* * * * * * HASSAN DISTRICT POLICE

Monday, February 11, 2019

HASSAN DISTRICT PRESS NO TE : 11-02-2019


ಪತ್ರಿಕಾ ಪ್ರಕಟಣೆ                               ದಿ: 11-02-2019

ಸಿಪಿಐ, ಹಾಸನ ನಗರ ವೃತ್ತ, ಜೂಜು ಅಡ್ಡೆ ಮೇಲೆ ದಾಳಿ, 12 ಜನರ ಬಂಧನ, ಬಂಧಿತರಿಂದ 1,22,300/- ನಗದು ವಶ:

ದಿನಾಂಕ: 10-02-2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಹಾಸನದ ದಾಸರಕೊಪ್ಪಲಿನ ಲೀಲಾ ಪ್ಯಾರಡೈಸ್ನ ರೂಂ ನಂ 102 ರಲ್ಲಿ ಜೂಜಾಡುತ್ತಿದ್ದಾರೆಂದು ಶ್ರೀ ಸತ್ಯನಾರಾಯಣ, ಸಿಪಿಐ, ಹಾಸನ ನಗರ ವೃತ್ತ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ಶ್ರೀ ಅಶೋಕ ಬಿನ ಲೇಟ್ ಗೌಡೇಗೌಡ, 44 ವರ್ಷ, ಶಾಂತಿನಗರ, ಹಾಸನ. 2) ಶ್ರೀ ಸುರೇಶ್ ಬಿನ್ ಲೇಟ್ ತಿಮ್ಮೇಗೌಡ, 44 ವರ್ಷ, ಶಾಂತಿನಗರ, ಹಾಸನ. 3) ಶ್ರೀ ಕೆ. ಚಂದ್ರು ಬಿನ್ ಲೇಟ್ ತಿಮ್ಮೇಗೌಡ, 50ವರ್ಷ, ಚಿಕ್ಕಕೊಂಡಗುಳಗ್ರಾಮ, ಹಾಸನ ತಾಲ್ಲೂಕು 4) ಶ್ರೀ ಯೋಗೆಶ್ ಬಿನ್ ಕರಿಗೌಡ, 45 ವರ್ಷ, ಮಾಹದೇವರಹಳ್ಳಿ ಗ್ರಾಮ, ದುದ್ದ ಹೋಬಳಿ, ಹಾಸನ ತಾಲ್ಲೂಕು 5) ಶ್ರೀ ರವಿ ಬಿನ್ ಕೃಷ್ಣೇಗೌಡ, 36 ವರ್ಷ ದಾಸರಕೊಪ್ಪಲು, ಹಾಸನ 6) ಶ್ರೀ ಗಿರೀಶ್ ಬಿನ್ ದೇವರಾಜು, 37 ವರ್ಷ, ಹೇಮಾವತಿ ನಗರ, ಹಾಸನ. 7) ಶ್ರೀ ಯೋಗೇಶ್ ಬಿನ್ ವೆಂಕಟೇಗೌಡ, 36 ವರ್ಷ, ಹೆಚ್ಎಸ್ಎಂ ಲೇಟೌಟ್, ಬೆಂಗಳೂರು. 8) ಶ್ರೀ ಶರತ್ ಬಿನ್ ಬಸವರಾಜು, 45 ವರ್ಷ, ವಿದ್ಯುತ್ನಗರ, ಹಾಸನ. 9) ಶ್ರೀ ಶೇಖರ ಬಿನ್ ಪುಟ್ಟಸ್ವಾಮಿಗೌಡ, 40 ವರ್ಷ, ಶಂಕರಿಮಠ ರಸ್ತೆ, ಹಾಸನ. 10) ಶ್ರೀ ಹರೀಶ ಬಿನ್ ತಿಮ್ಮೇಗೌಡ, 45 ವರ್ಷ, ಜಯನಗರ, ಹಾಸನ. 11) ಶ್ರೀ ಶ್ರೀನಿವಾಸ ಬಿನ್ ವೆಂಕಟೇಗೌಡ, ಜಯನಗರ, ಹಾಸನ 12) ಶ್ರೀ ರಾಜಶೇಖರ ಬಿನ್ ರುದ್ರಪ್ಪ, ವಿದ್ಯಾನಗರ, ಹಾಸನ. ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 1,22,300/- ನಗದನ್ನು ಅಮಾನತ್ತುಪಡಿಸಿಕೊಂಡು ಪೆನ್ಷನ್ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಜೂಜಾಡುತ್ತಿದ್ದ ಆರು ಜನರ ಬಂಧನ, ಬಂಧಿತರಿಂದ 2,305/-ನಗದು ವಶ:

ದಿನಾಂಕ: 10-02-2019 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ನವಿಲೆ ಗ್ರಾಮದ ಕೆರೆಯ ಅಂಚಿನ ಖಾಲಿ ಜಾಗದಲ್ಲಿ ಅಂದರ್-ಬಾಹರ್ ಜೂಜಾಡುತ್ತಿದ್ದಾರೆಂದು ಶ್ರೀಮತಿ ಸರೋಜಾಬಾಯಿ, ಪಿಎಸ್ಐ ನುಗ್ಗೇಹಳ್ಳಿ ಪೊಲೀಸ್ ಠಾಣೆ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಜೂಜಾಡುತ್ತಿದ್ದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ನಾಗೇಶ್ ಬಿನ್ ರಾಮಲಿಂಗ, 25 ವರ್ಷ, 2) ರಾಜ ಬಿನ್ ಶಿವಯ್ಯ, 23 ವರ್ಷ, 3) ಕುಮಾರ ಬಿನ್ ಗುಂಡಯ್ಯ, 36 ವರ್ಷ, 4) ಪ್ರಕಾಶ್ ಬಿನ್ ರಂಗಪ್ಪ, 45 ವರ್ಷ, 5) ನಾಗೇಂದ್ರ ಬಿನ್ ನಿಂಗಪ್ಪ, 33 ವರ್ಷ, 6) ವೀರೇಶ್ ಬಿನ್ ಅಮಾಸಯ್ಯ, 52 ವರ್ಷ, ಎಲ್ಲರೂ ನವಿಲೆ ಗ್ರಾಮ, ಬಾಗೂರು ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 2,305/- ನಗದನ್ನು ಅಮಾನತ್ತುಪಡಿಸಿಕೊಂಡು ನುಗ್ಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕ್ರಮ ಕೈಗೊಂಡಿರುತ್ತೆ.

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದವನ ಬಂಧನ, ಜಾರುವಾರು ಸಮೇತ ಲಾರಿ ವಶ:

ದಿನಾಂಕ: 10-02-2019 ರಂದು ಬೆಳಿಗ್ಗೆ 10-15 ಗಂಟೆ ಸಮಯದಲ್ಲಿ ಚಿಕ್ಕಮಗಳೂರು ರಸ್ತೆ ಕಡೆಯಿಂದ ಕೆಎ-45,ಎ-0411 ರ ಅಶೋಕ ಲೈ ಲ್ಯಾಂಡ್ ಲಾರಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆಂದು ಶ್ರೀ ಜಗದೀಶ್, ಪಿಎಸ್ಐ ಬೇಲೂರು ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಕೆಎ-45,ಎ-0411 ರ ವಾಹನವನ್ನು ತಡೆದು ತಪಾಸಣೆ ನಡೆಸಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ 8 ಜಾನುವಾರುಗಳನ್ನು ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಜಲೀಲ್ ಬಿನ್ ಅಬ್ದುಲ್ ರಶೀದ್, 38 ವರ್ಷ, ಬಸವನಗುಡಿ ಬೀದಿ, ಹೊಳೆನರಸೀಪುರ ಟೌನ್ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಜಾನುವಾರುಗಳ ಸಮೇತ ಲಾರಿಯನ್ನು ಅಮಾನತ್ತುಪಡಿಸಿಕೊಂಡು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕೆಎಸ್ಆರ್ಟಿಸಿ, ಬಸ್ ಚಾಲಕನ ನಿರ್ಲಕ್ಷ್ಯತೆ, ಪಾದಚಾರಿಗೆ ಡಿಕ್ಕಿಯಾಗಿ ಕಾಲಿನ ಮೇಲೆ ಬಸ್ ಚಕ್ರ ಹರಿದು ತೀವ್ರ ಸ್ವರೂಪದ ರಕ್ತಗಾಯ:
ದಿನಾಂಕ: 09-02-2019 ರಂದು ಮಧ್ಯಾಹ್ನ 4-00 ಗಂಟೆ ಸಮಯದಲ್ಲಿ ಚಿಕ್ಕಮಗಳೂರಿನ ಚಚರ್್ ರಸ್ತೆ, ಲಕ್ಷ್ಮೀಶನಗರ, ಕಮಲದೇವಿ ನಿಲಯದ ವಾಸಿ ಶ್ರೀ ಮುಳ್ಳಯ್ಯ, ರವರು ಚಿಕ್ಕಮಗಳೂರಿನಿಂದ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬಂದು ಹಾಸನ ಬಸ್ ನಿಲ್ದಾಣದಲ್ಲಿ ಇಳಿದು, 6ನೇ ಪ್ಲಾಟ್ ಫಾರಂನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕೆಎ,ಎಫ್-1907 ರ ಕೆಎಸ್ಆರ್ಟಿಸಿ ಬಸ್ಸಿನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಮುಳ್ಳಯ್ಯ, ರವರಿಗೆ ಡಿಕ್ಕಿ ಮಾಡಿ, ಬಸ್ ಮುಂಭಾಗದ ಚಕ್ರ ಕಾಲಿನ ಮೇಲೆ ಹರಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಮಂಗಳ ಆಸ್ಪತ್ರೆಯಲ್ಲಿ ದಾಖಲಿಸಿರುತ್ತೇವೆಂದು ಗಾಯಾಳು ಮಗ ಶ್ರೀ ಹೆಚ್.ಎಂ. ಮೋಹನ್ಕುಮಾರ್, ರವರು ದಿನಾಂಕ: 10-02-2019 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕ್ಷುಲ್ಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ & ಕೊಲೆ ಬೆದರಿಕೆ:
ದಿನಾಂಕ: 09-02-2019 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಕೆಹೆಚ್ಬಿ ಕಾಲೋನಿ, ವಾಸಿ ಶ್ರೀ ರಂಗಪ್ಪ, ರವರು ಫೋನ್ ಕಳೆದು ಹೋದ ಬಗ್ಗೆ ಚನ್ನರಾಪಟ್ಟಣನಗರ ಠಾಣೆಯಲ್ಲಿ ಕಂಪ್ಲೇಟ್ ಕೊಟ್ಟು, ಪಟ್ಟಣದ ಪೂಣರ್ಿಮ ಟ್ರಾವಲ್ಸ್ ಹತ್ತಿರ ಶ್ರೀ ಮೊಹಮ್ಮದ್ ಯಾಸೀನ್, ರವರ ಜೊತೆ ಮಾತನಾಡುತ್ತಾ ನಿಂತಿದ್ದಾಗ ಯಾರೋ ಇಬ್ಬರು ಬೈಕ್ನಲ್ಲಿ ಬಂದು ಲೇ ರಂಗ ಎಂದು ಕೂಗಿ ಮುಖಕ್ಕೆ ಹೊಡೆದು ಹಲ್ಲೆ ಮಾಡಿದ್ದು, ತಕ್ಷಣ ಕನ್ನಡಕ ಬಿದ್ದಿದ್ದನ್ನು ತೆಗೆದುಕೊಂಡು ಎದ್ದು ನೋಡಲಾಗಿ ಚನ್ನರಾಯಪಟ್ಟಣ ತಾಲ್ಲೂಕು, ಕಾಂತರಾಜಪುರ ಗ್ರಾಮದ ವಾಸಿ ಶ್ರೀ ಮಂಜುನಾಥ, ರವರು ಮಚ್ಚಿನಿಂದ ಕೊಚ್ಚಿ ಹಾಕುತ್ತೇನೆಂದು ಕೊಲೆ ಬೆದರಿಕೆ ಹಾಕಿರುತ್ತಾನೆಂದು ಹಾಗೂ ಯಾವುದೇ ಸಂದರ್ಭದಲ್ಲಿ  ಪ್ರಾಣ ಹಾನಿ ಮಾಡುವ ಸಂಭವವಿದ್ದು, ಈತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿರ್ಯಾದಿ ದಿನಾಂಕ: 10-02-2019 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಸಾಲದ ಹಣ ವಿಚಾರಕ್ಕಾಗಿ ನಾಲ್ವರು ಸೇರಿ ಮಹಿಳೆಯ ಮೇಲೆ ಹಲ್ಲೆ:

ದಿನಾಂಕ: 09-02-2019 ರಂದು ಸಂಜೆ 7-00 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಸಮುದ್ರವಳ್ಳಿ ಗ್ರಾಮದ ವಾಸಿ ಶ್ರೀಮತಿ ಪದ್ಮಮ್ಮ, ರವರು ಮನೆಯಲ್ಲಿದ್ದಾಗ ಈಗ್ಗೆ ಸುಮಾರು ವರ್ಷಗಳ ಹಿಂದೆ ಮಾವ ಶ್ರೀ ನಿಂಗೇಗೌಡ, ರವರು ಅದೇ ಗ್ರಾಮದ ವಾಸಿ ಶ್ರೀ ರವಿ, ರವರಿಂದ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು, ಸಾಲದ ಹಣಕ್ಕೆ ಪತಿ ಶ್ರೀ ಮಲ್ಲೇಶ, ರವರು ಸಹಿಹಾಕಿದ್ದು, ಈಬಗ್ಗೆ ಶ್ರೀ ರವಿ, ರವರ ಪತ್ನಿ ಶ್ರೀಮತಿ ಸುಧಾ, ರವರು ಮನೆಗೆ ಬಂದು ಶ್ರೀ ಮಲ್ಲೇಶ, ರವರಿಗೆ ಅವಾಚ್ಯಶಬ್ಧಗಳಿಂದ ನಿಂದಿಸುತ್ತಿದ್ದಾಗ, ಏಕೆ ಬೈಯ್ಯುತ್ತೀಯಾ ಎಂದು ಕೇಳಿದ್ದಕ್ಕೆ ಹಿಡಿದು ಎಳೆದಾಡುತ್ತಿದ್ದಾಗ ಅದೇ ಸಮಯಕ್ಕೆ ಬಂದ ಶ್ರೀಮತಿ ಸುಮಾ, ಶ್ರೀಮತಿ ನಿಖಿತಾ & ಶ್ರೀ ಅಶೋಕ, ರವರುಗಳು ಬಂದು ಕೆಳಕ್ಕೆ ಬೀಳಿಸಿ, ಕೈಯಿಂದ ಹೊಡೆದು, ಕಾಲಿನಿಂದ ತುಳಿದು, ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಶ್ರೀಮತಿ ಪದ್ಮಮ್ಮ, ರವರು ದಿನಾಂಕ: 10-02-2019 ರಂದು ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕಾರುಗಳ ಡಿಕ್ಕಿ, ಕಾರು ಜಖಂ:

ದಿನಾಂಕ: 10-02-2019 ರಂದು ಬೆಳಿಗ್ಗೆ 11-45 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿ ಗ್ರಾಮದ ವಾಸಿ ಶ್ರೀ ಫರಾಜ್ ಅಹಮದ್, ರವರ ಬಾಬ್ತು ಕೆಎ-46, ಎಂ-6530 ರ ಸ್ಕೋಡಾ  ರಾಪಿಡ್ ಕಾರಿನಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕತ್ತರಿಘಟ್ಟ ಗೇಟ್ ಹತ್ತಿರ ಎನ್ಹೆಚ್-75 ರಸ್ತೆಯಲ್ಲಿರುವ ಎ2ಬಿ ಹೋಟೆಲ್ ಗೆ ಹೋಗಲು ಯೂಟರ್ನ್ ಮಾಡುತ್ತಿದ್ದಾಗ ಹಿಂದಿನಿಂದ ಬಂದ ಕೆಎ-30, ಎಂ-4856 ರ ಮಾರುತಿ ಕಾರಿನ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಕಾರಿಗೆ ಡಿಕ್ಕಿ ಮಾಡಿ, ಪರಿಣಾಮ ಕಾರು ಜಖಂಗೊಂಡಿರುತ್ತದೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ವರದಕ್ಷಿಣೆ ಕಿರುಕುಳ, ಮಹಿಳೆಯನ್ನು ಅವಾಚ್ಯಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ:

ದಿನಾಂಕ: 27-05-2018 ರಂದು ಹಾಸನದ ವಿದ್ಯಾನಗರ ವಾಸಿ ಶ್ರೀಮತಿ ಚೈತ್ರಾ, ರವರು ಹಾಸನದ ಅಗ್ರಹಾರ ಬೀದಿ ವಾಸಿ ಶ್ರೀರುದ್ರಯ್ಯ, ರವರ ಮಗ ಶ್ರೀ ಪ್ರಶಾಂತ್ಶರ್ಮ, ರವರನ್ನು ಹಿಂದೂ ಸಂಪ್ರದಾಯದಂತೆ ತನ್ವಿತ್ರಿಶ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿದ್ದು, ಮದುವೆಯಾದ 2 ದಿನಗಳು ಮಾತ್ರ ಚೆನ್ನಾಗಿ ನೋಡಿಕೊಂಡಿದ್ದು, ನಂತರ ಶ್ರೀ ಪ್ರಶಾಂತ್ಶರ್ಮ, ರವರು ಪತ್ನಿ ಶ್ರೀಮತಿ ಚೈತ್ರಾಳ ಮೇಲೆ  ಅನಾವಶ್ಯಕವಾಗಿ ಅನುಮಾನಪಡುವುದು, ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ & ದೈಹಿಕವಾಗಿ ಕಿರುಕುಳ ನೀಡಿ ಅವಾಚ್ಯಶಬ್ಧಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಹಾಗೂ ಮಾವ ಶ್ರೀ ರುದ್ರಯ್ಯ ಮತ್ತು ಅತ್ತೆ ಶ್ರೀಮತಿ ವಿಜಯ, ರವರು ಮಗನಿಗೆ ಸರಿಯಾಗಿ ಬುದ್ಧಿ ಹೇಳದೇ ಹೀಯಾಳಿಸಿರುತ್ತಾರೆಂದು ಪಿರ್ಯಾದಿಯವರು ದಿನಾಂಕ: 10-02-2019 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಟಾಟಾ ವಾಹನ, ಕಾರಿಗೆ ಡಿಕ್ಕಿ, ಇಬ್ಬರಿಗೆ ರಕ್ತಗಾಯ:

ದಿನಾಂಕ: 09-02-2019 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಹಾಸನದ ಹೊಸಲೈನ್ ರಸ್ತೆ, ವೆಂಕಟೇಶ್ವರ ಕಾಲೇಜ್ ಹತ್ತಿರದ ವಾಸಿ ಶ್ರೀ ಮಂಜುನಾಥ, ರವರ ಬಾಬ್ತು ಕೆಎ-02, ಎಂಡಿ-4266 ರ ಸ್ಯಾಂಟ್ರೋ ಕಾರಿನಲ್ಲಿ ಹೊಳೆನರಸೀಪುರ ತಾಲ್ಲೂಕು, ಕಿನ್ನರಹಳ್ಳಿ ಗ್ರಾಮದ ಅತ್ತೆ ಮನೆಗೆ ಹೋಗಿ ಆಹಾರ ಸಾಮಾಗ್ರಿಗಳನ್ನು ತೆಗೆದುಕೊಂಡು, ಮಗ ಕು|| ರೋಹಿತ್ ಮತ್ತು ಅತ್ತೆ ಶ್ರೀಮತಿ ಮಂಜುಳ, ರವರನ್ನು ಕೂರಿಸಿಕೊಂಡು ವಾಪಸ್ ಮನೆಗೆ ಹೋಗಲು, ಹಾಸನ-ಹೊಳೆನರಸೀಪುರ ರಸ್ತೆ, ಅಲ್ಲಾನಾ ಕಾಫಿ ಕ್ಯೂರಿಂಗ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13, ಬಿ-8121 ರ ಟಾಟಾ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಕಾರಿ ಡಿಕ್ಕಿ ಮಾಡಿದ ಪರಿಣಾಮ ಕಾರು ಜಖಂಗೊಂಡು, ಕಾರಿನಲ್ಲಿದ್ದ ಮಗ ಕು|| ರೋಹಿತ್ ಮತ್ತು ಅತ್ತೆ ಶ್ರೀಮತಿ ಮಂಜುಳ, ರವರಿಗೆ ರಕ್ತಗಾಯಗಳಾಗಿದ್ದು, ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿರುತ್ತೇವೆಂದು ಪಿರ್ಯಾದಿಯವರು ದಿನಾಂಕ: 10-02-2019 ರಂದು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

No comments: