* * * * * * HASSAN DISTRICT POLICE

Tuesday, January 14, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿ: 14-01-2020

ಪತ್ರಿಕಾ ಪ್ರಕಟಣೆ              ದಿನಾಂಕ: 14-01-2020

ತೋಟಕ್ಕೆ ಹೋಗುವ ದಾರಿ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ: 10-01-2020 ರಂದು ಬೆಳಿಗ್ಗೆ 7-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಕುಂದೂರು ಹೋಬಳಿ, ಕಳ್ಳಿಕೊಪ್ಪಲು ಗ್ರಾಮದ ವಾಸಿ ಶ್ರೀ ಕೆ.ಜೆ. ವೆಂಕಟೇಶ್, ರವರು ತೋಟಕ್ಕೆ ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ಡಿ.ಆರ್. ಲೋಕೇಶ್, ರವರು ಅಲ್ಲಿಗೆ ಬಂದು ದಾರಿ ನಿನ್ನದಲ್ಲ ಇಲ್ಲಿ ಹೋಗಬೇಡಿ ಎಂದು ಅವಾಚ್ಯಶಬ್ಧಗಳಿಂದ ನಿಂದಿಸಿ, ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಶ್ರೀ ಕೆ.ಜೆ. ವೆಂಕಟೇಶ್, ರವರು ದಿನಾಂಕ: 13-01-2020 ರಂದು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹಳೆ ದ್ವೇಷ ಇಬ್ಬರು ಮಹಿಳೆಯ ಮೇಲೆ ಹಲ್ಲೆ:

ದಿನಾಂಕ: 12-01-2020 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಬನ್ನಿಮರದಹಟ್ಟಿ ಗ್ರಾಮದ ವಾಸಿ ಶ್ರೀಮತಿ ತಿಮ್ಮಮ್ಮ, ಮತ್ತು ಶ್ರೀಮತಿ ಶಾರದ ರವರು ಮನೆಯಲ್ಲಿದ್ದಾಗ ಅದೇ ಗ್ರಾಮದ ವಾಸಿಗಳಾದ ಶ್ರೀ ವೆಂಕಟೇಶ್, ಶ್ರೀ ಸುರೇಶ್, ಶ್ರೀಮತಿ ರತ್ನಮ್ಮ, ಶ್ರೀ ಮಂಜ, ಮತ್ತು ಶ್ರೀ ಸ್ವಾಮಿ, ರವರುಗಳು ಅಕ್ರಮ ಕೂಟ ಕಟ್ಟಿಕೊಂಡು ಕೈಯಲ್ಲಿ ದೊಣ್ಣೆ, ಹಾರೆಗಳನ್ನು ಹಿಡಿದುಕೊಂಡು ಹಳೆ ದ್ವೇಷದಿಂದ ಪಿರ್ಯಾದಿ ಮನೆಯ ಹತ್ತಿರ ಹೋಗಿ ಒಳಗೆ ಯಾರಿದ್ದೀರಾ ಮುಂಡೇರಾ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಿಟಿಕಿಯ ಗ್ಲಾಸ್ನ್ನು ಹೊಡೆದು ಹಾಕಿ ಹಾರೆಯಿಂದ ಬಾಗಿಲು ಮೀಟಿ ಜಖಂಗೊಳಿಸಿ, ಕಲ್ಲಿನಿಂದ ಹೊಡೆದು ಕಾಲಿನಿಂದ ತುಳಿದು ಕೈಗಳಿಂದ ಹೊಡೆದು ನೋವುಂಟು ಮಾಡಿ ಪಕ್ಕದ ಮನೆಯ ವಾಸಿ ಶ್ರೀಮತಿ ರುದ್ರಮ್ಮನಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಶ್ರೀಮತಿ ತಿಮ್ಮಮ್ಮ, ರವರು ದಿನಾಂಕ: 13-01-2020 ರಂದು ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಜನತಾ ಮನೆಗೆ ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ವ್ಯಕ್ತಿಯ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ:
2019 ರಂದು ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಜೆ ಹೊಸಹಳ್ಳಿ ಗ್ರಾಮದ ವಾಸಿ ಶ್ರೀ ಹೆಚ್.ಕೆ. ನಾಗೇಶ್, ರವರು ಅರಕಲಗೂಡು ತಾಲ್ಲೂಕು, ರುದ್ರಪಟ್ಟಣ ಗ್ರಾಮದ ಶ್ರೀಮತಿ ಗೌರಮ್ಮ ಕೋಂ ರಾಜೇಶ್, ರವರು ಜನತಾ ಸೈಟಿನ ನಿವೇಶನಕ್ಕೆ ಕೋರಿ ಅರ್ಜಿ ಸಲ್ಲಿಸಿದ್ದು, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರಾದ ಶ್ರೀ ಆರ್.ವಿ. ಪ್ರದೀಪ, ರವರು ದಿನಾಂಕ: 10-01-2020 ರಂದು ಮನೆಯ ಹತ್ತಿರ ಹೋಗಿ ಎಲ್ಲಾ ಪಂಚಾಯ್ತಿಗೂ ಮಾಹಿತಿ ಕೋರಿ ಅರ್ಜಿ ಸಲ್ಲಿಸುತ್ತೀಯಾ ಎಂದು ಜಗಳ ತೆಗೆದಿದ್ದು, ದಿನಾಂಕ: 13-01-2020 ರಂದು ಸಂಜೆ 4-00 ಗಂಟೆಗೆ ಸಮಯದಲ್ಲಿ ಶ್ರೀ ಆರ್.ವಿ. ಪ್ರದೀಪ, ರವರು ಪಿರ್ಯಾದಿಯನ್ನು ಅಡ್ಡಗಟ್ಟಿ, ಹಿಡಿದು ಎಳೆದಾಡಿ ಕಾಲಿನಿಂದ ಒದ್ದು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀ ಹೆಚ್.ಕೆ. ನಾಗೇಶ್, ರವರು ದಿನಾಂಕ: 14-01-2020 ರಂದು ಕೊಟ್ಟ ದೂರಿನ ಮೇರೆಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಪತಿ ಪತ್ನಿಯ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ:

ಈಗ್ಗೆ 13 ವರ್ಷಗಳ ಹಿಂದೆ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ಮಾರಾಟಗೆರೆ ಬೋವಿ ಕಾಲೋನಿ, ವಾಸಿ ಶ್ರೀಮತಿ ಸುಮಿತ್ರಾ ಬಾಯಿ, ರವರು ಶ್ರೀ ಮಂಜನಾಯ್ಕ್, ರವರನ್ನು ಮದುವೆಯಾಗಿದ್ದು, ಮದುವೆಯಾಗಿ 5 ವರ್ಷಗಳ ಕಾಲ ಚೆನ್ನಾಗಿ ನೋಡಿಕೊಂಡಿದ್ದು, ದಿನಾಂಕ: 12-01-2020 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಪಿರ್ಯಾದಿಯವರನ್ನು ಉದ್ದೇಶಿಸಿ ಅವಾಚ್ಯಶಬ್ಧಗಳಿಂದ ನಿಂದಿಸಿ, ಎಡಮಟ್ಟೆಯಿಂದ ಹೊಡೆದು ನೋವುಂಟು ಮಾಡಿ ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀಮತಿ ಸುಮಿತಾ ಬಾಯಿ ರವರು ದಿನಾಂಕ: 13-01-2020 ರಂದು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ

ಹಣದ ವಿಚಾರಕ್ಕೆ ಜಗಳ ತೆಗೆದು ಮಗ ಅಪ್ಪನ ಮೇಲೆ ಹಲ್ಲೆ:

ದಿನಾಂಕ: 12-01-2020 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಹಾಸನದ ಹುಣಸಿನಕೆರೆ ಲೇಔಟ್ ವಾಸಿ ಶ್ರೀ ಮಹಮದ್ ಅಶಂ, ರವರು ಮನೆಯಲ್ಲಿದ್ದಾಗ ಆತನ ಮಗನಾದ ಶ್ರೀ ಇಲಿಯಾಜ್ ಪಾಷ, ಶ್ರೀಮತಿ ನಾಸೀಮ ಎಂಬುವಳ ಮಾತು ಕೇಳಿ ಕುಮ್ಮಕ್ಕಿನಿಂದ ಮನೆಗೆ ಬಂದು ದುಡ್ಡು ಕೊಡು ಎಂದು ಜಗಳ ತೆಗೆದುಕೊಂಡು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲಿನಿಂದ ಕಚ್ಚಿಗಾಯ ಪಡಿಸಿದ್ದು, ಪಿರ್ಯಾದಿಯವರ ಪತ್ನಿಗೂ ಲಟ್ಟಣಿಗೆಯಿಂದ ಹೊಡೆದು ನೋವುಂಟು ಮಾಡಿದ್ದು, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀ ಮಹಮದ್ ಆಶಂ, ರವರು ದಿನಾಂಕ: 13-01-2020 ರಂದು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: