* * * * * * HASSAN DISTRICT POLICE

Thursday, February 14, 2019

HASSAN DISTRICT PRESS NOTE 14-02-2019



                         ಪತ್ರಿಕಾ ಪ್ರಕಟಣೆ               ದಿ: 14-02-2019

ಹಾಸನದ ಶಾಸಕರ ನಿವಾಸದ ಮೇಲೆ ಕಲ್ಲು ತೂರಾಟ, ಕಾರು ಜಖಂ & ವ್ಯಕ್ತಿಯ ಮೇಲೆ ಹಲ್ಲೆ ಹಾಗೂ 8 ಜನ ಆರೋಪಿಗಳ ಬಂಧನ:
    ಬಿಜೆಪಿ ಪಕ್ಷದ ವತಿಯಿಂದ ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಪ್ರೀತಮ್ ಜೆ.ಗೌಡ ರವರು, ಆಡಿಯೋ ಧ್ವನಿ ಸುರಳಿಯಲ್ಲಿ ಮಾಜಿ ಪ್ರಧಾನಿಗಳು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಶ್ರೀ ಹೆಚ್.ಡಿ. ದೇವೇಗೌಡ, ರವರು ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ, ರವರುಗಳ ಬಗ್ಗೆ ಹಗುರವಾಗಿ ಮಾತನಾಡಿರುವ ಸಂಬಂಧ ದಿನಾಂಕ: 13-02-2019 ರಂದು ಹಾಸನ ನಗರದಲ್ಲಿ ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಹಾಸನದ ಶಾಸಕರಾದ ಶ್ರೀ ಪ್ರೀತಮ್, ಜೆ.ಗೌಡ ರವರ ಮನೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಮನೆಯ ಕಾಂಪೌಂಡ್ ಆವರಣದಲ್ಲಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಪರಸ್ಪರ ವಾಗ್ವಾದ ನಡೆಯುತ್ತಿದ್ದಾಗ ಗುಂಪಿನಲ್ಲಿದ್ದ ಯಾರೋ ಒಬ್ಬ ವ್ಯಕ್ತಿ ಬಿಜೆಪಿ ಕಾರ್ಯಕರ್ತರ ಕಡೆ ಕಲ್ಲು ತೂರಿದಾಗ ಬಿಜೆಪಿ ಕಾರ್ಯಕರ್ತರಾದ ಶ್ರೀ ರಾಹುಲ್ ಕಿಣಿ, ರವರ ಬಲಗಣ್ಣಿನ ಪಕ್ಕಕ್ಕೆ ಕಲ್ಲುತಾಗಿ ರಕ್ತಗಾಯವಾಗಿರುತ್ತದೆಂದು ಹಾಗೂ ಜೆಡಿಎಸ್ ಕಾರ್ಯಕರ್ತರಾದ 1) ಶ್ರೀ ಅನಿಲ್ ಕುಮಾರ್, ಮಾಜಿ ನಗರಸಭಾ ಅಧ್ಯಕ್ಷರು 2) ಶ್ರೀ ಚಂದ್ರು ಕಾಟೀಹಳ್ಳಿ 3) ಶ್ರೀ ಪ್ರಶಾಂತ್ 16 ನೇ ವಾರ್ಡ್ ನ ನಗರ ಸಭಾ ಸದಸ್ಯರು ಹಾಸನ 4) ಶ್ರೀ ಸ್ವರೂಪ್ ಜಿಲ್ಲಾ ಪಂಚಾಯತ್ ಸದಸ್ಯರು ಹಾಸನ 5) ಶ್ರೀ ಕಮಲ್ ಕುಮಾರ್ ಜೆಡಿಎಸ್ ಮುಖಂಡರು ಹಾಸನ 6) ಶ್ರೀ ಗಿರೀಶ್ ನಗರಸಭಾ ಸದಸ್ಯರು ಹಾಸನ 7) ಶ್ರೀ ಜಗದೀಶ್ ಜೆಡಿಎಸ್ ಮುಖಂಡರು ಹಾಸನ 8) ಶ್ರೀ ಭಾನುಪ್ರಕಾಶ್ ಮಾಜಿ ನಗರ ಸಭಾ ಸದಸ್ಯರು ಅವಾಚ್ಯಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀ ರಾಹುಲ್ ಕಿಣಿ, ರವರು ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಹೇಳಿಕೆ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲಿದ್ದು, ಈ ಸಂಬಂಧ ಡಾ. ಎ.ಎನ್. ಪ್ರಕಾಶ್ಗೌಡ, ಐಪಿಎಸ್, ಪೊಲೀಸ್ ವರಿಷ್ಠಧಿಕಾರಿಯವರು ಶಾಸಕರ ನಿವಾಸ ಬಳಿ ಮತ್ತು ಬಿಜೆಪಿ ಕಛೇರಿ ಬಳಿ ಸೂಕ್ತ ಬಿಗಿ ಭದ್ರತಾ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಿದ್ದು, ಹಾಗೂ ಮೇಲ್ಕಂಡ 8 ಜನ ಆರೋಪಿಗಳನ್ನು ದಸ್ತಗಿರಿ ಮಾಡಿಲಾಗಿರುತ್ತೆ.

ಮದ್ಯ ಸೇವಿಸಲು ಸ್ಥಳಾವಕಾಶ ಮಾಡಿಕೊಟ್ಟವನ ಬಂಧನ, 454/- ಬೆಲೆಯ ಮದ್ಯ ವಶ:

     ದಿನಾಂಕ: 13-02-2019 ರಂದು ಮಧ್ಯಾಹ್ನ 1-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳ್ಳಿಮೈಸೂರು ಹೋಬಳಿ, ಸೋಮನಹಳ್ಳಿ ಗ್ರಾಮದ ವಾಸಿ ಶ್ರೀ ಚಂದ್ರೇಗೌಡ, ರವರ ಬಾಬ್ತು ಅಂಗಡಿ ಮುಂಭಾಗದಲ್ಲಿ ಮದ್ಯ ಸೇವಿಸುತ್ತಿದ್ದಾರೆಂದು ಶ್ರೀ ವಿನೋದ್ ರಾಜ್, ಪಿಎಸ್ಐ ಡಿಸಿಐಬಿ ಘಟಕ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಮದ್ಯ ಸೇವಿಸಲು ಅನುವು ಮಾಡಿಕೊಟ್ಟವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಚಂದ್ರೇಗೌಡ ಬಿನ್ ಲೇಟ್ ಚನ್ನೇಗೌಡ, 60 ವರ್ಷ, ಸೋಮನಹಳ್ಳಿ ಗ್ರಾಮ, ಹಳ್ಳಿಮೈಸೂರು ಹೋಬಳಿ, ಹೊಳೆನರಸೀಪುರ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು 454/- ಬೆಲೆಯ 90 ಎಂಎಲ್ ನ 15 ಓರಿಜಿನಲ್ ಚಾಯ್ಸ್ ವಿಸ್ಕಿಯ ಟೆಟ್ರಾ ಪ್ಯಾಕೇಟ್ ಗಳನ್ನು ಅಮಾನತ್ತುಪಡಿಸಿಕೊಂಡು ಹಳ್ಳಿಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕ್ರಮಕೈಗೊಂಡಿರುತ್ತೆ.

24 ಸಾವಿರ ಬೆಲೆಯ ಏರ್ಟೆಲ್ ಟವರ್ನ 22 ಬ್ಯಾಟರಿ ಶೆಲ್ಗಳ ಕಳವು:

     ದಿನಾಂಕ: 10-02-2019 ರಂದು ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಮಲದೇವಿಹಳ್ಳಿ ಗ್ರಾಮದ ಏರ್ಟೆಲ್ ಟವರ್ ನ ಐಎನ್1070773 ಶೆಟ್ಟರ್ ನ್ನು ಮುರಿದು ಯಾರೋ ಕಳ್ಳರು 24 ಸಾವಿರ ಬೆಲೆಯ 22 ಬ್ಯಾಟರಿ ಶೆಲ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಬೆಂಗಳೂರಿನ ನಿಶಾ ಇಂಡಸ್ಟ್ರೀಸ್ ಪ್ರೈವೆಟ್ ಲಿಮಿಡೆಟ್ & ಇಂಡೋಸ್ ಟವರ್ ಕಂಪನಿಯ ಸೂಪರ್ ವೈಸರ್ ಶ್ರೀ ಗವೀಶ್, ರವರು ದಿನಾಂಕ: 13-02-2019 ರಂದು ಕೊಟ್ಟ ದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಕಳವು
     ದಿನಾಂಕ: 12-08-2018 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆ, ಅಂಬಾಳೆ ಹೋಬಳಿ, ಹೊಸಹಳ್ಳಿ ಗ್ರಾಮದ ವಾಸಿ ಶ್ರೀ ಎಂ. ಉಮೇಶ್, ರವರ ಬಾಬ್ತು ಕೆಎ-18, ಎಕ್ಸ್-5803 ರ ಬೈಕ್ ನಲ್ಲಿ ಅಕ್ಕನ ಮಗಳ ಮದುವೆ ಕಾರ್ಡ್ ಕೊಡಲು ಹಾಸನದ ಶಾಂತಿನಗರದ ಸಂಬಂಧಿಕರ ಮನೆಗೆ ಬಂದು ಬೈಕ್ ನ್ನು ಮನೆಯ ಮುಂದೆ ನಿಲ್ಲಿಸಿ, ಹೋಗಿದ್ದು, ಸಂಜೆ 4-00 ಗಂಟೆಗೆ ಬಂದು ನೋಡಲಾಗಿ ಬೈಕ್ ಇರಲಿಲ್ಲ, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿಯವರು  ದಿನಾಂಕ: 13-02-2019 ರಂದು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಹಳೆ ದ್ವೇಷ, ವ್ಯಕ್ತಿಯ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ
     ದಿನಾಂಕ: 13-02-2019 ರಂದು ಸಂಜೆ 7-30 ಗಂಟೆ ಸಮಯದಲ್ಲಿ ಚನ್ನಪಟ್ಟಣ ಹೌಸಿಂಗ್ ಬೋರ್ಡ್, ಗಣಪತಿ ದೇವಸ್ಥಾನದ ಹಿಂಭಾಗದ ವಾಸಿ ಶ್ರೀ ಜಗನ್ನಾಥ್, ರವರು ದೇವಿಗೆರೆ ವೃತ್ತ, ಶ್ರೀ ಸುರೇಶ್, ರವರ ಅಂಗಡಿ ಹತ್ತಿರ ಹೂವಿನ ವ್ಯಾಪಾರ ಮಾಡುತ್ತಿದ್ದ ಶ್ರೀಮತಿ ಲಕ್ಷ್ಮಿ, ರವರನ್ನು ಹೂವಿನ ಹಣ ಕೇಳುತ್ತಿದ್ದಾಗ ಶ್ರೀ ಸುರೇಶ್, ಶ್ರೀ ರಾಹುಲ್, ಶ್ರೀ ಯಶ್, ಹಾಗೂ ಶ್ರೀ ದಿನೇಶ್, ರವರುಗಳು ಏಕಾ-ಏಕಿ ಜಗಳ ತೆಗೆದು ಹಳೆ ದ್ವೇಷದಿಂದ ಕೋರ್ಟ್ ಕೇಸ್ ವಾಪಸ್ ತೆಗೆದುಕೋ ಇಲ್ಲವಾದರೆ ನಿನನ್ನು ಬಿಡುವುದಿಲ್ಲವೆಂದು ಅವಾಚ್ಯಶಬ್ಧಗಳಿಂದ ನಿಂದಿಸಿ, ಕೈ & ಬಿಯರ್ ಬಾಟಲಿನಿಂದ ಹೊಡೆದು, ಕಾಲಿನಿಂದ ತುಳಿದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿ ಶ್ರೀ ಜಗನ್ನಾಥ್, ರವರು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಮೇರೆಗೆ ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕಾರು ಬೈಕ್ ಗೆ ಡಿಕ್ಕಿ, ಬೈಕ್ ಸವಾರನಿಗೆ ರಕ್ತಗಾಯ:
     ದಿನಾಂಕ: 11-02-2019 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ದುದ್ದ ಹೋಬಳಿ, ಕಮ್ಮರಿಗೆ ಗ್ರಾಮದ ವಾಸಿ ಶ್ರೀ ಕುಮಾರ, ರವರ ಬಾಬ್ತು ಕೆಎ-14, ಇಇ-8020 ರ ಬೈಕ್ ನಲ್ಲಿ ಹಾಸನ ಹೊರವಲಯದ ಬೈಪಾಸ್ ಬಿ.ಎಂ. ರಸ್ತೆ, ರಾಜೀವ್ ಇಂಜಿನಿಯರಿಂಗ್ ಕಾಲೇಜಿನ ಮುಂಭಾಗದಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-46, 3033 ರ ಕಾರಿನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಕುಮಾರ್, ರವರು ಬೈಕ್ ಸಮೇತ ರಸ್ತೆಗೆ ಬಿದ್ದು, ರಕ್ತಗಾಯವಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿರುತ್ತೇವೆಂದು ಗಾಯಾಳು ಪತ್ನಿ ಶ್ರೀಮತಿ ದ್ರಾಕ್ಷಾಯಿಣಿ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಟೆಂಪೋ ಟ್ರಾವೆಲರ್ ಬೈಕ್ ಗೆ ಡಿಕ್ಕಿ, ಬೈಕ್ ಸವಾರ ಸಾವು:
     ದಿನಾಂಕ: 13-02-2019 ರಂದು ಸಂಜೆ 7-00 ಗಂಟೆ ಸಮುಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ದೇವಿಹಳ್ಳಿ ಗ್ರಾಮದ ವಾಸಿ ಶ್ರೀ ವೈರಮುಡಿ, ರವರ ಬಾಬ್ತು ಕೆಎ-13, ಇಸಿ-2546 ರ ಬೈಕ್ ನಲ್ಲಿ ಸಂಬಂಧಿಕರಾದ ಶ್ರೀಮತಿ ಲಕ್ಷ್ಮಿ, ರವರನ್ನು ಕೂರಿಸಿಕೊಂಡು ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಹಾಸನ-ಬೇಲೂರು ರಸ್ತೆ ಅಡವಿ ಬಂಟೇನಹಳ್ಳಿ ಗಡಿ ಹತ್ತಿರ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆಎ-51, ಡಿ-9072 ರ ಟೆಂಪೋ ಟ್ರಾವೆಲರ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿಯಾಗಿ ಶ್ರೀ ವೈರಮುಡಿ, ರವರು ಬೈಕ್ ಸಮೇತ ರಸ್ತೆಗೆ ಬಿದ್ದು, ಟೆಂಪೋ ವಾಹನದ ಚಕ್ರ  ಕಾಲ ಮೇಲೆ ಹರಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ: 13-02-2019 ರಂದು ರಾತ್ರಿ 11-00 ಗಂಟೆಗೆ ಶ್ರೀ ವೈರಮುಡಿ ಬಿನ್ ಲೇಟೆ ತಿಮ್ಮಯ್ಯ, 40 ವರ್ಷ, ದೇವಿಹಳ್ಳಿ ಗ್ರಾಮ, ಮಾದಿಹಳ್ಳಿ ಹೋಬಳಿ, ಬೇಲೂರು ತಾಲ್ಲೂಕು. ರವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿಕರಾದ ಶ್ರೀಮತಿ ಲಕ್ಷ್ಮಿ, ರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಗಂಡಸು ಕಾಣೆ
     ದಿನಾಂಕ: 07-02-2019 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕು, ಮಾಚೇನಹಳ್ಳಿ ಗ್ರಾಮದ ವಾಸಿ ಶ್ರೀ ಮುರುಳಿ, ರವರು ಮಾವನ ಮನೆಯಾದ ಅರಸೀಕೆರೆ ತಾಲ್ಲೂಕು, ಜಾವಗಲ್ ಹೋಬಳಿ, ಉಂಡಿಗನಾಳು ಗ್ರಾಮಕ್ಕೆ ಬಂದಿದ್ದು, ದಿನಾಂಕ: 09-02-2019 ರಂದು ಮಂಗಳೂರಿನ ಆಸ್ಪತ್ರೆಗೆ ಹೋಗಿ ತಂದೆಯನ್ನು ನೋಡಿಕೊಂಡು ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ಮುರುಳಿಯ ಪತ್ನಿ ಶ್ರೀಮತಿ ಭಾಗ್ಯ, ರವರು ಕೊಟ್ಟ ದೂರಿನ ಮೇರೆಗೆ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ಮುರುಳಿ ಬಿನ್ ಸಿದ್ದಪ್ಪ, 35 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ, ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುತ್ತಾರೆ. ಇವರ ಸುಳಿವು ಸಿಕ್ಕಲ್ಲಿ 08174-271221 ಕ್ಕೆ ಸಂಪರ್ಕಿಸುವುದು.


No comments: