* * * * * * HASSAN DISTRICT POLICE

Monday, January 21, 2019

ಹಾಸನ ಜಿಲ್ಲೆಯ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕರಣೆ ದಿನಾಂಕ : 20-01-2019


ಪತ್ರಿಕಾ ಪ್ರಕಟಣೆ                                  ದಿ: 20-01-2019

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಗೂರನಹಳ್ಳಿಯಲ್ಲಿ ಮಾರಟ ಮಾಡುತ್ತಿದ್ದ ಮತ್ತು ಸಕಲೇಶಪಟ್ಟಣದ ಹೇಮಾವತಿ ನದಿಯಿಂದ ಅಕ್ರಮವಾಗಿ ಮರಳನ್ನು ಸಾಗಿಸುತ್ತಿದ್ದ ಇಬ್ಬರ ಬಂಧನ, ಮರಳು ಸಮೇತ 2 ವಾಹನಗಳ ವಶ:

ಪ್ರಕರಣ: 01 ದಿನಾಂಕ: 19-01-2019 ರಂದು ಬೆಳಿಗ್ಗೆ 8-15 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣದ ಗೂರನಹಳ್ಳಿಯಲ್ಲಿ ಕಳ್ಳತನದಿಂದ ತಂದಿದ್ದ ಮರಳನ್ನು ಲಾರಿಯಲ್ಲಿ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ದೊಡ್ಡೇಗೌಡ, ಪಿಐ, ಡಿಸಿಐಬಿ ಘಟಕ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಕೆಎ-06, ಡಿ-1224 ಲಾರಿಯಲ್ಲಿ ಮರಳು ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಪಾಂಡು @ ಪಾಂಡುರಂಗ ಬಿನ್ ಕೇಶವ, 28 ವರ್ಷ, ಗುಲಸಿಂದ ಗ್ರಾಮ, ಕಸಬಾ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಕ್ರಮವಾಗಿ ಮರಳು ಸಾಗಿಸುತ್ತಿದ್ದವನ ಬಂಧನ, ಮರಳು ಸಮೇತ ಪಿಕ್ಆಪ್ ವಾಹನ ವಶ:

ಪ್ರಕರಣ 02 : ದಿನಾಂಕ: 19-01-2019 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ದೊಡ್ಡನಾಗರ ಗ್ರಾಮದ ಹತ್ತಿರ ಹಾದು ಹೋಗಿರುವ ಹೇಮಾವತಿ ನದಿಯಲ್ಲಿ ಯಾರೋ ಪಿಕ್ಆಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾರೆಂದು ಶ್ರೀ ಎಸ್.ಹೆಚ್. ವಸಂತ್, ಸಿಪಿಐ ಸಕಲೇಶಪುರ ವೃತ್ತ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಕೆಎ-46, 7808 ವಾಹವನ್ನು ತಡೆದು ತಪಾಸಣೆ ನಡೆಸಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಸುನಿಲ್ @ ಸುನಿ ಬಿನ್ ಸಂಗಯ್ಯ, 35 ವರ್ಷ, ಬೈಕೆರೆ ಗ್ರಾಮ, ಸಕಲೇಶಪುರ ತಾಲ್ಲೂಕು ಎಂದು ತಿಳಿಸಿದ್ದವರನನ್ನು ದಸ್ತಗಿರಿ ಮಾಡಿಕೊಂಡು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.
ಅಕ್ರಮವಾಗಿ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದವನ ಬಂಧನ, 2668/- ಬೆಲೆಯ ಮದ್ಯ ವಶ:

ದಿನಾಂಕ: 19-01-2019 ರಂದು ಸಂಜೆ 6-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣದ ಹೌಸಿಂಗ್ ಬೋಡರ್್ ಬಳಿ ಶ್ರೀ ಚಂದ್ರು, ರವರ ಬಾಬ್ತು ಚಿಲ್ಲರೆ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ಯು.ಆರ್.  ಮಂಜುನಾಥ್, ಪಿಎಸ್ಐ, ಚನ್ನರಾಯಪಟ್ಟಣ ನಗರ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಚಂದ್ರು ಬಿನ್ ರಾಮಶೆಟ್ಟಿ, ಹೌಸಿಂಗ್ ಬೋರ್ಡ್, ಚನ್ನರಾಯಪಟ್ಟಣ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಮಾರಾಟಕ್ಕಿಟ್ಟಿದ್ದ 2668/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಲಾರಿ ಬೈಕ್ಗೆ ಡಿಕ್ಕಿ, ಬೈಕ್ ಹಿಂಬದಿ ಕುಳಿತಿದ್ದವರಿಗೆ ರಕ್ತಗಾಯ:

ದಿನಾಂಕ: 19-01-2019 ರಂದು ಮಧ್ಯಾಹ್ನ 2-30 ಗಂಟೆ ಸಮಯದಲ್ಲಿ ಅರಸೀಕೆರೆ ಪಟ್ಟಣದ ಸುಭಾಷ್ನಗರದ ವಾಸಿ ಶ್ರೀ ಶಿವಗಾಮಿ, ರವರು ಆಸ್ಪತ್ರೆಗೆ ಹೋಗಲು ಅಕ್ಕನ ಮಗ ಶ್ರೀ ನವೀನ್ಕುಮಾರ್, ರವರ ಬಾಬ್ತು ಕೆಎ-13, ಈಸಿ-9042 ಬೈಕ್ನಲ್ಲಿ ಅರಸೀಕೆರೆ ಪಟ್ಟಣ-ಹಾಸನ ರಸ್ತೆಯಲ್ಲಿದ್ದ ಎಟಿಎಂ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-01, ಡಿ-614 ಲಾರಿ ಚಾಲಕ ತನ್ನ ವಾಹನವನ್ನು ಓವರ್ ಟೇಕ್ ಮಾಡಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ರಕ್ತಗಾಯಗಳಾಗಿದ್ದು, ಲಾರಿ ಚಾಲಕ ನಿಲ್ಲಸದೇ ಹೋಗಿದ್ದು, ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿರ್ಯಾದಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಮೇರೆಗೆ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ,.

ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿದ್ದವನ ಬಂಧನ

ದಿನಾಂಕ: 19-01-2019 ರಂದು ಬೆಳಿಗ್ಗೆ 10-15 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ತರಿಗಳಲೆ ಗ್ರಾಮ ವಾಸಿ ಶ್ರೀ ನಾಗೇಂದ್ರ, ರವರ ಬಾಬ್ತು ತೋಟದ ಮನೆಯ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಮದ್ಯಪಾನ ಮಾಡಿಸುತ್ತಿದ್ದಾರೆಂದು ಶ್ರೀ ಎಸ್.ಎಲ್. ಸಾಗರ್, ಪಿಎಸ್ಐ, ಕೊಣನೂರು ಪೊಲೀಸ್ ಠಾಣೆ. ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಲ್ಲದೆ ಮದ್ಯ ಸೇವಿಸಲು ಅನುವು ಮಾಡಿಕೊಟ್ಟಿದ್ದವನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ನಾಗೇಂದ್ರ ಬಿನ್ ಗೋಪಾಲ, 40 ವರ್ಷ, ತರಿಗಳಲೆ ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಜಮೀನು ಸರ್ವೆ  ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ:

ದಿನಾಂಕ: 18-01-2019 ರಂದು ಮಧ್ಯಾಹ್ನ 1-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಅರೇಹಳ್ಳಿ ಹೋಬಳಿ, ಹಳೆ ಮಸೀದಿ ರಸ್ತೆ, ಅರೇಹಳ್ಳಿ ಟೌನ್ ವಾಸಿ ಶ್ರೀ ಲಿಯಾಕತ್ ಆಲಿ ಮತ್ತು ಅದೇ ಗ್ರಾಮದ ವಾಸಿ ಶ್ರೀ ಆದಿಲ್ ರವರ ಜಮೀನಿನನ್ನು ಸವರ್ೆ ಕಾರ್ಯ ಮಾಡಿಸುತ್ತಿದ್ದಾಗ ಶ್ರೀ ಆದಿಲ್, ರವರ ಮಗ ಶ್ರೀ ರಾಹಿಲ್, ತಮ್ಮ ಶ್ರೀ ಫಾಜಿಲ್, ರವರು ಪಿರ್ಯಾದಿಯವರನ್ನು ಉದ್ದೇಶಿಸಿ ಯಾವಾಗಲು ಜಮೀನು ಸರ್ವೆ ಕಾರ್ಯ ಮಾಡು ಎಂದು ತೊಂದರೆ ಕೊಡುತ್ತೀಯಾ ಎಂದು ಮಚ್ಚಿನಿಂದ ಪಿರ್ಯಾದಿ ಹಣೆಗೆ ಗುದ್ದಿ ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಇಬ್ಬರು ಅಪರಿಚಿತ ಹುಡುಗರು ಬೈಕ್ನಲ್ಲಿ ಅಂಗಡಿಗೆ ಬಂದು 2,50,000/- ಬೆಲೆಯ 110 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿ:

ದಿನಾಂಕ: 19-01-2019 ರಂದು ರಾತ್ರಿ 8-45 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣದ ಕುವೆಂಪುನಗರ ವಾಸಿ ಶ್ರೀಮತಿ ಮಂಜುಳ, ರವರ ಬಾಬ್ತು ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದಾಗ ಯಾರೂ ಇಬ್ಬರು ಅಪರಿಚಿತ ಹುಡುಗರು ಬೈಕ್ನಲ್ಲಿ ಬಂದು ಸಿಗರೇಟ್ ತೆಗೆದುಕೊಂಡು ಹಣಕೊಟ್ಟಿದ್ದು, ಚಿಲ್ಲರೆ ಹಣವನ್ನು ವಾಪಸ್ ಕೊಡುವಾಗ 2,50,000/- ಬೆಲೆಯ 110 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಅಪರಿಚತ ವಾಹನ ಡಿಕ್ಕಿ ಪಾದಚಾರಿ ಸಾವು

ದಿನಾಂಕ: 08-01-2019 ರಂದು ರಾತ್ರಿ 8-15 ಗಂಟೆ ಸಮಯದಲ್ಲಿ ಹಾಸನದ ಬೂವನಹಳ್ಳಿ ವಾಸಿ ಶ್ರೀ ನಾಗರಾಜು, (ಸ್ವಂತ ವಿಳಾಸ ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲ್ಲೂಕು, ಗುಲ್ಲಳ್ಳಿ ಗ್ರಾಮ) ರವರು ಪತ್ನಿ ಶ್ರೀಮತಿ ಭಾಗ್ಯರವರೊಂದಿಗೆ ವಾಸವಾಗಿದ್ದು, ಇತ್ತೀಚಿಗೆ ಪತ್ನಿನೊಂದಿಗೆ ವಿರಸವಾಗಿ ಮನೆಗೆ ಹೋಗದೇ ಎಲ್ಲಿ ಬೇಕೋ ಅಲ್ಲಿ ಇರುತ್ತಿದ್ದು, ತ್ಯಾವಿಹಳ್ಳಿಗೆ ಹೋಗಲು ಎನ್.ಹೆಚ್, 75 ಬಿ.ಎಂ. ರಸ್ತೆಯನ್ನು ದಾಟುತ್ತಿದ್ದಾಗ ಹಾಸನ ಕಡೆಯಿಂದ ಬಂದ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ ಪರಿಣಾಮ ಶ್ರೀ ನಾಗರಾಜು, 40 ವರ್ಷ, ಬೂವನಹಳ್ಳಿ ಗ್ರಾಮ, ಹಾಸನ ತಾಲ್ಲೂಕು. ರವರಿಗೆ ತೀವ್ರ ಸ್ವರೂದಪ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಪತಿ ಶ್ರೀ ನಾಗರಾಜು, ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಗಂಡಸು ಕಾಣೆ

ದಿನಾಂಕ: 15-07-2016 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ  ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಮಾರೇನಹಳ್ಳಿ ಗ್ರಾಮದ ವಾಸಿ ಶ್ರೀ ವೆಂಕಟೇಶ್, ರವರು ಮನೆಯಿಂದ ಮೊಸಳೆ ಹೊಸಳ್ಳಿಯಲ್ಲಿ ಟ್ರ್ಯಾಕ್ಟರ್ ಗ್ಯಾರೇಜ್ಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀ ವೆಂಕಟೇಶ್, ರವರು ಕೊಟ್ಟ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಗಂಡಸಿನ ಚಹರೆ: ಶ್ರೀ ವೆಂಕಟೇಶ್, 46  ವರ್ಷ, 5'4 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ನೀಲಿ ಬಿಳಿ ಮಿಶ್ರಿತ ಚೌಕಳಿಯುಳ್ಳ ಅರ್ಧ ತೋಳಿನ ಶಟರ್್ ಧರಿಸಿರುತ್ತಾರೆ. ಗಂಡಸಿನ ಸುಳಿವು ಸಿಕ್ಕಲ್ಲಿ 08172-258038 ಕ್ಕೆ ಸಂಪರ್ಕಿಸುವುದು.


No comments: