* * * * * * HASSAN DISTRICT POLICE

Tuesday, January 21, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿ : 20-01-2020


ಪತ್ರಿಕಾ ಪ್ರಕಟಣೆ                                                                       ದಿನಾಂಕ: 20-01-2020

ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟ ಇಬ್ಬರ ಬಂಧನ, ಬಂಧಿತರಿಂದ 317/- ಬೆಲೆಯ ಮದ್ಯ ವಶ:

ಪ್ರಕರಣ: 01 : ದಿನಾಂಕ: 19-01-2020 ರಂದು ಬೆಳಿಗ್ಗೆ 6-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರದಲ್ಲಿರುವ ಸುಪ್ರಿಯ ವೈನ್ಸ್ ಪಕ್ಕದ ಮಳಿಗೆಯಲ್ಲಿ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂದು ಪಿಎಸ್ಐ ಶ್ರೀ ಎಸ್.ಎಲ್ ಸಾಗರ್ ಕೊಣನೂರು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯ ಸೇವನೆಗೆ ಸ್ಥಳಾವಕಾಶ ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಮಂಜ ಬಿನ್ ನಂಜುಂಡ,  19 ವರ್ಷ, ಗಂಗೂರು ಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಆತನ ಬಳಿಯಿದ್ದ ಸುಮಾರು 136/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಪ್ರಕರಣ: 02 :  ದಿನಾಂಕ: 19-01-2020 ರಂದು ಸಂಜೆ 5-15 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಅಂತನಹಳ್ಳಿ ಗ್ರಾಮದ ವಾಸಿ ಸ್ವಾಮಿ ರವರ ಬಾಬ್ತು ಇಟ್ಟಿಗೆ ಫ್ಯಾಕ್ಟರಿಯ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿರುತ್ತಾರೆಂದು ಪಿಎಸ್ಐ ಶ್ರೀ ಕಿರಣ್ಕುಮಾರ್ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಬಸವರಾಜು ಬಿನ್ ನಂಜೇಗೌಡ, 38 ವರ್ಷ, ಅಂತನಹಳ್ಳಿ ಗ್ರಾಮ ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಸ್ಥಳದಲ್ಲಿದ್ದ 181/- ಬೆಲೆಯ ಮದ್ಯದ ಪ್ಯಾಕೇಟ್ಗಳನ್ನು ಅಮಾನತ್ತುಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಬೈಕ್ನ ನಿಯಂತ್ರಣ ತಪ್ಪಿ, ಬೈಕ್ ಸವಾರ ಸಾವು:

ದಿನಾಂಕ: 18-01-2020 ರಂದು ರಾತ್ರಿ 10-46 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಬರಗೂರು ಹ್ಯಾಂಡ್ ಪೋಸ್ಟ್ ವಾಸಿ ಶ್ರೀ ಭರತ್ ರವರ ಬಾಬ್ತು ಕೆಎ-13-ಇಎಲ್-7014 ರ ಬೈಕ್ನಲ್ಲಿ ಚನ್ನರಾಯಪಟ್ಟಣದಿಂದ ಬರಗೂರು ಹ್ಯಾಂಡ್ ಪೋಸ್ಟ್ಗೆ ಹೋಗಲು ಚನ್ನರಾಯಪಟ್ಟಣ ಎಸ್ಸರಾ ಪೆಟ್ರೋಲ್ ಬಂಕ್ ಹತ್ತಿರ ಎನ್ಹೆಚ್-75 ರಸ್ತೆಯಲ್ಲಿ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಶ್ರೀ ಭರತ್, 20 ವರ್ಷ, ಬರಗೂರು ಹ್ಯಾಂಡ್ಪೋಸ್ಟ್, ದಂಡಿಗನಹಳ್ಳಿ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ಎಸ್.ಆರ್. ಸಂತೋಷ್ ರವರು ದಿನಾಂಕ: 19-01-2020 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಂಗಸು ಕಾಣೆ :

ದಿನಾಂಕ: 17-01-2020 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕಸಬಾ ಹೋಬಳಿ, ರಾಯಸಮುದ್ರ ಗ್ರಾಮದ ವಾಸಿ ಶ್ರೀಮತಿ ಸವಿತಾ ಮಾನಸಿಕ ರೋಗದಿಂದ ಬಳಲುತ್ತಿದ್ದು, ಅಕ್ಕ ಶ್ರೀಮತಿ ಲತಾರವರ ಮನೆಯಾದ ಹಾಸನದ ಚನ್ನಪಟ್ಟಣಕ್ಕೆ ಬಂದಿದ್ದು, ಮನೆಯಿಂದ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಸವಿತಳ ಪತಿ ಶ್ರೀ ಮಂಜೇಗೌಡ ರವರು ದಿನಾಂಕ: 19-01-2020 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಸವಿತಾ ಕೋಂ ಮಂಜೇಗೌಡ, 28 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಸಿರುತ್ತಾರೆ. ಈ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ 08172-268333 ಕ್ಕೆ ಸಂಪರ್ಕಿಸುವುದು.

ಗಂಡಸು  ಕಾಣೆ :

ದಿನಾಂಕ: 18-01-2020 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಬಾಗಿವಾಳು ಗ್ರಾಮದ ವಾಸಿ ಶ್ರೀ ಸುನಿಲ್ಕುಮಾರ್ ತುಮಕೂರಿನ ಚೆಸ್ಕಾಂನಲ್ಲಿ ಲೈನ್ಮೆನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೈಸೂರಿಗೆ ಲಗ್ನ ಪತ್ರಿಕೆ ಕೊಡುವುದಾಗಿ ಮನೆಯಲ್ಲಿ ಹೇಳಿ ಹೋದವನು ಇದುವರೆವಿಗು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಸುನಿಲ್ಕುಮಾರ್ ರವರು ದಿನಾಂಕ: 19-01-2020 ರಂದು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಸುನಿಲ್ಕುಮಾರ್ ಬಿನ್ ಪರಮೇಶ್ವರ, 30ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ  ಬಿಳಿ ಬಣ್ಣದ ಶರ್ಟ್,  ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ. ಈ ಗಂಡಸಿನ ಬಗ್ಗೆ ಸುಳಿಸು ಸಿಕ್ಕಲ್ಲಿ ಹೊಳೆನರಸೀಪುರ ನಗರ ಠಾಣೆ ಫೋನ್ ನಂ. 08175-273333 ಕ್ಕೆ ಸಂಪರ್ಕಿಸುವುದು.

No comments: