* * * * * * HASSAN DISTRICT POLICE

Friday, March 22, 2019

HASAN DISTRICT PRESS NOTE : 22-03-2019


ಪತ್ರಿಕಾ ಪ್ರಕಟಣೆ          ದಿ: 22-03-2019

ಮನೆಯ ಬೀಗ ಮುರಿದು 45 ಸಾವಿರ ಬೆಲೆಯ 33 ಗ್ರಾಂ ತೂಕದ ಚಿನ್ನಾಭರಣಗಳ ಕಳವು:

ದಿನಾಂಕ: 19-03-2019 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಅರಸೀಕೆರೆ ಪಟ್ಟಣದ ಹಾಸನ ರಸ್ತೆ, 9ನೇ ಕ್ರಾಸ್, ವಾಸಿ ಶ್ರೀ ಸಲೀಂ ಪಾಷ, ರವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಸಂಬಂಧಿಕರ ಸಾವಿಗೆ ಚಿಕ್ಕಮಗಳೂರು ಜಿಲ್ಲೆ, ಬೀರೂರು ಗ್ರಾಮಕ್ಕೆ ಹೋಗಿದ್ದು, ವಾಪಸ್ ದಿನಾಂಕ: 21-03-2019 ರಂದು ಮಧ್ಯಾಹ್ನ 12-30 ಗಂಟೆಗೆ ಮನೆಯ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಮನೆಗೆ ಬೀಗ ಮುರಿದು ಒಳಪ್ರವೇಶಿಸಿ, ಬೀರುವಿನಲ್ಲಿಟ್ಟಿದ್ದ ಸುಮಾರು 45 ಸಾವಿರ ಬೆಲೆಯ 33 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಬೈಕ್ ಕಳವು

ದಿನಾಂಕ: 15-01-2019 ರಂದು ಬೆಳಿಗ್ಗೆ 6-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಉದ್ದೂರು ಗ್ರಾಮದ ವಾಸಿ ಶ್ರೀ ಎನ್. ಎಸ್. ಸಂದೀಪ, ರವರ ಬಾಬ್ತು ಕೆಎ-50, ಕ್ಯೂ-2963 ರ ಬೈಕ್ನ್ನು ಹಾಸನ ವಿಶ್ವೇಶ್ವರಯ್ಯ ಬಡಾವಣೆಯ ಡ್ಯಾನ್ಸ್ ಶಾಲೆಯ ಮುಂಭಾಗ ನಿಲ್ಲಿಸಿ, ಅಲ್ಲಿಯೇ ಉಳಿದುಕೊಂಡು ದಿನಾಂಕ: 16-01-2019 ರಂದು ಬೆಳಿಗ್ಗೆ 6-30 ಗಂಟೆಗೆ ಎದ್ದು ನೋಡಲಾಗಿ ಬೈಕ್ ಇರಲಿಲ್ಲ, ಯಾರೋ ಕಳ್ಳರು 23 ಸಾವಿರ ಬೆಲೆಯ ಬೈಕ್ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಎನ್. ಎಸ್. ಸಂದೀಪ, ರವರು ದಿನಾಂಕ: 22-03-2019 ರಂದು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಮಟ್ಕಾ-ಜೂಜು ಅಡ್ಡೆ ಮೇಲೆ ದಾಳಿ ಮೂವರ ಬಂಧನ, 1,500/- ನಗದು ವಶ:

ದಿನಾಂಕ: 21-03-2019 ರಂದು ಮಧ್ಯಾಹ್ನ 4-30 ಗಂಟೆ ಸಮಯದಲ್ಲಿ ಬೇಲೂರು ಪಟ್ಟಣದ ಹೊಳೆಬೀದಿಯಲ್ಲಿರುವ ಈರಣ್ಣ, ರವರ ಮನೆಗೆ ಹಿಂಭಾಗದಲ್ಲಿ ಮಟ್ಕಾ-ಜೂಜಾಡುತ್ತಿದ್ದಾರೆಂದು ಶ್ರೀ ಕೆ. ಜಗದೀಶ್, ಪಿಎಸ್ಐ, ಬೇಲೂರು ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಅದೃಷ್ಟದ ಆಟ ಬನ್ನಿ ಬನ್ನಿ ಎಂದು ಮಟ್ಕಾ-ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಕುಮಾರ ಬಿನ್ ದೇಸಿರಾಜು, 40 ವರ್ಷ, ಬೇಲೂರು ಟೌನ್ 2) ತೋಹಿತ್ ಬಿನ್ ಇಕ್ಬಾಲ್, 30 ವರ್ಷ, ಪುರಿಭಟ್ಟಿ ಬೀದಿ, ಬೇಲೂರು 3) ಸದ್ದಾಂ ಬಿನ್ ಸಲಾಂ, 24 ವರ್ಷ, ಮುಸ್ತಾಫಾ ಬೀದಿ, ಬೇಲೂರು ಟೌನ್ ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಮಟ್ಕಾ-ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 1,500/- ನಗದನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್ನಲ್ಲಿ ಬಂದು ನೀರು ಕುಡಿಯುವ ನೆಪದಲ್ಲಿ 40 ಸಾವಿರ ಬೆಲೆಯ 15 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ:

ದಿನಾಂಕ: 20-03-2019 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಬಾಗೂರನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಶಾಂತಮ್ಮ, ರವರು ಪತಿ ಶ್ರೀ ಜವರೇಗೌಡ, ರವರು ತೋಟದ ಮನೆಯಲ್ಲಿದ್ದಾಗ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಯ ಬಾಗಿಲಿಗೆ ಬಂದಿಳಿದು ಕುಡಿಯಲು ನೀರು ಕೇಳಿದಾಗ ನೀರು ತರಲು ಹೋಗುತ್ತಿದ್ದಾಗ ಮಾಂಗಲ್ಯ ಸರವನ್ನು ಕಿತ್ತುಕೊಳ್ಳಲು ಹೋದಾಗ ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಾಗ ಅರ್ಧಭಾಗ 40 ಸಾವಿರ ಬೆಲೆಯ 15 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆಂದು ಶ್ರೀ ಜವರೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಯಾರೋ ಒಬ್ಬ ವ್ಯಕ್ತಿ ಬೈಕ್ನಲ್ಲಿ ಪರಿಚಯವಿದ್ದಂತೆ ವರ್ತಿಸಿ, 44 ಸಾವಿರ ಬೆಲೆಯ ಚಿನ್ನಾಭರಣಗಳನ್ನು ಕಿತ್ತುಕೊಂಡು ಪರಾರಿ:
ದಿನಾಂಕ: 21-03-2019 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ದೊಡ್ಡ ಆಲದಹಳ್ಳಿ ಗ್ರಾಮದ ವಾಸಿ ಶ್ರೀಮತಿ ಧರ್ಮವತಿ, ರವರ ಮನೆಯಿಂದ ಜಮೀನಿಗೆ ಹೋಗುವ ದಾರಿ ಮದ್ಯದಲ್ಲಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಬೈಕ್ನಲ್ಲಿ ಬಂದು ಪರಿಚಯವಿರುವಂತೆ ಮಾತನಾಡಿಸಿ, ಚಿಗಳ್ಳಿಯಲ್ಲಿ ಬಂಡೆ ಕೆಲಸವನ್ನು ಮಾಡುತ್ತಿದ್ದಾರೆ ನಿಮಗೇನಾದರೂ ಗೊತ್ತ ಅಂತ ಕೇಳಿ ಗೊತ್ತಿಲ್ಲ ಎಂದು ಹೇಳಿದಾಗ ನೀರು ಕೇಳಿದಾಗ ಬಾಟಲಿಯಲ್ಲಿ ನೀರು ವಾಪಸ್ ಬಾಟಲಿಯನ್ನು ಪ್ಲಾಸ್ಟಿಕ್ ಕವರ್ನಲ್ಲಿಟ್ಟುಕೊಳ್ಳುತ್ತಿದ್ದಾಗ ಚಾಕುವಿನಿಂದ ಹೆದರಿಸಿ 44 ಸಾವಿರ ಬೆಲೆಯ 22 ಗ್ರಾಂ ತೂಕದ ಚಿನ್ನದ ಓಲೆ & ಮಾಟಿ, ಚಿನ್ನದ ಗುಂಡು ಇರುವ ತಾಳಿ ಸಮೇತ ಕರಿಮಣಿಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆಂದು ಶ್ರೀಮತಿ ಧರ್ಮವತಿ, ರವರು ದಿನಾಂಕ: 21-03-2019 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಕೆಎಸ್ಆರ್ಟಿಸಿ ಬಸ್ ಡಿಕ್ಕಿ, ರಸ್ತೆ ಬದಿ ನಿಂತಿದ್ದ 7 ವರ್ಷದ ಬಾಲಕ ಸಾವು :
ದಿನಾಂಕ: 21-03-2019 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ  ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಯಡೇಗೌಡನಹಳ್ಳಿ ಗ್ರಾಮದದೇವೇಗೌಡರವರುತಮ್ಮಕುಟುಂಬ ಮತ್ತು ಗ್ರಾಮದ ಕರೀಗೌಡ, ವೈ.ಸಿ. ಚಿಕ್ಕೇಗೌಡರೊಂದಿಗೆದೇವಸ್ಥಾನಕ್ಕೆ ಹೋಗಲು ಗ್ರಾಮದಿಂದಆಟೋದಲ್ಲಿ ಹೊರಟುಗ್ರಾಮದ ಸ್ಕೂಲ್ಎದುರುಗಡೆಯಿರುವ ಪುಟ್ಟಸ್ವಾಮಿರವರ ಮನೆಯ ಮುಂದೆದೇವೇಗೌಡರವರ 7 ವರ್ಷದ ಮಗ ಗಿರೀಶ @ ದರ್ಶನ್ ಮತ್ತುತಾಯಿ ನಾಗಮ್ಮ ರವರುಗಳು ನಿಂತಿದ್ದು, ಅವರನ್ನುಆಟೋಕ್ಕೆ ಹತ್ತಿಸಿಕೊಳ್ಳಲು ಅಲ್ಲಿಗೆ ಹೋಗಿ ಸ್ಕೂಲ್ ಹತ್ತಿರಆಟೋವನ್ನು ನಿಲ್ಲಿಸಿಕೊಂಡು ನಿಂತಿದ್ದಾಗ  ಹೊಳೆನರಸೀಪುರ ಕಡೆಯಿಂದ ಬಂದ ಕೆಎಸ್ಆರ್ಟಿಸಿ ಬಸ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದುರಸ್ತೆಯಎಡಬದಿಯಲ್ಲಿ ನಿಂತಿದ್ದಗಿರೀಶ @ ದರ್ಶನ್ರವರಿಗೆ ಗುದ್ದಿಸಿದ ಪರಿಣಾಮರಸ್ತೆಗೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹೊಳೆನರಸೀಪುರ ಸಕರ್ಾರಿಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನಚಿಕಿತ್ಸೆಗಾಗಿ ಹಾಸನ ಸಕರ್ಾರಿಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆಗಿರೀಶ @ ದರ್ಶನ್ ಬಿನ್ ದೇವೇಗೌಡ,  7 ವರ್ಷರವರು ಮೃತಪಟ್ಟಿರುತ್ತಾರೆಂದು ಮೃತರತಂದೆ ಶ್ರೀ ದೇವೇಗೌಡರವರುಕೊಟ್ಟದೂರಿನ ಮೇರೆಗೆ ಹಳ್ಳಿಮೈಸೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.

ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನ ಬಂಧನ:

ದಿನಾಂಕ: 21-03-2019 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಶ್ರೀ ನವೀನ್ಗೌಡ, ಪಿಎಸ್ಐ, ಚನ್ನರಾಯಪಟ್ಟಣ ನಗರ ಠಾಣೆ. ರವರು ಸಿಬ್ಬಂದಿಗಳೊಂದಿಗೆ ಗಸ್ತು ಕರ್ತವ್ಯದಲ್ಲಿದ್ದಾಗ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಗೌಡಗೆರೆ ಗ್ರಾಮದ ವಾಸಿ ಶ್ರೀ ಪುಟ್ಟರಾಜು, ರವರ ಬಾಬ್ತು ಚಿಲ್ಲರೆ ಅಂಗಡಿ ಪಕ್ಕದಲ್ಲಿ ಮದ್ಯ ಸೇವಿಸಲು ಅನುವು ಮಾಡಿಕೊಟ್ಟದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಸುನಿಲಾ ಬಿನ್ ಪುಟ್ಟರಾಜು, 28 ವರ್ಷ, ಗೌಡಗೆರೆ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿ ಕೊಟ್ಟವನ ಬಂಧನ,

ದಿನಾಂಕ: 21-03-2019 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಶ್ರೀ ಜಿ. ಜೀತೇಂದ್ರ, ಪ್ರೊಬೆಷನರಿ  ಪಿಎಸ್ಐ, ರವರು ಸಿಬ್ಬಂದಿಗಳೊಂದಿಗೆ ಹಾನುಬಾಳು ವೃತ್ತದಲ್ಲಿ ರೌಂಡ್ಸ್ನಲ್ಲಿದ್ದಾಗ ಚಿಮ್ಮಿಕೋಲ್ ವೃತ್ತದಲ್ಲಿ ಶ್ರೀ ಪ್ರಸಾದ, ರವರ ಬಾಬ್ತು ಅಂಗಡಿ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಪ್ರಸಾದ ಬಿನ್ ಗಿರಿಯಪ್ಪ ಪೂಜಾರಿ, 29 ವರ್ಷ, ಕ್ಯಾಮನಹಳ್ಳಿ ಗ್ರಾಮ, ಹಾನುಬಾಳು ಹೋಬಳಿ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಅಕ್ರಮವಾಗಿ ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನ ಬಂಧನ:

ದಿನಾಂಕ: 21-03-2019 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ಕಲ್ಕೆರೆ ಗ್ರಾಮದ ವಾಸಿ ಶ್ರೀ ರಾಮಚಂದ್ರ, ರವರ ಬಾಬ್ತು ಅಂಗಡಿ ಪಕ್ಕದಲ್ಲಿ ಸಾರ್ವಜನಿಕರಿಗೆ ಪುರಿ ಖಾರ ಕೊಟ್ಟು ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟಿರುತ್ತಾರೆಂದು ಕು|| ಎಂ.ಸಿ. ಮಧು, ಪಿಎಸ್ಐ, ನುಗ್ಗೇಹಳ್ಳಿ ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸೇವಿಸಲು ಅನುವು ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ರಾಮಚಂದ್ರ ಬಿನ್ ಲೇಟ್ ದೇವರಾಜು, 42 ವರ್ಷ, ಕಲ್ಕೆರೆ ಗ್ರಾಮ, ನುಗ್ಗೇಹಳ್ಳಿ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕ್ರಮ ಕೈಗೊಂಡಿರುತ್ತೆ.

ಗಂಡಸು ಕಾಣೆ

ದಿನಾಂಕ: 27-02-2019 ರಂದು ಬೆಳಿಗ್ಗೆ 10-00 ಗಂಟೆಗೆ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಮಹಾದೇವರಹಳ್ಳಿ ಗ್ರಾಮದ ವಾಸಿ ಶ್ರೀ ಗವೀಶ್ @ ರಂಗಸ್ವಾಮಿ, ರವರು ಗಂಡಸಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಗವೀಶ್ @ ರಂಗಸ್ವಾಮಿ, ರವರ ಪತ್ನಿ ಶ್ರೀಮತಿ ಸುಜಾತ, ರವರು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಗವೀಶ್ @ ರಂಗಸ್ವಾಮಿ ಬಿನ್ ರಾಮೇಗೌಡ, 43 ವರ್ಷ, 5 ಅಡಿ ಎತ್ತರ,  ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು,  ಮನೆಯಿಂದ ಹೋಗುವಾಗ ಬಿಳಿ ಶಟರ್್ ಮತ್ತು ಕಪ್ಪು ಫ್ಯಾಂಟ್ ಧರಿಸಿರುತ್ತಾರೆ. ಈ ವ್ಯಕ್ತಿಯ ಸುಳಿವು ಸಿಕ್ಕಲ್ಲಿ 08174-220630 ಕ್ಕೆ ಸಂಪರ್ಕಿಸುವುದು.

No comments: