂದ್ರ ರವರ ಕೆಎ-13,ಇಕ್ಯು-8072 ಬೈಕಿನಲ್ಲಿ ಕುಳಿತುಕೊಂಡು ಬಸವಾಘಟ್ಟದ ಬಾರೆ ರಸ್ತೆಯಲ್ಲಿ ಬರುತ್ತಿದ್ದಾಗ ರಾಮಚಂದ್ರವರು ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾಗ ಹಿಂಬಾಗದಲ್ಲಿ ಕುಳಿತ್ತಿದ್ದ ಯುವರಾಜ ಕಳಕ್ಕೆ ಬಿದ್ದು ರಕ್ತಗಾಯಗಳಾಗಿದ್ದು ಮೃತಪಟ್ಟಿರುತ್ತಾರೆಂದು ಎಂದು ಮಂಜುನಾಥ ರವರು ನೀಡಿದ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಅಕ್ರಮ ಜೂಜಾಟ 11,160-00 ರೂ ಹಣ ವಶ ಹಾಗೂ 09 ಜನರ ಬಂಧನ :
ದಿನಾಂಕ.18.01.2020 ರಂಧು ರಾತ್ರಿ 10.00 ಗಂಟೆಯ ಸಮಯದಲ್ಲಿ  ಸಕಲೇಶಪುರ ನಗರ ಠಾಣೆಯ ಪಿಎಸ್ಐ ರವರಿಗೆ ಪಿಎಸ್ಐ ರವರು ಠಾಣೆಯಲ್ಲಿ ಕರ್ತವ್ಯದಲ್ಲಿರುವಾಗ  ಸಕಲೇಶಪುರ  ತಾಲ್ಳೋಕು ಮಾಗಡಿ ಕೊಡಿಗೆಯ ಸಮೀಪದಲ್ಲಿರುವ  ಹೊಸದಾಗಿ ಕಾಮಗಾರಿ ನೆಡೆಯುತ್ತಿರವ ಎತ್ತಿನಹೊಳೆ ಪೈಪ್  ಲೈನ್  ಒಳಗೆ  8-9 ಜನ ಅಸಾಮಿಗಳು ಯಾವುದೇ ಪರವಾನಿಗೆ ಇಲ್ಲದೆ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಎಂಬ ಇಸ್ಪೀಟು ಜೂಜಾಟವನ್ನು ಆಡುತ್ತಿರುತ್ತಾರೆಂದು ಬಂದ ಖಚಿತ ಮಾಹಿತಿಯ  ಮೇರೆಗೆ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ ಪಣವಾಗಿಟ್ಟಿದ್ದ  11,160-00 ರೂ ಹಣವನ್ನು ಹಾಗೂ ಜೂಜಾಡುತ್ತಿದ್ದ 1.ಸುರೇಂದ್ರ ಬಿನ್ ಜಯರಾಜ್47ವರ್ಷ,ಮಾಗಡಿಕೊಡಿಗೆ ಗ್ರಾಮ, 2)ಶಿವಕುಮಾರ ಬಿನ್  ಸೋಮಪ್ಪ ರೈ,41 ವರ್ಷ 3)ರಾಕೇಶ್ ಬಿನ್ ವಿ.ಎಂ.ಧರ್ಮರಾಜಶೆಟ್ಟಿ,38ವರ್ಷ, 4)ಕುಮಾರ ಬಿನ್  ದೇವರಾಜ 40ವರ್ಷ, ಹಲಸುಲಿಗೆ ಗ್ರಾಮ, 5) ವೆಂಕಟೇಶ ಬಿನ್  ಮಂಜಪ್ಪ 32ವರ್ಷ, 6)ಅಭಿಲಾಷ್@ಅಭಿ ಬಿನ್ ಸುರೇಶ 29ವರ್ಷ, ಬೈಕೆರೆ ಗ್ರಾಮ 7)ಪ್ರವೀಣ ಬಿನ್ ಉಮೇಶ 35ವರ್ಷ, ಜನ್ನಾಪುರ ಗ್ರಾಮ, 8)ತಬ್ರೇಜ್ಬಿನ್  ಖಲಂದರ್32ವರ್ಷ, ದೊಡ್ಡನಾಗರ ಗ್ರಾಮ, 9) ಹರೀಶ ಬಿನ್  ಕೃಷ್ಣಪ್ಪ ಪೊಜಾರಿ ,35ವರ್ಷ, ಹಲಸುಲಿಗೆ  ಗ್ರಾಮ, ಎಂಬ   09 ಜನರನ್ನು ವಶಕ್ಕೆ ಪಡೆದುಕೊಂಡು ಸಕಲೇಶಪುರ ನಗರ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

ಪತಿಯಿಂದ ಪತ್ನಿಯ ಮೇಲೆ ಹಲ್ಲೆ

ದಿನಾಂಕ-17.01.2020 ರಂದು ಬೆಳಗ್ಗೆ 10.30 ಗಂಟೆ ಸಮಯದಲ್ಲಿ ಬೇಲೂರಿನ ಕೊಟ್ನಗೇರಿ ಬೀದಿಯ ಏಜಾಜ್ ಪಾಷ ರವರ ಮಗ ಶಹಬಾಜ್ ನಿಹಲ್ ರವರು ತನ್ನ ಪತ್ನಿ ಹೀನಾ ಕೌಸರ್ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮೈಕೈಗೆ ಹೊಡೆದು ಕಾಲಿನಿಂದ ಒದ್ದು ನೋವುಂಟು ಮಾಡಿದ್ದು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕಿರುಕುಳ ನೀಡಿರುತ್ತಾರೆಂದು ಹೀನಾ ಕೌಸರ್ರವರು ನೀಡಿದ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತದೆ.

No comments: