* * * * * * HASSAN DISTRICT POLICE

Monday, March 25, 2019

HASSAN DISTRICT PRESS NOTE 25-03-2019



                   
                               ಪತ್ರಿಕಾ ಪ್ರಕಟಣೆ                       ದಿ: 25-03-2019

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, 454/- ಬೆಲೆಯ ಮದ್ಯ ವಶ:
     ದಿನಾಂಕ: 24-03-2019 ರಂದು ಮಧ್ಯಾಹ್ನ 3-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಬಾಗೂರನಹಳ್ಳಿ ಗ್ರಾಮದ ವಾಸಿ ಶ್ರೀ ದೇವರಾಜ, ರವರು ಗ್ರಾಮದ ಅರಳಿಮರದ ಹತ್ತಿರ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಶಬ್ಬೀರ್ ಹುಸೇನ್, ಪಿಎಸ್ಐ ಗಂಡಸಿ ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ದೇವರಾಜ ಬಿನ್ ಚಿಕ್ಕೇಗೌಡ, 48 ವರ್ಷ, ಬಾಗೂರನಹಳ್ಳಿ ಗ್ರಾಮ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ 454/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಕಳವು
     ದಿನಾಂಕ: 03-01-2019 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಹಾಸನದ ಹೇಮಾವತಿನಗರ 2ನೇ ಮೈನ್, ಶ್ರೀದೇವಿಕೃಪ ವಾಸಿ ಶ್ರೀ ಹೆಚ್. ಎಂ. ಹೇಮಚಂದ್ರ, ರವರ ಬಾಬ್ತು ಕೆಎ-13, ಆರ್. 1742 ರ ಪಲ್ಸರ್ ಬೈಕ್ನ್ನು ಕೆಲಸದ ನಿಮಿತ್ತ ಮಲ್ನಾಡ್ ಇಂಜಿನಿಯರಿಂಗ್ ಕಾಲೇಜ್ ಮುಂಭಾಗ ನಿಲ್ಲಿಸಿದ್ದು, ವಾಪಸ್ ಬಂದು ನೋಡಲಾಗಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಪತ್ತೆಮಾಡಿಕೊಡಬೇಕೆಂದು ಶ್ರೀ ಹೇಮಚಂದ್ರ, ರವರು ದಿನಾಂಕ: 24-03-2019 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ವಿದ್ಯುತ್ ಸ್ಪರ್ಶಿಸಿ ಯುವಕ ಸಾವು:
     ದಿನಾಂಕ: 23-03-2019 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮುಸಾವತ್ತೂರು ಗ್ರಾಮದ ವಾಸಿ ಶ್ರೀ ಲಿಖಿತ್ ಕುಮಾರ್, ಶ್ರೀ ಸತೀಶ್, ಶ್ರೀ ವಸಂತ, ಶ್ರೀ ಪುಟ್ಟರಾಜು, ರವರುಗಳು ಆಲೂರು ತಾಲ್ಲೂಕು, ಕೆ. ಹೊಸಕೋಟೆ ಹೋಬಳಿ, ಹೇರಗಳಲೆ ಗ್ರಾಮದ ವಾಸಿ ಶ್ರೀ ಜಗನ್ನಾಥಶೆಟ್ಟಿ, ರವರ ಕಾಫಿ ತೋಟದಲ್ಲಿ ದಿನ ನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದು  ಶ್ರೀ ಲಿಖಿತ್ ಕುಮಾರ್, ರವರು ಅಲ್ಯುಮಿನಿಯಂ ಏಣಿ ಹಾಕಿಕೊಂಡು ಮರದ ಕೊಂಬೆ ಕಡಿಯುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಶ್ರೀ ಲಿಖಿತ್ ಕುಮಾರ್ ಬಿನ್ ಶಂಕರಪ್ಪ, 21 ವರ್ಷ, ಮುಸಾವತ್ತೂರು ಗ್ರಾಮ, ಕೆ. ಹೊಸಕೋಟೆ ಹೋಬಳಿ, ಆಲೂರು ತಾಲ್ಲೂಕು, ರವರು ಮೃತಪಟ್ಟಿರುತ್ತಾರೆಂದು ಮಾಲೀಕರು ಯಾವುದೇ ಮುಂಜಾಗ್ರತೆ ಕೈಗೊಳ್ಳದೇ ಸಾವಿಗೆ ಕಾರಣರಾದ ಆರೋಪಿಯ ವಿರುದ್ಧ ಕಾನೂನು ರೀತ್ಯಾಕ್ರಮ ಕೈಗೊಳ್ಳಬೇಕೆಂದು ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಅಪರಿಚಿತ ವಾಹನ ಡಿಕ್ಕಿ, ಬೈಕ್ ಸವಾರ ಸಾವು:
     ದಿನಾಂಕ: 24-03-2019 ರಂದು ಸಂಜೆ 7-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಬೂದನೂರು ಗ್ರಾಮದ ವಾಸಿ ಶ್ರೀ ಮರುಳಿ, ರವರ ಬಾಬ್ತು ಕೆಎ-13, ಈಜೆ-6004 ರ ಟಿವಿಎಸ್ ಸ್ಟಾರ್, ಬೈಕ್ ನಲ್ಲಿ ಸ್ವಂತ ಕೆಲಸಕ್ಕೆ ಕೇರಳಾಪುರಕ್ಕೆ ಹೋಗಿದ್ದು, ವಾಪಸ್  ಮನೆಗೆ ಹೋಗಲು ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಕೇರಳಾಪುರ-ಹೊಳೆನರಸೀಪುರ ರಸ್ತೆ, ಶ್ರೀ ದೇವರಾಜ, ರವರ ಜಮೀನಿನ ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾವುದೋ ವಾಹನದ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತೆಗಾಗಿ ಸಾಲಿಗ್ರಾಮ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆ.ಆರ್. ಆಸ್ಪತ್ರೆಯಿಂದ ಕುವೆಂಪುನಗರದಲ್ಲಿರುವ ಸುಯೋಗ ಆಸ್ಪತ್ರೆಗೆ ದಾಖಲಿಸಿದ್ದು, ಶ್ರೀ ಮುರುಳಿ ಬಿನ್ ಬಸವೇಗೌಡ,  35 ವರ್ಷ, ಬೂದನೂರು ಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು, ರವರು ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀ ಆರ್. ಧನಂಜಯ, ರವರು ದಿನಾಂಕ: 24-03-2019 ರಂದು ಕೊಟ್ಟ ದೂರಿನ ಮೇರೆಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಮನುಷ್ಯ ಕಾಣೆ
     ದಿನಾಂಕ :23-03-2019 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಹನುಮಂತರ ಪೋಸ್ಟ್, ಬಿಟ್ಟಗೋಡನಹಳ್ಳಿ ಗ್ರಾಮದ ವಾಸಿ ಶ್ರೀ ನಾರಾಯಣಗೌಡ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ನಾರಾಯಣಗೌಡ, ರವರ ಮಗ ಶ್ರೀ ಹರೀಶ್, ರವರು ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ನಾರಾಯಣ, 60 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಶರ್ಟ್ & ಬಿಳಿ ಪಂಚೆ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08172-268333 ಕ್ಕೆ ಸಂಪರ್ಕಿಸುವುದು. 

No comments: