* * * * * * HASSAN DISTRICT POLICE

Friday, July 12, 2019

ಹಾಸನ ಜಿಲ್ಲೆ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕಟಣೆ ದಿನಾಂಕ: 12-07-2019


      
                         ಪತ್ರಿಕಾ ಪ್ರಕಟಣೆ                  ದಿನಾಂಕ: 12-07-2019

ಜೂಜಾಡುತ್ತಿದ್ದ 7 ಜನರ ಬಂಧನ, ಬಂಧಿತರಿಂದ 2040/- ನಗದು ವಶ:
     ದಿನಾಂಕ: 11-07-2019 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಹೋಬಳಿ, ಬಿದರೆ ಗ್ರಾಮದ ವಾಸಿ ಶ್ರೀ ನಂಜುಂಡಪ್ಪ, ರವರ ತೋಟದ ಬಳಿ ಜೂಜಾಡುತ್ತಿದ್ದಾರೆಂದು ಶ್ರೀಮತಿ ಸರೋಜಾಬಾಯಿ, ಪಿಎಸ್ಐ, ನುಗ್ಗೇಹಳ್ಳಿ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ನಂಜುಂಡೇಗೌಡ ಬಿನ್ ಸಿದ್ದೇಗೌಡ, 67 ವರ್ಷ, 2) ಚಿಕ್ಕೇಗೌಡ @ಗಣೇಶ ಬಿನ್ ಚಿಕ್ಕೇಗೌಡ, 65 ವರ್ಷ, 3) ಸ್ವಾಮಿ ಬಿನ್ ಸಿದ್ದೇಗೌಡ, 55 ವರ್ಷ, 4) ನಂಜೇಗೌಡ ಬಿನ್ ಚಿಕ್ಕೇಗೌಡ, 55 ವರ್ಷ 5) ಧರ್ಮ ಬಿನ್ ಲಕ್ಷ್ಮೇಗೌಡ, 33 ವರ್ಷ, 6) ಅಜೀತ್ ಬಿನ್ ದೇವರಾಜು, 35 ವರ್ಷ 7) ಸತೀಶ್ ಬಿನ್ ರಾಜು, 35 ವರ್ಷ ಎಲ್ಲರೂ ಬಿದರೆ ಗ್ರಾಮ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 2040/- ನಗದನ್ನು ಅಮಾನತ್ತುಪಡಿಸಿಕೊಂಡು ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಅಪರಿಚಿತ ವಾಹನ ಡಿಕ್ಕಿ ಬೈಕ್ ಸವಾರ ಸಾವು:
     ದಿನಾಂಕ: 10-07-2019 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಮೇಘಲಹಟ್ಟಿ ಅಣ್ಣನಾಯಕನಹಳ್ಳಿ ಗ್ರಾಮದ ವಾಸಿ ಶ್ರೀ ನಾಗರಾಜು, ರವರ ಬಾಬ್ತು ಕೆಎ-13, ಟಿಎಂಪಿ 20198389 ರ ಬೈಕ್ ನಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಹಿರೇಹಳ್ಳಿ ಗೇಟ್ ಹತ್ತಿರ ಹೋಗುತ್ತಿದ್ದಾಗ ಯಾವುದೋ ವಾಹನದ ಚಾಲಕ ತನ್ನ ವಾಹನದ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ನಾಗರಾಜು ಬಿನ್ ವೆಂಕಟಸ್ವಾಮಿ, 26 ವರ್ಷ, ಅಣ್ಣನಾಯಕನಹಳ್ಳಿ ಮೇಘಲಹಟ್ಟಿ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು ರವರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತನ ಅಣ್ಣ ಶ್ರೀ ಶಿವಪ್ಪ, ರವರು ದಿನಾಂಕ: 11-07-2019 ರಂದು ಕೊಟ್ಟ ದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್ ನಿಯಂತ್ರಣ ತಪ್ಪಿ, ಬೈಕ್ ಹಿಂಬದಿ ಕುಳಿತಿದ್ದ ಪತ್ನಿ ಸಾವು:
     ದಿನಾಂಕ: 11-07-2019 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕು, ಸಕ್ಕರಾಯಪಟ್ಟಣ ಹೋಬಳಿ, ಜೋಡಿಲಿಂಗದಹಳ್ಳಿ ಗ್ರಾಮದ ವಾಸಿ ಶ್ರೀ ಲೋಕೇಶ್, ರವರ ಬಾಬ್ತು ಕೆಎ-01 ಡಿ-05735 ರ ಮೊಪೆಡ್ ಬೈಕ್ನಲ್ಲಿ ಪತ್ನಿ ಶ್ರೀಮತಿ ಮಹಾಲಕ್ಷ್ಮೀ, ರವರನ್ನು ಕೂರಿಸಿಕೊಂಡು ಅರಸೀಕೆರೆ ತಾಲ್ಲೂಕು, ಬಾಣಾವರ-ಜಾವಗಲ್ ರಸ್ತೆ, ಬೆಳುವಳ್ಳಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿದ್ದರ ಪರಿಣಾಮ, ಬೈಕ್ ಹಿಂಬದಿ ಕುಳಿತಿದ್ದ ಶ್ರೀಮತಿ ಮಹಾಲಕ್ಷ್ಮೀ, ರವರಿಗೆ ತಲೆಯ ಹಿಂಭಾಗಕ್ಕೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಜಾವಗಲ್ ಸಕರ್ಾರಿ ಆಸ್ಪತ್ರೆಯ ವೈದ್ಯರಲ್ಲಿ ತೋರಿಸಲಾಗಿ ಶ್ರೀಮತಿ ಮಹಾಲಕ್ಷ್ಮೀ ಕೋಂ ಲೋಕೇಶ್, 37 ವರ್ಷ, ಜೋಡಿಲಿಂಗದಹಳ್ಳಿ ಗ್ರಾಮ, ಕಡೂರು ಹೋಬಳಿ, ಚಿಕ್ಕಮಗಳೂರು ಜಿಲ್ಲೆ. ಮೃತಪಟ್ಟಿರುವುದಾಗಿ ತಿಳಿಸಿದ ಮೇರೆಗೆ ಮೃತಳ ತಂದೆ ತಿಮ್ಮಯ್ಯ, ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್  ಸವಾರನ ನಿರ್ಲಕ್ಷ್ಯತೆ ಬೈಕ್ ಹಿಂಬದಿ ಕುಳಿತಿದ್ದವನಿಗೆ ರಕ್ತಗಾಯ:
     ದಿನಾಂಕ: 10-07-2019 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಆಲೂರು ತಾಲ್ಲೂಕು, ಪಾಳ್ಯ ಹೋಬಳಿ, ಸಿಂದುವಳ್ಳಿ ಗ್ರಾಮದ ವಾಸಿ ಶ್ರೀ ಸುಮನ್, ರವರು ಸ್ನೇಹಿತರಾದ ಮೈಸೂರಿನ ಶ್ರೀ ಭಾನುಪ್ರಕಾಶ್, ರವರ ಬಾಬ್ತು ಕೆಎ-09, ಹೆಚ್.ಕೆ. 1319 ರ ಬೈಕ್ ನಲ್ಲಿ ಹಾಸನದ ಸಾಲಗಾಮೆ ರಸ್ತೆ, ಎಂ.ಸಿ.ಇ ಇಂಜಿನಿಯರಿಂಗ್ ಕಾಲೇಜಿನ ಮಧ್ಯದ ರಸ್ತೆಯಲ್ಲಿ ಹಂಪ್ಸ್  ನೆಗೆಸಿದಾಗ ಬೈಕ್ ಹಿಂಬದಿ ಕುಳಿತಿದ್ದ ಶ್ರೀ ಸುಮನ್, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹೇಮಾವತಿ ಆಸ್ಪತ್ರೆಗೆ ದಾಖಲಿಸಿದ್ದು, ಬೈಕ್ ಸವಾರ ಶ್ರೀ ಭಾನುಪ್ರಕಾಶ್, ರವರು ಆಸ್ಪತ್ರೆಯ ವೆಚ್ಚವನ್ನು ಭರಿಸದೇ ಪರಾರಿಯಾಗಿರುತ್ತಾರೆಂದು ಶ್ರೀ ಎಸ್.ಎ. ಮಲ್ಲೇಶ್, ರವರು ದಿನಾಂಕ: 11-07-2019 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಗಿಫ್ಟ್ ಪಾರ್ಸ್ ಲ್ ಎಂದು ನಂಬಿಸಿ 2,90,000/- ನಗದು ವಂಚನೆ:
     ದಿನಾಂಕ: 24-06-2019 ರಂದು ಹಾಸನದ ಬೂವನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಹೆಚ್.ಎಂ. ಮಮತಾ, ರವರಿಗೆ ಫೇಸ ಬುಕ್ನಿಂದ ಶ್ರೀ ಕೆಲ್ವಿನ್, ಎಂಬ ವ್ಯಕ್ತಿ ಪರಿಚಯವಾಗಿ ಹುಟ್ಟು ಹಬ್ಬದ ಗಿಫ್ಟ್  ಕಳುಹಿಸುತ್ತೇನೆಂದು ತಿಳಿಸಿದ್ದು, ನಂತರ 7045010141 ನಿಂದ ಬೆಂಗಳೂರಿನ ಏರ್ಪೋಟರ್ ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿ, ಪಾರ್ಸಲ್ ಬಂದಿದೆ ಆದ್ದರಿಂದ 38447087290 ಆಕೌಂಟ್ ಗೆ ಗಿಫ್ಟ್  & ದೂರವಾಣಿ ನಗದು ಸೇರಿ ಒಟ್ಟು 2,90,000/- ಗಳನ್ನು ಎಸ್ ಬಿಐ ಕ್ಯಾಸ್ ಮೆಷನ್ ಗೆ ಪಾವತಿಸಿಕೊಂಡು ನಂಬಿಸಿ ಮೋಸ ಮಾಡಿರುತ್ತಾರೆಂದು ಶ್ರೀಮತಿ ಹೆಚ್.ಎಂ. ಮಮತಾ, ರವರು ದಿನಾಂಕ: 11-07-2019 ರಂದು ಕೊಟ್ಟ ದೂರಿನ ಮೇರೆಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಟ್ರಕ್ ವಾಹನ ಬೈಕ್ ಗೆ ಡಿಕ್ಕಿ ಬೈಕ್ ಸವಾರನಿಗೆ ರಕ್ತಗಾಯ:
     ದಿನಾಂಕ: 10-07-2019 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಅರಳಾಪುರ ಗ್ರಾಮದ ವಾಸಿ ಶ್ರೀ ಪ್ರತಾಪ್, ರವರ ಬಾಬ್ತು ಕೆಎ-18, ವಿ-8308 ರ ಬಜಾಜ್ ಡಿಸ್ಕವರಿ ಬೈಕ್ ನಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಎನೆ ಹೆಚ್-75 ರ ಉದಯಪುರ ಬಸ್ ನಿಲ್ದಾಣದ ಹತ್ತಿರ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕೆಎ-13, ಸಿ-6321 ರ ಟ್ರಕ್ ಚಾಲಕ ಯಾವುದೇ ಸೂಚನೆ ನೀಡದೇ ತಕ್ಷಣ ಬ್ರೇಕ್ ಹಾಕಿ ನಿಲ್ಲಿಸಿದ ಪರಿಣಾಮ ಶ್ರೀ ಪ್ರತಾಪ್, ರವರ ಬೈಕ್ ಗೆ ಡಿಕ್ಕಿಯಾದ ಪರಿಣಾಮ ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಉದಯಪುರ & ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿರುತ್ತೇವೆಂದು ಹಾಗೂ ಟ್ರಕ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗಾಯಾಳು ಮಾವ ಶ್ರೀ ಮೋಹನ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹಳೇ ದ್ವೇಷ ಹಾಗೂ ಕೊಲೆ ಬೆದರಿಕೆ
     ದಿನಾಂಕ: 10-07-2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ನಂದಳ್ಳಿ ಗ್ರಾಮದ ವಾಸಿ ಶ್ರೀ ತಮ್ಮೇಗೌಡ, ರವರು ಅದೇ ಗ್ರಾಮದ ವಾಸಿ ಶ್ರೀ ಆನಂದ, ರವರ ಮನೆಯಲ್ಲಿದ್ದಾಗ ಪಿರ್ಯಾದಿ ಮಗ ಶ್ರೀ ಸತೀಶ್, ರವರು ಏಕೆ ಇಲ್ಲಿ ಕುಳಿತಿದ್ದೀಯಾ ಎಂದು ದ್ವೇಷದಿಂದ ಜಗಳ ತೆಗೆದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುತ್ತಾನೆಂದು ಶ್ರೀ ತಮ್ಮೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಟ್ಯಾಂಕರ್ ಲಾರಿ ಬೈಕ್ ಡಿಕ್ಕಿ ಇಬ್ಬರಿಗೆ ರಕ್ತಗಾಯ:
      ದಿನಾಂಕ:11-07-2019 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆ, ಲಕ್ಯ ಹೋಬಳಿ, ಭಕ್ತರಹಳ್ಳಿ ಬೋವಿ ಕಾಲೋನಿ ವಾಸಿ ಶ್ರೀ ಮೋಹನ್ ಮತ್ತು  ಸ್ನೇಹಿತರಾದ ಶ್ರೀ ಮಹೇಶ್, ರವರು ಅದೇ ಗ್ರಾಮದ ವಾಸಿ ಶ್ರೀ ದಾಸಬೋವಿ, ರವರ ಬಾಬ್ತು ಬೇಲೂರು ತಾಲ್ಲೂಕು, ಹೊಸಮೇನಹಳ್ಳಿ ಗ್ರಾಮದ ಜಮೀನಿನಲ್ಲಿರುವ ಶುಂಠಿಯನ್ನು ನೋಡಿಕೊಂಡು ಬರಲು ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಬೇಲೂರು-ಚಿಕ್ಕಮಗಳೂರು ರಸ್ತೆ, ಯಕಶೆಟ್ಟಿ ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಕೆಎ-19, ಸಿ.0725 ರ ಪೆಟ್ರೋಲ್ ಟ್ಯಾಂಕರ್ ಲಾರಿ ಚಾಲಕ ಯಾವುದೇ ಮುನ್ಸೂಚನೆ ನೀಡದೇ ಗುಂಡಿಯನ್ನು ತಪ್ಪಿಸಲು ಹೋಗಿ ಬೈಕ್ ಗೆ ಡಿಕ್ಕಿಯಾದ ಪರಿಣಾಮ ಬೈಕ್ ಸಮೇತ ಶ್ರೀ ಮೋಹನ್ & ಶ್ರೀ ಮಹೇಶ್, ರವರು ರಸ್ತೆಗೆ ಬಿದ್ದು ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಿರುತ್ತೇವೆಂದು ಗಾಯಾಳುಗಳ ಗ್ರಾಮಸ್ಥರಾದ ಶ್ರೀ ದಾಸಬೋವಿ, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹುಡುಗಿ ಕಾಣೆ
     ದಿನಾಂಕ: 10-07-2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಕೋಟೆ ಅರಕಲಗೂಡು ಸುಬಾಷನಗರದ ವಾಸಿ ಶ್ರೀ ಲಕ್ಷ್ಮಣ, ರವರ ಮಗಳು ಕು|| ಎ.ಎಲ್. ಕೌಶಲ್ಯ, ರವರು ಮನೆಯಿಂದ ಹೊರಗೆ ಹೋದವಳು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಎ.ಎಲ್. ಕೌಶಲ್ಯಳ ತಂದೆ ಶ್ರೀ ಲಕ್ಷ್ಮಣ, ರವರು ದಿನಾಂಕ: 11-07-2019 ರಂದು ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಎ.ಎಲ್. ಕೌಶಲ್ಯ ಬಿನ್ ಲಕ್ಷ್ಮಣ, 22 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೆಂಪು ಬಣ್ಣ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿ ಸುಳಿವು ಸಿಕ್ಕಲ್ಲಿ 08175-220249 ಕ್ಕೆ ಸಂಪರ್ಕಿಸುವುದು.

No comments: