* * * * * * HASSAN DISTRICT POLICE

Monday, February 11, 2019

HASSAN DISTRICT PRESS NOTE : 10-02-2019


ಪತ್ರಿಕಾ ಪ್ರಕಟಣೆ         ದಿ: 10-02-2019

ವರದಕ್ಷಿಣೆಗಾಗಿ ಪತಿ ಮತ್ತು ಮನೆಯವರಿಂದ ಪತ್ನಿಯ ಕೊಲೆ :

ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲ್ಲೂಕು, ಗೋಣಿಬೀಡು ಗ್ರಾಮದ  ರೆಹಮಾನ್ ರವರ  ತಂಗಿಯಾದ ಜೀನತ್ (ಸಲೀಕಾ) ರವರನ್ನು ಈಗ್ಗೆ 04 ವರ್ಷಗಳ ಹಿಂದೆ ಸಕಲೇಶಪುರ ಟೌನ್, ಮಹೇಶ್ವರಿ ನಗರ ಕೆಳಗಿನ ಕೊಪ್ಪಲು ಬಡಾವಣೆಯ ವಾಸಿಯಾದ ಸಿಖಂದರ್ ಎಂಬುವವನೊಂದಿಗೆ ಇಸ್ಲಾಂ ಸಂಪ್ರದಾಯದಂತೆ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಟ್ಟಿದ್ದು, ಸಿಖಂದರ್ ಮದುವೆಯಾಗಿ 15 ದಿನಗಳ ಕಾಲ ಅನ್ಯೋನ್ಯವಾಗಿದ್ದು, ನಂತರ ಸಿಖಂದರ್ ಆತನ ತಾಯಿ ಸಹೋದರಿಯರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಾ ಆಕೆಗೆ ಹೊಡೆದು ಬಡಿದು ವರದಕ್ಷಿಣೆ ತರುವಂತೆ  ಜೀನತ್ಳನ್ನು ತವರು ಮನೆಗೆ ಕಳುಹಿಸಿ ಕೊಡುತ್ತಿದ್ದರು ಪಿರ್ಯಾದಿ ರೆಹಮಾನ್  ಮತ್ತು ಕುಟುಂಬದವರು ಕೂಲಿ ಕೆಲಸ ಮಾಡಿ ಎರಡು ಬಾರಿ ಹಣ ಕೊಟ್ಟು ಕಳುಹಿಸಿದ್ದರು, ಆದರೂ ಸಹ ಸಿಖಂದರ್ ರವರ ಕುಟುಂಬದವರು ಕಿರುಕುಳ ಕೊಡುತ್ತಿದ್ದರಿಂದ  ಜಮಾಅತ್ ಕಮಿಟಿಯವರು ನಾಲ್ಕೈದು ಬಾರಿ ರಾಜಿ ಪಂಚಾಯತಿ ಮಾಡಿದ್ದರೂ ಕಿರುಕುಳ ನೀಡುತ್ತಾ ಬಂದಿದ್ದು, ದಿನಾಂಕ: 09-02-2019 ರಂದು ಮಧ್ಯಾಹ್ನ 03-30 ಗಂಟೆಯ ಸಮಯದಲ್ಲಿ ಪಿರ್ಯಾದಿಯವರಿಗೆ ಸಂಬಂಧಿಕರು  ಫೋನ್ ಮಾಡಿ ತಂಗಿ ಜೀನತ್ಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ತಕ್ಷಣ ಪಿರ್ಯಾದಿ ಹಾಗೂ ಅವರ ಸಂಬಂಧಿಕರುಗಳು ಸಕಲೇಶಪುರ ಸಿಖಂದರ್ ಮನೆಗೆ  ಬಂದು ನೋಡಲಾಗಿ ಜೀನತ್ಳ ಮೃತ ದೇಹವು ನೇಣು ಬಿಗಿದ ಸ್ಥಿತಿಯಲ್ಲಿತ್ತು. ಆದರೆ ಜೀನತ್ಳು ಧೈರ್ಯಶಾಲಿಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂತಳಾಗಿರುವುದಿಲ್ಲ. ಜೀನತ್ಳ ಗಂಡ ಸಿಖಂದರ್,  ಆತನ ತಾಯಿ ಮತ್ತು ಸಹೋದರಿಯರುಗಳು ವರದಕ್ಷಿಣೆ ದಾಹಕ್ಕೆ ಜೀನತ್ಳನ್ನು ಕೊಲೆ ಮಾಡಿದ್ದು, ಇವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಸಕಲೇಶಪುರ  ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದವನ ಬಂಧನ, ಬಂಧಿತನಿಂದ 1650/- ಬೆಲೆಯ  165 ಗ್ರಾಂ ಗಾಂಜಾ ಸೊಪ್ಪು ವಶ
 ದಿನಾಂಕ: 09-02-2019 ರಂದು ಮಧ್ಯಾಹ್ನ 01-00 ಗಂಟೆ ಸಮಯದಲ್ಲಿ  ಹಾಸನ ಟಿಪ್ಪುನಗರ ಮುಖ್ಯ ರಸ್ತೆಯಿಂದ 80 ಅಡಿ ರಸ್ತೆಗೆ ಸೇರುವ ಕೂಡು ರಸ್ತೆಯಲ್ಲಿ  ಯಾವುದೇ ಪರವಾನಗಿ ಇಲ್ಲದೆ ಒಂದು ಪ್ಲಾಸ್ಟಿಕ್ ಬ್ಯಾಗ್ನಲ್ಲಿ ಮಾದಕ ವಸ್ತುವಾದ ಗಾಂಜಾಸೊಪ್ಪನ್ನು ಮಾರಾಟ ಮಾಡಲು ಇಟ್ಟಿಕೊಂಡಿರುತ್ತಾರೆಂದು ಪಿಎಸ್ಐ ಶ್ರೀ ಆರೋಕಿಯಪ್ಪ, ಪೆನ್ಷನ್ ಮೊಹಲ್ಲಾ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ  ಅಕ್ರಮವಾಗಿ ಗಾಂಜಾ ಸೊಪ್ಪನ್ನು ಮಾರಾಟ ಮಾಡುತ್ತಿದ್ದವನ ಹಿಡಿದು ಹೆಸರು ವಿಳಾಸ ಕೇಳಲಾಗಿ  ಸಾದಿಕ್ ಶರೀಫ್ ಬಿನ್ ಅಕ್ಬರ್ ಶರೀಪ್, 37 ವರ್ಷ, ಬೂದಿಗುಂಡಿ, ಹಳೆಬೀಡು, ಬೇಲೂರು ತಾಲ್ಲೂಕು ಎಂದು ತಿಳಿಸಿದವನನ್ನು ದಸ್ತಗಿರಿ ಮಾಡಿಕೊಂಡು  ಆತನ ವಶದಲ್ಲಿದ್ದ 1650/- ಬೆಲೆಯ  165 ಗ್ರಾಂ ಗಾಂಜಾ ಸೊಪ್ಪನ್ನು ಅಮಾನತ್ತುಪಡಿಸಿಕೊಂಡು ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.    
                                          
ಮನೆಯಲ್ಲಿದ್ದ ಲ್ಯಾಪ್ಟಾಪ್,ನಗದು ಸೇರಿ 1,45000 ಬೆಲೆಯ ಚಿನ್ನ ಮತ್ತು ಬೆಳ್ಳಿ ಆಭರಣಗಳ ಕಳವು

ನಾಂಕ: 08-02-2019 ರಂದು  ಬೆಳಿಗ್ಗೆ  10-00 ಗಂಟೆ ಸಮಯದಲ್ಲಿ ಅರಕಲಗೂಡು ಪಟ್ಟಣ, ಮಲ್ಲಿಪಟ್ಟಣ ರಸ್ತೆ, ಕೋಟೆ ಬೀದಿ ವಾಸಿ  ಚೇತನ್ ಎ.ಕೆ. ರವರು ಮನೆಗೆ ಬೀಗ ಹಾಕಿಕೊಂಡು  ತಮ್ಮ ತಂದೆಯ ಆರೋಗ್ಯ ಪರೀಕ್ಷೆಗೆಂದು ಬೆಂಗಳೂರಿಗೆ ಹೋಗಿದ್ದಾಗ ಯಾರೋ ಕಳ್ಳರು ಮನೆಯ ಬೀಗ ಹೊಡೆದು ಮನೆಯ ಬೀರುವಿನಲ್ಲಿದ್ದ ಲ್ಯಾಪ್ಟಾಪ್, 15000/- ನಗದು, ಬೆಳ್ಳಿ ಚೊಂಬು, ಒಂದು ಬೆಳ್ಳಿ ತಟ್ಟೆ ಬಟ್ಟಲುಗಳನ್ನು ಎರಡು ಚಿನ್ನದ ರಿಂಗ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಮೌಲ್ಯ  1,45,000/- ರೂ ಆಗಿರುತ್ತದೆ. ಪತ್ತೆ ಮಾಡಿಕೊಡಬೇಕೆಂದು  ಶ್ರೀ ಚೇತನ್ ರವರು ಕೊಟ್ಟ ದೂರಿನ ಮೇರೆಗೆ  ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

3,50,000/- ಬೆಲೆಯ ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಕಳವು

ದಿನಾಂಕ: 08-02-2019 ರಂದು  ಮಧ್ಯಾಹ್ನ 02-00 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣ ತಾಲ್ಲೂಕು, ನುಗ್ಗೇಹಳ್ಳಿ ಹೋಬಳಿ, ಹೆಬ್ಬಾಳು ಗ್ರಾಮದ  ಶಿವರಾಜು ಹೆಚ್.ಕೆ. ರವರು ಮನೆಗೆ ಬೀಗ ಹಾಕಿಕೊಂಡು ಮೊಮ್ಮಕ್ಕಳ ಸ್ಕೂಲ್ ಡೇ ನೋಡಲು ಬೆಳ್ಳೂರು ಕ್ರಾಸ್ಗೆ ಹೋಗಿ ದಿನಾಂಕ: 09-02-2019 ರಂದು ಬೆಳಿಗ್ಗೆ 10-00 ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆ ಮುಂದಿನ ಬಾಗಿಲ ಬೀಗ ಇರಲಿಲ್ಲ, ಮನೆ ಒಳಗೆ ಹೋಗಿ ನೋಡಲಾಗಿ ರೂಮಿನಲ್ಲಿದ್ದ ಎರಡು ಗಾಡ್ರೇಜ್ ಬೀರುಗಳ ಬೀಗ ತೆಗೆದಿದ್ದು, ಬೀರುವಿನಲ್ಲಿದ್ದ  3,50,000/- ಬೆಲೆಯ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ದಿನಾಂಕ: 08-02-2019 ರ ರಾತ್ರಿ ಯಾವುದೋ ವೇಳೆಯಲ್ಲಿ ಯಾರೋ ಕಳ್ಳರು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆ ಮಾಡಿಕೊಡಬೇಕೆಂದು ಶ್ರೀ ಶಿವರಾಜು ಹೆಚ್.ಕೆ. ರವರು ಕೊಟ್ಟ ದೂರಿನ ಮೇರೆಗೆ  ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಬೈಕ್ ಮರಕ್ಕೆ ಡಿಕ್ಕಿ ಸಾವು ಸವಾರನ ಸಾವು

ದಿನಾಂಕ: 09-02-2019 ರಂದು ರಾತ್ರಿ 09-45 ಗಂಟೆ ಸಮಯದಲ್ಲಿ  ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಪಾತಿಮಾಪುರ  ಲಕ್ಕುಂದ  ಗ್ರಾಮದ  ಸುಶ್ಯಾಂತ್ ಡೆಂಜಿಲ್ ಸಲ್ಡಾನ ರವರು ಸ್ನೇಹಿತನ ಮನೆಗೆ ಹೋಗಿ  ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಸುಂಡಳ್ಳಿ ಗ್ರಾಮದ ಟಾಟಾ ಎಸ್ಟೇಟ್ ಹತ್ತಿರ ಹೋಗುತ್ತಿದ್ದಾಗ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಹೋಗಿ ಮರಕ್ಕೆ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸುಶ್ಯಾಂತ್ ಡೆಂಜಿಲ್ ಸಲ್ಡಾನ, 22 ವರ್ಷ ರವರು ಮೃತಪಟ್ಟಿರುತ್ತಾರೆಂದು ಮೃತರ ಸಂಬಂಧಿ ಶ್ರೀ ಸತೀಶ ಸಲ್ಡಾನ ರವರು ಕೊಟ್ಟ ದೂರಿನ ಮೇರೆಗೆ  ಸಕಲೇಶಪಯರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಬೈಕ್ ಡಿಕ್ಕಿ ಪಾದಾಚಾರಿಗೆ ರಕ್ತಗಾಯ

ದಿನಾಂಕ: 08-02-2019 ರಂದು ರಾತ್ರಿ 08-00 ಗಂಟೆ ಸಮಯದಲ್ಲಿ  ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಎ.ಮಲ್ಲೇನಹಳ್ಳಿ ಗ್ರಾಮದ ದೀಪು @ ಅಮೃತ್  ರವರು ತಮ್ಮ ಗ್ರಾಮದ ಕಾಳಯ್ಯ ರವರ ತಿಥಿ ಕಾರ್ಯದ ಊಟವನ್ನು ಮಾಡಿಕೊಡು ತಮ್ಮ ತೋಟದ ಮನೆಗೆ ಹೋಗಲು ರಸ್ತೆಯ ಎಡ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಭಾಗದಿಂದ ಬಂದ ಕೆಎ-13-ಎಲ್-5562  ರ ಟಿವಿಎಸ್  ವಿಕ್ಟರ್ ಜಿ.ಎಲ್. ಎಕ್ಸ್ ಬೈಕ್ ಚಾಲಕ ತನ್ನ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ  ದೀಪು @ ಅಮೃತ್, 18 ವರ್ಷ ರವರಿಗೆ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಸಕರ್ಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತೇನೆಂದು ಆಸ್ಪತ್ರೆಗೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ  ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

ಮನುಷ್ಯ ಕಾಣೆ

ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಚಲ್ಯ ಗ್ರಾಮದ ಮಂಜಪ್ಪ ರವರು  ದಿನಾಂಕ: 09-02-2019 ರ ಹಿಂದಕ್ಕೆ ಸುಮಾರು 3 ತಿಂಗಳ ಹಿಂದೆ ಬೆಳಿಗ್ಗೆ 11-00 ಗಂಟೆ ಸಮಯದಲ್ಲಿ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಮಂಜಪ್ಪ ರವರ ಪತ್ನಿ ಶ್ರೀಮತಿ ಭಾಗ್ಯಮ್ಮ ರವರು ದಿನಾಂಕ: 09-02-2019 ರಂದು ಕೊಟ್ಟ ದೂರಿನ ಮೇರೆಗೆ  ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ವ್ಯಕ್ತಿಯ ಚಹರೆ: ಮಂಜಪ್ಪ, 56 ವರ್ಷ, 5'3'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ವ್ಯಕ್ತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ಶ್ರವಣಬೆಳಗೊಳ ಠಾಣೆ ಫೋನ್ ನಂ. 08176-257229 ಕ್ಕೆ ಸಂಪರ್ಕಿಸುವುದು.

ಹೆಂಗಸು ಕಾಣೆ

ದಿನಾಂಕ: 07-02-2019 ರಂದು ಸಂಜೆ 07-00 ಗಂಟೆ ಸಮಯದಲ್ಲಿ  ಅರಸೀಕೆರೆ ಪಟ್ಟಣ, ಅಂಚೆಕೊಪ್ಪಲು ವಾಸಿ ಕಿರಣ್ ರವರ ಪತ್ನಿ ಶ್ರೀಮತಿ ಜಯಲಕ್ಷ್ಮಿ  ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ  ಮನೆಯಿಂದ ಕಾಣೆಯಾಗಿರುತ್ತಾಳೆ., ಎಲ್ಲಾ  ಕಡೆ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ಜಯಲಕ್ಷ್ಮಿ ರವರ ಪತಿ ಶ್ರೀ ಕಿರಣ್ ರವರು ಕೊಟ್ಟ ದೂರಿನ ಮೇರೆಗೆ  ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಜಯಲಕ್ಷ್ಮಿ ಕೋಂ ಕಿರಣ್, 24 ವರ್ಷ, 5'2'' ಅಡಿ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾಳೆ, ಕಾಣೆಯಾದ ಹೆಂಗಸಿನ ಬಗ್ಗೆ ಸುಳಿವು ಸಿಕ್ಕಲ್ಲಿ  ಅರಸೀಕೆರೆ ನಗರ ಠಾಣೆ ಫೋನ್ ನಂ. 08174-232233 ಕ್ಕೆ ಸಂಪರ್ಕಿಸುವುದು.

No comments: