* * * * * * HASSAN DISTRICT POLICE

Thursday, July 11, 2019

ಹಾಸನ ಜಿಲ್ಲೆ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 11-07-2019



                      ಪತ್ರಿಕಾ ಪ್ರಕಟಣೆ                        ದಿನಾಂಕ: 11-07-2019

1 ಲಕ್ಷದ 26 ಸಾವಿರ ಬೆಲೆಯ 20 ಹೋತ & ಆಡುಗಳ ಕಳವು:
     ದಿನಾಂಕ: 09-03-2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಬಾಚೇನಹಳ್ಳಿ ಗ್ರಾಮದ ವಾಸಿ ಶ್ರೀ ಪುಟ್ಟಸ್ವಾಮಿ, ರವರ ಬಾಬ್ತು ಕೊಟ್ಟಿಗೆಯಲ್ಲಿ 30 ಹೋತ & ಆಡುಗಳನ್ನು ಕೂಡಿ ಬೀಗ ಹಾಕಿಕೊಂಡಿದ್ದು, ಯಾರೋ ಕಳ್ಳರು ಕೊಟ್ಟಿಗೆಯ ಬೀಗವನ್ನು ಮುರಿದು ಸುಮಾರು 1 ಲಕ್ಷದ 10 ಸಾವಿರ ಬೆಲೆಯ 18 ಹೋತ & ಆಡುಗಳನ್ನು ಅದೇ ಗ್ರಾಮದ ವಾಸಿ ಶ್ರೀ ರವಿ, ರವರ ಮನೆಯ ಕೊಟ್ಟಿಗೆಯಲ್ಲಿದ್ದ 2 ಹೋತಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಪುಟ್ಟಸ್ವಾಮಿ & ಶ್ರೀ ರವಿ, ರವರು ದಿನಾಂಕ: 10-07-2019 ರಂದು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ವರದಕ್ಷಿಣೆ ಕಿರುಕುಳ ಪತಿ & ಕುಟುಂಬದವರೆಲ್ಲ ಸೇರಿ ಪತ್ನಿಯ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ:
     ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ಶಂಖ ಗ್ರಾಮದ ವಾಸಿ ಶ್ರೀಮತಿ ಮೋಹನ್ ಕುಮಾರಿ, ರವರು 2014 ನೇ ಸಾಲಿನಲ್ಲಿ ಶ್ರೀ ರುದ್ರಮಲ್ಲಪ್ಪ @ ರವಿ, ರವರನ್ನು ವಿವಾಹವಾಗಿದ್ದು, ಮದುವೆಯಾಗಿ 2 ವರ್ಷಗಳ ಕಾಲ ಅನೂನ್ಯವಾಗಿದ್ದು, ಈಗ್ಗೆ 3 ವರ್ಷಗಳಿಂದ ತವರು ಮನೆಯಿಂದ ವರದಕ್ಷಿಣೆ ತರುವಂತೆ ಪತಿ ಶ್ರೀ ರುದ್ರಮಲ್ಲಪ್ಪ @ ರವಿ, ಮಾವ ಶ್ರೀ ಈರೇಗೌಡ @ ಮುತ್ತಣ್ಣ ಅತ್ತೆ ಶ್ರೀಮತಿ ಶಿವಮ್ಮ, ಪತಿಯ ಅಣ್ಣಂದಿರಾದ ಶ್ರೀ ಸೋಮಶೇಖರ ಹಾಗೂ ಶ್ರೀ ಶಂಕರ ರವರುಗಳು ಸೇರಿಕೊಂಡು ದಿನಾಂಕ: 13-06-2019 ಸಂಜೆ 6-00 ಗಂಟೆಗೆ ತವರು ಮನೆಯಿಂದ ಹಣ ತರುವಂತೆ ಮೈ ಕೈಗೆ ಹೊಡೆದು ನೋವುಂಟು ಮಾಡಿದ್ದು, ರಾಜಿ ಪಂಚಾಯ್ತಿ ಮಾಡಿದ್ದರೂ ಸಹ ಕೇಳದೇ ವರದಕ್ಷಿಣೆ ತರದಿದ್ದರೆ ಕೊಲೆ ಮಾಡುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಹಾಗೂ ಇವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀಮತಿ ಮೋಹನ್ ಕುಮಾರಿ, ರವರು ದಿನಾಂಕ:    10-07-2019 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಕಾರು ಬೈಕ್ ಗೆ ಡಿಕ್ಕಿ ಬೈಕ್ ಸವಾರನಿಗೆ ರಕ್ತಗಾಯ:
     ದಿನಾಂಕ: 10-07-2019 ರಂದು ಬೆಳಿಗ್ಗೆ 8-45 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ದೊಡ್ಡಪುರ ಗ್ರಾಮದ ವಾಸಿ ಶ್ರೀ ಹರೀಶ್, ರವರ ಬಾಬ್ತು ಕೆಎ-04, ಇಸಿ-9718 ರ ಬೈಕ್ ನಲ್ಲಿ ಜಮೀನಿನ ಹತ್ತಿರ ಹೋಗಲು ಕೃಷ್ಣಾನಗರ ಲೇಔಟ್ ಒಳಗಡೆ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-13, ಪಿ-1006 ರ ಐ 20 ಕಾರಿನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಹರೀಶ್, ರವರಿಗೆ ಕಾಲು, ಮೊಣಕೈ ಮತ್ತು ಸೊಂಟಕ್ಕೆ ಪೆಟ್ಟಾಗಿರುತ್ತದೆಂದು ಹಾಗೂ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀ ಹರೀಶ್, ರವರು ಹಾಸನ ಮಂಗಳಾ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಗಂಡಸು ಕಾಣೆ:
     ಈಗ್ಗೆ 2 ವರ್ಷಗಳ ಹಿಂದೆ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ನಾರಾಯಣಘಟ್ಟಹಳ್ಳಿ ಗ್ರಾಮದ ವಾಸಿ ಶ್ರೀ ಪುಟ್ಟಸ್ವಾಮಿ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಪುಟ್ಟಸ್ವಾಮಿಯ ಪತ್ನಿ ಶ್ರೀಮತಿ ವಿಜಯಲಕ್ಷ್ಮೀ, ರವರು ದಿನಾಂಕ: 10-07-2019 ರಂದು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ, ಕಾಣೆಯಾದ ಗಂಡಸಿನ ಚಹರೆ: ಶ್ರೀ ಪುಟ್ಟಸ್ವಾಮಿ ಬಿನ್ ಶಿವಣ್ಣ, 45 ವರ್ಷ, 5'8 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕಪ್ಪು ಬಣ್ಣ, ಕೋಲುಮುಖ, ದೃಢವಾದ ಶರೀರ, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ, ಇವರ ಸುಳಿವು ಸಿಕ್ಕಲ್ಲಿ 08174-232237ಕ್ಕೆ ಸಂಪರ್ಕಿಸುವುದು.


No comments: