* * * * * * HASSAN DISTRICT POLICE

Monday, March 25, 2019

HASSAN DISTRICT PRESS NOTE : 24-03-2019


ಪತ್ರಿಕಾ ಪ್ರಕಟಣೆ                       ದಿನಾಂಕ: 24-03-2019

ಕಾರಿಗೆ ಲಾರಿ ಡಿಕ್ಕಿ, ಕಾರು ಜಖಂ, ಕಾರಿನಲ್ಲಿದ್ದವರಿಗೆ ರಕ್ತಗಾಯ

         ದಿನಾಂಕ: 22-03-2019 ರಂದು ಹಾಸನ ನಗರ ಆಡುವಳ್ಳಿ ಗ್ರಾಮದ ವಾಸಿ ಶ್ರೀ ಪ್ರದೀಪ್ರವರು ಅವರ ಸ್ನೇಹಿತರಾದ ಚೇತನ್ ಮತ್ತು ಧರಣೇಂದ್ರವರೊಂದಿಗೆ ಚೇತನ್ರವರ ಬಾಬ್ತು ಕೆಎ-02-ಎಂಎಫ್-5991 ನಂಬರಿನ ಮಾರುತಿ ಸ್ವಿಫ್ಟ್ ಕಾರಿನಲ್ಲಿ ರಾಮನಾಥಪುರಕ್ಕೆ ಎಂಗೇಜ್ ಮೆಂಟ್ಗೆ ಹೋಗಿ ವಾಪಸ್ ರಾತ್ರಿ 8-50 ಗಂಟೆಯಲ್ಲಿ ಹಾಸನ ಗೊರೂರು ರಸ್ತೆಯ ಕ್ರಾಸ್ ಹತ್ತಿರ ಬರುತ್ತಿದ್ದಾಗ ಪಕ್ಕದಲ್ಲಿ ಬಂದ ಕೆಎ-19-9816 ರ ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗವಾಗಿ ಚಾಲನೆ ಮಾಡಿಕೊಂಡು ಯಾವುದೇ ಸೂಚನೆ ನೀಡದೆ ಬ್ರೇಕ್ ಹಾಕಿದ್ದು, ಹಿಂಭಾಗದಲ್ಲಿ ಬರುತ್ತಿದ್ದ ಪಿರ್ಯಾದಿಯವರ ಕಾರಿಗೆ ಡಿಕ್ಕಿ ಮಾಡಿದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡು  ಕಾರಿನಲ್ಲಿದ್ದ ನಮಗೆಲ್ಲಾ  ರಕ್ತಗಾಯಗಳಾಗಿದ್ದು, ಅಲ್ಲಿಯೇ ಹೋಗುತ್ತಿದ್ದ ತಮಗೆ ಪರಿಚಯವಿದ್ದ ಪ್ರಶಾಂತ್ರವರು 108 ಆಂಬುಲೆನ್ಸ್ನಲ್ಲಿ ಹಾಸನ ಸ್ಪರ್ಶ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿರುವುದಾಗಿ  ಶ್ರೀ ಪ್ರದೀಪ್ರವರು ನೀಡಿದ ಹೇಳಿಕೆ ಮೇರೆಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಬೈಕಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಒಬ್ಬನ ಬಂಧನ, ಬಂಧಿತನಿಂದ ವಿವಿದ ಕಂಪನಿಯ ಮಧ್ಯ ವಶ

         ದಿನಾಂಕ: 23-03-2019 ರಂದು ಬೆಳಿಗ್ಗೆ 10-45 ಗಂಟೆ ಸಮಯದಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಪಿಐ ಆದ ಶ್ರೀ ಹನುಮಂತ ರಾಜ್ ಎಂ ರವರು ತಮ್ಮ ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪ್ ಸಂಖ್ಯೆ ಕೆಎ*13-ಜಿ-946 ರಲ್ಲಿ ಚನ್ನರಾಯಪಟ್ಟಣ ತಾಲ್ಲೂಕ್ ಬಾಗೂರು ಗ್ರಾಮದ ಎಂ ಶಿವರ ರಸ್ತೆಯ ಹತ್ತಿರ ರೌಂಡ್ಸ್ ನಲ್ಲಿದ್ದಾಗ ಬಾಗೂರು ಕಡೆಯಿಂದ ಬಂದ ಕೆಎ-06-7581 ಬಂದ ಬೈಕ್ನ್ನು ಅನುಮಾನ ಬಂದು ನಿಲ್ಲಿಸಿ ಪರಿಶೀಲಿಸಲಾಗಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯ ತುಂಬಿರುವ ಬಾಟಲಿಗಳನ್ನು ಸಾಗಿಸುತ್ತಿದ್ದು, ಪರವಾನಗಿ ಕೇಳಲಾಗಿ ಯಾವುದೇ ಪರವಾನಗಿ ಇಲ್ಲವೆಂದು ತಿಳಿಸಿದವನ ಹೆಸರು ವಿಳಾಸ ಕೇಳಲಾಗಿ ಶ್ರೀ ಚಂದ್ರಶೇಖರ್ ಬಿನ್ ಲೇಟ್ ಬೋಜೇಗೌಡ, 46 ವರ್ಷ, ಈಡಿಗ ಜನಾಂಗ, ವ್ಯಾಪಾರ ಬಾಗೂರು ಗ್ರಾಮ ಚನ್ನರಾಯಪಟ್ಟಣ ತಾಲ್ಲೂಕ್ ಎಂಬು ತಿಳಿಸಿದವನ್ನು ವಶಕ್ಕೆ ತೆಗೆದುಕೊಂಡು ಅವನ ಬಳಿ ಇದ್ದ ಬೈಕ್ ಮತ್ತು 90 ಎಂ ಎಲ್ನ ಎಂಸಿ ಮ್ಯಾಕ್ ಡೊವೆಲ್ಸ್ 20 ಟೆಟ್ರಾ ಪ್ಯಾಕೇಟ್ಗಳು, ಮದ್ಯ ತುಂಬಿರುವ 750 ಎಂಎಲ್ ನ ಒಂದು ಕಿಂಗ್ ಫಿಷರ್ ಸ್ಟ್ರಾಂಗ್ ಬಾಕ್ಸ್ಗಳನ್ನು ಅಮಾನತ್ತು ಪಡಿಸಿಕೊಂಡು ಬಂದು ಹಾಸನ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಗಂಡ ಮತ್ತು ಆತನ ಮನೆಯವರಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಹಿಂಸೆ ಕಿರುಕುಳ

           ಬೆಂಗಳೂರಿನ ಶ್ರೀಮತಿ ಕುಸುಮರವರನ್ನು  2,50,000 ರೂ ಹಣ ಮತ್ತು 250 ಗ್ರಾಂ ಚಿನ್ನವನ್ನು ಕೊಟ್ಟು ದಿನಾಂಕ: 18-03-2018 ರಂದು ಹಾಸನ ನಗರ ಅಡ್ಲಿ ಮನೆ ರಸ್ತೆ, ರಾಜಕುಮಾರ್ನಗರದ ವಾಸಿ ಶ್ರೀ ಶಶಿಕುಮಾರ್ರವರಿಗೆ ಮದುವೆ ಮಾಡಿಕೊಟ್ಟಿದ್ದು, ಸ್ವಲ್ಪ ದಿವಸ ಚನ್ನಾಗಿದ್ದು, ನಂತರದ ದಿನಗಳಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಅಶ್ಲೀಲವಾಗಿ ನಡೆಸಿಕೊಂಡು, ನಿನ್ನ ತವರು ಮನೆಯಿಂದ ವ್ಯಾಪಾರ ಮಾಡಲು ಹಣ ತೆಗೆದುಕೊಂಡು ಬಾ, ಬುಲೆಟ್ ಕೊಡಿಸು ಎಂದು ಪ್ರತಿ ದಿವಸ ಹಿಂಸೆಕಿರುಕುಳ ನೀಡುತ್ತಿದ್ದು, ನಾದಿನಿ ಪ್ರೀತಿ ಅತ್ತೆ ಪ್ರೇಮ ರವರು ಸಹ ತಾವು ಹೇಳಿದ ಹಾಗೆ ಕೇಳದಿದ್ದರೆ ಮನೆಯಿಂದ ಹೊರಗೆ ಹಾಕುವುದಾಗಿ ಹಿಂಸೆ ಕೊಡುವುದಲ್ಲದೆ ನಿಮ್ಮತಂದೆ ತಾಯಿಯ ಹೆಸರಿನಲ್ಲಿರುವ ಮನೆಯನ್ನು ನಿನ್ನ ಹೆಸರಿಗೆ ಬರೆಸಿಕೊಂಡು ಬಾ ಎಂದು ಹಿಂಸೆ ಕಿರುಕುಳ ನೀಡಿ 6 ತಿಂಗಳ ಗಭರ್ಿಣಿಯಾಗಿದ್ದಾಗ ಮನೆಯಿಂದ ತವರು ಮನೆಗೆ ಕಳುಹಿಸಿದ್ದು, ತನಗೆ 4 ತಿಂಗಳ ಮಗುವಾದರೂ ಸಹ ಯಾರು ಬಂದು ನೋಡಿರುವುದಿಲ್ಲವೆಂದು, ಇದಕ್ಕೆ ತನ್ನ ಗಂಡನ ಅಕ್ಕನಾದ ಶ್ರೀಮತಿ ಯಶೋದಮ್ಮರವರು ಸಹ ಕಾರಣರಾಗಿರುತ್ತಾರೆ ಎಂದು ಶ್ರೀಮತಿ ಕುಸುಮರವರು ನೀಡಿದ ದೂರಿನ ಮೇರೆಗೆ ಹಾಸನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಚ್ಚಿನ ವರದಕ್ಷಿಣೆ ತರುವಂತೆ ಗಂಡ ಮತ್ತು ಆತನ ಮನೆಯವರಿಂದ ಹಿಂಸೆ ಕಿರುಕುಳ ನೀಡಿ ಕೊಲೆ ಬೆದರಿಕೆ,
           ಅರಸೀಕೆರೆ ತಾಲ್ಲೂಕ್, ಜಾವಗಲ್ ಹೋಬಳಿ, ಬಕ್ಕಪ್ಪನಕೊಪ್ಪಲು ಗ್ರಾಮದ ಶ್ರಿಮತಿ ಕಾಂಚನ ಬಿ ಆರ್ ರವರನ್ನು ದಿನಾಂಕ: 22-05-2017 ರಂದು ಅರಕಲಗೂಡು ತಾಲ್ಲೂಕ್, ದೊಡ್ಡಮಗ್ಗೆ ಹೋಬಳಿ ಶ್ರೀರಾಂಪುರ ಗ್ರಾಮದ ಶಬರೀಶ್ ಎಂಬುವವರಿಗೆ ಕೊಟ್ಟು ಮದುವೆ ಮಾಡಿದ್ದು, ಮದುವೆ ಸಮಯದಲ್ಲಿ 3 ಲಕ್ಷ ರೂ ನಗದು, 300 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ಕೊಟ್ಟಿದ್ದು, ಮದುವೆಯಾದ ನಂತರ ಗಂಡ ಹೆಂಡತಿ ರಾಯಚೂರಿನ ಶಕ್ತಿನಗರದಲ್ಲಿ ವಾಸವಾಗಿದ್ದು, ಮದುವೆಯಾಗಿ 4 ತಿಂಗಳು ಕಳೆದ ನಂತರ ಶಬರೀಶ್ ಮತ್ತು ಆತನ ತಂದೆ ಮಂಜುನಾಥ, ತಾಯಿ ಗೌರಮ್ಮ, ಅಕ್ಕ ಸೌಮ್ಯ, ಭಾವ ಅಯ್ಯಪ್ಪರವರುಗಳು ಹೆಚ್ಚಿನ ವರದಕ್ಷಿಣೆ ತರುವಂತೆ ಜಗಳ ತೆಗೆದು ಕೈ ಮತ್ತು ಕೋಲಿನಿಂದ ಮೈಕೈಗೆ ಹೊಡೆದು ದೈಹಿಕ ಮತ್ತು ಮಾನಸಿಕ ಹಿಂಸೆ ಕಿರುಕುಳ ನೀಡುತ್ತಿದ್ದು, ಹಲವಾರು ಬಾರು ರಾಜಿ ಪಂಚಾಯ್ತಿ ಮಾಡಿದರೂ ಸಹ ಹೆಚ್ಚಿನ ವರದಕ್ಷಿಣೆ ತರದಿದ್ದರೆ ಸೀಮೆ ಎಣ್ಣೆ ಹಾಕಿ ಸುಟ್ಟು ಹಾಕುವುದಾಗಿ ಕೊಲೆ ಬೆದರಿಕೆ ಹಾಕಿದ್ದರಿಂದ ಪಿರ್ಯಾದಿಯವರು ಹೆದರಿ ತವರು ಮನೆಗೆ ಬಂದಿದ್ದರೂ ಸಹ ಫೋನ್ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ನಿನ್ನ ತಮ್ಮನನ್ನು ಕೊಲೆ ಮಾಡುತ್ತೇವೆಂದು ಬೆದರಿಕೆ ಹಾಕಿರುತ್ತಾರೆಂದು ಶ್ರೀಮತಿ ಕಾಂಚನಾರವರು ನೀಡಿದ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. 

ಮನೆಯ ಲಾಕ್ ಮುರಿದು ಬೀರುವಿನಲ್ಲಿದ್ದ ಸುಮಾರು 80 ಸಾವಿರ ಬೆಲೆ ಬಾಳುವ ಚಿನ್ನಾಭರಣ ಕಳವು

           ದಿನಾಂಕ: 20-03-2019 ರಂದು ಮದ್ಯಾಹ್ನ 1-00 ಗಂಟೆಯಲ್ಲಿ  ಅರಸೀಕೆರೆ ತಾಲ್ಲೂಕ್, ಬಾಣಾವರ ಟೌನ್ ವಾಸಿ ಶ್ರೀ ಅಯೂಬ್ ಖಾರವರು ಮನೆಗೆ ಬೀಗ ಹಾಕಿಕೊಂಡು ಸಂಸಾರ ಸಮೇತ ಚಿಕ್ಕಮಗಳೂರಿಗೆ ಹೋಗಿದ್ದು, ದಿನಾಂಕ: 22-03-2019 ರಂದು ಸಂಜೆ 6-30 ಗಂಟೆಯಲ್ಲಿ ವಾಪಸ್ ಮನೆಗೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಲಾಕನ್ನು ಮುರಿದು ಮನೆಯ ಹಾಲ್ನ ಬೀರುವಿನಲ್ಲಿದ್ದ ಸುಮಾರು 80 ಸಾವಿರ ರೂ ಬೆಲೆ ಬಾಳುವ 25 ಗ್ರಾಂ ತೂಕದ ಚಿನ್ನದ ನಕ್ಲೇಸ್, 10 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ, 4 ಗ್ರಾಂ ತೂಕದ ಒಂದು ಚಿನ್ನದ ಉಂಗುರ, ಎರಡು ಜೊತೆ ಬೆಳ್ಳಿಯ ಕಾಲುಚೈನು ಇವುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಶ್ರೀ ಅಯೂಬ್ ಖಾನ್ರವರು ನೀಡಿದ ದೂರಿನ ಮೇರೆಗೆ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಯಾರೋ ಕಳ್ಳರಿಂದ 1, 30,000/- ರೂ ಬೆಲೆಯ ಬುಲೆಟ್ ಬೈಕ್ ಕಳವು

           ಹಾಸನ ನಗರ ವಿಶ್ವೇಶ್ವರಯ್ಯ ಬಡಾವಣೆಯ ವಾಸಿ ಶ್ರೀ ನಂದನ್.ಹೆಚ್.ವೈರವರು ದಿನಾಂಕ: 21-03-2019 ರಂದು ರಾತ್ರಿ 10-00 ಗಂಟೆಯಲ್ಲಿ ತಮ್ಮ ಬಾಬ್ತು ಕೆಎ-46-ಕೆ-8105 ನಂಬರಿನ ಬುಲೆಟ್ ಬೈಕನ್ನು ತಾವು ವಾಸವಿರುವ ಮನೆಯ ಮುಂದಿನ ಕಾಂಪೌಂಡ್ನಲ್ಲಿ ನಿಲ್ಲಿಸಿದ್ದು, ಮಾರನೆ ದಿನ ದಿನಾಂಕ: 22-03-2019 ರಂದು ಬೆಳಿಗ್ಗೆ 8-00 ಗಂಟೆಗೆ ನೋಡಿದಾಗ ಬೈಕ್ ಇರಲಿಲ್ಲ, ಸದರಿ ಬೈಕನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಶ್ರೀ ನಂದನ್ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಶ್ರೀ ಶರತ್ಕುಮಾರ್ ಹೆಚ್.ಪಿ, ಪಿಎಸ್ಐ, ಬಡಾವಣೆ ಠಾಣೆರವರು ಭೇಟಿ ನೀಡಿ ತನಿಖೆ ಕೈಗೊಂಡಿರುತ್ತಾರೆ.

ಬೈಕ್ಗೆ ಟಾಟಾ ಏಸ್ ವಾಹನ ಡಿಕ್ಕಿ, ಬೈಕಿನಲ್ಲಿದ್ದ ಇಬ್ಬರಿಗೆ ಗಾಯ

           ದಿನಾಂಕ: 21-03-2019 ರಂದು ಮದ್ಯಾಹ್ನ 1-00 ಗಂಟೆಯಲ್ಲಿ ಹೊಳೆನರಸೀಪುರ ತಾಲ್ಲೂಕ್, ಹಳ್ಳಿ ಮೈಸೂರು ಹೋಬಳಿ, ಕೋಗಿಲೆ ಹಳ್ಳಿ ಗ್ರಾಮದ ಶ್ರೀ ಶಿವಣ್ಣೇಗೌಡರವರ ರವರ ಅಳಿಯ ಕುಮಾರ್ರವರು ಪಿರ್ಯಾದಿಯವರ ಹೆಂಡತಿ ರಾಜಮ್ಮ ಮತ್ತು ಮಗಳು ನೀಲಾರವರನ್ನು ಚಿಕಿತ್ಸೆಗಾಗಿ ಕೆಎ-13-ಇಇ-8096 ನಂಬರಿನ ಹೀರೋಹೊಂಡಾ ಪ್ಯಾಷನ್ ಪ್ರೋ ಬೈಕಿನಲ್ಲಿ ಶಿರದನಹಳ್ಳಿಯಿಂದ ಕೇರಳಾಪುರಕ್ಕೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗ, ಹಿಂಭಾಗದಿಂದ ಬಂದ ಕೆಎ-13-ಸಿ-2797 ರ ಟಾಟಾ ಏಸ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕ್ನ ಹಿಂಭಾಗ ಡಿಕ್ಕಿ ಮಾಡಿದ ಪರಿಣಾಮ ಬೈಕ್ ರಸ್ತೆಯ ಮೇಲೆ ಬಿದ್ದು, ಬೈಕಿನಲ್ಲಿ ಕುಳಿತಿದ್ದ ರಾಜಮ್ಮ ಮತ್ತು ನೀಲಾರವರಿಗೆ ತಲೆ ಮತ್ತು ಇತರೆ ಕಡೆಗಳಿಗೆ ತೀವ್ರ ರಕ್ತಗಾಯವಾಗಿದ್ದು, ತೀವ್ರ ಏಟಾಗಿದ್ದ ರಾಜಮ್ಮರವರನ್ನು ಹೆಚ್ಚಿನ ಚಿಕತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿರುವುದಾಗಿ ಶ್ರೀ ಶಿವಣ್ಣೇಗೌಡರವರು ನೀಡಿದ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ವಿವಿಧ ಪ್ರಕರಣದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಮಹಿಳೆ ಸೇರಿದಂತೆ 4 ಜನರ ಬಂಧನ, ಬಂಧಿತರಿಂದ 854/- ರೂ ಬೆಲೆಯ ವಿವಿಧ ಕಂಪನಿಯ ಮಧ್ಯ ವಶ

ಪ್ರಕರಣ-1 : ದಿನಾಂಕ: 23-03-2019 ರಂದು ಸಂಜೆ 5-00 ಗಂಟೆಯಲ್ಲಿ ಶ್ರೀ ಜಗದೀಶ್, ಪಿಎಸ್ಐ, ಗೊರೂರು ಪೊಲೀಸ್ ಠಾಣೆರವರಿಗೆ ಗೊರೂರಿನ ಅಭಿರುಚಿ ಹೋಟೆಲ್ ಮುಂಭಾಗದಲ್ಲಿ ಸಾರ್ವಜನಿಕರಿಗೆ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ 3 ಜನರು ಮಧ್ಯಪಾನ ಮಾಡುತ್ತಿದ್ದು, ಪಿರ್ಯಾದಿ ಮತ್ತು ಸಿಬ್ಬಂದಿಯವರನ್ನು ಕಂಡು ಓಡಿ ಹೋಗಿದ್ದು, ಅಕ್ರಮವಾಗಿ ಮದ್ಯಪಾನ ಸರಬರಾಜು ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ತರುಣ್ ಬಿನ್ ಶಂಕರ್, 19 ವರ್ಷ, ಆದಿಕನರ್ಾಟಕ ಜನಾಂಗ, ಹೋಟೆಲ್ನಲ್ಲಿ ಕೆಲಸ, ದೊಡ್ಡಮಂಡಿಗನಹಳ್ಳಿ ರೇಷ್ಮೇ ಕ್ವಾಟ್ರಸ್, ಹಾಸನ ಎಂದು ತಿಳಿಸಿದವನನ್ನು ದಸ್ತಗಿರಿ  ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ 192/- ರೂ ಬೆಲೆಯ ಮಧ್ಯವನ್ನು ಅಮಾಣನತ್ತು ಪಡಿಸಿಕೊಂಡು ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-2:  ದಿನಾಂಕ: 23-03-2019 ರಂದು ಸಂಜೆ 4-00 ಗಂಟೆಯಲ್ಲಿ ಹಾಸನ ತಾಲ್ಲೂಕ್, ದುದ್ದ ಹೋಬಳಿ, ಹೊಸೂರು ಗೌರಿಪುರ ಗೇಟ್ನ ಶೆಡ್ ಹತ್ತಿರ,  ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆಂದು, ಶ್ರೀ ರವಿಶಂಕರ್, ಸಿ, ಪಿಎಸ್ಐ, ದುದ್ದ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಅಕ್ರಮವಾಗಿ ಮಧ್ಯಪಾನ ಮಾಡಲು ಅವಕಾಶ ಮಾಡಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ನಂಜೇಗೌಡ, ಬಿನ್ ಲೇಟ್ ದಾಸೇಗೌಡ, ವಕ್ಕಲಿಗರು, ದೊಡ್ಡಪುರ ಗ್ರಾಮ, ಕಸಬಾ ಹೋಬಳಿ, ಹಾಸನ ತಾಲ್ಲೂಕ್ ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ 152/- ರೂ ಬೆಲೆಯ ಮಧ್ಯವನ್ನು ವಶಪಡಿಸಿಕೊಂಡು ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-3:  ದಿನಾಂಕ: 23-03-2019 ರಂದು ಸಂಜೆ 6-10 ಗಂಟೆಯಲ್ಲಿ ಹೊಳೆನರಸೀಪುರ ತಾಲ್ಲೂಕ್, ಹಳೇಕೋಟೆ ಹೋಬಳಿ, ಬಸವನಾಯಕನಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆಂದು ಹೊಳೆನರಸೀಪುರ ನಗರ ಠಾಣೆಯಲ್ಲಿ ಗುಪ್ತ ಮಾಹಿಡಿ ಸಂಗ್ರಹಕ್ಕೆ ನೇಮಕವಾಗಿದ್ದ ಚಿದಾನಂದ ಪಿಸಿ 70 ರವರಿಗೆ ಬಂದ ಮಾಹಿಡಿ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿ ಬಸವನಾಯಕನಹಳ್ಳಿಯ ಜನಾರ್ಧನ ಬಿನ್ ಕೃಷ್ಣಪ್ಪ ಎಂಬುವವರು ಗ್ರಾಮದ ಚಾನೆಲ್ ಹತ್ತಿರ ಸೇತುವೆಯ ಬಳಿ ಇರುವ ಅಂಗಡಿಯಲ್ಲಿ ಯಾವೊದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಧ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುತ್ತಾರೆಂದು ನೀಡಿದ ವರದಿಯ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.

ಪ್ರಕರಣ-4 : ದಿನಾಂಕ: 23-03-2019 ರಂದು ಸಂಜೆ 6-30 ಗಂಟೆಯಲ್ಲಿ ಆಲೂರು ತಾಲ್ಲೂಕ್, ಹಳೇ ಆಲೂರು ಗ್ರಾಮದ ರಸ್ತೆಯ ಪಕ್ಕ ಇರುವ ಒಂದು ಅಂಗಡಿಯಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದರುವುದಾಗಿ ಶ್ರೀ ವೆಂಕಟರಮಣಸ್ವಾಮಿ, ಪಿಎಸ್ಐ, ಆಲೂರು ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಮಧ್ಯ ಮಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಚಂದ್ರಮ್ಮ  ಕೋಂ ತಮ್ಮಯ್ಯ, 40 ವರ್ಷ, ಪರಿಶಿಷ್ಟ ಜಾತಿ, ಹಳೇ ಆಲೂರು ಗ್ರಾಮ ಎಂದು  ದಸ್ತಗಿರಿ ಮಾಡಿ ಮಾರಾಟಕ್ಕಿಟ್ಟಿದ್ದ 510/- ರೂ ಬೆಲೆಯ ಮಧ್ಯವನ್ನು ಅಮಾನತ್ತು ಪಡಿಸಿಕೊಂಡು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕ್ರಮ ಕೈಗೊಂಡಿರುತ್ತೆ.

No comments: