* * * * * * HASSAN DISTRICT POLICE

Thursday, January 16, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 15-01-2020



       ಪತ್ರಿಕಾ ಪ್ರಕಟಣೆ                    ದಿನಾಂಕ: 15-01-2020

ಅಕ್ರಮ ಮಧ್ಯ ಮಾರಾಟ, ವ್ಯಕ್ತಿಯ ಬಂಧನ, ಬಂಧಿತನಿಂದ ರೂ 122/- ಬೆಲೆಯ ಮಧ್ಯ ವಶ,
     ದಿನಾಂಕ: 14-01-2020 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ಅರಕಲಗೂಡು ತಾಲ್ಲೂಕ್, ಕೊಣನೂರು ಹೋಬಳಿ, ಕಾರ್ಗಲ್ ಸರ್ಕಲ್ ನಲ್ಲಿರುವ ಸ್ವಾಮಿಗೌಡ ಎಂಬುವವರ ಅಂಗಡಿಯ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿರುವುದಾಗಿ ಶ್ರೀ ಪ್ರಹ್ಲಾದ, ಎಎಸ್ಐ, ಕೊಣನೂರು ಪೊಲೀಸ್ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಸ್ಥಳದಲ್ಲಿದ್ದವರು ಓಡಿ ಹೋಗಿದ್ದು, ಅಂಡಿಯಲ್ಲಿದ್ದ ವ್ಯಕ್ತಿಯನ್ನು ಹಿಡಿದು ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ವಿಚಾರ ಮಾಡಲಾಗಿ ಸರಿಯಾದ ಮಾಹಿತಿ ನೀಡದೆ ಇದ್ದು, ಹೆಸರು ವಿಳಾಸ ಕೇಳಲಾಗಿ ಸ್ವಾಮಿಗೌಡ ಬಿನ್ ಕರಿಗೌಡ, 50 ವರ್ಷ, ವಕ್ಕಲಿಗರು, ವ್ಯವಸಾಯ, ತರಿಗಳಲೆ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕ್ ಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ 90 ಎಂಎಲ್ನ 4 ಒರಿಜಿನಲ್ ಚಾಯ್ಸ್ ಟೆಟ್ರಾ ಪ್ಯಾಕೇಟ್, ಒಂದು ನೀರಿನ ಪ್ಲಾಸ್ಟಿಕ್ ಬಾಟಲ್ಗಳನ್ನು ಅಮಾನತ್ತು ಪಡಿಸಿಕೊಂಡು ಬಂದು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ,

ಮಹಿಳೆಗೆ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ, ರಕ್ತಗಾಯ,
     ದಿನಾಂಕ: 13-01-2020 ರಂದು ಹೊಳೆನರಸೀಪುರ ತಾಲ್ಲೂಕ್, ಹಳ್ಳಿಮೈಸೂರು ಹೋಬಳಿ, ಕುಪ್ಪೆ ಗ್ರಾಮದ ಶ್ರೀಮತಿ ಬೊಮ್ಮಮ್ಮರವರು ಸೀಗೋಳು ಗ್ರಾಮಕ್ಕೆ ಹೋಗಲು ಮನೆಯಿಂದ ಹೊರಟು ಬೆಳಿಗ್ಗೆ 11-30 ಗಂಟೆಯಲ್ಲಿ ಊರಿನಲ್ಲಿ ಕೇರಳಾಪುರ ಕಡೆಗೆ ಹೋಗುವ ಕೆಎ-13-ಎಫ್-1933 ಬಸ್ನ್ನು ಹತ್ತಲು ಹೋದಾಗ ಬಸ್ ಚಾಲಕನು ನಿರ್ಲಕ್ಷತನದಿಂದ ಬಸ್ನ್ನು ಚಾಲನೆ ಮಾಡಿ ಶ್ರೀಮತಿ ಬೊಮ್ಮಮ್ಮರವರಿಗೆ ಗುದ್ದಿಸಿದ ಪರಿಣಾಮ ಎಡಗಾಲು ಸಂಪೂರ್ಣವಾಗಿ ರಕ್ತಗಾಯವಾಗಿದ್ದು ಬಲಗಾಲಿನ ಹಿಮ್ಮಡಿ ಮತ್ತು ತಲೆಗೆ ರಕ್ತಗಾಯವಾಗಿದ್ದು, ಏಟಾಗಿದ್ದ ಬೊಮ್ಮಮ್ಮರವರನ್ನು ಹೊಳೆನರಸೀಪುರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಈ ದಿನ ತಡವಾಗಿ ದೂರು ನೀಡುತ್ತಿರುವುದಾಗಿ ಗಾಯಾಳು ಶ್ರೀಮತಿ ಬೊಮ್ಮಮ್ಮರವರ ಮಗ ಶ್ರೀ ಸ್ವಾಮಿರವರು ನೀಡಿದ ದೂರಿನ ಮೇರೆಗೆ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮೋಟಾರ್ ಬೈಕ್ ಕಳವು
     ದಿನಾಂಕ: 22-12-2019 ರಂದು ಹಾಸನ ತಾಲ್ಲೂಕ್, ಕಸಬಾ ಹೋಬಳಿ, ಹನುಮಂತಪುರ ಗ್ರಾಮದ ಶ್ರೀ ರಾಮಚಂದ್ರರವರು ಕೆಲಸದ ನಿಮಿತ್ತ ತಮ್ಮ ಬಾಬ್ತು ಕೆಎ-13-ಇಕ್ಯೂ-5098 ಸ್ಪ್ಮೆಂಡರ್ ಬೈಕಿನಲ್ಲಿ ಹಾಸನಕ್ಕೆ ಬಂದು ಸಂಜೆ 7-00 ಗಂಟೆಯಲ್ಲಿ ಹಾಸನ ಸುಭಾಷ್ ಚೌಕದಲ್ಲಿರುವ ವಿಮಲ್ ಜ್ಯೋತಿ ಅಂಗಡಿ ಮುಂದೆ ಬೈಕನ್ನು ನಿಲ್ಲಿಸಿ ಹೋಗಿದ್ದು, ವಾಪಸ್ 7-45 ಗಂಟೆಗೆ ಬಂದು ನೋಡಲಾಗಿ ಸದರಿ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಎಲ್ಲಾ ಕಡೆ ಹುಡುಕಿದರೂ ಸಿಗದಿದ್ದ ಕಾರಣ ಈ ದಿನ ತಡವಾಗಿ ಬಂದು ದೂರು ನೀಡುತ್ತಿದ್ದು, ಕಳುವಾದ ಮೋಟಾರ್ ಬೈಕಿನ ಬೆಲೆ ಸುಮಾರು 49,000/- ರೂಗಳಾಗಿದ್ದು, ಪತ್ತೆಮಾಡಿಕೊಡಬೇಕೆಂದು ಶ್ರೀ ರಾಮಚಂದ್ರರವರು ನೀಡಿದ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

No comments: