* * * * * * HASSAN DISTRICT POLICE

Monday, January 21, 2019

ಹಾಸನ ಜಿಲ್ಲೆ ಪೊಲೀಸ್ ಇಲಾಖೆಯ ಪತ್ರಿಕಾ ಪ್ರಕರಣೆ ದಿ: 19-01-2019 (ಹಾಸನ ನಗರ ವೃತ್ತದಲ್ಲಿ ಕಳ್ಳತನದಲ್ಲಿ ಪತ್ತೆಯಾದ ವಿವರ)


ಪತ್ರಿಕಾ ಪ್ರಕಟಣೆ                        ದಿ: 19-01-2019

ಹಾಸನ ನಗರ ವೃತ್ತದ ಪೊಲೀಸರಿಂದ ಕಾರು, ದ್ವಿಚಕ್ರ ವಾಹನ ಮತ್ತು ಮನೆಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ.
          
        ಹಾಸನ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಮಾನ್ಯ ಶ್ರೀ ಡಾ|| .ಎನ್ ಪ್ರಕಾಶ್ ಗೌಡ ರವರು ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ನಂದಿನಿ ರವರ ಮಾರ್ಗದರ್ಶನದಲ್ಲಿ ಹಾಸನ ಉಪ ವಿಭಾಗದ ಆರಕ್ಷಕ ಉಪ-ಅಧೀಕ್ಷಕರಾದ ಶ್ರೀ ಪುಟ್ಟಸ್ವಾಮಿಗೌಡ ರವರ ನೇತೃತ್ವದಲ್ಲಿ ಶ್ರೀ ಸತ್ಯನಾರಾಯಣ, ಸಿ.ಪಿ., ಹಾಸನ ನಗರ ವೃತ್ತ, ಬಡಾವಣೆ ಪೊಲೀಸ್ ಠಾಣೆಯ ಪಿ.ಎಸ್., ಸುರೇಶ್.ಪಿ ಹಾಗೂ ಹಾಸನ ನಗರ ಠಾಣಾ ಪಿ.ಎಸ್. ಶ್ರೀ ಪ್ರಮೋದ್ ಕುಮಾರ್ ಹಾಗೂ ಸಿಬ್ಬಂದಿಗಳಾದ .ಎಸ್., ಕೇಶವ ಪ್ರಸಾದ್, ರಘು, ಪ್ರದೀಪ್, ಪ್ರವೀಣ್, ಲೋಹಿತ್, ರವಿಕುಮಾರ್ ಪೆನ್ಷನ್ ಮೊಹಲ್ಲಾ ಠಾಣೆ, ಹಾಗೂ ಹಾಸನ ನಗರ ಠಾಣೆಯ ಹರೀಶ್ ಮತ್ತು ಪ್ರಸನ್ನ ಕುಮಾರ್, ಜಮೀಲ್ ಅಹಮ್ಮದ್ ರವರುಗಳು ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಹಾಸನ ನಗರ, ಅರಸೀಕೆರೆ ನಗರ, ಚಿಕ್ಕಮಗಳೂರು ನಗರದ ವಿವಿಧ ಸ್ಥಳದಲ್ಲಿ ಮೋಟಾರು ಬೈಕ್ ಕಾರು ಮತ್ತು ಅಂಗಡಿ ಹಾಗೂ ಮನೆಕಳ್ಳತನ ಮಾಡುತ್ತಿದ್ದ ಆರೋಪಿಗಳಾದ 1) ರವಿ ಬಿನ್ ಲೇ|| ಮಂಜೇಗೌಡ 20 ವರ್ಷ, ವಕ್ಕಲಿಗರು, ಕೂಲಿ ಕೆಲಸ ಸಕರ್ಾರಿ ಶಾಲೆ ಹಿಂಬಾಗ ದೇವೇಗೌಡ ನಗರ ಹಾಸನ 2) ಶರತ್ @ ಕರಿಯ ಬಿನ್ ಧನರಾಜ್,19 ವರ್ಷ, ಪರಿಶಿಷ್ಟ ಜಾತಿ, ಪಾನಿಪೂರಿ ಕೆಲಸ ಜಕ್ಕನಹಳ್ಳಿ ಕ್ರಾಸ್, ಮೇಲುಕೋಟೆ ಹತ್ತಿರ ಮಂಡ್ಯ ಜಿಲ್ಲೆ್ಲೆ,  ಹಾಲಿ ವಾಸ ಗಂಗೂರು ಹಳೇಬೀಡು ಹೋಬಳಿ ಬೇಲೂರು ತಾಲ್ಲೂಕು ಹಾಸನ ಜಿಲ್ಲೆ, ಇವರುಗಳನ್ನು  ಬಂಧಿಸಿ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ವಿವಿಧ ಕಡೆ ಕಳವು ಮಾಡಿದ್ದ ಒಟ್ಟು 7 ಮೋಟಾರು ಬೈಕ್ ಹಾಗೂ 1 ಇಂಡಿಕಾ ಕಾರ್, ಹಾಗೂ 40 ಗ್ರಾಂ  ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದು ಅವುಗಳ ಒಟ್ಟು ಮೌಲ್ಯ ರೂ 5,50,000/- ರೂ ಗಳಾಗಿರುತ್ತದೆ



        ಅಲ್ಲದೇ, ಇತ್ತೀಚೆಗೆ ಹೊಸಕೊಪ್ಪಲು ಬಳಿ ಹಾಡು ಹಗಲೇ ಪೈಂಟ್ ಅಂಗಡಿಗೆ ನುಗ್ಗಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ 1) ಪ್ರಮೋದ್ ಎಮ್ ಬಿ @ ಮುತಾಲಿಕ್ ಬಿನ್ ಬೈರೇಗೌಡ 26 ವರ್ಷ, ಲಾರಿ ಚಾಲಕ, ಮಂದಗೆರೆ ಗ್ರಾಮ, ಕಿಕ್ಕೇರಿ ಹೋಬಳಿ, ಕೆ ಆರೆ ಪೇಟೆ ತಾಲ್ಲೂಕ್ ಮಂಡ್ಯ ಜಿಲ್ಲೆ 2) ಅಭಿ @ ಆನಂದ ಬಿನ್ ಲೇ, ನಾಗ @ ಸ್ಪಾಟ್ ನಾಗ, ವಕ್ಕಲಿಗರು, ಕಾನೂನು ಸಂಘರ್ಷಕ್ಕೊಳಪಟ್ಟ ಬಾಲಕ, ರೈಲಿನಲ್ಲಿ ಕಾಫಿ ಟೀ ಮಾರುವುದು, ಮಂದಗೆರೆ ಗ್ರಾಮ, ಕಿಕ್ಕೇರಿ ಹೋಬಳಿ, ಕೆ ಆರ್ ಪೇಟೆ ತಾಲ್ಲೂಕ್, ಮಂಡ್ಯ ಜಿಲ್ಲೆ, ರವರುಗಳನ್ನು ಬಂದಿಸಿರುತ್ತಾರೆ, ಇವರು ಇದಲ್ಲದೆ ಹಾಸನ ನಗರದ ತಣ್ಣೀರು ಹಳ್ಳದ ಬಳಿ ಮನೆಕಳ್ಳತನ ಪ್ರಯತ್ನ ಪ್ರಕರಣದಲ್ಲಿಯೂ ಸಹ ಆರೋಪಿಗಳಾಗಿರುತ್ತಾರೆ,

     ಪತ್ತೆಯಾದ ಪ್ರಕರಣಗಳು ಕೆಳಕಂಡಂತಿರುತ್ತವೆ,
1) ಬಡಾವಣೆ ಪೊಲೀಸ್ ಠಾಣೆ ಮೊ ನಂ 120/2018 ಕಲಂ 379 ಐಪಿಸಿ
2) ಬಡಾವಣೆ ಪೊಲೀಸ್ ಠಾಣೆ ಮೊ ನಂ 204/2018 ಕಲಂ. 379 ಐಪಿಸಿ
3) ಬಡಾವಣೆ ಪೊಲೀಸ್ ಠಾಣೆ ಮೊ ನಂ 279/2018 ಕಲಂ. 379 ಐಪಿಸಿ
4) ಬಡಾವಣೆ ಪೊಲೀಸ್ ಠಾಣೆ ಮೊ ನಂ 298/2018 ಕಲಂ. 457, 380 ಐಪಿಸಿ
5) ಬಡಾವಣೆ ಪೊಲೀಸ್ ಠಾಣೆ ಮೊ ನಂ 330/2018 ಕಲಂ. 379 ಐಪಿಸಿ
6) ಬಡಾವಣೆ ಪೊಲೀಸ್ ಠಾಣೆ ಮೊ ನಂ 333/2018 ಕಲಂ. 379 ಐಪಿಸಿ
7) ಬಡಾವಣೆ ಪೊಲೀಸ್ ಠಾಣೆ ಮೊ ನಂ 375/2018 ಕಲಂ. 454, 457, 380 ಐಪಿಸಿ
8) ಹಾಸನ ನಗರ ಠಾಣೆ ಮೊ ನಂ 334/2018 ಕಲಂ 379 ಐಪಿಸಿ
9) ಹಾಸನ ನಗರ ಠಾಣೆ ಮೊ ನಂ 394/2018 ಕಲಂ 457,511 ಐಪಿಸಿ
10) ಹಾಸನ ನಗರ ಠಾಣೆ ಮೊ ನಂ 07/2019 ಕಲಂ 454, 380 ಐಪಿಸಿ
11) ಅರಸೀಕೆರೆ ನಗರ ಠಾಣೆ ಮೊ ನಂ 331/2018 ಕಲಂ 379 ಐಪಿಸಿ
12) ಅರಸೀಕೆರೆ ನಗರ ಠಾಣೆ ಮೊ ನಂ 338/2018 ಕಲಂ 379 ಐಪಿಸಿ
13) ಚಿಕ್ಕಮಗಳೂರು ನಗರ ಠಾಣೆ ಮೊ ನಂ 207/2018 ಕಲಂ 379 ಐಪಿಸಿ
    ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರೆಸಿರುತ್ತೆ. ಪತ್ತೆಕಾರ್ಯದಲ್ಲಿ ಶ್ರಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.

ಮಕ್ಕಳು ಆಟವಾಡುವ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ :
ದಿನಾಂಕ: 15-01-2019 ರಂದು ಸಂಜೆ 5-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶ್ರವಣಬೆಳಗೊಳ ಹೋಬಳಿ, ಜುಟ್ಟನಹಳ್ಳಿ ಗ್ರಾಮದ ವಾಸಿ ಶ್ರೀ ಕೃಷ್ಣೇಗೌಡ, ರವರ ಮನೆಯ ಮುಂದೆ ಅದೇ ಗ್ರಾಮದ ಹುಡುಗರು ಆಟವಾಡುತ್ತಿದ್ದಾಗ ಪಿರ್ಯಾದಿ ಏಕೆ ಇಲ್ಲಿ ಆಟವಾಡುತ್ತೀರಾ, ಸಕರ್ಾರಿ ಶಾಲೆಯ ಆವರಣದಲ್ಲಿ ಆಟವಾಡಿ ಎಂದು ಹೇಳಿದ್ದಕ್ಕೆ ಪಕ್ಕದ ಮನೆಯ ವಾಸಿ ಶ್ರೀಮತಿ ಮಂಜುಳಾ ಇಲ್ಲೆ ಆಟವಾಡಿ ಎಂದು ಹೇಳಿ ಅವ್ಯಾಶಬ್ಧಗಳಿಂದ ನಿಂದಿಸಿ, ಶ್ರೀಮತಿ ಮಂಜುಳಾ ಪತಿ ಶ್ರೀ ಅನಂತ, ರವರು ದೊಣ್ಣೆಯಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಪಿರ್ಯಾದಿಯವರು ಕೊಟ್ಟ ದೂರಿನ ಮೇರೆಗೆ ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ದಾರಿ ಬಿಡದೇ ಬೇಲಿ ಹಾಕಿರುವ ವಿಚಾರಕ್ಕೆ ವ್ಯಕ್ತಿಯ ಮೇಲೆ ಹಲ್ಲೆ :

ದಿನಾಂಕ: 18-01-2019 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ನಾಗೇನಹಳ್ಳಿ ಗ್ರಾಮದ ವಾಸಿ ಶ್ರೀ ಜಗದೀಶ್, ರವರು ಶ್ರೀ ಬಸವಲಿಂಗಯ್ಯ, ರವರ ಬಾಬ್ತು ತೋಟಕ್ಕೆ ಶ್ರೀ ಮಲ್ಲಿಕಾಜರ್ುನ, ರವರು ಬೇಲಿ ಹಾಕಿ ದಾರಿ ಬಿಟ್ಟಿರುವುದಿಲ್ಲವೆಂದು ಶ್ರೀ ಮಲ್ಲಿಕಾಜರ್ುನ, ರವರನ್ನು ಕೇಳಿದ್ದಕ್ಕೆ ಅವಾಚ್ಯಶಬ್ಧಗಳಿಂದ ನಿಂದಿಸಿ, ಕೈ & ಕಲ್ಲಿನಿಂದ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಅರಸೀಕೆರೆ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಯಾರೂ ಕಳ್ಳರು ದೇವಸ್ಥಾನದ ಬೀಗ ಮುರಿದು ದೇವಸ್ಥಾನದಲ್ಲಿಟ್ಟಿದ್ದ ಲ್ಯಾಪ್ ಟಾಪ್ & 3 ಹುಂಡಿಗಳ ಕಳವು
ದಿನಾಂಕ: 17-01-2019 ರಂದು ರಾತ್ರಿ 9-15 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಹಿರೀಸಾವೆ ಹೋಬಳಿ, ಚಿಕ್ಕೋನಹಳ್ಳಿ ಗೇಟ್, ವಾಸಿ ಶ್ರೀ ಮೋಹನ್, ರವರು ಶ್ರೀ ಸಾಯಿ ಸಿದ್ದಾಶ್ರಮದ ಮೇಲ್ವಿಚಾರಕರಾಗಿದ್ದು, ಶ್ರೀ ಸಾಯಿ ದೇವಸ್ಥಾನದ ಪೂಜೆ ಮುಗಿಸಿಕೊಂಡು, ದೇವಸ್ಥಾನಕ್ಕೆ ಬೀಗ ಹಾಕಿಕೊಂಡು ಹೋಗಿದ್ದು, ವಾಪಸ್ ದಿನಾಂಕ: 18-01-2019 ರಂದು ಬೆಳಿಗ್ಗೆ 6-00 ಗಂಟೆಗೆ ದೇವಸ್ಥಾನದ ಹತ್ತಿರ ಹೋಗಿ ನೋಡಲಾಗಿ ಯಾರೋ ಕಳ್ಳರು ದೇವಸ್ಥಾನದ ಬೀಗ ಮುರಿದು ದೇವಸ್ಥಾನದಲ್ಲಿಟ್ಟಿದ್ದ ಲ್ಯಾಪ್ ಟ್ಯಾಪ್ & ಮೂರು ಹುಂಡಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿಯವರು ಕೊಟ್ಟ ದೂರಿನ ಮೇರೆಗೆ ಹಿರೀಸಾವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಯಾರೂ ಕಳ್ಳರು ದೇವಸ್ಥಾನದ ಬೀಗ ಮುರಿದು 60 ರೂಪಾಯಿ ನಗದು ಮತ್ತು ಪ್ರಸಾದದ ಅಡುಗೆಯ ಸಾಮಾನುಗಳ ಕಳವು:

ದಿನಾಂಕ: 17-01-2019 ರಂದು ಸಂಜೆ 7-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ರಾಮನಾಥಪುರ ಹೋಬಳಿ, ಜೆ. ಹೊಸಹಳ್ಳಿ ಗ್ರಾಮದ ವಾಸಿ ಶ್ರೀ ನಾರಾಯಣ, ರವರು ಗ್ರಾಮದಲ್ಲಿರುವ ಶ್ರೀ ದೊಡ್ಡಮ್ಮ ತಾಯಿ ದೇವಸ್ಥಾನದ ಪೂಜೆ ಮುಗಿಸಿಕೊಂಡು ರಾತ್ರಿ 8-00 ಗಂಟೆಗೆ ದೇವಸ್ಥಾನದ ಬಾಗಿಲು ಹಾಕಿಕೊಂಡು ಹೋಗಿದ್ದು, ದಿನಾಂಕ: 18-01-2019 ರಂದು ಬೆಳಿಗ್ಗೆ 6-00 ಗಂಟೆಗೆ ದೇವಸ್ಥಾನದ ಹತ್ತಿರ ಬಂದು ನೋಡಲಾಗಿ ಯಾರೋ ಕಳ್ಳರು ದೇವಸ್ಥಾನದ ಬಾಗಿಲ ಬೀಗವನ್ನು ಮುರಿದು ಒಳಪ್ರವೇಶಿಸಿ, ಹುಂಡಿಯನ್ನು ಹೊಡೆದು 60 ರೂಪಾಯಿ 70 ಕೆ.ಜಿ. ಅಕ್ಕಿ, 2 ಕೆ.ಜಿ. ಉಪ್ಪಿನಕಾಯಿ, 2 ಕೆ.ಜಿ. ಕಾರದಪುಡಿ, 250 ಗ್ರಾಂ ಚಕ್ಕೆ, 4 ಪ್ಯಾಕೇಟ್ ಹಪ್ಪಳ, 2 ಕೆ.ಜಿ. ಬಿಳಿಎಳ್ಳು, 10 ಕೆ.ಜಿ. ತುಪ್ಪ, 5, ಕೆ.ಜಿ. ಕಡ್ಲೆ ಹಿಟ್ಟು, 2ಕೆ.ಜಿ. ಬನ್ಸಿರವೆ ಹಾಗೂ ಸಣ್ಣ-ಪುಟ್ಟ ಸಾಮಾನುಗಳನ್ನು ತೆಗೆದುಕೊಂಡು ಹೋಗಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ನಿಯಂತ್ರಣ ತಪ್ಪಿ, ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸಾವು:

ದಿನಾಂಕ: 17-01-2019 ರಂದು ಸಂಜೆ 5-15 ಗಂಟೆ ಸಮಯದಲ್ಲಿ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಮುತ್ತಿಗೆಹೀರೆಹಳ್ಳಿ ಗ್ರಾಮದ ವಾಸಿ ಶ್ರೀ ಬಲರಾಮ, ರವರ ಬಾಬ್ತು ಕೆಎ-13, ಇಜಿ-6001 ಬೈಕ್ನಲ್ಲಿ ಪತ್ನಿ ಶ್ರೀಮತಿ ಮಮತ, ರವರನ್ನು ಕೂರಿಸಿಕೊಂಡು ಮಗಳ ಮನೆಯಾದ ಸಕಲೇಶಪುರಕ್ಕೆ ಹೋಗಿ, ವಾಪಸ್ ಮನೆಗೆ ಹೋಗಲು ಆಲೂರು ತಾಲ್ಲೂಕು, ಕಸಬಾ ಹೋಬಳಿ, ಭರತವಳ್ಳಿ ಕ್ರಾಸ್, ಎನ್ಹೆಚ್-75, ರಸ್ತೆ ಹತ್ತಿರ ಹೋಗುತ್ತಿದ್ದಾಗ ಸಡನ್ ಆಗಿ ಬ್ರೇಕ್ ಹಾಕಿದಾಗ ಬೈಕ್ ಹಿಂಬದಿ ಕುಳಿತಿದ್ದ ಶ್ರೀಮತಿ ಮಮತಾ, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಶ್ರೀಮತಿ ಮಮತ ಕೋಂ ಬಲರಾಮ, 42 ವರ್ಷ, ಮುತ್ತಿಗೆಹೀರೆಹಳ್ಳಿ ಗ್ರಾಮ, ಶಾಂತಿಗ್ರಾಮ ಹೋಬಳಿ, ಹಾಸನ ತಾಲ್ಲೂಕು, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಮಗ ಶ್ರೀ ಧರಣಿ, ರವರು ಕೊಟ್ಟ ದೂರಿನ ಮೇರೆಗೆ ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಕೆಎಸ್ಆರ್ಟಿಸಿ ಬಸ್ ಬೈಕ್ಗೆ ಡಿಕ್ಕಿ, ಬೈಕ್ ಸವಾರ ಸಾವು:

ದಿನಾಂಕ: 19-01-2019 ರಂದು ಬೆಳಿಗ್ಗೆ 6-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಬಿಜೆಮಾರನಹಳ್ಳಿ ಗ್ರಾಮದ ವಾಸಿ ಶ್ರೀ ಗೌರೀಶ್, ರವರ ಬಾಬ್ತು ಕೆಎ-13, ಡಬ್ಲ್ಯೂ-0428 ಬೈಕ್ನಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಎನ್ಹೆಚ್-75 ರಸ್ತೆ, ಉದಯಪುರಕ್ಕೆ ಹೋಗಲು ಚನ್ನರಾಯಪಟ್ಟಣ ತಾಲ್ಲೂಕು, ಉದಯಪುರದ ಹತ್ತಿರ ಬಳದರೆ ರಸ್ತೆಯಲ್ಲಿ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-18, ಎಫ್-973 ಕೆಎಸ್ಆರ್ಟಿಸಿ ಬಸ್ಸಿನ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಗೌರೀಶ್, ರವರು ಬೈಕ್ ಸಮೇತ ರಸ್ತೆ ಬಿದ್ದು, ತೀವ್ರ ಸ್ವರೂಪದ ರಕ್ತಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹಾಸನದ ಸ್ವರ್ಶ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ತಪಾಸಣೆ ನಡೆಸಿ ಶ್ರೀ ಗೌರೀಶ್ ಬಿನ್  ಬಸವರಾಜು, 26 ವರ್ಷ, ಬಿಜೆಮಾರನಹಳ್ಳಿ ಗ್ರಾಮ, ಶಾಂತಿಗ್ರಾಮ ಹೋಬಳಿ, ಚನ್ನರಾಯಪಟ್ಟಣ ತಾಲ್ಲೂಕು. ರವರು ಮೃತಪಟ್ಟಿರುವುದಾಗಿ ತಿಳಿಸಿದ ಮೇರಗೆ ಮೃತರ ಸಂಬಂಧಿಕರಾದ ಶ್ರೀ ಮಲ್ಲಿಕಾರ್ಜುನ, ರವರು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹುಡುಗಿ ಕಾಣೆ

ದಿನಾಂಕ: 15-01-2019 ರಂದು ಬೆಳಿಗ್ಗೆ 7-00 ಗಂಟೆ ಸಮಯದಲ್ಲಿ ಬೇಲೂರು ತಾಲ್ಲೂಕು, ಹೊಸಮನೆಹಳ್ಳಿ ವಾಸಿ ಶ್ರೀ ಸುಬ್ಬೇಗೌಡ, ರವರ ಮಗಳು ಕು|| ಕವನ, ಅತ್ತೆ ಮನೆಯಾದ ಹಾಸನ ತಾಲ್ಲೂಕು, ಕಸಬಾ ಹೋಬಳಿ, ವತರ್ಿಕೆ ಗ್ರಾಮದಿಂದ ಹಾಸನದ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಬಿ. ಕಾಂ. ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಕಾಲೇಜಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು, ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಕವನ, ತಂದೆ ಶ್ರೀ ಸುಬ್ಬೇಗೌಡ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗಿಯ ಚಹರೆ: ಕು|| ಕವನ ಬಿನ್ ಸುಬ್ಬೇಗೌಡ, 18 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾಳೆ. ಹುಡುಗಿಯ ಸುಳಿವು ಸಿಕ್ಕಲ್ಲಿ 08172-268630 ಕ್ಕೆ ಸಂಪರ್ಕಿಸುವುದು.

ಹೆಂಗಸು ಕಾಣೆ


ದಿನಾಂಕ: 15-01-2019 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ಕಸಬಾ ಹೋಬಳಿ, . ಚೋಳೆನಹಳ್ಳಿ ಗ್ರಾಮದ ವಾಸಿ ಶ್ರೀಮತಿ ನಂಜಮ್ಮ, ರವರು ಮನೆಯಿಂದ ಹೊರಗೆ ಹೋದವರು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಶ್ರೀಮತಿ ನಂಜಮ್ಮ, ರವರ ಮಗಳು ಶ್ರೀಮತಿ ಲಕ್ಷ್ಮೀದೇವಮ್ಮ, ರವರು ದಿನಾಂಕ: 18-01-2019 ರಂದು ಕೊಟ್ಟ ದೂರಿನ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹೆಂಗಸಿನ ಚಹರೆ: ಶ್ರೀಮತಿ ನಂಜಮ್ಮ, 80 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಹಸಿರು ಬಣ್ಣದ ಸೀರೆ ಮತ್ತು ರವಿಕೆ ಧರಿಸಿರುತ್ತಾರೆ. ಹೆಂಗಸಿನ ಸುಳಿವು ಸಿಕ್ಕಲ್ಲಿ 08175-252333 ಕ್ಕೆ ಸಂಪರ್ಕಿಸುವುದು.

No comments: