* * * * * * HASSAN DISTRICT POLICE

Wednesday, July 10, 2019

ಹಾಸನ ಜಿಲ್ಲೆ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 10-07-2019



             ಪತ್ರಿಕಾ ಪ್ರಕಟಣೆ                      ದಿನಾಂಕ: 10-07-2019

ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ನಾಲ್ವರ ಬಂಧನ, 2 ವಾಹನ ಸಮೇತ 21 ಜಾನುವಾರುಗಳ ವಶ:
     ದಿನಾಂಕ: 09-07-2019 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಶ್ರೀ ಎಲ್.ಎನ್. ಕಿರಣ್ಕುಮಾರ್, ಪಿಎಸ್ಐ, ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆ ರವರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಹೇಂದ್ರ ಬೋಲೇರೋ ವಾಹನ & ಟಾಟಾ ಜನನ್ ವಾಹನದಲ್ಲಿ ಜಾನುವಾರುಗಳನ್ನು ಕಾಸಾಯಿಖಾನೆ ಸಾಗಿಸಲು ಅರಸೀಕೆರೆಯಿಂದ ಚನ್ನರಾಯಪಟ್ಟಣ & ಹಾಸನದಿಂದ ಚನ್ನರಾಯಪಟ್ಟಣ ಮಾರ್ಗವಾಗಿ ಹೋಗುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಹೋಬಳಿ, ಮಡಬ ಗೇಟ್ ಹತ್ತಿರ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಕೆಎ-54-6810 ರ ಮಹೇಂದ್ರ ವಾಹನ & ಕೆಎ-07, ಎ-5739 ರ ಟಾಟಾ ಜನನ್ ವಾಹನವನ್ನು ತಡೆದು ತಪಾಸಣೆ ನಡೆಸಿ, ವಾಹನದಲ್ಲಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಕಾಂತರಾಜು ಬಿನ್ ದೇವರಾಜು, 28 ವರ್ಷ, ಚಾಲಕ 2) ಮಂಜೇಗೌಡ ಬಿನ್ ಅಜ್ಜೇಗೌಡ, 32 ವರ್ಷ, ಮಾರ್ಗೋನೋ ನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್.ಪೇಟೆ ತಾಲ್ಲೂಕು, ಮಂಡ್ಯ ಜಿಲ್ಲೆ 3) ನವೀನ್ ಬಿನ್ ವೈರುಮುಡಿಗೌಡ, 28 ವರ್ಷ, ಶ್ರವಣೇರಿ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು 4) ಶೇಖರ ಬಿನ್ ಜ್ಞಾನೇಗೌಡ, 29 ವರ್ಷ, ಮಾಗೋನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ, ಮಂಡ್ಯ ಜಿಲ್ಲೆ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು 2 ವಾಹನ ಸಮೇತ 10 ಕೋಣಗಳು 11 ಓರಿಗಳನ್ನು ಅಮಾನತ್ತುಪಡಿಸಿಕೊಂಡು ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಮಹಿಳೆಯ ಸಾವು:
     ದಿನಾಂಕ: 05-07-2019 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಮೈಲನಹಳ್ಳಿ ಕೊಪ್ಪಲು ಗ್ರಾಮದ ವಾಸಿ ಶ್ರೀ ಅಡವೀಶಪ್ಪ, ರವರಿಗೆ ಶ್ರೀ ಪರಮೇಶ್ & ಶ್ರೀ ಮಲ್ಲಿಕಾಜರ್ುನ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಮೊದಲನೇ ಮಗ ಶ್ರೀ ಪರಮೇಶ್, ರವರು ಅಪಘಾತದಲ್ಲಿ ತೀರಿ ಹೋಗಿದ್ದು, ಮೊದಲನೇ ಸೊಸೆಯಾದ ಶ್ರೀಮತಿ ಮಂಜುಳ & 2ನೇ ಸೊಸೆಯಾದ ಶ್ರೀಮತಿ ಭಾಗ್ಯಮ್ಮ ಹಾಗೂ ತಂದೆ ಶ್ರೀ ರಾಮಚಂದ್ರಯ್ಯ, ರವರು ಮನೆಗೆ ಬಂದಿದ್ದು, ಊಟ ಮುಗಿಸಿಕೊಂಡು ಶಾಲೆಯಿಂದ ಮೊಮ್ಮಗನಿಗೆ ಬೇದಿಯಾಗಿದೆ ಕರೆದುಕೊಂಡು ಹೋಗಿ ಎಂದು ಪಿರ್ಯಾದಿಗೆ ತಿಳಿಸಿದಾಗ ಅಲ್ಲಿದ್ದ ಶ್ರೀ ರಾಮಚಂದ್ರಯ್ಯ, ರವರು ನಾನೇ ಕರೆದುಕೊಂಡು ಬರುತೇನೆಂದು ಹೇಳಿ ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದಿದ್ದು, ನಂತರ ಶ್ರೀ ರಾಮಚಂದ್ರಯ್ಯ, ಪಿರ್ಯಾದಿಯೊಂದಿಗೆ ಬೈಕ್ ನಲ್ಲಿ ಅರಸೀಕೆರೆಗೆ ಹೋಗಿ ಪಿರ್ಯಾದಿಯವರ ತಂಗಿ ಮನೆಯಲ್ಲಿ ಊಟ ಮಾಡಿಕೊಂಡು ನಂತರ ಸೊಸೆ ಶ್ರೀಮತಿ ಮಂಜುಳಾ, ರವರ ವಿಧವಾ ವೇತನದ ಅರ್ಜಿಯನ್ನು ಗ್ರಾಮ ಲೆಕ್ಕಾಧಿಕಾರಿಯವರಿಗೆ ಕೊಟ್ಟು ಶ್ರೀ ರಾಮಚಂದ್ರಯ್ಯ, ರವರು ಪಿರ್ಯಾದಿಗೆ ನೀವು ಹೋಗಿ ನಾನು ನಿಧಾನವಾಗಿ ಬರುತ್ತೇನೆಂದು ಹೇಳಿದ್ದು, ಪಿರ್ಯಾದಿ ಶ್ರೀ ಅಡವೀಶಪ್ಪ, ರವರು ಸಂಜೆ 4-30 ಗಂಟೆಗೆ ಮನೆಯ ಹತ್ತಿರ ಬಂದು ನೋಡಲಾಗಿ ಪಿರ್ಯಾದಿ ಪತ್ನಿ ಶ್ರೀಮತಿ ಸಿದ್ದಗಂಗಮ್ಮ, ರವರು ಮಲಗಿದ್ದು, ಮೇಲೆ ಏಳದೆ ಪ್ರಜ್ಞೆ ಇಲ್ಲದೆ ನಾಲಿಗೆ ಹೊರಚಾಚಿದ್ದು, ಅರಸೀಕೆರೆ ಅಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತಪಾಸಣೆ ನಡೆಸಲಾಗಿ ಶ್ರೀಮತಿ ಸಿದ್ದಗಂಗಮ್ಮ ಕೋಂ ಅಡವೀಶಪ್ಪ, 55 ವರ್ಷ, ಮೈಲನಹಳ್ಳಿ ಗ್ರಾಮ, ಅರಸೀಕೆರೆ ತಾಲ್ಲೂಕು ರವರು ಮೃತಪಟ್ಟಿರುವುದಾಗಿ ತಿಳಿಸಿದ ಮೇರೆ ಸೊಸೆಯಂದಿರು ಶ್ರೀ ರಾಮಚಂದ್ರಯ್ಯ, ರವರ ಮೇಲೆ ಅನುಮಾನವಿದ್ದು, ಇವರುಗಳು ಮನೆಯಿಂದ ತಪ್ಪಿಸಿಕೊಂಡಿರುತ್ತಾರೆ. ದಿನಾಂಕ: 07-7-2019 ರಂದು ಅಂತ್ಯ ಸಂಸ್ಕಾರ ನಡೆಸಿದ್ದು,  ಇವರುಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀ ಅಡವೀಶಪ್ಪ, ರವರು ದಿನಾಂಕ: 09-07-2019 ರಂದು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಸ್ಥಳಕ್ಕೆ ಶ್ರೀ ಸಿದ್ದರಾಮೇಶ್ವರ, ಸಿಪಿಐ ಅರಸೀಕೆರೆ ಗ್ರಾಮಾಂತರ ವೃತ್ತ, ಶ್ರೀ ವಿನೋದ್ರಾಜ್, ಪಿಎಸ್ಐ ಅರಸೀಕೆರೆ ಗ್ರಾಮಾಂತರ ಠಾಣೆ ರವರು ಹಾಗೂ ಸಿಬ್ಬಂದಿಗಳೊಂದಿಗೆ ಭೇಟಿ ತನಿಖೆಯಲ್ಲಿರುತ್ತೆ.

ಗೂಡ್ಸ್ ವಾಹನ ಡಿಕ್ಕಿ, ಪಾದಚಾರಿಗೆ ರಕ್ತಗಾಯ:
    ದಿನಾಂಕ: 09-07-2019 ರಂದು ಬೆಳಿಗ್ಗೆ 10-45 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಹೋಬಳಿ, ದೈವನೂರು ಗ್ರಾಮ ವಾಸಿ ಶ್ರೀ ಡಿ.ಎ.ಕುಮಾರ, ರವರು ಚನ್ನರಾಯಪಟ್ಟಣ ನವೋದಯ ಕಾಲೇಜ್ ಹತ್ತಿರವಿರುವ ಕೃಷ್ಣ ಬೇಕರಿ ಎದುರು ಪುಟ್ಬಾತ್ ಮೇಲೆ ನಿಂತುಕೊಂಡು ಅವರ ಸ್ನೇಹಿತ ಶ್ರೀ ಪರಮೇಶ್ ರವರನ್ನ ಕಾಯುತ್ತಿದ್ದಾಗ ಹಿಂಬದಿಯಿಂದ ಬಂದ ಚನ್ನರಾಯಪಟ್ಟಣ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕೆಎ-13, ಬಿ-6702 ರ ಅಪೇ ಆಟೋ ಗೂಡ್ಸ್ ಚಾಲಕ ತನ್ನ ಆಟೋವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಡಿ.ಎ. ಕುಮಾರ, ರವರಿಗೆ ಡಿಕ್ಕಿಯಾದ ಪರಿಣಾಮ ಕೈ & ತಲೆಗೆ ಪೆಟ್ಟುಬಿದ್ದು ರಕ್ತಗಾಯವಾಗಿರುತ್ತದೆಂದು ಶ್ರೀ ಡಿ.ಎ. ಕುಮಾರ್, ರವರು ಚನ್ನರಾಯಪಟ್ಟಣ ಪುಣ್ಯ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್ ಗಳ ಡಿಕ್ಕಿ, ಬೈಕ್ ಸವಾರನಿಗೆ ರಕ್ತಗಾಯ:
     ದಿನಾಂಕ: 08-07-2019 ರಂದು ರಾತ್ರಿ 2-10 ಗಂಟೆ ಸಮಯದಲ್ಲಿ ಹಾಸನದ ಕುವೆಂಪುನಗರದ ಇಡ್ಲ್ಯೂಎಸ್-496 ರ ವಾಸಿ ಶ್ರೀ ಬಿ.ಎಂ. ತೇಜಸ್, ರವರು ರೈಲ್ವೆ ಸ್ಟೇಷನ್ ಹತ್ತಿರವಿರುವ ಬೈಕ್ ಪಾಕರ್ಿಂಗ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಶ್ರೀ ಬಿ.ಎಂ. ತೇಜಸ್, ರವರ ಬಾಬ್ತು ಕೆಎ-14, ಎಕ್ಸ್-1444 ರ ಬೈಕ್ನಲ್ಲಿ ಸಿಟಿಗೆ ಹೋಗಲು ಹಾಸನದ ಡೈರಿ ಹತ್ತಿರ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆಎ-06, ಇ.ಯು-3568 ರ ಬೈಕ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ತೇಜಸ್, ರವರ ಬೈಕ್ ಗೆ ಡಿಕ್ಕಿಯಾದ ಪರಿಣಾಮ ರಕ್ತಗಾಯವಾಗಿದ್ದು ಚಿಕಿತ್ಸೆಗಾಗಿ ಹಾಸನ ಜನಪ್ರಿಯಾ ಆಸ್ಪತ್ರೆಗೆ ದಾಖಲಿಸಿರುತ್ತೇವೆಂದು ಗಾಯಾಳು ತಾಯಿ ಶ್ರೀಮತಿ ಆಶಾ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: