* * * * * * HASSAN DISTRICT POLICE

Saturday, March 23, 2019

HASSAN DISTRICT PRESS NOTE 23-03-2019



                 
                     ಪತ್ರಿಕಾ ಪ್ರಕಟಣೆ               ದಿ: 23-03-2019

ಜೂಜಾಡುತ್ತಿದ್ದ ಇಬ್ಬರ ಜನರ  ಬಂಧನ, ಬಂಧಿತರಿಂದ 2,220/- ನಗದು ವಶ
     ದಿನಾಂಕ: 22-03-2019 ರಂದುಸಂಜೆ 05-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಲಕ್ಷ್ಮಿಪುರ ಗ್ರಾಮದ ಹತ್ತಿರಗದ್ದೆಯಲ್ಲಿ ಹೊಂಗೆಮರದ ಕೆಳಗೆ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಪಿಎಸ್ಐ ಶ್ರೀ ಜಗದೀಶ್ ಕೆ. ಬೇಲೂರು ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಸುಹಿಲ್ ಬಿನ್ ಅಮೀರ್ ಜಾನ್, 39 ವರ್ಷ, ಬಿಕ್ಕೋಡುರಸ್ತೆ, ಬೇಲೂರು ಪಟ್ಟಣ 2) ಲೋಕೇಶ ಬಿನ್ ಜಯರಾಮೇಗೌಡ, 36 ವರ್ಷ, ಲಕ್ಷ್ಮಿಪುರ ಗ್ರಾಮ, ಬೇಲೂರುತಾಲ್ಲೂಕುಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 2220/- ನಗದನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮಕೈಗೊಂಡಿರುತ್ತೆ.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪುರುಷ & ಮಹಿಳೆ ಸೇರಿದಂತೆ ಹಾಗೂ ಸ್ಥಳಾವಕಾಶ ಮಾಡಿಕೊಟ್ಟ ಒಟ್ಟು ಮೂವರ ಬಂಧನ, 8,786/- ಬೆಲೆಯ ವಿವಿಧ ಮಾದರಿಯ ಮದ್ಯ ವಶ:
ಪ್ರಕರಣ-01, ದಿನಾಂಕ: 22-03-2019 ರಂದು ಬೆಳಿಗ್ಗೆ 8-15 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಸೊಂಪುರ ಗ್ರಾಮದ ಇಟ್ಟಿಗೆ ಫ್ಯಾಕ್ಟರಿ ಹತ್ತಿರ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಶಿವಣ್ಣ, ಎಎಸ್ಐ, ಕೊಣನೂರು ಪೊಲೀಸ್ ಠಾಣೆ, ರವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ನಿಂಗರಾಜೇಗೌಡ ಬಿನ್ ಜವರೇಗೌಡ, 58 ವರ್ಷ, ಸೊಂಪುರ ಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ 7,513/- ಬೆಲೆಯ ವಿವಿಧ ಮಾದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಪ್ರಕರಣ-02, ದಿನಾಂಕ: 22-03-2019 ರಂದು ಬೆಳಿಗ್ಗೆ 10-20 ಗಂಟೆ ಸಮಯದಲ್ಲಿಅರಕಲಗೂಡುತಾಲ್ಲೂಕು, ರಾಮನಾಥಪುರ  ಬಸ್ ನಿಲ್ದಾಣದಲ್ಲಿಒಬ್ಬ ಮಹಿಳೆ ಅಕ್ರಮವಾಗಿಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪಾಕೇಟ್ಗಳನ್ನು ಹಿಡಿದುಕೊಂಡು ನಿಂಧಿದ್ದಾಎಂದು ಸಿಹೆಚ್ಸಿ-35 ಶ್ರೀ ಶ್ರೀನಿವಾಸನ್ ಪಿ.ಆರ್. ಕೊಣನೂರುಠಾಣೆರವರಿಗೆ ಬಂದಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಸರ್ಕಾರದ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ನಿಂತಿದ್ದವಳನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ತೀರ್ಥ ಕೋಂ ಮಲ್ಲಿಕ, 30 ವರ್ಷ, ರುದ್ರಪಟ್ಟಣಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕುಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ 1273/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಠಾಣೆಯಲ್ಲಿ ಪ್ರರಕಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಪ್ರಕರಣ:03, ದಿನಾಂಕ: 22-03-2019 ರಂದು ಸಂಜೆ 07-45 ಗಂಟೆ ಸಮಯದಲ್ಲಿ  ಬೇಲೂರುತಾಲ್ಲೂಕು, ಕಸಬಾ ಹೋಬಳಿ ದುಮ್ಮೇನಹಳ್ಳಿ ಗ್ರಾಮದರಮೇಶರವರು ಮನೆಯ ಮುಂಭಾಗದಜಗಲಿ ಮೇಲೆ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂದು ಪಿಎಸ್ಐ, ಶ್ರೀ ಜಗದೀಶ್ ಕೆ. ಬೇಲೂರುಠಾಣೆರವರಿಗೆ ಬಂದಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಲು ಸ್ಥಳಾವಕಾಶ ಮಾಡಿಕೊಟ್ಟವನನ್ನು  ಹಿಡಿದು ಹೆಸರು ವಿಳಾಸ ಕೇಳಲಾಗಿ ರಮೇಶ ಬಿನ್ ಈರಯ್ಯ, 45 ವರ್ಷ, ದುಮ್ಮೇನಹಳ್ಳಿ ಗ್ರಾಮ, ಕಸಬಾ ಹೋಬಳಿ, ಬೇಲೂರು ತಾಲ್ಲೂಕುಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಬೇಲೂರುಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.

ಬೈಕ್  ರಸ್ತೆ  ಕಾಮಗಾರಿಗೆ ಡಿಕ್ಕಿ, ಜಖಂಗೊಂಡು ಒಂದು ಸಾವು, ಒಬ್ಬರಿಗೆ ರಕ್ತಗಾಯ:
     ದಿನಾಂಕ: 21-03-2019 ರಂದು ರಾತ್ರಿ 11-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಸಾಲಗಾಮೆ ಹೋಬಳಿ, ಸೊಪ್ಪಿನಹಳ್ಳಿ ಗ್ರಾಮದ ಶ್ರೀ ಸುನಿಲ್ ಕುಮಾರ್, ರವರು ಸ್ನೇಹಿತರಾದ ಶ್ರೀ ಲೋಹಿತ್, ರವರ ಬಾಬ್ತು ಕೆಎ-51, ಜೆ-209 ರ ಪಲ್ಸರ್ ಬೈಕ್ ನಲ್ಲಿ ಹಾಸನ ತಾಲ್ಲೂಕು, ಬೂದೇಶ್ವರ ಮಠದ ಹುಣ್ಣಿಮೆ ಕಾರ್ಯಕ್ರಮಕ್ಕೆ ಹೋಗಲು ಹಾಸನ ತಾಲ್ಲೂಕು, ನಿಟ್ಟೂರು ಐದಳ್ಳ ರಸ್ತೆ, ಬ್ರಹ್ಮದೇವರಹಳ್ಳಿ ಗ್ರಾಮದ ಹತ್ತಿರ ಬೈಕ್ ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ರಸ್ತೆ ಕಾಮಗಾರಿ ಸೇತುವೆಗೆ ಡಿಕ್ಕಿಯಾಗಿ ಬೈಕ್ ಜಖಂಗೊಂಡ ಪರಿಣಾಮ ಶ್ರೀ ಸುನಿಲ್ ಕುಮಾರ್ ಬಿನ್ ನಾಗರಾಜ, 30 ವರ್ಷ, ಸೊಪ್ಪಿನಹಳ್ಳಿ ಗ್ರಾಮ, ಸಾಲಗಾಮ ಹೋಬಳಿ, ಹಾಸನ ತಾಲ್ಲೂಕು. ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಹಾಗೂ ಶ್ರೀ ಲೋಹಿತ್, ರವರಿಗೆ ಸೇತುವೆ ಕಬ್ಬಿಣದ ರಾಡುಗಳು ತಲೆಗೆ ಚುಚ್ಚಿ ರಕ್ತಯಗಾಯವಾಗಿದ್ದು, ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿರುತ್ತೇವೆಂದು ಗಾಯಾಳು ಶ್ರೀ ಲೋಹಿತ್, ತಾಯಿ ಶ್ರೀಮತಿ ಶಾಂತಮ್ಮ, ರವರು ಕೊಟ್ಟ ದೂರಿನ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಮದುವೆ ವಿಚಾರಕ್ಕೆ ಪ್ರಚೋಧನೆಯಿಂದ ಮನನೊಂದು ಯುವಕ ಅತ್ಮಹತ್ಯೆ:
     ದಿನಾಂಕ: 21-03-2019 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ಹೋಬಳಿ, ಕಕ್ಕಿಹಳ್ಳಿ ಗ್ರಾಮದ ವಾಸಿ ಶ್ರೀ ಶಿವೇಗೌಡ, ರವರ ಮಗ ಶ್ರೀ ಬೀರೇಶ್ ನನ್ನು ಅದೇ ಗ್ರಾಮದ ವಾಸಿ ಶ್ರೀಮತಿ ಲೀಲಾವತಿ, ರವರು ಮಗಳನ್ನು ಶ್ರೀ ಬೀರೇಶ್ ನಿಗೆ ಮದುವೆ ಮಾಡಿಕೊಳ್ಳಿ ಎಂದು ಕೇಳಿದ್ದು, ಶ್ರೀಮತಿ ಲೀಲಾವತಿ, ರವರ ಮಗಳು ಶ್ರೀ ಬೀರೇಶ್, ಇಬ್ಬರು ಪ್ರೀತಿಸುತ್ತಿದ್ದು, ಶ್ರೀಮತಿ ಲೀಲಾವತಿ, ರವರು ಶ್ರೀ ಬೀರೇಶ್ ನನ್ನು ಮನೆಗೆ ಕರೆದುಕೊಂಡು ಹೋಗಿ ಮಗಳನ್ನು ಮದುವೆಯಾಗು ಎಂದು ಕೇಳಿದ್ದಕ್ಕೆ ಮದುವೆಯಾಗುವುದಿಲ್ಲವೆಂದು ಕೇಳಿದ್ದಕ್ಕೆ ಇಬ್ಬರ ನಡುವೆ ಹಣದ ವಿಚಾರಕ್ಕಾಗಿ ಜಗಳವಾಗಿದ್ದು, ಶ್ರೀಮತಿ ಲೀಲಾವತಿ ಕಬ್ಬಿಣದ ರಾಡಿನಿಂದ ಶ್ರೀ ಬೀರೇಶ್ ನ ತಲೆಗೆ ಹೊಡೆದಿದ್ದು, ಇವರುಗಳ ಪ್ರಚೋಧನೆಯಿಂದ ಮನನೊಂದು ಶ್ರೀ ಬೀರೇಶ್ ಬಿನ್ ಶಿವೇಗೌಡ, 26 ವರ್ಷ, ಕಕ್ಕಿಹಳ್ಳಿ ಗ್ರಾಮ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು, ರವರು ಮನೆಯ ಕೊಟ್ಟಗೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆಂದು ಹಾಗೂ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತನ ತಾಯಿ ಶ್ರೀಮತಿ ಮಂಜುಳ, ರವರು ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಸ್ಥಳಕ್ಕೆ ಕು|| ಎಂ.ಸಿ. ಮಧು, ಪಿಎಸ್ಐ ನುಗ್ಗೇಹಳ್ಳಿ ಪೊಲೀಸ್ ಠಾಣೆ, ರವರು ಭೇಟಿ ತನಿಖೆ ಕ್ರಮ ಕೈಗೊಂಡಿರುತ್ತೆ.

ಅಕ್ರಮವಾಗಿ ಟ್ರ್ಯಾಕ್ಟರ್ ಗಳಲ್ಲಿ ಮರಳು ಸಾಗಿಸುತ್ತಿದ್ದ ಇಬ್ಬರ ಬಂಧನ, ಮರಳು ಸಮೇತ 2 ಟ್ರ್ಯಾಕ್ಟರ್ ಗಳ ವಶ
     ದಿನಾಂಕ: 21-03-2019 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ಆಲೂರು, ಬೈರಾಪುರ ಕಣದಹಳ್ಳಿ, ಪಾಳ್ಯ, ಮಗ್ಗೆ ರಸ್ತೆಯ ಧರ್ಮಪುರಿ, ಹೊನ್ನೇಹಳ್ಳಿ ಕ್ರಾಸ್ ಹತ್ತಿರ ಪಿಎಸ್ಐ ಶ್ರೀ ವೆಂಕಟರಮಣಸ್ವಾಮಿ,ಎಂ.ಜೆ. ಆಲೂರು ಠಾಣೆರವರು ರಾತ್ರಿ ಗಸ್ತು ಮಾಡುತ್ತಿದ್ದಾಗ ಆಲೂರು ತಾಲ್ಲೂಕು, ಕುಂದೂರು ಹೋಬಳಿ, ಮಂಚೇನಹಳ್ಳಿ ಗ್ರಾಮದ  ಹತ್ತಿರ ಟ್ರ್ಯಾಕ್ಟರ್ಗಳಲ್ಲಿ ಮರಳನ್ನು ಕಳ್ಳತನ ಮಾಡಿಕೊಂಡು ಬರುತ್ತಿದ್ದಾರೆಂದು ಬಂದಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಎರಡು ಟ್ರ್ಯಾಕ್ಟರ್ ಗಳಲ್ಲಿ ಸರ್ಕಾರಕ್ಕೆ ಯಾವುದೇ ರಾಜಧನವನ್ನು ಕಟ್ಟದೆ ಅಕ್ರಮವಾಗಿ ಮರಳನ್ನು ತುಂಬಿಕೊಂಡು ಬರುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಹರೀಶ ಬಿನ್ ಲೇಟ್ ಹೊನ್ನಪ್ಪ, 32 ವರ್ಷ, ಮಂಚೇನಹಳ್ಳಿ ಗ್ರಾಮ, ಕುಂದೂರು ಹೋಬಳಿ, ಆಲೂರುತಾಲ್ಲೂಕು 2) ಪಾಲಾಕ್ಷ ಬಿನ್ ಗಂಗಾಧರಪ್ಪ, 39 ವರ್ಷ, ಮಂಚೇನಹಳ್ಳಿ ಗ್ರಾಮ, ಕುಂದೂರು ಹೋಬಳಿ, ಆಲೂರುತಾಲ್ಲೂಕುಎಂದು ತಿಳಿಸಿದವರನ್ನು ದಸ್ತಗಿರಿ ಮಾಡಿಕೊಂಡು ಮರಳು ತುಂಬಿದ 1) ಕೆಎ-46-ಟಿ-4455-56 2) ಕೆಎ-46-ಟಿ-5514-15 ರ ಟ್ರ್ಯಾಕ್ಟರ್ ಮತ್ತು ಟ್ರೈಲರ್ ಗಳನ್ನು ಅಮಾನತ್ತುಪಡಿಸಿಕೊಂಡು ಆಲೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.
ಹುಡುಗ ಕಾಣೆ
     ದಿನಾಂಕ: 20-03-2019 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಣಕಟ್ಟೆ ಹೋಬಳಿ, ಪುಟ್ಟನಕಟ್ಟೆ ಗ್ರಾಮದ ವಾಸಿ ಶ್ರೀ ದಿನೇಶ್, ರವರ ಮಗ ಕು|| ದಿಲೀಪ, ಬಾಣಾವರ ಕಾಲೇಜಿನಲ್ಲಿ ಕಾಮರ್ಸ್ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಕಾಲೇಜಿಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ದಿಲೀಪನ ತಂದೆ ಶ್ರೀ ಕೆ.ಆರ್. ದಿನೇಶ್, ರವರು ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಕು|| ದಿಲೀಪ ಬಿನ್ ದಿನೇಶ್, 17 ವರ್ಷ, 5'6' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಮಿಶ್ರಿತ ಬಿಳಿ ಗೆರೆಯಿರುವ ಶಟರ್್ ಮತ್ತು ನೀಲಿ ಬಣ್ಣದ ಜೀನ್ಸ್ ಫ್ಯಾಂಟ್ ಧರಿಸಿರುತ್ತಾರೆ. ಈ ಹುಡುಗನ ಸುಳಿವು ಸಿಕ್ಕಲ್ಲಿ 08174-235633 ಕ್ಕೆ ಸಂಪರ್ಕಿಸುವುದು.


No comments: