* * * * * * HASSAN DISTRICT POLICE

Friday, February 15, 2019

HASSAN DISTRICT PRESS NOTE 15-02-2019




                                    ಪತ್ರಿಕಾ ಪ್ರಕಟಣೆ                 ದಿ: 15-02-2019

ಮನೆಯ ಬೀಗ ಮುರಿದು 1,60,000/- ಬೆಲೆಯ ಚಿನ್ನಾಭರಣ ಕಳವು:
     ದಿನಾಂಕ: 09-02-2019 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಅರಕಲಗೂಡು ಪಟ್ಟಣದ ಕೋಟೆ ಬೀದಿ ವಾಸಿ ಶ್ರೀ ನಾಜೀಂ ಪಾಷ, ರವರು ಮತ್ತು ಪತ್ನಿ ಇಬ್ಬರು ಕೆಲಸಕ್ಕೆ ಹೋಗುತ್ತಿದ್ದು, ಮನೆಗೆ ಬೀಗ ಹಾಕಿಕೊಂಡು ಕೀಯನ್ನು ಮನೆಯ ಹೊರಗಡೆ ಬಾತ್ ರೂಮಿನ ಮೇಲೆ ಇಟ್ಟು ಹೋಗುತ್ತಿದ್ದು, ಯಾರೋ ಕಳ್ಳರು ಮನೆಯ ಬೀಗವನ್ನು ಮುರಿದು ಒಳಪ್ರವೇಶಿಸಿ, ಬೀರುವಿನಲ್ಲಿಟ್ಟಿದ್ದ 1,60,000/- ಬೆಲೆಯ 23 ಗ್ರಾಂ ತೂಕದ ಚಿನ್ನದ ಬಳೆಗಳು, 17 ಗ್ರಾಂ ತೂಕದ ಚಿನ್ನದ ಓಲೆ ಹ್ಯಾಂಗಿಂಗ್ಸ್, 6 ಗ್ರಾಂ ತೂಕದ ಚಿನ್ನದ ಉಂಗುರ, 2 ಗ್ರಾಂ ತೂಕದ 2 ಚಿಕ್ಕ ಉಂಗುರಗಳು 6 ಚಿನ್ನದ ಗುಂಡುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ದಿನಾಂಕ: 14-02-2019 ರಂದು ಶ್ರೀ ನಾಜೀಂ ಪಾಷ, ರವರು ಕೊಟ್ಟ ದೂರಿನ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಮ್ಯಾಕ್ಸಿ ಕ್ಯಾಬ್ ವಾಹನ, ಆಪೇ ಆಟೋಗೆ ಡಿಕ್ಕಿ, ಮೂವರ ಸಾವು, ಉಳಿದವರಿಗೆ ರಕ್ತಗಾಯ:
     ದಿನಾಂಕ: 14-02-2019 ರಂದು ಸಂಜೆ 6-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ನಟ್ಟೆಕೆರೆ ಗ್ರಾಮದ ವಾಸಿ 1) ಶ್ರೀಮತಿ ಮಂಜುಳ, 2) ಶ್ರೀಮತಿ ಲಕ್ಷ್ಮಮ್ಮ, 3) ಶ್ರೀಮತಿ ಪುಟ್ಟಮ್ಮ, 4) ಶ್ರೀಮತಿ ಹೇಮಾಶ್ರೀ 5) ಶ್ರೀಮತಿ ಹೇಮಾವತಿ, 6) ಶ್ರೀಮತಿ ಭಾಗ್ಯ, 7) ಶ್ರೀಮತಿ ಶಾರದಮ್ಮ, 8) ಶ್ರೀಮತಿ ಮಲ್ಲಮ್ಮ, 9) ಶ್ರೀಮತಿ ಲಲಿತ 10) ಶ್ರೀ ಶಿವ ರವರುಗಳು  ಕೆಎ-19, ಎಎ-7759 ರ ಆಪೇ ಆಟೋದಲ್ಲಿ ಕಾಫಿ ತೋಟದ ಕೆಲಸ ಮುಗಿಸಿಕೊಂಡು ವಾಪಸ್ ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಬೆಳ್ಳೂರು ಗ್ರಾಮದ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-18, 2812 ರ ಮ್ಯಾಕ್ಸಿ ಕ್ಯಾಬ್ ವಾಹನದ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಆಪೇ ಆಟೋಗೆ ಡಿಕ್ಕಿಯಾದ ಪರಿಣಾಮ ಪಲ್ಟಿಯಾಗಿ ವಾಹನದಲ್ಲಿದ್ದ 1) ಶ್ರೀಮತಿ ಮಂಜುಳ ಕೋಂ ಗೋಂವಿದರಾಜು, 50 ವರ್ಷ, 2) ಶ್ರೀಮತಿ ಲಕ್ಷ್ಮಮ್ಮ ಕೋಂ ದಾಸಯ್ಯ, 60 ವರ್ಷ, ಇಬ್ಬರೂ ನಟ್ಟೆಕೆರೆ ಗ್ರಾಮ, ಮತ್ತು 3) ಶ್ರೀ ಶಿವ ಬಿನ್ ರಾಮಯ್ಯ, ನಾಗೇನಹಳ್ಳಿ ಗ್ರಾಮ, (ದಬ್ಬೇಗಡಿ) ಮೂವರು ಬೇಲೂರು ತಾಲ್ಲೂಕು, ರವರುಗಳಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಹಾಗೂ 6 ಜನ ಗಾಯಾಳುಗಳನ್ನು ಚಿಕಿತ್ಸೆಗಾಗಿ ಬೇಲೂರು & ಹಾಸನ ಸಕರ್ಾರಿ ಆಸ್ಪತ್ರೆಗೆ ದಾಖಲಿಸಿದ್ದು, ಮ್ಯಾಕ್ಸಿ ಕ್ಯಾಬ್ ಚಾಲಕನ ವಿರುದ್ಧ ಕಾನೂನು ರೀತ್ಯಾಕ್ರಮ ಕೈಗೊಳ್ಳಬೇಕೆಂದು ಶ್ರೀ ಸೋಮಣ್ಣ, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಕಳವು
    ದಿನಾಂಕ: 29-01-2019 ರಂದು ಬೆಳಿಗ್ಗೆ 6-00 ಗಂಟೆ ಸಮಯದಲ್ಲಿ ಮೈಸೂರು ಜಿಲ್ಲೆ, ಕೆ.ಆರ್. ನಗರದ ಆಂಜನೇಯ ಬ್ಲಾಕ್ ಹತ್ತಿರ ವಾಸಿ ಶ್ರೀ ಆರ್. ಸುರೇಶ್, ರವರ ಬಾಬ್ತು ಕೆಎ-45, ವೈ-4440 ರ ಟಿವಿಎಸ್ ಎಕ್ಸ್ಎಲ್-100 ಬೈಕ್ ನಲ್ಲಿ ಪಾತ್ರೆಗಳನ್ನು ಕಟ್ಟಿಕೊಂಡು ವ್ಯಾಪಾರ ಮಾಡಿಕೊಂಡಿದ್ದು, ವ್ಯಾಪಾರ ಮುಗಿಸಿಕೊಂಡು ಚನ್ನರಾಯಪಟ್ಟಣದ ಗಾಂಧಿ ವೃತ್ತದಲ್ಲಿರುವ ಶುಗರ್ ಫ್ಯಾಕ್ಟರಿ ಶ್ರೀ ಚಂದ್ರಣ್ಣ, ರವರ ಮನೆಯ ಬೈಕ್ನ್ನು ನಿಲ್ಲಿಸಿದ್ದು, ಯಾರೋ ಕಳ್ಳರು 25 ಸಾವಿರ ಬೆಲೆಯ ಬೈಕ್ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಆರ್. ಸುರೇಶ್, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
     ದಿನಾಂಕ: 13-02-2019 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಅಂಬೇಡ್ಕರ್ ನಗರ ವಾಸಿ ಶ್ರೀ ಯೋಗೇಶ್, ರವರ ಬಾಬ್ತು ಕೆಎ-13, ಇಎಲ್-5037 ರ ಬೈಕ್ ನಲ್ಲಿ ತಾಯಿ ಶ್ರೀಮತಿ ತಾಯಮ್ಮ, ರವರು ಕೂರಿಸಿಕೊಂಡು ಹಾಸನ ತಾಲ್ಲೂಕು, ಕಟ್ಟಾಯ ಹೋಬಳಿ, ಅಂಬೇಡ್ಕರ್ ನಗರ, ಗೊರೂರು ಕೆರೆ ಹತ್ತಿರ ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ಕಾಂತರಾಜ, ಶ್ರೀ ಮೋಹನ, ಶ್ರೀ ಕುಮಾರ, ಶ್ರೀ ರಘು, ಶ್ರೀ ಸಿದ್ದರಾಜು, ಶ್ರೀ ರಂಗಸ್ವಾಮಿ ಶ್ರೀಮತಿ ನಾಗಮ್ಮ, ರವರುಗಳು ಬೈಕ್ ನ್ನು ಅಡ್ಡಗಟ್ಟಿ ಪಲ್ಲವಿಯನ್ನು ಕರೆದುಕೊಂಡು ಹೋಗಿದ್ದವನು ಇವನೇ ಎಂದು ಅವಾಚ್ಯಶಬ್ಧಗಳಿಂದ ನಿಂದಿಸಿ, ಕೈ & ಚಾಕುವಿನಿಂದ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಡಕ್ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿರುವುದ್ದನ್ನು ಕೇಳಿದ್ದಕ್ಕೆ ಇಬ್ಬರ ಮೇಲೆ ಮರಣಾಂತಿಕ ಹಲ್ಲೆ:
     ದಿನಾಂಕ: 11-02-2019 ರಂದು ರಾತ್ರಿ 11-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ನಂದಳ್ಳಿ ಗ್ರಾಮದ ವಾಸಿ ಶ್ರೀ ಲೋಕೇಶ್, ರವರ ಮನೆಯ ಪಕ್ಕದ ವಾಸಿ ಶ್ರೀ ಸುಬ್ಬಶೆಟ್ಟಿ, ರವರ ಮನೆಯ ಹತ್ತಿರ 1. ಶ್ರೀ ಜಗದೀಶ್, 2. ಶ್ರೀ ಪ್ರತಾಪ, 3. ಶ್ರೀ ಚಂದನಶೆಟ್ಟಿ, 4. ಶ್ರೀ ರಾಘವೇಂದ್ರ, 5. ಶ್ರೀ ವಸಂತ, 6. ಸುಬ್ಬಶೆಟ್ಟಿ, ರವರುಗಳು ಡಕ್ ಹಾಕಿಕೊಂಡು ಡ್ಯಾನ್ಸ್ ಮಾಡುತ್ತಿದ್ದು, ಪಿರ್ಯಾದಿಯವರು ನಿದ್ರೆಗೆ ತೊಂದರೆಯಾಗುತ್ತದೆ. ಕುಣಿಯಬೇಡಿ ಎಂದು ಕೇಳಿದ್ದಕ್ಕೆ ಜಗಳ ಮಾಡಿದ್ದು, ನಂತರ ಶ್ರೀ ಲೋಕೇಶ್ ಮತ್ತು ಶ್ರೀ ನಿಂಗರಾಜು, ರವರೊಂದಿಗೆ ಕಾರಿನಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿ ವಾಪಸ್ ಮನೆಗೆ ಹೋಗಲು ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ಹಾರಳ್ಳಿ-ಕೂಡಿಗೆ ಹತ್ತಿರ ಹೋಗುತ್ತಿದ್ದಾಗ ಮೇಲ್ಕಂಡ 6 ಜನ ಆರೋಪಿಗಳು ಬೈಕ್ ನಲ್ಲಿ ಕಾರನ್ನು ಹಿಂಭಾಲಿಸಿ, ಗುಂಪುಕಟ್ಟಿಕೊಂಡು ಬಂದು ಮರಳಿನ ವಿಚಾರದಲ್ಲಿ ಜಗಳ ತೆಗೆದು ಕಾರನ್ನು ಜಖಂಗೊಳಿಸಿ, ಕಾರಿನಿಂದ ಎಳೆದುಕೊಂಡು ಬೈಕ್ ಚೈನ್ & ದೊಣ್ಣೆಯಿಂದ ಹೊಡೆದು ರೊಟ್ಟಿಗೆ ಕಚ್ಚಿ ಕೊಲೆ ಬೆದರಿಕೆ ಹಾಕಿ, ಮರಾಣಾಂತಿಕ ಹಲ್ಲೆ ನಡೆಸಿರುತ್ತಾರೆಂದು ಮಡಿಕೇರಿ ಸಕರ್ಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಮೇರೆಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ನಿವೇಶನದ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:

     ದಿನಾಂಕ: 14-02-2019 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿ, ಹುಲಿವಾಲ ಗ್ರಾಮದ ವಾಸಿ ಶ್ರೀ ಕೃಷ್ಣಕುಮಾರ್, ರವರ ತಾಯಿ ಶ್ರೀಮತಿ ಲಕ್ಷ್ಮಮ್ಮ, ರವರ ಹೆಸರಿನಲ್ಲಿ ಹೊಳೆನರಸೀಪುರ ತಾಲ್ಲೂಕು, ಸೂರನಹಳ್ಳಿ ಗ್ರಾಮದಲ್ಲಿ ನಿವೇಶನವಿದ್ದು, ಗುದ್ದಲಿ ಪೂಜೆ ಮಾಡಿಸುತ್ತಿದ್ದಾಗ ಪಕ್ಕದ ಮಾಲೀಕರಾದ ಶ್ರೀಮತಿ ಉಮಾ, ರವರು ನ್ಯಾಯಾಲಯದಲ್ಲಿ ಇತ್ಯಾರ್ಥವಾಗುವವರೆಗೂ ಕೆಲಸ ಮಾಡಬೇಡಿ ಎಂದು ಅವಾಚ್ಯಶಬ್ಧಗಳಿಂದ ನಿಂದಿಸಿ, ಶ್ರೀ ಸೃಜನ್ ಮತ್ತು ಶ್ರೀ ರಾಕೇಶ್, ರವರು ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಪಿರ್ಯಾದಿಯವರು ಹೊಳೆನರಸೀಪುರ ಸಕರ್ಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಹೊಳೆನರಸಿಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಬೈಕ್ ಗೆ ನಾಯಿ ಅಡ್ಡ, ಬೈಕ್ ಹಿಂಬದಿ ಕುಳಿತಿದ್ದವನಿಗೆ ರಕ್ತಗಾಯ:
     ದಿನಾಂಕ: 14-02-2019 ರಂದು ಬೆಳಗ್ಗೆ 9-30 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಕಸಬಾ ಹೋಬಳಿ, ಬೂವನಹಳ್ಳಿ ಗ್ರಾಮದ ವಾಸಿ ಶ್ರೀ ಶಶಿಕಿರಣ್, ರವರ ಬಾಬ್ತು ಕೆಎ-13, ಇಪಿ-5287 ರ ಬೈಕ್ ನಲ್ಲಿ ಪಕ್ಕದ ಮನೆಯ ಶ್ರೀ ಕೃಷ್ಣಕುಮಾರ್, ರವರನ್ನು ಕೂರಿಸಿಕೊಂಡು ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು-ನುಗ್ಗೇಹಳ್ಳಿ ರಸ್ತೆ, ಹೆಗ್ಗಡಿಗೆರೆ ಗೇಟ್ ಹತ್ತಿರ ಹೋಗುತ್ತಿದ್ದಾಗ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ, ಬೈಕ್ ಹಿಂಬದಿ ಕುಳಿತ್ತಿದ್ದ ಶ್ರೀ ಕೃಷ್ಣಕುಮಾರ್, ರವರಿಗೆ ರಕ್ತಗಾಯಗಳಾಗಿದ್ದು, ಹಾಸನದ ಮಂಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಿರುತ್ತೇವೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹೆಂಗಸು ಕಾಣೆ
     ದಿನಾಂಕ: 12-02-2019 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣದ ಚನ್ನಿಗರಾಯ ಬಡಾವಣೆಯಲ್ಲಿರುವ ಸರೋಜಿನಿ ಮಹಿಳಾ ಪುನರ್ವಸತಿ ಕೇಂದ್ರದಲ್ಲಿ ಶ್ರೀಮತಿ ಪುಳ್ಳಮ್ಮ, ರವರು ಆಶ್ರಮದಲ್ಲಿದ್ದು, ಆಶ್ರಮದ ಹೊರಗಡೆ ಬಟ್ಟೆಯನ್ನು ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ಸುಮಿತ್ರಾ, ಮಹಿಳಾ ಪುನರ್ವಸತಿ ಕೇಂದ್ರದ ಸೂಪರ್ ವೈಸರ್, ರವರು ದಿನಾಂಕ: 14-02-2019 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ಪುಳ್ಳಮ್ಮ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08176-252333 ಕ್ಕೆ ಸಂಪರ್ಕಿಸುವುದು.

No comments: