* * * * * * HASSAN DISTRICT POLICE

Tuesday, January 8, 2019

ಅಣ್ಣನನ್ನು ಸ್ಕ್ರೂಡ್ರೈವರ್ ನಿಂದ ಚುಚ್ಚಿ ಕೊಲೆ ಮಾಡಿದ ಆರೋಪಿತರಿಗೆ ಜೀವಾವಧಿ ಶಿಕ್ಷೆ.


ಪತ್ರಿಕಾ ಪ್ರಕಟಣೆ                                   ದಿ: 07-01-2019

ಅಣ್ಣನನ್ನು ಸ್ಕ್ರೂಡ್ರೈವರ್ ನಿಂದ ಚುಚ್ಚಿ ಕೊಲೆ ಮಾಡಿದ ಆರೋಪಿತರಿಗೆ ಜೀವಾವಧಿ ಶಿಕ್ಷೆ.

ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿಗೆ ಸೇರಿದ ಹಳ್ಳಿಮೈಸೂರು ಹೋಬಳಿ, ಮಲಗನಹಳ್ಳಿ ಗ್ರಾಮದ ವಾಸಿಗಳಾದ ಶ್ರೀ ಉಮಾಶಂಕರ್, ತಮ್ಮ ಶೀ ವೇಣುಗೋಪಾಲ @ ನಂದೀಶ್, ರವರುಗಳು ಒಟ್ಟು 15 ಎಕರೆ ಪಿತ್ರಾಜರ್ಿತ ಆಸ್ತಿಹೊಂದಿದ್ದು, ಆಸ್ತಿಯಲ್ಲಿ ಪಾಲು ಕೇಳುವ ವಿಚಾರದಲ್ಲಿ ಆಗಾಗ್ಗೆ ಜಗಳ ಮಾಡುತ್ತಿದ್ದು, ಪಂಚಾಯ್ತಿ ತೀಮರ್ಾನದಂತೆ ಪಿತ್ರಾರ್ಜಿತ ಆಸ್ತಿಯನ್ನು ಭಾಗಮಾಡಿಕೊಟ್ಟಿದ್ದರೂ ಸಹ ಆರೋಪಿ ಸಮಾಧಗೊಳ್ಳದೆ ಅಣ್ಣ ಶ್ರೀ ಉಮಾಶಂಕರ್ ಮತ್ತು ಅತ್ತಿಗೆ ವಿರುದ್ಧ ದ್ವೇಷವಿದ್ದು, ದಿನಾಂಕ: 24-10-2018 ರಂದು ಸಂಜೆ 4-00 ಗಂಟೆಗೆ ಶ್ರೀ ಉಮಾಶಂಕರ್, ರವರು ಶುಂಠಿ ಹೊಲಕ್ಕೆ ನೀರು ಹಾಯಿಸಲು ಸ್ಪ್ರಿಂಕ್ಲರ್ ಜೆಟ್ ಪೈಪ್ಗಳನ್ನು ಜೋಡಿಸುತ್ತಿದ್ದಾಗ, ಆರೋಪಿ ಶೀ ವೇಣುಗೋಪಾಲ @ ನಂದೀಶ್, ರವರು ಮನೆಯಲ್ಲಿದ್ದ ಚೂಪಾದ ಸ್ಕ್ರೂಡ್ರೈವರ್ನ್ನು ತಂದು 4 & 5 ಬಾರಿ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದು, ಕೃತ್ಯದಲ್ಲಿ ಸ್ಥಳದಲ್ಲಿದ್ದ  1ನೇ ಆರೋಪಿ ಪತ್ನಿ ಶ್ರೀಮತಿ ಶಿಲ್ಪಾ, ರವರು  ಕೊಲೆಗೆ ಪ್ರಚೋದಿಸಿದ್ದು, ಈ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಠಾಣಾ ಮೊ.ನಂ. 196/2015, ಕಲಂ ಕಅ 1860 (ಗ/-34,302,114,307) ಪ್ರಕರಣ ದಾಖಲಾಗಿದ್ದು,  ಹೊಳೆನರಸೀಪುರ ವೃತ್ತ ನಿರೀಕ್ಷಕರು ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿ ಸಲ್ಲಿಸಿದ್ದರು.
                                                                                                                                                                                                                             
ಪ್ರಕರಣದ ವಿಚಾರಣೆ ನಡೆಸಿದ ಹಾಸನದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಚಂದ್ರಶೇಖರ್ ಮರಗೂರು, ರವರು ಆರೋಪಿಯ ಮೇಲಿರುವ ದೋಷಾರೋಪಣೆ ಸಾಬೀತಾಗಿದೆ ಎಂದು ತೀರ್ಮಾನಿಸಿ 1ನೇ ಆರೋಪಿ ಶ್ರೀ ವೇಣುಗೋಪಾಲ, ಇವರಿಗೆ ಐಪಿಸಿ ಕಲಂ 302 ರಡಿಯಲ್ಲಿ ಎಸಗಿದ ಅಪಧಾನೆಗೆ ಜೀವಾವಧಿ ಶಿಕ್ಷೆ, ಹಾಗೂ 5,000/ ರೂ ದಂಡ, ಐಪಿಸಿ ಕಲಂ 307 ರಡಿಯಲ್ಲಿ ಎಸಗಿದ ಆಪಾಧನೆಗೆ 7 ವರ್ಷಗಳ ಕಾರಗೃಹ ವಾಸ ಮತ್ತು  5,000/- ರೂ ದಂಡ 2ನೇ ಆರೋಪಿ ಶಿಲ್ಪ ರವರಿಗೆ ಐಪಿಸಿ ಕಲಂ 114 ರಡಿಯಲ್ಲಿ ಆಪಾಧನೆಗೆ ಕೊಲೆ ಮಾಡಲು ಪ್ರಚೋದಿಸಿದ್ದರಿಂದ ಜೀವಾವಧಿಶಿಕ್ಷೆ ಹಾಗೂ 5 ಸಾವಿರ ದಂಡ, ಐಪಿಸಿ ಕಲಂ 114 ರಡಿಯಲ್ಲಿ ಪ್ರಾಸಾ 1 ವಿನುತಾ ಇವಳ ಕೊಲೆ ಪ್ರಯತ್ನಕ್ಕೆ ಪ್ರಚೋದಿಸಿದ್ದರಿಂದ 7 ವರ್ಷ ಕಾರಗೃಹ ವಾಸ ಮತ್ತು 5 ಸಾವಿರ ದಂಡ ಹಾಗೂ 20,000 ರೂ ದಂಡದ ಹಣವನ್ನು ಪ್ರಾಸಾ 1 ರವರಿಗೆ ಪರಿಹಾರ ರೂಪದಲ್ಲಿ ನೀಡಬೇಕೆಂದು ತೀರ್ಪು ವಿಧಿಸಿ ದಿನಾಂಕ: 05-01-2019 ರಂದು ತೀಪು ನೀಡಿ ಆದೇಶಿಸಿರುತ್ತಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ (ಸರ್ಕಾರಿ ಆಭಿಯೋಜಕರು) ಶ್ರೀ ಕೃಷ್ಣ ಜಿ ದೇಶಭಂಡಾರಿ ರವರು ವಾದ ಮಂಡಿಸಿದ್ದರು.

No comments: