* * * * * * HASSAN DISTRICT POLICE

Tuesday, February 12, 2019

HASSAN DISTRICT PRESS NOTE 12-02-2019




                        ಪತ್ರಿಕಾ ಪ್ರಕಟಣೆ                 ದಿ: 12-02-2019

ನಾಲ್ವರು ರಾತ್ರಿ ಮನೆಗೆ ನುಗ್ಗಿ ಖಾರದ ಪುಡಿ ಎರಚಿ, ಕಬ್ಬಿಣದ ರಾಡಿನಿಂದ ಹೊಡೆದು 1 ಜೊತೆ ಓಲೆ ಜುಮುಕಿ & 40 ಸಾವಿರ ನಗದು ದೋಚಿಕೊಂಡು ಪರಾರಿ:
     ದಿನಾಂಕ: 11-02-2019 ರಂದು ರಾತ್ರಿ 12-30 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೆಕೋಟೆ ಹೋಬಳಿ, ತೆರಣ್ಯ ಗ್ರಾಮದ ವಾಸಿ ಶ್ರೀ ಯೋಗರಾಜ್, ರವರ ಬಾಬ್ತು ಜಮೀನಿನಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದು, ಯಾರೋ 4 ಜನರು ಮನೆಯ ಬಾಗಿಲನ್ನು ತೆಗೆದು ಒಳಪ್ರವೇಶಿಸಿ, ಹಾಲ್ ನಲ್ಲಿ ಮಲಗಿದ್ದ ತಂದೆ ಶ್ರೀ ಹನುಮಯ್ಯ & ತಾಯಿ ಶ್ರೀಮತಿ ಹೊನ್ನಮ, ರವರಿಗೆ ಖಾರದ ಪುಡಿ ಎರಚಿ, ರಾಡಿನಿಂದ ಹೊಡೆಯಲು ಯತ್ನಿಸಿದ್ದಾಗ ಶ್ರೀ ಹನುಮಯ್ಯ, ರವರು ರಾಡನ್ನು ಕೈಯಲ್ಲಿ ಹಿಡಿದುಕೊಂಡಾಗ ಬೆರಳಿಗೆ ರಕ್ತಗಾಯವಾಗಿದ್ದು, ಟೇಪಿನಿಂದ ಕೈ & ಕಾಲನ್ನು ಕಟ್ಟಿಹಾಕಲು ಪ್ರಯತ್ನಿಸಿದ್ದು, ಕೂಗಿಕೊಂಡಾಗ ಪಿರ್ಯಾದಿ ಮತ್ತು ಪತ್ನಿಯವರು ಹಾಲ್ ಗೆ ಬಂದಾಗ ಪಿರ್ಯಾದಿಗೆ ರಾಡಿನಿಂದ ಹೊಡೆದು ರಕ್ತಗಾಯಪಡಿಸಿ, ದೇವರ ಮನೆಯಲ್ಲಿದ್ದ ಶಂಖ, ಜಾಗಟೆ ಹಾಗೂ ಬೀರುವಿನಲ್ಲಿಟ್ಟಿದ್ದ ಒಂದು ಜೊತೆ ಓಲೆ ಜುಮುಕಿ & 40 ಸಾವಿರ ನಗದು ತೆಗೆದುಕೊಂಡು ಪರಾರಿಯಾಗಿರುತ್ತಾರೆಂದು ಪಿರ್ಯಾದಿಯವರು ದಿನಾಂಕ:12-02-2019 ರಂದು ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.
ಮನೆ ಬೀಗ ಮುರಿದು, 5 ಲಕ್ಷ, 80 ಸಾವಿರ ಬೆಲೆಯ 160 ಗ್ರಾಂ ತೂಕದ ಚಿನ್ನಾಭರಣ, 2 ಕೆ.ಜಿ. ಬೆಳ್ಳಿಯ ಸಾಮಗ್ರಿಗಳು ಮತ್ತು 3 ಸಾವಿರ ನಗದು ಕಳವು:
     ದಿನಾಂಕ: 08-02-2019 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೆಬೀಡು ಹೋಬಳಿ, ಹೊಯ್ಸಳ ಬಡಾವಣೆ ವಾಸಿ ಶ್ರೀ ಶಂಕರೇಗೌಡ, ನಿವೃತ್ತ ಶಿಕ್ಷಕರು, ರವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಬೆಂಗಳೂರಿನ ಮಗಳ ಮನೆಗೆ ಹೋಗಿದ್ದು, ದಿನಾಂಕ: 11-02-2019 ರಂದು ಬೆಳಿಗ್ಗೆ 9-30 ಗಂಟೆಗೆ ಅದೇ ಬಡಾವಣೆ ವಾಸಿ ಶ್ರೀ ರಾಮಚಂದ್ರ, ರವರು ಫೋನ್ ಮಾಡಿ ಮನೆಯಲ್ಲಿ ಕಳ್ಳತನವಾಗಿದೆಂದು ತಿಳಿಸಿದ ಮೇರೆಗೆ ಮನೆಯ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ಯಾವುದೋ ಆಯುಧದಿಂದ ಮನೆಯ ಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ, ಬೀರುವಿನಲ್ಲಿಟ್ಟಿದ್ದ ಸುಮಾರು 5, ಲಕ್ಷ 80 ಸಾವಿರ ಬೆಲೆಯ 160 ಗ್ರಾಂ ತೂಕದ ಚಿನ್ನಾಭರಣ ಮತ್ತು 2 ಕೆ.ಜಿ. ಬೆಳ್ಳಿ ಆಭರಣಗಳು ಹಾಗೂ 3 ಸಾವಿರ ನಗದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿಯವರು ದಿನಾಂಕ:11-02-2019 ರಂದು ಕೊಟ್ಟ ದೂರಿನ ಮೇರೆಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, 1,850/- ಬೆಲೆಯ ಮದ್ಯ ವಶ:
     ದಿನಾಂಕ: 11-02-2019 ರಂದು ಬೆಳಿಗ್ಗೆ 7-40 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಬಾಗೇಶಪುರ ಗ್ರಾಮದ ವಾಸಿ ಶ್ರೀ ಸಿದ್ದೇಗೌಡ@ಸಿದ್ದ, ರವರು ಗ್ರಾಮದ ಕಬಾಬ್ ಸೆಂಟರ್ ಮುಂಭಾಗ ಮದ್ಯವನ್ನು ಸಾರ್ವಜನಿಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಶಬೀರ್ ಹುಸೇನ್, ಪಿಎಸ್ಐ, ಗಂಡಸಿ ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಸಿದ್ದೇಗೌಡ@ಸಿದ್ದ ಬಿನ್ ತಮ್ಮಯ್ಯ, ಬಾಗೇಶಪುರ ಗ್ರಾಮ, ಗಂಡಸಿ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ  1,850/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಬೈಕ್ ಕಳವು
     ದಿನಾಂಕ: 11-02-2019 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಹಾಸನ ಚನ್ನಪಟ್ಟಣದ ಟೀಚರ್ಸ್ ಕಾಲೋನಿ ವಾಸಿ ಶ್ರೀ ಹೆಚ್.ಎಸ್. ಮಹೇಶ್, ರವರ ಬಾಬ್ತು ಕೆಎ-13, ಎಲ್-2663 ರ ಟಿವಿಎಸ್ ಬೈಕ್ ನಲ್ಲಿ ಕೆಲಸ ನಿಮಿತ್ತ ಕೆಐಎಡಿಬಿ ಕಛೇರಿಯ ಮುಂಭಾಗ ನಿಲ್ಲಿಸಿ, ಕಛೇರಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಸ್ ಬೈಕ್ ಹತ್ತಿರ ಬಂದು ನೋಡಲಾಗಿ ಬೈಕ್ ಇರಲಿಲ್ಲ, ಯಾರೋ ಕಳ್ಳರು ಸುಮಾರು 20 ಸಾವಿರ ಬೆಲೆಯ ಬೈಕನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, ಬೈಕ್ ಸಮೇತ 1,273/- ಬೆಲೆಯ ಮದ್ಯ ವಶ:
     ದಿನಾಂಕ: 11-02-2019 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಶ್ರೀ ಪ್ರಕಾಶ್, ಹೆಚ್ ಸಿ-68, ಕೊಣನೂರು ಪೊಲೀಸ್ ಠಾಣೆ, ರವರು ಅರ್ಜಿ ವಿಚಾರಣಾ ಸಂಬಂಧ ಬಸವಾಪಟ್ಟಣದಲ್ಲಿದ್ದಾಗ ಅರಕಲಗೂಡು ತಾಲ್ಲೂಕು, ದೊಡ್ಡಮಗ್ಗೆ ಹೋಬಳಿ, ಬೆಳವಾಡಿ ವೃತ್ತದ ಹತ್ತಿರ ಬೈಕ್ ನಲ್ಲಿ ಮದ್ಯವನ್ನಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ  ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಕೆಎ-04, ಇಜಿ-3281 ಬೈಕ್ ನಲ್ಲಿಟ್ಟುಕೊಂಡು ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಜಯರಾಮ ಬಿನ್ ಲೇಟ್ ಜವರೇಗೌಡ, 45 ವರ್ಷ, ಬೆಳವಾಡಿ ಗ್ರಾಮ, ದೊಡ್ಡಮಗ್ಗೆ ಹೋಬಳಿ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಬೈಕ್ ಸಮೇತ 1,273/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಬೈಕ್ ಕಳವು:
    ದಿನಾಂಕ: 04-02-2019 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹಳೇಬೀಡು ರಸ್ತೆ, ನೆಹರು ನಗರದ ವಾಸಿ ಶ್ರೀ ಮಂಜುನಾಥ, ರವರ ಬಾಬ್ತು ಕೆಎ-46, ಜೆ-4163 ರ ಸ್ಟಾರ್ ಸಿಟಿ ಬೈಕ್ ನ್ನು ಮನೆಯ ಮುಂದೆ ನಿಲ್ಲಿಸಿದ್ದು, ದಿನಾಂಕ: 05-02-2019 ರಂದು ಬೆಳಿಗ್ಗೆ 6-00 ಗಂಟೆಗೆ ಎದ್ದು ಬೈಕ್ ನೋಡಲಾಗಿ ಬೈಕ್ ಇರಲ್ಲಿಲ್ಲ, ಯಾರೋ ಕಳ್ಳರು 38 ಸಾವಿರ ಬೆಲೆಯ ಬೈಕ್ ನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿಯವರು ದಿನಾಂಕ: 11-02-2019 ರಂದು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಹಸು ಹೊಲದಲ್ಲಿ ಜೋಳ ತಿಂದ ವಿಚಾರಕ್ಕೆ ಮಹಿಳೆ ಮೇಲೆ ಹಲ್ಲೆ
     ದಿನಾಂಕ: 11-02-2019 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, ಗದ್ದೆಬಿಂಡೇನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಇಂದ್ರ, ರವರು ಮನೆಯ ಬಳಿ ನಿಂತಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ನಿಖಿತ್, ರವರು ಹಸು ಜೋಳವನ್ನು ತಿಂದಿರುವ ಬಗ್ಗೆ ಪಿರ್ಯಾದಿಗೆ ಅವಾಚ್ಯಶಬ್ಧಗಳಿಂದ ನಿಂದಿಸಿ, ರಿಪೀಸ್ ಪಟ್ಟಿಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಶ್ರೀಮತಿ ಇಂದ್ರ, ರವರು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.
ಕೆಎಸ್ಆರ್ ಟಿಸಿ ಬಸ್ ಪಾದಚಾರಿಗೆ ಡಿಕ್ಕಿ, ತೀವ್ರ ಸ್ವರೂಪದ ರಕ್ತಗಾಯ:
     ದಿನಾಂಕ: 11-02-2019 ರಂದು ಮಧ್ಯಾಹ್ನ 12-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಮರೂರು ಗ್ರಾಮದ ವಾಸಿ ಶ್ರೀ ಭದ್ರಯ್ಯ, ರವರು ಮತ್ತು ತಂಗಿ ಶ್ರೀಮತಿ ಯಶೋಧ, ರವರು ಬೇಲೂರಿಗೆ ಬಂದಿದ್ದು, ವಾಪಸ್ ಊರಿಗೆ ಹೋಗಲು ಗೆಂಡೇಹಳ್ಳಿ ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಕೆಎ-18, ಎಫ್-936 ರ ಕೆಎಸ್ಆರ್ ಟಿಸಿ ಬಸ್ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಭದ್ರಯ್ಯ, ರವರಿಗೆ ಡಿಕ್ಕಿಯಾಗಿ ಬಸ್ ಚಕ್ರ ಕಾಲಿನ ಮೇಲೆ ಹರಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಬೇಲೂರು & ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಿರುತ್ತೇವೆಂದು ಪ್ರತ್ಯಕ್ಷದರ್ಶಿ ಶ್ರೀ ಹೊನ್ನಯ್ಯ, ರವರು ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.
ದನಗಳನ್ನು ಕಟ್ಟಿ ಹಾಕಿರುವ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:
     ದಿನಾಂಕ: 11-02-2019 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಬಾಣಾವರ ಹೋಬಳಿ, ನಾಗಸಮುದ್ರ ಗ್ರಾಮದ ವಾಸಿ ಶ್ರೀ ಮರುಳುಸಿದ್ದಪ್ಪ, ಮತ್ತು ತಮ್ಮ ಶ್ರೀ ಪ್ರಸನ್ನ, ರವರ ಮನೆಯ ಮಧ್ಯದಲ್ಲಿ ಪಿರ್ಯಾದಿಯವರ ಬಾಬ್ತು ದನಗಳನ್ನು ಕಟ್ಟಿಹಾಕಿದ್ದು, ಏಕೆ ದನಗಳನ್ನು ಕಟ್ಟಿಹಾಕಿರುತ್ತೀರಾ ಎಂದು ಶ್ರೀ ಪ್ರಸನ್ನ, ಮಗ ಶ್ರೀ ಸಾಗರ ಮತ್ತು ಶ್ರೀಮತಿ ಅನುಸೂಯಮ್ಮ, ರವರುಗಳು ಪಿರ್ಯಾದಿಗೆ ಅವಾಚ್ಯಶಬ್ಧಗಳಿಂದ ನಿಂದಿಸಿ, ಕೈಯಿಂದ ಹಲ್ಲಿಗೆ ಗುದ್ದಿ, ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಬೈಕ್ ಗಳ ಡಿಕ್ಕಿ, ಬೈಕ್ ಸಮೇತ ರಸ್ತೆಗೆ ಬಿದ್ದು, ರಕ್ತಗಾಯ:
     ದಿನಾಂಕ: 11-02-2019 ರಂದು ಬೆಳಿಗ್ಗೆ 8-15 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಕಸಬಾ ಹೋಬಳಿ, ಹೊಳೆತಿಮ್ಮನಹಳ್ಳಿ ಗ್ರಾಮದ ವಾಸಿ ಶ್ರೀಮತಿ ವಿಜಯ, ರವರ ಬಾಬ್ತು ಕೆಎ-13, ಇಹೆಚ್-3300 ರ ಬೈಕ್ನಲ್ಲಿ ಮೈದುನ ಶ್ರೀ ಅಶೋಕ, ರವರನ್ನು ಕೂರಿಸಿಕೊಂಡು ಕಂದಲಿ ಡೈರಿಗೆ ಹಾಲು ಹಾಕಿ ಬರಲು ಹಾಸನ-ಆಲೂರು ರಸ್ತೆ, ಶ್ರೀ ರಂಗೇಗೌಡ, ರವರ ಮನೆಯ ಹತ್ತಿರ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಕೆಎ-35, ಇಇ-4550 ಪಲ್ಸರ್ ಬೈಕ್ನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ ಗೆ ಡಿಕ್ಕಿ ಮಾಡಿದ ಪರಿಣಾಮ ಬೈಕ್ ಸಮೇತ ಶ್ರೀಮತಿ ವಿಜಯ & ಶ್ರೀ ಅಶೋಕ, ರವರು ರಸ್ತೆಗೆ ಬಿದ್ದಾಗ ಶ್ರೀ ಅಶೋಕ, ರವರಿಗೆ ರಕ್ತಗಾಯವಾಗಿದ್ದು, ಹಾಸನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿರುತ್ತೇವೆಂದು ಶ್ರೀಮತಿ ವಿಜಯ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
ಕ್ಷುಲ್ಲಕ ಕಾರಣ, ಮಹಿಳೆಯ ಮೇಲೆ ಹಲ್ಲೆ:
    ದಿನಾಂಕ: 11-02-2019 ರಂದು ಸಂಜೆ 4-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಕುಂಬೇನಹಳ್ಳಿ ಗ್ರಾಮದ ವಾಸಿ ಶ್ರೀಮತಿ ಲಲಿತಮ್ಮ, ರವರ ಬಾಬ್ತು ಹೊಸ ಮನೆಯ ಹತ್ತಿರ ಕೆಲಸ ಮಾಡುತ್ತಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ಕುಮಾರ, ಶ್ರೀ ಯೋಗೇಶ್, ಮತ್ತು ಶ್ರೀಮತಿ ನಂಜಮ್ಮ ರವರುಗಳು ಪಿರ್ಯಾದಿಯನ್ನು ಹಿಡಿದು ಎಳೆದಾಡಿ, ಕಾಲಿನಿಂದ ಒದ್ದು, ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆಯಲ್ಲಿರುತ್ತೆ.

ಅರಸೀಕೆರೆ ಗ್ರಾಮಾಂತರ ಠಾಣಾ ಪೊಲೀಸರಿಂದ ಒಂಭತ್ತು ಜನ ಡಕಾಯಿತರ ಬಂಧನ,
ಬಂಧಿತರಿಂದ 83,000-00 ನಗದು ಹಣ ಮತ್ತು ಸ್ವಿಪ್ಟ್ ಡಿಸೈರ್ ಕಾರು, ಒಂದು ಮೊಬೈಲ್ ಫೋನ್ ವಶ.

    ಮಲ್ಲಿಕಾರ್ಜುನರವರು ಅರಸೀಕೆರೆ ಎ.ಪಿ.ಎಂ.ಸಿ ಯಾರ್ಡ್ ನಲ್ಲಿರುವ ಹಿಂದೂಸ್ಥಾನ್ ಯೂನಿ ಲಿವರ್ ಲಿಮಿಟೆಡ್ ಕಂಪನಿಯಲ್ಲಿ ಮ್ಯಾನೇಜರ್ ಆಗಿದ್ದು, ದಿನಾಂಕ: 25-01-2019 ರಂದು ಕಂಪನಿಗೆ ಸೇರಿದ ಸರಕುಗಳನ್ನು ಡೆಲಿವರಿ ಕೊಡಲೆಂದು ಕಂಪನಿಗೆ ಸೇರಿದ ಕೆಎ-13 ಸಿ-4123 ನೇ ನಂಬರಿನ ಅಶೋಕ ಲೇಲ್ಯಾಂಡ್ ಮಿನಿ ಗೂಡ್ಸ್ ವಾಹನದಲ್ಲಿ ಚಾಲಕ ಯೋಗೇಶ ಮತ್ತು ಕೆಲಸಗಾರರಾದ ಮುರುಳಿ, ರುದ್ರೇಶ, ಮತ್ತು ಪುನೀತ ರವರೊಂದಿಗೆ ಜೆ.ಸಿ. ಪುರ, ಡಿ.ಎಂ ಕುರ್ಕೆ, ಪಂಚನಹಳ್ಳಿ ಕಡೆ ಹೋಗಿ ಸರಕು ಡೆಲಿವರಿ ಕೊಟ್ಟು ವಾಪಸ್ಸು ಅರಸೀಕೆರೆಗೆ ಬರಲೆಂದು ಫಿರ್ಯಾದಿಯು ವಾಹನದ ಕ್ಯಾಬಿನ್ ನಲ್ಲಿ ಚಾಲಕನ ಪಕ್ಕದಲ್ಲಿ ಕುಳಿತು ಉಳಿದ 3 ಜನ ಹಿಂಭಾಗದ ಬಾಡಿಯಲ್ಲಿ ಕುಳಿತು ರಾತ್ರಿ ಸುಮಾರು 09-00 ಗಂಟೆಯಲ್ಲಿ ಅರಸೀಕೆರೆ ತಾಲ್ಲೂಕು ರಾಮೇನಹಳ್ಳಿ ಮೀಸಲು ಅರಣ್ಯದ ಹತ್ತಿರ ಹುಳಿಯಾರ್ ಅರಸೀಕೆರೆ ರಸ್ತೆಯಲ್ಲಿ ಬರುವಾಗ ರಸ್ತೆಯಲ್ಲಿ ಹಂಪ್ಸ್ ಇದ್ದುದ್ದರಿಂದ ವಾಹನವನ್ನು ನಿಧಾನ ಮಾಡಿದ ಸಮಯದಲ್ಲಿ ಇದ್ದಕ್ಕಿದ್ದಂತೆ 6 ರಿಂದ 8 ಜನರು ಕೈಯಲ್ಲಿ ರಾಡು ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ವಾಹನವನ್ನು ಅಡ್ಡಗಟ್ಟಿ ಅವರಲ್ಲಿದ್ದ ಒಬ್ಬ ವ್ಯಕ್ತಿಯು ಚಾಲಕನ ಮುಖಕ್ಕೆ ಪೆಪ್ಪರ್  ಸ್ಪ್ರೆ ಮಾಡಿದನು. ಆಗ ಚಾಲಕನು ಮುಖ ಉರಿಯುತ್ತಿದೆ ಎಂದು ವಾಹನವನ್ನು ನಿಲ್ಲಿಸಿದಾಗ ಎಡಭಾಗದಿಂದ ಒಬ್ಬ ವ್ಯಕ್ತಿಯು ವಾಹನದ ಬಾಗಿಲು ತೆಗೆದು ದೊಣ್ಣೆಯಿಂದ ಫಿರ್ಯಾದಿಯ ಎಡಗಾಲಿಗೆ ಹೊಡೆದು ಹೆದರಿಸಿ ಫಿರ್ಯಾದಿಯ ಬಳಿ ಇದ್ದ ಕಂಪನಿಗೆ ಸೇರಿದ 2,42,621 /- ರೂ. ನಗದು ಹಣ ಹಾಗೂ ಕೆಲವು ಡೆಲಿವರಿ ಬಿಲ್ಲುಗಳು ಮತ್ತು ಫಿರ್ಯಾದಿಯ ಐಡಿಯಾ ಸಿಮ್ ಇರುವ ಸ್ಯಾಮ್ ಸಂಗ್ ಕೀ-ಪ್ಯಾಡ್ ಮೊಬೈಲ್ ಸೆಟ್ ಇದ್ದಂತಹ ಬ್ಯಾಗ್ ನ್ನು ಮಲ್ಲಿಕಾರ್ಜುನರವರಿಂದ ಕಿತ್ತುಕೊಂಡು ಆರೋಪಿಗಳು ಓಡಿ ಹೋಗಿರುತ್ತಾರೆಂದು ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
    ಸದರಿ ಪ್ರಕರಣವನ್ನು ಪತ್ತೆ ಹಚ್ಚಲು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸರಿಂದ ಮತ್ತು ಗಂಡಸಿ ಪೊಲೀಸ್ ಠಾಣಾ ಪೊಲೀಸರಿಂದ ಒಂದು ನುರಿತ ತಂಡವನ್ನು ರಚಿಸಲಾಗಿರುತ್ತದೆ.
     ಈ ಪ್ರಕರಣದಲ್ಲಿ ವಾಹನ ಚಾಲಕ ಯೋಗೇಶ್ ಹಲವಾರು ದಿನಗಳಿಂದ ಕಂಪನಿಯ ಆರ್ಥಿಕ ವ್ಯವಹಾರಗಳನ್ನು ಗಮನಿಸಿದ್ದು, ತನ್ನ ಸಹಚರರೊಡನೆ ಸಂಚು ರೂಪಿಸಿ ದರೋಡೆ ಮಾಡಿಸಿರುತ್ತಾನೆ.
 ಅಲ್ಲದೆ, ಈ ಪ್ರಕರಣದ ಆರೋಪಿಯಾದ ಮಂಜುನಾಥ @ ಕೆಂಚ ಬಿನ್ ಸೆಲ್ವಂ, ವಿರುದ್ಧ ವಿಲ್ಸನ್ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಮೊ.ಸಂ. 368/14 ಡಕಾಯಿತಿ ಪ್ರಕರಣ, ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಮೊ.ಸಂ. 84/14 ಕಲಂ 326 ಐಪಿಸಿ ಪ್ರಕರಣ ದಾಖಲಾಗಿ ರೌಡಿಶೀಟ್ ತೆರೆಯಲಾಗಿರುತ್ತದೆ. ಮತ್ತು ಕಿರಣ ಹೆಚ್.ಎಸ್ ಬಿನ್ ಸೋಮಣ್ಣ, ವಿರುದ್ಧ ತ್ಯಾಗರಾಜನಗರ ಪೊಲೀಸ್ ಠಾಣೆ ಮೊ.ಸಂ. 8/14 ಕಲಂ 302 ರೀತ್ಯಾ ಕೊಲೆ ಪ್ರಕರಣ ದಾಖಲಾಗಿದ್ದು ಪ್ರಮುಖ ಆರೋಪಿಗಳಾಗಿರುತ್ತಾರೆ.

ದಸ್ತಗಿರಿ ಮಾಡಲಾದ ಆರೋಪಿಗಳ ವಿವರ ಈ ಕೆಳಕಂಡತಿದೆ.
1.      ಯೋಗೇಶ ಹೆಚ್.ಕೆ ಬಿನ್ ಕೃಷ್ಣಮೂರ್ತಿ, 21 ವರ್ಷ, ಕಮಲ್ ಎಂಟರ್ ಪ್ರೈಸಸ್ ನಲ್ಲಿ ಕೆಎ-13-ಸಿ-4123 ಗೂಡ್ಸ್ ವಾಹನದ ಚಾಲಕ, ವಾಸ : ಹಾರನಹಳ್ಳಿ ಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು.
2.     ಕಿರಣ ಹೆಚ್.ಎಸ್ ಬಿನ್ ಸೋಮಣ್ಣ, 23 ವರ್ಷ, ಕೆಎ-05-ಎ.ಹೆಚ್-1507 ಸ್ವಿಪ್ಟ್ ಡಿಸೈರ್ ಕಾರು ಚಾಲಕ ಮತ್ತು ಮಾಲೀಕ, ಸ್ವಂತ ಊರು : ಜಾವಗಲ್ ರಸ್ತೆ, ಹಾರನಹಳ್ಳಿಗ್ರಾಮ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು. ಹಾಲಿ ವಾಸ : ಕುಮಾರನ ಮನೆಯಲ್ಲಿ ಬಿ.ಟಿ.ಎಂ ಲೇಔಟ್,  2ನೇ ಹಂತ, ಲೇಕ್ ರೋಡು, ಬೆಂಗಳೂರು.  
3.     ಯಶವಂತ @ ಕನ್ಯ ಆರ್ ಬಿನ್ ಲೇಟ್ ರಂಗಯ್ಯ, 24 ವರ್ಷ, ಪ್ಲವರ್ ಡೆಕೋರೇಶನ್ ಕೆಲಸ, ವಾಸ : ಡೋರ್ ನಂಬರ್ 57, 3ನೇ ಮೇನ್, 8ನೇ ಕ್ರಾಸ್, ವಿನಾಯಕ ನಗರ, ಬೆಂಗಳೂರು.
4.     ರಾಹುಲ್ ಕೆ ಬಿನ್ ರಮೇಶ ಕೆ, 20 ವರ್ಷ, ಡಿಪ್ಲಮೋ ವಿದ್ಯಾರ್ಥಿ, ವಾಸ : ನಂ.71, 3ನೇ  ಮೇನ್, 8ನೇ ಕ್ರಾಸ್, ವಿನಾಯಕ ನಗರ, ಬೆಂಗಳೂರು-50.
5.     ಶ್ರೀನಿವಾಸ @ ಸೀನ ಬಿನ್ ಲೇಟ್ ಬಾಬು, 20 ವರ್ಷ, ಡಿಪ್ಲಮೋ ಆಟೋ ಮೊಬೈಲ್           ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್, ಕೆ.ಆರ್ ಸರ್ಕಲ್, ಮೆಜಸ್ಟಿಕ್, ವಾಸ : ಡೋರ್ ನಂ 70, 3ನೇ ಮೇನ್, 8ನೇ ಕ್ರಾಸ್, ವಿನಾಯಕ ನಗರ, ಬೆಂಗಳೂರು-50. ಸ್ವಂತ ಊರು : ಬೆಳವಾಡಿ, ಮೈಸೂರು.
6.     ಮಂಜುನಾಥ @ ಕೆಂಚ ಬಿನ್ ಸೆಲ್ವಂ, 22 ವರ್ಷ, ವೆಲ್ಡಿಂಗ್ ಕೆಲಸ, ಚನ್ನಮ್ಮನ ಕೆರೆ ಎದುರು, ಎಸ್.ಎಲ್.ಬಿ ಇಂಜಿನಿಯರಿಂಗ್ ವರ್ಕ, ವಾಸ : ಡೋರ್ ನಂ 105, 1ನೇ ಮೇನ್ ರೋಡು, ಚನ್ನಮ್ಮನ ಕೆರೆ ಅಚ್ಚುಕಟ್ಟು, ಮಂಜುನಾಥ ಕಾಲೋನಿ, 3ನೇ ಹಂತ, ಬನಶಂಕರಿ, ಬೆಂಗಳೂರು.
7.     ಕಾರ್ತಿಕ ಜಿ ಬಿನ್ ಗೋವಿಂದರಾಜು, 22 ವರ್ಷ, ಸ್ವಗ್ಗಿ ಆಪ್ನಲ್ಲಿ ಪುಡ್ ಡಿಲಿವರಿ ಕೆಲಸ, ವಾಸ :ಮನೆ ನಂ 1000, 12ನೇ ಮೇನ್, ಬನಶಂಕರಿ 2ನೇ ಹಂತ, ಶ್ರೀನಗರ, ಬೆಂಗಳೂರು.
8.     ಬೀರೇಶ ಬಿನ್ ನಂಜೇಶ, 23 ವರ್ಷ, ಕೂಲಿಕೆಲಸ, ವಾಸ :ಕೋಡಿಕೊಪ್ಪಲು ಗ್ರಾಮ, ಹಾರನಹಳ್ಳಿ, ಕಸಬಾ ಹೋಬಳಿ, ಅರಸೀಕೆರೆ ತಾಲ್ಲೂಕು.
9.     ರಾಕೇಶ ಎಂ.ಕೆ ಬಿನ್ ಕೃಷ್ಣಪ್ಪ, 22 ವರ್ಷ, ಡ್ರೈವರ್ ಕೆಲಸ, ವಾಸ : ಬಿ ಮಲ್ಲಾಪುರ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು. 
     ಮೇಲ್ಕಂಡ ಒಂಭತ್ತು ಜನ ಆರೋಪಿಗಳನ್ನು ದಿನಾಂಕಃ 12-02-2019 ರಂದು ದಸ್ತಗಿರಿ ಮಾಡಿದ್ದು, ಬಂಧಿತರಿಂದ 83 ಸಾವಿರ ರೂ ನಗದು ಹಣ, ಒಂದು ಮೊಬೈಲ್ ಫೋನ್, ಒಂದು ಕಾರು ಹಾಗೂ ಕೃತ್ಯಕ್ಕೆ ಬಳಸಿದ್ದ ವಸ್ತುಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
     ಈ ಪ್ರಕರಣವನ್ನು ಪತ್ತೆಹಚ್ಚಲು ಶ್ರಮಿಸಿದ ಶ್ರೀ ಸದಾನಂದ ಅ ತಿಪ್ಪಣ್ಣವರ್, ಡಿವೈ.ಎಸ್.ಪಿ. ಅರಸೀಕೆರೆ ಉಪವಿಭಾಗ, ಶ್ರೀ ಗೋಪಿ. ಬಿ.ಆರ್. ಪ್ರೊ. ಡಿವೈ.ಎಸ್.ಪಿ. ಅರಸೀಕೆರೆ ಗ್ರಾಮಾಂತರ ಠಾಣೆ, ಅರಸೀಕೆರೆ ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕರಾದ ಶ್ರೀ ಸಿದ್ದರಾಮೇಶ್ವರ. ಎಸ್ ಹಾಗೂ ಅರಸೀಕೆರೆ ಗ್ರಾಮಾಂತರ ಠಾಣಾ ಸಿಬ್ಬಂದಿಗಳಾದ ಹೀರಾಸಿಂಗ್, ಲೋಕೇಶ, ಮಂಜುನಾಥ, ರವಿ, ಮೋಹನಕುಮಾರ, ಶೇಖರ್ ಗೌಡ ಶಿರಿಗೇರಿ, ಪಕೃದೀನ್, ನಂಜುಂಡೇಗೌಡ, ಕೇಶವ ಮೂರ್ತಿ, ಶಂಕರೇಗೌಡ, ಚಾಲಕ ವಸಂತ ಕುಮಾರ, ಪೀರ್ ಖಾನ್ ರವರು ಶ್ರಮಿಸಿದ್ದು, ಇವರುಗಳ ಪತ್ತೆ ಕಾರ್ಯವನ್ನು ಪ್ರಶಂಶಿಸಿ 25,000/- ರೂಪಾಯಿಗಳ ನಗದು ಬಹುಮಾನವನ್ನು ಘೋಷಿಸಲಾಗಿದೆ.


No comments: