* * * * * * HASSAN DISTRICT POLICE

Monday, January 13, 2020

ಹಾಸನ ಜಿಲ್ಲಾ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 13-01-2020




ಪತ್ರಿಕಾ ಪ್ರಕಟಣೆ                ದಿನಾಂಕ: 13-01-2020

ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತನಿಂದ 10 ಸಾವಿರ ನಗದು ಮತ್ತು, 15,972/- ಬೆಲೆಯ ವಿವಿಧ ಮಾದರಿಯ ಮದ್ಯ ವಶ:
     ದಿನಾಂಕ: 12-01-2020 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ಹೋಬಳಿ, ದೊಡ್ಡಕೋಡಿಹಳ್ಳಿ ಗ್ರಾಮದ ಮಾರೇನಹಳ್ಳಿ ರಸ್ತೆ, ಮನು ಶಾಫ್ ಹತ್ತಿರ ಯಾರೋ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಶಕುಂತಲ, ಪಿಎಸ್ಐ ಹಳೇಬೀಡು ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಅಮಿತ್ ಬಿನ್ ದೇವರಾಜು, 19 ವರ್ಷ, ಚಾಮರಾಜಪುರ ಗ್ರಾಮ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮದ್ಯ ಮಾರಾಟದಿಂದ ಬಂದ 10 ಸಾವಿರ ನಗದು ಮತ್ತು ಸುಮಾರು 15,972/- ಬೆಲೆಯ ವಿವಿಧ ಮಾದರಿಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಟ್ರ್ಯಾಕ್ಟರ್ ಬೈಕ್ ಗೆ ಡಿಕ್ಕಿ, ಒಂದು ಸಾವು ಇಬ್ಬರಿಗೆ ರಕ್ತಗಾಯ:
     ದಿನಾಂಕ: 12-01-2020 ರಂದು ಸಂಜೆ 6-45 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಹುಲ್ಲೇನಹಳ್ಳಿ ಗ್ರಾಮದ ವಾಸಿ ಶ್ರೀ ಹರೀಶ್, ರವರು ಅದೇ ಗ್ರಾಮದ ವಾಸಿ ಶ್ರೀ ಹೆಚ್.ಸಿ. ಮನು ಮತ್ತು ಪುರುಷೋತ್ತಮ, ರವರುಗಳು ಕೆಎ-13, ಇಪಿ-0492 ರ ಬೈಕ್ ನಲ್ಲಿ ಹುಲ್ಲೇನಹಳ್ಳಿಯಿಂದ ಹಾಸನಕ್ಕೆ ಹೋಗಲು ಹಾಸನ ತಾಲ್ಲೂಕು, ದುದ್ದ ಹೋಬಳಿ, ದುದ್ದ-ಹಾಸನ ರಸ್ತೆ, ಕೋರವಂಗಲ ಗೇಟ್ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13, ಟಿಸಿ-1048 ನೇ ಟ್ರ್ಯಾಕ್ಟರ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕಿನಿಂದ ಮೂವರು ಬಿದ್ದು ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿ ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶ್ರೀ ಹರೀಶ್ ಬಿನ್ ಸ್ವಾಮೀಗೌಡ, 20ವರ್ಷ, ಹುಲ್ಲೇನಹಳ್ಳಿ ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು ರವರು ಮಾರ್ಗ ಮಧ್ಯೆ ಮೃತಪಟ್ಟಿದ್ದು, ಉಳಿದ ಶ್ರೀ ಮನು ಮತ್ತು ಪುರುಷೋತ್ತಮ್, ರವರು ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹಾಗೂ ಆರೋಪಿ ಟ್ರ್ಯಾಕ್ಟರ್ ಚಾಲಕ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಮೃತರ ತಂದೆ ಶ್ರೀ ಸ್ವಾಮಿಗೌಡ, ರವರು ದಿನಾಂಕ: 13-01-2020 ರಂದು ಕೊಟ್ಟ ದೂರಿನ ಮೇರೆಗೆ ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಡಿಕ್ಕಿ ಪಾದಚಾರಿ ಮಹಿಳೆಗೆ ತೀವ್ರ ಸ್ವರೂಪದ ರಕ್ತಗಾಯ:
     ದಿನಾಂಕ: 11-01-2020 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ದೇವಿಹಳ್ಳಿ ಗ್ರಾಮದ ವಾಸಿ ಶ್ರೀಮತಿ ಜಯಮ್ಮ, ರವರು ಮನೆಯ ಮುಂದೆ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13, ಇಜೆ-5405 ರ ಪಲ್ಸರ್ ಬೈಕ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀಮತಿ ಜಯಮ್ಮ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಶ್ರೀನಿವಾಸ ನರ್ಸಿಂಗ್ ಹೋಂಗೆ ದಾಖಲಿಸಿರುತ್ತೇವೆಂದು ಗಾಯಾಳು ಮಗ ಶ್ರೀ ನಾಗರಾಜು, ರವರು ದಿನಾಂಕ: 12-01-2020 ರಂದು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


 ಆಯಿಲ್ ಟ್ಯಾಂಕ್ ನ್ನು ಸ್ವಚ್ಛಗೊಳಿಸುತ್ತಿದ್ದ ವ್ಯಕ್ತಿ ಪ್ರಜ್ಞೆ ತಪ್ಪಿ, ಸಾವು:
     ಈಗ್ಗೆ 4 ತಿಂಗಳಿನಿಂದ ಹಾಸನದ ಸಿದ್ದಯ್ಯನಗರ ವಾಸಿ ಶ್ರೀ ಹೆಚ್.ಎಸ್. ರವಿಚಂದ್ರ, ರವರು ಹಾಸನದ ಇಂಡಸ್ಟ್ರೀಯಲ್ ಏರಿಯಾದಲ್ಲಿರುವ ಶ್ರೀ ಲೋಕೇಶ್, ರವರ ಬಾಬ್ತು ಹೆಚ್.ಬಿ. ಇಂಡಸ್ಟ್ರೀಸ್ ನಲ್ಲಿ ಕೂಲಿ  ಕೆಲಸ ಮಾಡಿಕೊಂಡಿದ್ದು, ದಿನಾಂಕ: 12-01-2020 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಇಂಡಸ್ಟ್ರೀಸ್ ಒಳಗಿರುವ ಆಯಿಲ್ ಟ್ಯಾಂಕ್ ನ್ನು ಸ್ವಚ್ಛಗೊಳಿಸಲು ಶ್ರೀ ಲೋಕೇಶ್, ರವರು ಶ್ರೀ ಹೆಚ್.ಎಸ್. ರವಿಚಂದ್ರ, ರವರಿಗೆ ತಿಳಿಸಿದ್ದು, ಶ್ರೀ ಹೆಚ್.ಎಸ್. ರವಿಂದ್ರ, ರವರು ಸ್ವಚ್ಚಗೊಳಿಸುತ್ತಿದ್ದಾಗ ರಾಸಾಯನಿಕ ಪ್ರಕ್ರಿಯೆ ಉಂಟಾಗಿ ಉಸಿರಾಡುವ ಗಾಳಿ ವಿಷವಾಗಿ ಪರಿಣಮಿಸಿ, ಪ್ರಜ್ಞೆ ತಪ್ಪಿ ಬಿದಿದ್ದು, ಹಾಸನ ಎನ್ ಡಿ ಆರ್ ಕೆ ಆಸ್ಪತ್ರೆಯ ವೈದ್ಯರಲ್ಲಿ ತಪಾಸಣೆ ನಡೆಸಿ, ಶ್ರೀ ಹೆಚ್.ಎಸ್. ರವಿಚಂದ್ರ, 35 ವರ್ಷ, ರವರು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಮೃತನ ಪತ್ನಿ ಶ್ರೀಮತಿ ಸುಜಾತ, ರವರು ದಿನಾಂಕ: 13-01-2020 ರಂದು ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಟ್ರ್ಯಾಕ್ಟರ್ ಡಿಕ್ಕಿ ಪಾದಚಾರಿ ಮಗುವಿಗೆ ರಕ್ತಗಾಯ:
      ದಿನಾಂಕ: 12-01-2020 ರಂದು ಮಧ್ಯಾಹ್ನ 1-20 ಗಂಟೆ ಸಮಯದಲ್ಲಿ ಹಾಸನದ ಹಳೆ ಪೋಸ್ಟ್ ರಸ್ತೆ, ವಾಣಿ ವಿಲಾಸ ಶಾಲೆಯ ಹಿಂಭಾಗದ ವಾಸಿ ಶ್ರೀ ಹೆಚ್.ಎನ್. ನಂದಕುಮಾರ್, ರವರ ಮಗ ಕು|| ಹೆಚ್.ಎನ್. ರಜತ್, ರವರು ಹಾಸನದ ಹೆಚ್ಎನ್ ಪುರ ರಸ್ತೆಯಲ್ಲಿ ಸೆಂಟ್ ಫಿಲೋಮೊನಾ ಶಾಲೆಯ ಹತ್ತಿರವಿರುವ ಸ್ನೇಹಿತ ಮನೆಗೆ ಹೋಗಿ ವಾಪಸ್ ಮನೆಗೆ ಹೋಗಲು ಹಾಸನ-ಹೆಚ್ಎನ್ ಪುರ ರಸ್ತೆಯಲ್ಲಿರುವ ಶುಭೋದಯ ಕಲ್ಯಾಣ ಮಂಟಪದ ಕ್ರಾಸ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-46, ಟಿ-3098 ರ ಟ್ರ್ಯಾಕ್ಟರ್ ಮತ್ತು ಕೆಎ-46, ಟಿ-3099ರ ಟ್ರೇಲರ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಕು|| ರಜತ್, 9 ವರ್ಷ, ರವರಿಗೆ ಡಿಕ್ಕಿ ಮಾಡಿದ ಪರಿಣಾಮ ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಕೆ.ಆರ್. ಪುರಂ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಿರುತ್ತೇವೆಂದು ಗಾಯಾಳು ಮಗುವಿನ ತಂದೆ ಶ್ರೀ ನಂದಕುಮಾರ್, ರವರು ದಿನಾಂಕ: 13-01-2020 ರಂದು ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


No comments: