* * * * * * HASSAN DISTRICT POLICE

Wednesday, February 13, 2019

HASSAN DISTRICT PRESS NOTE 13-02-2019



                                    ಪತ್ರಿಕಾ ಪ್ರಕಟಣೆ               ದಿ: 13-02-2019

24 ಸಾವಿರ ಬೆಲೆಯ ಏರ್ಟೆಲ್ ಟವರ್ ನ  18 ಬ್ಯಾಟರಿಗಳ ಕಳವು:
     ದಿನಾಂಕ: 10-02-2019 ರಂದು ರಾತ್ರಿ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಗೂಳಿ ಹೊನ್ನೇನಹಳ್ಳಿ ಗ್ರಾಮದ ಹತ್ತಿರವಿರುವ ಹೊಸಕೊಪ್ಪಲು ಗ್ರಾಮದ ಏರ್ ಟೆಲ್ ಟವರ್ ಗೆ ಅಳವಡಿಸಿರುವ 24 ಸಾವಿರ ಬೆಲೆಯ 18 ಬ್ಯಾಟರಿ ಶೆಲ್ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಬೆಂಗಳೂರಿನ ನಿಶಾ ಇಂಡಸ್ಟ್ರೀಸ್ ಪ್ರೈವೆಟ್ ಲಿಮಿಡೆಟ್ & ಇಂಡೋಸ್ ಟವರ್ ಕಂಪನಿಯ ಸೂಪರ್ ವೈಸರ್ ಶ್ರೀ ಗವೀಶ್, ರವರು ದಿನಾಂಕ: 12-02-2019 ರಂದು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬಿಎಸ್ಎನ್ಎಲ್ ಕೇಂದ್ರದ ಶೆಡ್ ಬೀಗ ಮುರಿದು 1,42,000/- ಬೆಲೆಯ 34 ಬ್ಯಾಟರಿಗಳು  & ಜನರೇಟರ್ ನ  2 ಡೆಡ್ ಬ್ಯಾಟರಿ ಕಳವು:
     ದಿನಾಂಕ: 10-02-2019 ರಾತ್ರಿ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಚಿಂದೇನಹಳ್ಳಿ ಗಡಿ ಗ್ರಾಮದ ಬಿಎಸ್ಎನ್ಎಲ್ ಕೇಂದ್ರದ ಕಂಟೇನರ್ ಮತ್ತು ಶೆಡ್ ನ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಮುರಿದು 1,42,000/- ಬೆಲೆಯ 1) ಎನ್ಇಡಿ ಕಂಪನಿಯ 34 ಬ್ಯಾಟರಿಗಳು 2) ಜನರೇಟರ್ ನ 2 ಡೆಡ್ ಬ್ಯಾಟರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀ ಮುರುಗೇಂದ್ರ, ಎಸ್ ಡಿಇ, ಬಿಎಸ್ಎನ್ಎಲ್, ಆಫೀಸ್, ಅರಸೀಕೆರೆ. ರವರು ದಿನಾಂಕ: 12-02-2019 ರಂದು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಕಾರು ಬೈಕ್ ಗೆ ಡಿಕ್ಕಿ, ಬೈಕ್ ಸವಾರನಿಗೆ ರಕ್ತಗಾಯ:
     ದಿನಾಂಕ: 10-02-2019 ರಂದು ಮಧ್ಯಾಹ್ನ 2-45 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಸಾಗತವಳ್ಳಿ ಗ್ರಾಮದ ವಾಸಿ ಶ್ರೀ ನಾಗರಾಜು, ರವರ ಬಾಬ್ತು ಕೆಎ-13, ಜೆ-9469 ರ ಬಜಾಜ್ ಕ್ಯಾಲಿಬರ್ ಬೈಕ್ ನಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕತ್ತರಿಘಟ್ಟ ಗೇಟ್, ಎನ್ ಹೆಚ್-75 ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆಎ-05, ಎಂಹೆಚ್-6505 ರ ಕಾರಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಜಖಂಗೊಂಡು ಶ್ರೀ ನಾಗರಾಜು, ರವರು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ, ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜನಪ್ರಿಯಾ ಆಸ್ಪತ್ರೆಗೆ ದಾಖಲಿಸಿರುತ್ತೇವೆಂದು ಗಾಯಾಳು ಮಗ ಶ್ರೀ ಮಂಜು, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿ, ತನಿಖೆಯಲ್ಲಿರುತ್ತೆ.
ಬೈಕ್ ಡಿಕ್ಕಿ ಪಾದಚಾರಿ ಮಹಿಳೆಗೆ ರಕ್ತಗಾಯ:
     ದಿನಾಂಕ: 10-02-2019 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಮಾದಿಹಳ್ಳಿ ಹೋಬಳಿ, ಅಡಗೂರು ಗ್ರಾಮದ ವಾಸಿ ಶ್ರೀಮತಿ ಸುವರ್ಣ, ರವರು ರಾಗಿ ಹುಲ್ಲನ್ನು ತೆಗೆದುಕೊಂಡು ಮನೆಗೆ ಹೋಗಲು ಅಡಗೂರು-ಹಳೇಬೀಡು ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-13, ಇಬಿ-4444 ರ ಬೈಕಿನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಪಿರ್ಯಾದಿಯವರಿಗೆ ಡಿಕ್ಕಿ ಮಾಡಿದ ಪರಿಣಾಮ ರಸ್ತೆಗೆ ಬಿದ್ದು, ರಕ್ತಗಾಯಗಳಾಗಿ ಹಲ್ಲುಗಳು ಮುರಿದು ಹೋಗಿರುತ್ತವೆಂದು ಶ್ರೀಮತಿ ಸುವರ್ಣ, ರವರು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.
ಕಾರು ಬೈಕ್ ಗೆ ಡಿಕ್ಕಿ, ಇಬ್ಬರಿಗೆ ರಕ್ತಗಾಯ:
     ದಿನಾಂಕ: 10-02-2019 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡಿನ ಬೂದಿಗುಂಡಿ ವಾಸಿ ಶ್ರೀ ಲೋಹಿತ್, ರವರ ಬಾಬ್ತು ಕೆಎ-13, ಇಎನ್-1029 ರ ಪಲ್ಸರ್ ಬೈಕ್ ನಲ್ಲಿ ಅಣ್ಣ ಶ್ರೀ ಪವನ್ ಕುಮಾರ್, ರವರೊಂದಿಗೆ ತಂದೆಗೆ ಊಟ ಕೊಟ್ಟು ಬರಲು ಬೇಲೂರು ತಾಲ್ಲೂಕು, ಹಳೆಬೀಡು-ಹಗರೆ ರಸ್ತೆ, ಸಿದ್ದಾಪುರ ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-18, ಜೆಡ್-3899 ರ ಕಾರಿನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಲೋಹಿತ್ ಮತ್ತು ಶ್ರೀ ಪವನಗ ಕುಮಾರ್, ಇಬ್ಬರು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ರಕ್ತಗಾಯಗಳಾಗಿರುತ್ತದೆಂದು ಹಾಗೂ ಕಾರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಶ್ರೀ ಲೋಹಿತ್, ರವರು ಕೊಟ್ಟ ದೂರಿನ ಮೇರೆಗೆ ಹಳೆಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹೆಂಗಸು ಕಾಣೆ
     ದಿನಾಂಕ: 10-02-2018 ರಂದು ಬೆಳಿಗ್ಗೆ 6-15 ಗಂಟೆ ಸಮಯದಲ್ಲಿ ಹಾಸನದ ಸಿದ್ದಯ್ಯನಗರದ ವಾಸಿ ಶ್ರೀ ರಂಗಸ್ವಾಮಿ, ರವರ ಪತ್ನಿ ಶ್ರೀಮತಿ ರುಕ್ಮಿಣಿ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ರುಕ್ಮಿಣಿಯ ಪತಿ ಶ್ರೀ ರಂಗಸ್ವಾಮಿ, ರವರು ಕೊಟ್ಟ ದೂರಿನ ಮೇರೆಗೆ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ರುಕ್ಮಿಣಿ ಕೋಂ ರಂಗಸ್ವಾಮಿ, 31 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ನೈಟಿ, ಮತ್ತು ಬಿಳಿ ಬಣ್ಣದ ಚುಕ್ಕಿ ಇರುವ ಜರ್ಕಿನ್ ಧರಿಸಿರುತ್ತಾರೆ. ಈ ಹೆಂಗಸಿನ ಸುಳಿವು ಸಿಕ್ಕಲ್ಲಿ 08172-272260 ಕ್ಕೆ ಸಂಪರ್ಕಿಸುವುದು.
ವಿದ್ಯಾರ್ಥಿ ಕಾಣೆ
     ದಿನಾಂಕ: 11-02-2019 ರಂದು ಸಂಜೆ 6-00 ಗಂಟೆ ಸಮಯದಲ್ಲಿ  ಅರಸೀಕೆರೆ ಪಟ್ಟಣದ ಸುನ್ನಿಚೌಕ ವಾಸಿ ಶ್ರೀ ಅಸ್ಲಂ ಖಾನ್, ರವರ ಮಗ ಕು|| ಅದ್ನಾನ್ ಖಾನ್, ಅರಸೀಕೆರೆ ಪಟ್ಟಣದ ಶಾರದ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡಿಕೊಂಡಿದ್ದು, ಟ್ಯೂಷನ್ ಗೆ ಹೋಗಿ ಬರುತ್ತನೆಂದು ಮನೆಯಲ್ಲಿ ಹೇಳಿ ಹೋದವನು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಅದ್ನಾನ್ ಖಾನ್ನ ತಂದೆ ಶ್ರೀ ಅಸ್ಲಂ ಖಾನ್, ರವರು ದಿನಾಂಕ; 12-02-2019 ರಂದು ಕೊಟ್ಟ ದೂರಿನ ಮೇರೆಗೆ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಕು|| ಅದ್ನಾನ್ ಖಾನ್ ಬಿನ್ ಅಸ್ಲಂಖಾನ್, 14 ವರ್ಷ, 5' ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಟೀ ಶರ್ಟ್ ಮತ್ತು ಕ್ರೀಂ ಬಣ್ಣ ಪ್ಯಾಂಟ್ ಮತ್ತು ಬೂದು ಬಣ್ಣದ ಜರ್ಕಿನ್ ಧರಿಸಿರುತ್ತಾನೆ. ಈ ಹುಡುಗನ ಸುಳಿವು ಸಿಕ್ಕಲ್ಲಿ 08174-232233 ಕ್ಕೆ ಸಂಪರ್ಕಿಸುವುದು.


No comments: