* * * * * * HASSAN DISTRICT POLICE

Saturday, January 18, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 18-01-2020




ಪತ್ರಿಕಾ ಪ್ರಕಟಣೆ              ದಿನಾಂಕ: 18-01-2020

2,84,000/- ಹಣ ಕಳವು
     ಸಕಲೇಶಪುರ ಪಟ್ಟಣ, ಬಿ.ಎಂ.ರಸ್ತೆ, ನಂಜಂಪ್ಪಕಾಂಪೌಂಡ್ ನಲ್ಲಿರುವ ಎಸ್ಕೆ.ಕಾಫಿ ಲಿಂಕ್ಸ್ ನಲ್ಲಿ ಪಿರ್ಯಾದಿ ಮಹಮದ್ ಸೈಫುಲ್ಲಾರವರು ಕಾಳು ಮೆಣಸು ವ್ಯಾಪಾರವನ್ನು ಮಾಡಿಕೊಂಡಿದ್ದು, ದಿನಾಂಕ: 17-01-2020 ರಂದು ಬೆಳಿಗ್ಗೆ ವ್ಯಾಪಾರಕ್ಕೆಂದು 3 ಲಕ್ಷ ರೂಗಳನ್ನು ಹೊಂದಿಸಿಕೊಂಡು  ತಮ್ಮ ಮಳಿಗೆಗೆ ಬಂದಿದ್ದು, ತಮ್ಮ ಕ್ಯಾಷ್ ಟೇಬಲ್ ನ ಡ್ರಾಯರ್ ಒಳಗೆ ಇಟ್ಟಿದ್ದು, ಈ ಹಣದ ಪೈಕಿ 16 ಸಾವಿರ ರೂಪಾಯಿಗಳನ್ನು ಗ್ರಾಹಕರಿಗೆ ನೀಡಿ, ಉಳಿದ 2,84,000/- ಹಣವನ್ನು ಕ್ಯಾಷ್ ಟೇಬಲ್ ಒಳಗೆ ಇಟ್ಟಿದ್ದು, ಬೆಳಿಗ್ಗೆ ಸುಮಾರು 09-45 ಗಂಟೆ ಸಮಯದಲ್ಲಿ  ಪಿರ್ಯಾದಿಯವರು ತಮ್ಮಅಂಗಡಿಗೆ ಹೊಂದಿಕೊಂಡಿರುವ ಧರ್ಮಪ್ರಕಾಶ್ ರವರ ಅಂಗಡಿಗೆ ಹೋಗಿ ಮಾತನಾಡಿಸಿಕೊಂಡು ಬಂದು ಬೆಳಿಗ್ಗೆ 10-15 ಗಂಟೆಗೆ ಗ್ರಾಹಕರೊಬ್ಬರಿಗೆ ಪಾವತಿಸಬೇಕಾಗಿದ್ದ ಹಣವನ್ನು ನೀಡಲೆಂದು ಕ್ಯಾಷ್ ಟೇಬಲ್ ಒಳಗೆ ನೋಡಿದಾಗ ಕ್ಯಾಷ್ ಕೌಂಟರ್ ನಲ್ಲಿದ್ದ 2,84,000/- ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಮಹಮ್ಮದ್ ಸೈಫುಲ್ಲಾರವರುಕೊಟ್ಟದೂರಿನ ಮೇರೆಗೆ  ಸಕಲೇಶಪುರ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.

18000/- ಬೆಲೆಯ ಬೆಳ್ಳಿಯ ವಸ್ತುಗಳ ಕಳವು
     ದಿನಾಂಕ: 03-01-2020 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ವಿದ್ಯಾನಗರ ವಾಸಿ ಶ್ರೀನಿವಾಸ ರವರು ಬೆಂಗಳೂರಿಗೆ ಮಗಳನ್ನು ನೋಡಿಕೊಂಡು ಬರಲು ಪತ್ನಿಯೊಂದಿಗೆ ಹೋಗಿ ವಾಪಸ್ ದಿನಾಂಕ: 15-01-2020 ರಂದು ಬೆಳಿಗ್ಗೆ 09-30 ಗಂಟೆ ಸಮಯದಲ್ಲಿ ಮನೆಯ ಹತ್ತಿರ ಬಂದು ನೋಡಲಾಗಿ ಮನೆಯ ಮುಂಭಾಗದ ಗೇಟಿನ ಬೀಗವನ್ನು ಹೊಡೆದು ಮನೆಯ ಮುಂಭಾಗದ ಬಾಗಿಲಿನ  ಡೋರ್ ಲಾಕ್ ನ್ನು ಮೀಟಿ ಮನೆಯೊಳಗೆ ಹೋಗಿ  ಬೀರುವಿನಲ್ಲಿದ್ದ ಒಂದು ಬೆಳ್ಳಿಯ ಚೊಂಬು, 2 ಜೊತೆ ಬೆಳ್ಳಿಯ ದೀಪಾಲೆ ಕಂಬ, ಬೆಳ್ಳಿಯ ಲಕ್ಷ್ಮಿದೇವರ ಮುಖವಾಡ, ಒಂದು ಸಣ್ಣ ಬೆಳ್ಳಿಯ ದೀಪ ಇವುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಬೆಲೆ 18000/- ರೂಗಳಾಗಿರುತ್ತದೆ. ಪತ್ತೆ ಮಾಡಿಕೊಡಬೇಕೆಂದು ಶ್ರೀ ಶ್ರೀನಿವಾಸ ರವರು ದಿನಾಂಕ: 17-01-2020 ರಂದುಕೊಟ್ಟದೂರಿನ ಮೇರೆಗೆಚನ್ನರಾಯಪಟ್ಟಣ ನಗರಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ. 

ಕ್ಷುಲ್ಲಕಕಾರಣ ಮಾರಣಾಂತಿಕ ಹಲ್ಲೆ
     ದಿನಾಂಕ: 16-01-2020 ರಂದುರಾತ್ರಿ 11-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಬಿಕ್ಕೋಡು ಹೋಬಳಿ, ಮದಘಟ್ಟಗ್ರಾಮದ ಪಿರ್ಯಾದಿ ಮಲ್ಲಿಕಾರ್ಜುನ ರವರು ತಮ್ಮ ಬಾಬ್ತು ಕೆಎ-46-ಕೆ-7611 ರ ಸ್ಕೂಟಿಯಲ್ಲಿ ಚಿಕ್ಕಮಗಳೂರು ಮುಗುಳುವಳ್ಳಿ ಗ್ರಾಮದ ಸಿಎನ್ ಕಾಫಿ ವರ್ಕನಿಂದ ಮಧಘಟ್ಟಕ್ಕೆ ಹೋಗಲು ಬೇಲೂರು ಪಟ್ಟಣ ಕಾಪೋರೇಷನ್ ಬ್ಯಾಂಕಿನ ಮುಂಭಾಗ ಹೋಗುತ್ತಿರುವಾಗ ಮೀನು ಮಾರುಕಟ್ಟೆ ಕಡೆಯಿಂದ ಬಂದ ಕೋಟೆ ವಾಸಿ ಶಶಿ ಎಂಬುವರು ಪಿರ್ಯಾದಿಯವರಿಗೆ  ಬೈಕಿನಲ್ಲಿ ಗುದ್ದಿಸುವ ರೀತಿ ಬಂದು ಅಡ್ಡ ಹಾಕಿದ್ದು, ಪಿರ್ಯಾದಿಯವರು ಕೇಳಿದ್ದಕ್ಕೆ  ಜಗಳ ತೆಗೆದು ಆವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆ ಬಲಭಾಗಕ್ಕೆ  ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿ ಕೊಲೆ ಬೆದರಿಕೆ ಹಾಕಿರುತ್ತಾನೆಂದು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀ ಮಲ್ಲಿಕಾರ್ಜುನರವರು ಕೊಟ್ಟ ಹೇಳಿಕೆ ಮೇರೆಗೆ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.

ಮನುಷ್ಯಕಾಣೆ
     ದಿನಾಂಕ: 13-12-2019 ಮಧ್ಯಾಹ್ನ 02-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು ದಂಡಿಗನಹಳ್ಳಿ ಹೋಬಳಿ, ಕಾಚೇನಹಳ್ಳಿ ಗ್ರಾಮದ ಗಿಡ್ಡೇಗೌಡರವರ ಮಗ ಧರ್ಮರಾಜ ಡ್ರೈವಿಂಗ್ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದವನು ವಾಪಸ್ ಮನೆಗೆ ಬಂದಿರುವುದಿಲ್ಲ. ಫೋನ್ ಕೂಡ ಮಾಡಿರುವುದಿಲ್ಲ. ಎಲ್ಲಾ ಕಡೆ ವಿಚಾರಿಸಿದರೂ ಸಿಕ್ಕಿರುವುದಿಲ್ಲ ಕಾಣೆಯಾಗಿರುತ್ತಾನೆಂದು  ಶ್ರೀ ಗಿಡ್ಡೇಗೌಡರವರು ದಿನಾಂಕ: 17-01-2020 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಮನುಷ್ಯನಚಹರೆ: ಧರ್ಮರಾಜಕೆ.ಜಿ ಬಿನ್ ಗಿಡ್ಡೇಗೌಡ, 31 ವರ್ಷ, 5'6'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ಫೋನ್ ನಂ.08176-254933 ಕ್ಕೆ ಸಂಪರ್ಕಿಸುವುದು.

ಚೈನ್ನಿಂದ ಹೊಡೆದು ಹಲ್ಲೆ
     ದಿನಾಂಕ: 17-01-2020 ರಂದು ಮಧ್ಯಾಹ್ನ 01-30 ಗಂಟೆ ಸಮಯದಲ್ಲಿ ಬೇಲೂರು ಪಟ್ಟಣ ಮುಸ್ತಾಪ ಬೀದಿ ವಾಸಿ ಅನ್ವರ್ ಪಾಷಾ ರವರು ಜಾವಗಲ್ ಖಲಂದರ್ ನಗರದ ದರ್ಗಾದ ಮುಂಭಾಗದ ಫಾತಿಮಾ ಕ್ಯಾಂಟೀನ್ ಮುಂಭಾಗದಲ್ಲಿ ಆಟೋವನ್ನು ನಿಲ್ಲಿಸಿ ನಮಾಜ್ಗೆ ಹೋಗುವಾಗ ಪುಟ್ಪಾತ್ನಲ್ಲಿ ಅಂಗಡಿ ಇಟ್ಟುಕೊಂಡಿರುವ ನೇಮತ್, ಇಮ್ರಾನ್ ಹಾಗೂ ಇತರೆಯವರು ಸೇರಿಕೊಂಡು ಅನ್ವರ್ ಪಾಷಾ ರವರಿಗೆ  ಬಾಯಿಗೆ ಬಂದಂತೆ ಆವಾಚ್ಯ ಶಬ್ದಗಳಿಂದ ಬೈದು ನೇಮತ್ ಎಂಬುವನು ಕೈಯಲ್ಲಿದ್ದ ಚೈನ್ ಹಿಡಿದು ಮುಷ್ಠಿಯಿಂದ ಬಲವಾಗಿ ಹೊಡೆದ ಪರಿಣಾಮ, ಹಲ್ಲುಗಳು ಮುರಿದು ಹೋಗಿರುತ್ತವೆ ಹಾಗೂ ಎದೆಯ ಮುಂಭಾಗಕ್ಕೆ ಕಾಲಿನಿಂದ ತುಳಿದು ನೋವುಂಟು ಮಾಡಿದ್ದರಿಂದ ಅನ್ವರ್ ಪಾಷಾ, 56 ವರ್ಷರವರು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆಂದು ಅನ್ವರ್ ಪಾಷಾ ರವರ ಮಗ ಶ್ರೀ ಇನಾಯತ್ ಪಾಷಾ ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್ ಠಾಣಡಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.


No comments: