* * * * * * HASSAN DISTRICT POLICE

Monday, January 7, 2019

HASSAN DISTRICT PRESS NOTE 06-01-2019



                             ಪತ್ರಿಕಾ ಪ್ರಕಟಣೆ                    ದಿನಾಂಕ: 06-01-2019.

ಅಪೆ ಗೂಡ್ಸ್ ಆಟೋಗೆ ಕಾರು ಡಿಕ್ಕಿ, ವ್ಯಕ್ತಿಗೆ ಗಾಯ:
      ದಿನಾಂಕ: 04-01-2018 ರಂದು ರಾತ್ರಿ 9-00 ಗಂಟೆಯಲ್ಲಿ ಅರಸೀಕೆರೆ ಟೌನ್, 11 ನೇ ಕ್ರಾಸ್, ಹಾಸನ ರಸ್ತೆಯಲ್ಲಿ ವಾಸವಾಗಿರುವ ಶ್ರೀ ಸಲ್ಮಾನ್ ಪಾಷ ಬಿನ್ ಜಮೀರ್ ಅಹಮ್ಮದ್ ರವರು ತಿಪಟೂರಿನಿಂದ ಅರಸೀಕೆರೆಗೆ ಬರಲು ಎನ್ ಹೆಚ್ 206 ರಸ್ತೆಯ ಬೆಳಗುಂಬ ಗೇಟ್ ಹತ್ತಿರ ಕೆಎ-13-ಬಿ-9915 ಅಪೆ ಗೂಡ್ಸ್ ಆಟೋದಲ್ಲಿ ಬರುತ್ತಿದ್ದಾಗ ಅರಸೀಕೆರೆ ಕಡೆಯಿಂದ ಬಂದ ಕೆಎ-04-ಎಂ-7443 ನಂಬರಿನ ಎಸ್ಟೀಮ್ ಕಾರಿನ ಚಾಲಕ ತನ್ನ ಕಾರನ್ನು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಅಪೆ ಆಟೋಗೆ ಡಿಕ್ಕಿ ಮಾಡಿದ ಪರಿಣಾಮ ಆಟೋ ಮತ್ತು ಕಾರು ಜಖಂಗೊಂಡು ಆಟೋದಲ್ಲಿದ್ದ ಶ್ರೀ ಸಲ್ಮಾನ್ ಪಾಷರವರಿಗೆ ಬಲ ಕೈ ಮತ್ತು ಕಾಲಿಗೆ ರಕ್ತಗಾಯಗಳಾಗಿ ಅರಸೀಕೆರೆ ಸಕರ್ಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಶ್ರೀ ಸಲ್ಮಾನ್ ಪಾಷರವರು ನೀಡಿದ ಹೇಳಿಕೆ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.
      
ಅಕ್ರಮ ಮಟ್ಕಾ ಜೂಜಾಡುಸುತ್ತಿದ್ದ ವ್ಯಕ್ತಿ ಬಂಧನ, ಬಂಧಿತನಿಂದ 7100/-ರೂ ನಗದು ವಶ
     ದಿನಾಂಕ: 05-01-2019 ರಂದು ಬೆಳಿಗ್ಗೆ 10-45 ಗಂಟೆಯಲ್ಲಿ ಚನ್ನರಾಯಪಟ್ಟಣ ಟೌನ್ ಮೈಸೂರು ರಸ್ತೆ ಬೆಂಗಳೂರು ಅಯ್ಯಂಗಾರ್ ಬೇಕರಿ ಹತ್ತಿರ ಸಾರ್ವಜನಿಕರನ್ನು ಸೇರಿಸಿಕೊಂಡು ಅಕ್ರಮ ಮಟ್ಕಾ ಜೂಜಾಟ ಆಡುತ್ತಿರುವುದಾಗಿ ಶ್ರೀ ಮಂಜುನಾಥ್.ಯು.ಆರ್, ಪಿಎಸ್ಐ, ಚನ್ನರಾಯಪಟ್ಟಣ ನಗರ ಠಾಣೆರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಸಾರ್ವಜನಿಕರಿಂದ ಅಕ್ರಮ ಮಟ್ಕಾ ಜೂಜಾಟ ಆಡಿಸುತ್ತಿದ್ದನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ನಾರಾಯಣಸ್ವಾಮಿ ಬಿನ್ ಲೇಟ್ ತಿಮ್ಮಯ್ಯ, 48 ವರ್ಷ, ಈಡಿಗ ಜನಾಂಗ, ಬೇಕರಿ ಕೆಲಸ, 2ನೇ ಕ್ರಾಸ್, ಗಾಯತ್ರಿ ಬಡಾವಣೆ, ಚನ್ನರಾಯಪಟ್ಟಣ ಟೌನ್, ಎಂದು ತಿಳಿಸಿ ಇದನ್ನು ತಿಪಟೂರಿನ ಮನ್ಸೂರ್ ಎಂಬುವವನು ಆಡಿಸುತ್ತಿರುವುದಾಗಿ ತಿಳಿಸಿದ ಮೇರೆಗೆ ಆತನನ್ನು ದಸ್ತಗಿರಿ ಮಾಡಿ ಅವನ ಬಳಿ ಇದ್ದ 7100/- ರೂ ನಗರು ಹಣ ಮತ್ತು ಮಟ್ಕಾ ಸಂಖ್ಯೆ ಬರೆದಿದ್ದ ಒಂದು ನೋಟ್ ಪುಸ್ತಕವನ್ನು ಅಮಾನತ್ತು ಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಪ್ರಾಪ್ತ ಬಾಲಕನೊಂದಿಗೆ ಅಪ್ರಾಪ್ತ ಬಾಲಕಿ ಮದುವೆ
     ಅರಸೀಕೆರೆ ತಾಲ್ಲೂಕ್, ಕಸಬಾ ಹೋಬಳಿ, ಕಾಳೇನಹಳ್ಳಿ ಹಟ್ಟಿ ಗ್ರಾಮದ ಕವಿತ ಎಂಬ 16 ವರ್ಷದ ಅಪ್ರಾಪ್ತ ಹುಡುಗಿಯನ್ನು ಈಗ್ಗೆ 2 ವರ್ಷಗಳ ಹಿಂದೆ ಅದೇ ಗ್ರಾಮದ ಅಪ್ರಾಪ್ತ ಹುಡುಗ ಪ್ರವೀಣ ಎಂಬುವವನೊಂದಿಗೆ ಆತನ ತಾಯಿ ಗಂಗಮ್ಮ, ತಂದೆ ನಾರಾಯಣಸ್ವಾಮಿ, ಕವಿತಳ ತಾಯಿ ಸರೋಜಮ್ಮರವರು ಸೇರಿ ದೇಶಾಣಿ ಗೊಲ್ಲರಹಟ್ಟಿ ಗ್ರಾಮದ ಬಳಿ ಇರುವ ಶ್ರೀ ಹೋತನಲ್ಲಮ್ಮ ದೇವಸ್ಥಾನದಲ್ಲಿ ಬಾಲ್ಯ ವಿವಾಹ ಮಾಡಿದ್ದು, ಈ ವಿವಾಹದಿಂದ ಪ್ರವೀಣ ಕವಿತಳೊಂದಿಗೆ ದೈಹಿಕ ಸಂಪರ್ಕ ಹೊಂದಿ 8 ತಿಂಗಳ ಹೆಣ್ಣು ಮಗು ಇರುವುದಾಗಿ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಶಂಕರಮೂರ್ತಿ ಟಿ. ಜೆ, ಸಿಡಿಪಿಐ ಕಛೇರಿ, ಅರಸೀಕೆರೆ ಟೌನ್ರವರು ತಮ್ಮ ಕಛೇರಿಯ ರೇಣುಕಮ್ಮ ರವರ ಮುಖಾಂತರ ಕಳುಹಿಸಿಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಡಿಕ್ಕಿ ಪಾದಚಾರಿ ಸಾವು
     ಹಾಸನ ತಾಲ್ಲೂಕ್, ಶಾಂತಿಗ್ರಾಮ ಹೋಬಳಿ, ಗಾಣಿಗರ ಹೊಸಳ್ಳಿ ಗ್ರಾಮದ ಶ್ರೀ ಬೋರೇಗೌಡರವರು ದಿನಾಂಕ: 04-01-2018 ರಂದು ರಾತ್ರಿ 11-45 ಗಂಟೆ ಸಮಯದಲ್ಲಿ ಬೊಮ್ಮನಾಯಕನಹಳ್ಳಿ ಗ್ರಾಮದಿಂದ ಗಾಣಿಗರ ಹೊಸಹಳ್ಳಿ ಗ್ರಾಮಕ್ಕೆ ಹೋಗಲು ಗವೇನಹಳ್ಳಿ ಬೈಪಾಸ್ ಹತ್ತಿರ ಇರುವ ವೃದ್ದಾಶ್ರಮದ ಮುಂಭಾಗ ಬಿ ಎಂ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಭಾಗದಿಂದ ಬಂದ ಕೆಎ-13-ಆರ್-7673 ನಂಬರಿನ ಬೈಕ್ ಚಾಲಕ ತನ್ನ ಬೈಕನ್ನು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಶ್ರೀ ಬೋರೇಗೌಡರವರಿಗೆ ಹಿಂಬದಿಯಿಂದ ಡಿಕ್ಕಿ ಮಾಡಿದ ಪರಿಣಾಮ ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 05-01-2019 ರಂದು ಬೆಳಗಿನ ಜಾವ 4-30 ಗಂಟೆ ಸಮಯದಲ್ಲಿ ಶ್ರೀ ಬೋರೇಗೌಡರವರು ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಸುಬ್ರಹ್ಮಣ್ಯ @ ದೊರೆ ರವರು ನೀಡಿದ ದೂರಿನ ಮೇರೆಗೆ ಹಾಸನ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆ
     ಅರಕಲಗೂಡು ಟೌನ್ ಕೋಟೆ ರಸ್ತೆಯ ವಾಸಿ ಶ್ರೀ ವೆಂಕಟೇಶ ಮೂರ್ತಿ ರವರ ಮಗಳು ಕುಮಾರಿ ಅನುಕೌಶಿಕ ಕೆ ವಿ ರವರು ಬೆಳ್ತಂಗಡಿ ತಾಲ್ಲೂಕಿನ ಲೈಲಾ ಪ್ರದೇಶದಲ್ಲಿರುವ ಪ್ರಸನ್ನ ಆಯುರ್ವೇದ ಕಾಲೇಜಿನಲ್ಲಿ 2ನೇ ವರ್ಷದ ಬಿ.ಎ.ಎಂ.ಎಸ್ ವ್ಯಾಸಾಂಗ ಮಾಡುತ್ತಿದ್ದು ಕ್ರಿಸ್ಮಸ್ ರಜೆಗಾಗಿ ಅರಕಲಗೂಡಿಗೆ ಬಂದಿದ್ದು ದಿನಾಂಕ: 25-12-2018 ರಂದು ಬೆಳಿಗ್ಗೆ ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೋಗಿದ್ದು, ದಿನಾಂಕ: 30-12-2018 ರಂದು ರಾತ್ರಿ 10-00 ಗಂಟೆಯಲ್ಲಿ ದೂರವಾಣಿ ಕರೆ ಮಾಡಿ ಮಾತನಾಡಿದ್ದು ಅಲ್ಲಿಂದ ಇಲ್ಲಿಯವರೆಗೆ ಪುನಃ ದೂರವಾಣಿ ಸಂಪರ್ಕಕಕ್ಕೆ ಸಿಗದೆ ಫೋನ್ ಸ್ವಿಚ್ ಆಫ್ ಆಗಿದ್ದು ಕಾಣೆಯಾಗಿರುತ್ತಾಳೆ. ಕಾಣೆಯಾಗಿರುವ ತಮ್ಮ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ಕು|| ಅನುಕೌಶಿಕರವರ ತಂದೆ ಶ್ರೀ ವೆಂಕಟೇಶಮೂರ್ತಿರವರು ನೀಡಿದ ದೂರಿನ ಮೇರೆಗೆ ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. ಕಾಣೆಯಾದ ಹುಡುಗಿಯ ಚಹರೆ: ಕು|| ಅನುಕೌಶಿಕ್.ಕೆ.ವಿ ಬಿನ್ ವೆಂಕಟೇಶ ಮೂರ್ತಿ, 20 ವರ್ಷ, 5.2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಮತ್ತು ಕೆಂಪು ಬಣ್ಣದ ಚೂಡಿಧಾರ ಧರಿಸಿರುತ್ತಾರೆ, ಕನ್ನಡ ಬಾಷೆ ಮಾತನಾಡುತ್ತಾರೆ. ಈ ಹುಡುಗಿಯ ಬಗ್ಗೆ ಸುಳಿವು ಸಿಕ್ಕಲ್ಲಿ 08175-220249 ಕ್ಕೆ ಸಂಪರ್ಕಿಸುವುದು. 

ಟಿಪ್ಪರ್ ಲಾರಿ ಬೈಕಿಗೆ ಡಿಕ್ಕಿ, ಇಬ್ಬರಿಗೆ ಗಾಯ
     ದಿನಾಂಕ: 03-01-2019 ರಂದು ಅರಕಲಗೂಡು ತಾಲ್ಲೂಕ್, ದೊಡ್ಡಮಗ್ಗೆ ಹೋಬಳಿ, ಯಡಿಯೂರು ಗ್ರಾಮದ ವಾಸಿ ಶ್ರೀ ಮಂಜುನಾಥ್ ಮತ್ತು ಶ್ರೀ ದಿನೇಶ್.ವೈ.ಎನ್ ರವರು ಸ್ವಂತ ಕೆಲಸದ ನಿಮಿತ್ತ ಕೆಎ-50-ಕೆ-7724 ನಂಬರಿನ ಡಿಸ್ಕವರಿ ಬೈಕ್ ನಲ್ಲಿ ಕೊಣನೂರಿಗೆ ಹೋಗಿ, ಮದ್ಯಾಹ್ನ 2-00 ಗಂಟೆಯಲ್ಲಿ ವಾಪಸ್ ಊರಿಗೆ ಹೋಗಲು ಕೆಸವತ್ತೂರು ಗ್ರಾಮದ ಬಳಿ ಬೈಕಿನಲ್ಲಿ ಹೋಗುತ್ತಿದ್ದಾಗ ಬೆಮ್ಮತ್ತಿ ಕಡೆಯಿಂದ ಬಂದ ಕೆಎ-41-ಸಿ-5143 ನಂಬರಿನ ಟಿಪ್ಪರ್ ಚಾಲಕ ತನ್ನ ಲಾರಿಯನ್ನು ನಿರ್ಲಕ್ಷತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಮಾಡಿ ಪರಿಣಾಮ ಬೈಕಿನಲ್ಲಿದ್ದ ಶ್ರೀ ಮಂಜುನಾಥ್ ಮತ್ತು ಶ್ರೀ ದಿನೇಶ್ ರವರಿಗೆ ರಕ್ತಗಾಯಗಳಾಗಿರುವುದಾಗಿ ಶ್ರೀ ದಿನೇಶ್ ರವರ ಮೈದುನ ಶ್ರೀ ರಂಗೇಗೌಡ ಬಿನ್ ಪಾಪೇಗೌಡರವರು ನೀಡಿದ ದೂರಿನ ಮೇರೆಗೆ ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: