* * * * * * HASSAN DISTRICT POLICE

Saturday, February 9, 2019

PRESS NOTE : 09-02-2019


ಪತ್ರಿಕಾ ಪ್ರಕಟಣೆ              ದಿನಾಂಕ: 09-02-2019

ಪಾದಚಾರಿ ಹುಡುಗನಿಗೆ ಕಾರು ಡಿಕ್ಕಿ, ಹುಡುಗನಿಗೆ ಗಾಯ:
ದಿನಾಂಕ: 05-02-2019 ರಂದು ಸಂಜೆ 4-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕ್,  ಶ್ರವಣಬೆಳಗೊಳ ಹೋಬಳಿ,  ಕೋಡಿ ಬೆಳಗೊಳ ಗ್ರಾಮದ ಶ್ರೀ ನಂಜೇಗೌಡರವರ ಮಗ ಹೇಮಂತ್ ಸ್ಕೂಲ್ ಮುಗಿಸಿಕೊಂಡು, ಸ್ಕೂಲ್ ಬಸ್ನಲ್ಲಿ ಬಂದು ಕೋಡಿಬೆಳಗೊಳ ಗೇಟ್ ಹತ್ತಿರ ಬಸ್ ಇಳಿದು ತಾಯಿ ಜಯಮ್ಮರವರೊಂದಿಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಚನ್ನರಾಯಪಟ್ಟಣ ಕಡೆಯಿಂದ ಬಂದ ನೋಂದಣಿಯಾಗದ ಏಂ03/ಘಿಕಿ008187/2018-19 ಎಂದು ಟೆಂಪರರಿ ರಿಜಿಸ್ಟ್ರೇಷನ್ ನಂಬರ್ ಇದ್ದ ಕಾರಿನ ಚಾಲಕ ತನ್ನ ಕಾರನ್ನು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಹೇಮಂತ್ಗೆ ಡಿಕ್ಕಿ ಮಾಡಿದ್ದ್ದರಿಂದ ರಸ್ತೆಯ ಮೇಲೆ ಬಿದ್ದು ಮೈಕೈಗೆ ಏಟಾಗಿರುವುದಾಗಿ ಶ್ರೀ ನಂಜೇಗೌಡರವರು ನೀಡಿದ ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹಣದ ವಿಚಾರದಲ್ಲಿ ಜಗಳ, ಪತಿ ಮತ್ತು ಪತ್ನಿಯೊಂದಿಗೆ ಗಲಾಟೆ ಮತ್ತು ಕೊಲೆ ಬೆದರಿಕೆ

ದಿನಾಂಕ: 04-02-2019 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ ಸಕಲೇಶಪುರ ತಾಲ್ಲೂಕ್, ಯಸಳೂರು ಹೋಬಳಿ, ತಂಬಲಗೆರೆ ಗ್ರಾಮದ  ಶ್ರೀ ರಾಜೇಗೌಡ ಮತ್ತು ಅವರ ಮಗ ದರ್ಶನ್ ರವರು ಅದೇ ಗ್ರಾಮದ ಶ್ರೀಮತಿ ಗಂಗಮ್ಮರವರಿಗೆ ರಸ್ತೆಯ ಕೆಲಸದ ಹಣವನ್ನು ಕೊಡದೆ ಇಟಾಚಿ ಯಂತ್ರವನ್ನು ತೆಗೆದುಕೊಂಡು ಹೋಗುತ್ತಿದ್ದು, ಶ್ರೀಮತಿ ಗಂಗಮ್ಮ ಮತ್ತು ಅವರ ಗಂಡ ರಾಜೇಗೌಡರವರು ಹಣ ಕೊಡದೆ ನಮ್ಮ ರಸ್ತೆಯಲ್ಲಿ ಇಟಾಚಿಯನ್ನು ತೆಗೆದುಕೊಂಡು ಹೋಗಬಾರದೆಂದು ಹೇಳಿದ್ದಕ್ಕೆ ರಾಜೇಗೌಡ ಮತ್ತು ದರ್ಶನ್ರವರು ಜಗಳ ತೆಗೆದು ಮಾಂಗಲ್ಯದ ಸರವನ್ನು ಕಿತ್ತು ಹಾಕಿ ಕೊಲೆ ಬೆದರಿಗೆ ಹಾಕಿರುತ್ತಾರೆಂದು ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಜಮೀನಿನ ವಿಚಾರದಲ್ಲಿ ಜಗಳ, ಗಂಡ ಹೆಂಡತಿ ಮೇಲೆ ಹಲ್ಲೆ

ದಿನಾಂಕ: 03-02-2019 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕ್, ಯಸಳೂರು ಹೋಬಳಿ, ನೇರಡಿ ಗ್ರಾಮದ ಶ್ರೀ ರಮೇಶ್ ಮತ್ತು ಅವರ ಪುಟ್ಟತಾಯಮ್ಮ ಎಂಬುವವರೊಂದಿಗೆ ಅದೇ ಗ್ರಾಮದ ರಾಮಚಂದ್ರ ಬಿನ್ ಗುಂಡೇಗೌಡ ಎಂಬುವವರು ಜಮೀನಿನ ವಿಚಾರದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಚಪ್ಪಲಿಯಿಂದ ಹೊಡೆದು ಅವಮಾನಗೊಳಿಸಿರುತ್ತಾರೆಂದು ಪಿರ್ಯಾದಿ ಶ್ರೀ ರಮೇಶ ಎನ್.ಎನ್ ರವರು ಕೊಟ್ಟ ದೂರಿನ ಮೇರೆಗೆ ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಪ್ರಾಪ್ತ ಬಾಲಕಿಯನ್ನು ಬಲತ್ಕಾರಿಂದ ಕರೆದುಕೊಂಡು ಹೋಗಿ, ಅತ್ಯಾಚಾರ ಮಾಡಿ, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ:

ದಿನಾಂಕ: 25-01-2019 ರಂದು ಮದ್ಯಾಹ್ನ 3-30 ಗಂಟೆಯಲ್ಲಿ ಬೇಲೂರು ತಾಲ್ಲೂಕ್, ಹಳೇಬಿಡು ಹೋಬಲಿ, ಕೆ ಮಲ್ಲಾಪುರ ಗ್ರಾಮದ ಶ್ರೀ ತಮ್ಮೇಗೌಡರವರ ಮಗಳು 17 ವರ್ಷದ ಕುಮಾರಿ ದೇವಿಕರವರನ್ನು ಹಳೇಬೀಡಿದ ಕಲ್ಪತರು ಕಾಲೇಜಿನಿಂದ ಅದೇ ಗ್ರಾಮದ ಮನೋಹರ ಎಂಬುವವನು ಪುಸಲಾಯಿಸಿ ಬಲತ್ಕಾರವಾಗಿ ಕಾರಿನಲ್ಲಿ  ಬೆಂಗಳೂರಿಗೆ ಕರೆದುಕೊಂಡು ಹೋಗಿ ಲಾಡ್ಜ್ನಲ್ಲಿರಿಸಿ ಆಕೆಯಮೇಲೆ ಅತ್ಯಾಚಾರವೆಸಗಿ ನಂತರ ಬೆಂಗಳೂರಿನಿಂದ ಧರ್ಮಸ್ಥಳ, ಮಂಗಳೂರು ಮಲ್ಪೆ ಮುಂತಾದ ಕಡೆ ಕರೆದುಕೊಂಡು ಹೋಗಿ ಅಲ್ಲಿಯೂ ಸಹ ಅತ್ಯಾಚಾರ ಮಾಡಿ ನಂತರ ದಿನಾಂಕ: 27-01-2019 ರಂದು ಬೆಳಗ್ಗೆ ಧರ್ಮಸ್ಥಳದಿಂದ ಕರೆದುಕೊಂಡು ಬಂದು ಬೇಲೂರಿನ ಬಸ್ ಸ್ಟ್ಯಾಂಡ್ನಲ್ಲಿ ಬಿಟ್ಟು ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದುದಾಗಿ ಬೆದರಿಕೆ ಹಾಕಿದ್ದು, ಈ ದಿನ ದಿನಾಂಕ: 08-02-2019 ರಂದು ತನ್ನ ತಾಯಿಗೆ ವಿಚಾರ ತಿಳಿಸಿರುವುದಾಗಿ ಪಿರ್ಯಾದಿ ಕುಮಾರಿದೇವಿಕರವರು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹಣ ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ಮತ್ತು ಕೊಲೆ ಬೆದರಿಕೆ:
ದಿನಾಂಕ: 06-02-2019 ರಂದು ರಾತ್ರಿ 8-30 ಗಂಟೆಯಲ್ಲಿ ಅರಸೀಕೆರೆ ತಾಲ್ಲೂಕ್, ಗಂಡಸಿ ಹೋಬಳಿ, ರಂಗಾಪುರ ಗ್ರಾಮದ ಶ್ರೀ ಚಂದ್ರಾನಾಯಕರವರು  ಅದೇ ಗ್ರಾಮದ ಶೇಖರ್ರವರ ಮನೆಯ ಬಳಿ ಹೋಗಿ ತಮಗೆ ಕೊಡಬೇಕಾದ ಹಣವನ್ನು ಕೊಡುವಂತೆ ಕೇಳಿದಾಗ ಶೇಖರ್ ನಿನಗೆ ಯಾವ ಹಣವನ್ನು ಕೊಡಬೇಕು ಎಂದು ಜಗಳ ತೆಗೆದು ಅವಾಚ್ಯ ಶಬ್ದಗಳಿಂದ  ಬೈದು ಮಚ್ಚಿನಿಂದ ತಲೆಯ ಹಿಂಭಾಗಕ್ಕೆ ಮತ್ತು ಇತರೆ ಕಡೆಗಳಿಗೆ ಹೊಡೆದು ರಕ್ತಗಾಯ ಪಡಿಸಿದ್ದಲ್ಲದೆ ಆತನ ಹೆಂಡತಿ ಮತ್ತು ತಾಯಿಯೂ ಸಹ ಬೈದು ಕೈಗಳಿಂದ ಹೊಡೆದು ಕೊಲೆ  ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿ ಶ್ರೀ ಚಂದ್ರಾಯ್ಕರವರು ಅರಸೀಕೆರೆ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕಾರಿನ ಗ್ಲಾಸ್ ಇಳಿಸಿ ಕಾರಿನಲ್ಲಿದ್ದ ಒಡವೆ ಕಳ್ಳತನ:

ದಿನಾಂಕ: 07-10-2019 ರಂದು ಹಾಸನ ಶಾಂತಿನಗರದ ಶ್ರೀಮತಿ ಮಮತ ಟಿ ಪಿ ರವರು ಕುಟುಂಬದೊಂದಿಗೆ ಹಾನುಬಾಳು ಗ್ರಾಮಕ್ಕೆ ಹೋಗಿ ವಾಪಸ್ ಬರುವಾಗ ಮಂಜ್ರಾಬಾದ್ ಕೋಟೆ ಹತ್ತಿರ ತಮ್ಮ ಓಮಿನಿ ಕಾರನ್ನು ನಿಲ್ಲಿಸಿ, ಕೋಟೆ ನೋಡಿಕೊಂಡು ವಾಪಸ್ ಸಂಜೆ 5-00 ಗಂಟೆ ಬಂದು ನೋಡಿದಾಗ ಕಾರಿನ ಹಿಂಬದಿಯ ಗ್ಲಾಸ್ ಇಳಿಸಿದ್ದು, ಕಾರಿನಲ್ಲಿದ್ದ ಬಟ್ಟೆಯೆಲ್ಲಾ ಹರಡಿದ್ದು ಅದರೊಳಗಿದ್ದ ಸುಮಾರು 12 ಗ್ರಾಂ ತೂಕದ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀಮತಿ ಮಮತ ಟಿ ಪಿ ರವರು ಕೊಟ್ಟ ದೂರಿನ ಮೇರೆಗೆ ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ:

ಅರಸೀಕೆರೆ ತಾಲ್ಲೂಕ್, ಕಣಕಟ್ಟೆ ಹೋಬಳಿ,  ವಾಲೇನಹಳ್ಳಿ ಗ್ರಾಮದ ಶ್ರೀ ಮೋಹನ್ ಕುಮಾರಿ ಕೋಂ ರಂಗನಾಥ ರವರು ತಮ್ಮ ಮಗಳು 15 ವರ್ಷದ ಪ್ರಿಯಾಂಕಳನ್ನು ತಮ್ಮ ತವರೂರಾದ ಕಿತ್ತನಕೆರೆಯಲ್ಲಿ ತನ್ನ ತಾಯಿಯೊಂದಿಗೆ ಬಿಟ್ಟು ವಿದ್ಯಾಭ್ಯಾಸ ಮಾಡಿಸುತ್ತಿದ್ದು, ದೂರದ ಸಂಬಂಧಿ ಸೋಮಸಂದ್ರ ಗ್ರಾಮದ ಗಿರೀಶ ಎಂಬುವವನು ಆಗಾಗ್ಗೆ ತನ್ನ ತಾಯಿಯ ಮನೆಗೆ ಬರುತ್ತಿದ್ದನು. ಆ ಸಮಯದಲ್ಲಿ ಪ್ರಿಯಾಂಕಳನ್ನು ಪರಿಚಯ ಮಾಡಿಕೊಂಡು ಪ್ರೀತಿ ಮಾಡುವುದಾಗಿ ನಂಬಿಸಿ 2018 ನೇ ಸಾಲಿನ ಅಕ್ಟೋಬರ್ ತಿಂಗಳಿನಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ತಮ್ಮ ಮಗಳನ್ನು ಮದುವೆಯಾಗುವುದಾಗಿ ನಂಬಿಸಿ ಅವಳ ಇಚ್ಚಗೆ ವಿರುದ್ದವಾಗಿ ಸಂಬೋಗ ಮಾಡಿದ್ದು ಆಕೆ ಗಭರ್ಿಣಿಯಾಗಿರುತ್ತಾಳೆ. ಇದರಿಂದ ತಮ್ಮ ಮಗಳು ಮನೆಗೆ ನಡೆದ ವಿಚಾರವನ್ನು ತಿಳಿಸಿದರೆ ಹೊಡೆಯುತ್ತಾರೆಂದು ಹೆದರಿ ಸಾಯಬೇಕೆಂದು ನಿರ್ಧರಿಸಿ ವಿಷವನ್ನು ಕುಡಿದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿರುತ್ತಾಳೆ. ಆದ್ದರಿಂದ ನಮ್ಮ ಮಗಳು ಅಪ್ರಾಪ್ತೆ ಎಂದು ತಿಳಿದಿದ್ದರೂ ಸಹ ಅವಳನ್ನು ಮದವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಹೊಂದಿರುವ ಗಿರೀಶನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಶ್ರೀಮತಿ ಮೋಹನಕುಮಾರಿರವರು ನೀಡಿದ ದೂರಿನ ಮೇರೆಗೆ ಬಾಣಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. 

ನಲ್ಲಿ ನೀರು ಹಿಡಿಯುವ ವಿಚಾರದಲ್ಲಿ ಜಗಳ, 4 ಜನ ಹೆಂಗಸರಿಂದ ಮಹಿಳೆ ಮೇಲೆ ಹಲ್ಲೆ ಮತ್ತು ಕೊಲೆ ಬೆದರಿಕೆ

ದಿನಾಂಕ: 06-02-2019 ರಂದು ರಾತ್ರಿ 8-30 ಗಂಟೆಯಲ್ಲಿ ಹಳೇಬೀಡು ಟೌನ್ ಹೊಯ್ಸಳ ಬಡಾವಣೆಯ ವಾಸಿ ಶ್ರೀಮತಿ ಸುಧಾರವರು ಸಾವಿತ್ರಮ್ಮ ಎಂಬುವವರ ಮನೆಯ ಮುಂದೆ ಪಂಚಾಯ್ತಿ ಬೋರ್ವೆಲ್ನಲ್ಲಿ ನೀರು ಹಿಡಿಯುತ್ತಿದ್ದಾಗ ಅಲ್ಲಿಗೆ ಬಂದ ಗೀತಾ, ಸಾವಿತ್ರಮ್ಮ, ರತ್ನಮ್ಮ ಮತ್ತು ವನೀತ ಎಂಬುವವರು ನೀರು ಹಿಡಿಯುವ ವಿಚಾರದಲ್ಲಿ  ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕಪಾಳಕ್ಕೆ ಹೊಡೆದು, ಚಪ್ಪಲಿಯಿಂದ ಮೈಕೈಗೆ ಹೊಡೆದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಶ್ರೀಮತಿ ಸುಧಾರವರು ನೀಡಿದ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿ, ಬೈಕಿನಲ್ಲಿದ್ದವರಿಗೆ ರಕ್ತಗಾಯ:

ದಿನಾಂಕ: 07-02-2019 ರಂದು ಸಂಜೆ 4-00 ಗಂಟೆಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕ್, ಹಿರಿಸಾವೆಯ ಶ್ರೀಮತಿ ಖುಷ್ಬುರವರು ತಮ್ಮ ಗಂಡ ಸಂಜೀವ ಸೇವರ್ಿರವರೊಂದಿಗೆ ತಮ್ಮ ತಾಯಿ ಮನೆ ಮೈಸೂರು ಜಿಲ್ಲೆಯ, ಸರಗೂರಿನಿಂದ ವಾಪಸ್ ತಮ್ಮ ಬಾಬ್ತು ಕೆಎ-13-ಇಕೆ-9265 ನಂಬರಿನ ಬೈಕಿನಲ್ಲಿ ಹಿರಿಸಾವೆಗೆ ಬರಲು ಕೊತ್ತನಘಟ್ಟ ಹತ್ತಿರ ಬರುತ್ತಿದ್ದಾಗ, ಪಿರ್ಯಾದಿಯವರು ಗಂಡನೂ ವೇಗವಾಗಿ ಬೈಕನ್ನು ಚಲಾಯಿಸುತ್ತಿದ್ದು, ಶ್ರವಣಬೆಳಗೊಳದ ಕಡೆಯಿಂದ ಬಂದ ಕೆಎ-02-ಈಬಿ-3577  ನಂಬರಿನ ಬೈಕ್ ಚಾಲಕನು ನಿರ್ಲಕ್ಷತೆಯಿಂದ ಬೈಕ್ ಚಾಲನೆ ಮಾಡಿಕೊಂಡು ಬಂದಿದ್ದು, ಎರಡೂ ಬೈಕ್ಗಳು ಮುಖಾಮುಖಿ ಡಿಕ್ಕಿ ಮಾಡಿಕೊಂಡ ಪರಿಣಾಮ ಎರಡೂ ಬೈಕ್ನಲ್ಲಿದ್ದವರೂ ಸಹ ರಸ್ತೆಯ ಮೇಲೆ ಬಿದ್ದು ಮೈಕೈಗೆ ರಕ್ತಗಾಯವಾಗಿದ್ದು, ಪಿರ್ಯಾದಿ ಗಂಡ ಸಂಜೀವ ಸೇವರ್ಿರವರನ್ನು ಹೆಚ್ಚಿನ ಚಿಕತ್ಸೆಗಾಗಿ ಹಾಸನದ ಜನಪ್ರಿಯ ಆಸ್ಪತ್ರೆಗೆ ದಾಖಲಿಸಿರುವುದಾಗಿ ಶ್ರೀಮತಿ ಖುಷ್ಬುರವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


No comments: