* * * * * * HASSAN DISTRICT POLICE

Monday, January 7, 2019

HASSAN DISTRICT PRESS NOTE 07-01-2019



                                   ಪತ್ರಿಕಾ ಪ್ರಕಟಣೆ               ದಿ: 07-01-2019

ಏರ್ಟೆಲ್ ಟವರ್ ಗೆ ಅಳವಡಿಸಿದ್ದ 24 ಸಾವಿರ ಬೆಲೆಯ 44 ಶೆಲ್ಗಳ ಕಳವು:
     ದಿನಾಂಕ: 23-12-2019 ರಂದು ರಾತ್ರಿ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಮುದುಡಿ ಗ್ರಾಮದಲ್ಲಿರುವ ಏರ್ ಟೆಲ್ ಟವರ್ ಗೆ ಐನ್ ಬ್ಯಾಟರಿ ಶೆಲ್ ಗಳನ್ನು ಅಳವಡಿಸಿರುವ 44 ಬ್ಯಾಟರಿ ಶೆಲ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ನಿಶಾ ಇಂಡಸ್ಟೀಸ್ ಪ್ರವೈಟ್ ಲಿ, ಕಂಪನಿಯ ಸೂಪರ್ ವೈಸರ್ ಶ್ರೀ ಗವೀಶ್, ರವರು ದಿನಾಂಕ: 06-01-2018 ರಂದು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, 1,612/- ಬೆಲೆಯ ವಿವಿಧ ಮಾದರಿಯ ಮದ್ಯ ವಶ:
     ದಿನಾಂಕ: 06-01-2019 ರಂದು ರಾತ್ರಿ 7-00 ಸಮಯದಲ್ಲಿ ಶ್ರೀ ಅರುಣ್ ಕುಮಾರ್, ಪಿಎಸ್ಐ, ಬಾಣಾವರ ಪೊಲೀಸ್ ಠಾಣೆ, ರವರು ಸಿಬ್ಬಂದಿಗಳೊಂದಿಗೆ ಬಾಣಾವರ ವ್ಯಾಪ್ತಿಯ ಕಾಚೀಘಟ್ಟದ ಸಮೀಪ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಅರಸೀಕೆರೆ ತಾಲ್ಲೂಕು, ಕೋರನಹಳ್ಳಿ ಗ್ರಾಮದ ವಾಸಿ ಶ್ರೀ ಕುಮಾರನಾಯ್ಕ, ರವರು ಮನೆಯ ಮುಂಭಾಗ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಕುಮಾರನಾಯ್ಕ್ ಬಿನ್ ಲೇಟ್ ಭೀಮಾನಾಯ್ಕ್, 35 ವರ್ಷ, ಕೋರನಹಳ್ಳಿ ಗ್ರಾಮ, ಬಾಣಾವರ ಹೋಬಳಿ, ಅರಸೀಕೆರೆ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು 1,612/- ಬೆಲೆಯ ವಿವಿಧ ಮಾದರಿಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಾಣಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.      

ಕಬ್ಲ್ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:
     ದಿನಾಂಕ: 06-01-2019 ರಂದು ಬೆಳಿಗ್ಗೆ 11-45 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಬಾಗೂರು ರಸ್ತೆ, ಶ್ರೀದೇವಿನಗರದ ವಾಸಿ ಶ್ರೀ ಕುಮಾರ, ಚನ್ನರಾಯಪಟ್ಟಣದ ದೀಪಿಕಾ ಟಿ.ವಿ. ಅಂಗಡಿ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಪಟ್ಟಣದ ಎ.ಡಿ. ಕಾಲೋನಿ ವಾಸಿ ಶ್ರೀ ರೇಣು, ರವರು ಕ್ಲಬ್ ನಡೆಸುತ್ತಿರುವ ವಿಷಯ ಪೊಲೀಸರಿಗೆ ತಿಳಿಸಿದ್ದೀಯಾ ಎಂದು ಅವಾಚ್ಯಶಬ್ಧಗಳಿಂದ ನಿಂದಿಸಿ ಜಗಳ ತೆಗೆದು ದೊಣ್ಣೆಯಿಂದ ರಕ್ತಗಾಯಪಡಿಸಿರುತ್ತಾರೆಂದು ಪಿರ್ಯಾದಿಯವರು ಚನ್ನರಾಯಪಟ್ಟಣ ಸಕರ್ಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮಗನೇ ತಾಯಿಯ ಮೇಲೆ ಹಲ್ಲೆ:
     ದಿನಾಂಕ: 05-01-2018 ರಂದು ಮಧ್ಯಾಹ್ನ 12-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಯಸಳೂರು ಹೋಬಳಿ, ಕರಗೂಡುಕೂಡಿಗೆ ಗ್ರಾಮದ ವಾಸಿ ಶ್ರೀಮತಿ ಗೀತಾ, ರವರ ಮಗ ಶ್ರೀ ಪ್ರಣೀತ, ಏನೋ ಕೆಲಸ ಮಾಡದೇ ಮದ್ಯ ಸೇವಿಸಿ ಮನೆಗೆ ಬಂದು ಪಿರ್ಯಾದಿಯವರನ್ನು ಹಿಡಿದು ಎಳೆದಾಡಿ ಅವಾವ್ಯಶಬ್ಧಗಳಿಂದ ನಿಂದಿಸಿ, ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿ ದಿನಾಂಕ: 06-01-2019 ರಂದು ಕೊಟ್ಟ ದೂರಿನ ಮೇರೆಗೆ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ನಿವೇಶನ ವಿಚಾರಕ್ಕೆ ಕೊಲೆ ಬೆದರಿಕೆ ಹಾಗೂ ಹಲ್ಲೆ, ಮನೆಯ ಬಾಗಿಲು ಜಖಂ:
     ದಿನಾಂಕ: 04-01-2019 ರಂದು ರಾತ್ರಿ 8-30 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಕಸಬಾ ಹೋಬಳಿ, ಮಲ್ಲಾಪುರ ಗ್ರಾಮದ ವಾಸಿ ಶ್ರೀಮತಿ ಕಲ್ಪನಾ, ಮತ್ತು ತಂದೆ ಧರ್ಮಯ್ಯ, ರವರು ಮನೆಯ ಹತ್ತಿರ ಇದ್ದಾಗ ಅದೇ ಗ್ರಾಮದ ವಾಸಿ ಶ್ರೀ ಸುರೇಶ್, ಹಾಗೂ ಶ್ರೀ ಸುಧಾಕರ, ರವರು ಸೈಟಿನ ವಿಚಾರದಲ್ಲಿ ಜಗಳ ತೆಗೆದು ಶ್ರೀ ಧರ್ಮಯ್ಯ, ರವರು ಮಚ್ಚಿನಿಂದ ತಲೆಗೆ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿ ಬಾಗಿಲನ್ನು ಮುರಿದು ಜಖಂಗೊಳಿಸಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕ್ಲುಲಕ ಕಾರಣ ವ್ಯಕ್ತಿಯ ಮೇಲೆ ಹಲ್ಲೆ:
     ದಿನಾಂಕ: 06-01-2019 ರಂದು ಸಂಜೆ 5-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಕುಂದೂರು ಗ್ರಾಮದ ವಾಸಿ ಶ್ರೀ ಸ್ವಾಮಿ, ರವರು ಗ್ರಾಮದ ರಾಜು ಹೋಟೆಲ್ ಮುಂಭಾಗ ಅದೇ ಗ್ರಾಮದ ಸ್ನೇಹಿತರಾದ ವಾಸಿಗಳಾದ ಶ್ರೀ ನವೀನ್, ಶ್ರೀ ಕೀರ್ತಿ ಮತ್ತು ಕರೀಗೌಡ, ರವರೊಂದಿಗೆ ಟೀ ಕುಡಿಯುತ್ತಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ಧರ್ಮೇಶ್, ಶ್ರೀ ಯತೀಶ್, ಮತ್ತು ಮಂಜುನಾಥ್, ರವರು ಬೈಕ್ನಲ್ಲಿ ಬಂದು ಶ್ರೀ ಸ್ವಾಮಿ, ರವರನ್ನು ಉದ್ದೇಶಿಸಿ, ಏಕಾ-ಏಕಿ ಮಗನೇ ಇಲ್ಲಿಕುಳಿತ್ತಿದ್ದೀಯಾ ಎಂದು ಜಗಳ ತೆಗೆದು ಅವಾಚ್ಯಶಬ್ಧಗಳಿಂದ ನಿಂದಿಸಿ, ಹಿಡಿದು ಎಳೆದಾಡಿ, ಶಟರ್್ನ್ನು ಹರಿದು ಹಾಕಿ, ಕೈಯಿಂದ ಮತ್ತು ಎಡೆಮಟ್ಟೆಯಿಂದ ಹೊಡೆದು, ಶ್ರೀ ಮಂಜುನಾಥನ ತಂಗಿ ಶ್ರೀ ಶ್ವೇತಾ, ಪಿರ್ಯಾದಿ ಅಣ್ಣ ದೊರೆಯ ಉಂಗುರದ ಬೆರಳಿಗೆ ಕಚ್ಚಿ ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿ ಶ್ರೀ ಸ್ವಾಮಿ, ರವರು ಚನ್ನರಾಯಪಟ್ಟಣ ಸಕರ್ಾರಿ ಆಸ್ಪತ್ರೆಯಲ್ಲಿ ಕೊಟ್ಟ ದೂರಿನ ಹೇಳಿಕೆ ಮೇರೆಗೆ ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.


No comments: