* * * * * * HASSAN DISTRICT POLICE

Friday, November 16, 2018

PRESS NOTE : 16-11-2018


ಪತ್ರಿಕಾ ಪ್ರಕಟಣೆ                                     ದಿನಾಂಕ: 16-11-2018.

ಕ್ಷುಲ್ಲಕ ಜಗಳ ಪತಿಯಿಂದ & ಪತ್ನಿ ಹತ್ಯೆ : ದಿನಾಂಕ: 15-11-2018 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಕಸಬಾ ಹೋಬಳಿ, ಜಾರಗಲ್ ಗ್ರಾಮದ ವಾಸಿ ಶ್ರೀ.ಚಂದ್ರು ರವರು ಶ್ರೀಮತಿ.ಶಾಂತಿಯವರನ್ನು ಈ ಹಿಂದೆ 2012 ರಲ್ಲಿ ವಿವಾಹವಾಗಿದ್ದು,   3 ವರ್ಷಗಳ ಕಾಲ ಅನ್ಯೂನ್ಯವಾಗಿ ಸಂಸಾರ ನಡೆಸಿಕೊಂಡಿದ್ದು,  ಇವರಿಗೆ 6 ವರ್ಷದ ಗಂಡು ಮಗ ಮಣಿಕಂಠ ಮತ್ತು 5 ವರ್ಷದ ಹೆಣ್ಣುಮಗಳು ಸಿಂಧೂ  ಎಂಬ ಇಬ್ಬರು ಮಕ್ಕಳಿದ್ದು, ಶ್ರೀಮತಿ ಶಾಂತಿಯವರು ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು,  ಈಗ್ಗೆ 7 ತಿಂಗಳಿನಿಂದ ಪತಿ & ಪತ್ನಿ ನಡುವೆ ಸಣ್ಣ-ಪುಟ್ಟ ಗಲಾಟೆ ಮಾಡಿಕೊಂಡು ಶ್ರೀಮತಿ ಶಾಂತಿಯವರು ತಮ್ಮ ತವರು ಮನೆಗೆ ಹೋಗಿದ್ದು, ಚಂದ್ರು  ಮತ್ತು ಶಾಂತಿಯವರಿಗೆ ತಿಳುವಳಿಕೆ ನೀಡಿ ವಾಪಸ್ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದು, ಪತಿ & ಪತ್ನಿಯ ನಡುವೆ ಗಲಾಟೆ ನಡೆದು ಪತಿ ಚಂದ್ರು ರವರು ಮರದ ತುಂಡಿನಿಂದ ಪತ್ನಿ ಶಾಂತಿಯ ತಲೆಗೆ ಹೊಡೆದು ಕೊಲೆ ಮಾಡಿರುತ್ತಾನೆಂದು ಮೃತಳ ಅಣ್ಣ ಶ್ರೀ.ಗಾಂಧಿರವರು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆಯಲ್ಲಿರುತ್ತದೆ. ಶ್ರೀ ಎಂ.ಎನ್. ಶಶಿಧರ್, ಡಿವೈಎಸ್ಪಿ, ಸಕಲೇಶಪುರ ಉಪ-ವಿಭಾಗ ಮತ್ತು  ಶ್ರೀ ವೆಂಕಟೇಶ್, ಸಿಪಿಐ, ಸಕಲೇಶಪುರ ವೃತ್ತ, ಶ್ರೀ ಬಿ.ಎನ್. ರಾಘವೇಂದ್ರ, ಪಿಎಸ್ಐ, ಸಕಲೇಶಪುರ ನಗರ ಠಾಣೆ. ರವರು ಸ್ಥಳಕ್ಕೆ ಭೇಟಿ ನೀಡಿರುತ್ತಾರೆ.

ಬೈಕ್ನ್ನು ತಡೆದು ದೊಣ್ಣೆ ಮತ್ತು ಕಬ್ಬಿಣದ ರಾಡಿನಿಂದ ಹೊಡೆದು ಹಲ್ಲೆ: ದಿನಾಂಕ: 14-11-2018 ರಂದು ರಾತ್ರಿ 8-00 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ಪಡುವನಹಳ್ಳಿ ಗ್ರಾಮದ ವಾಸಿ ಶ್ರೀ ಮೋಹನ್ @ ರವಿ, ರವರು ಚನ್ನರಾಯಪಟ್ಟಣ ಹೊಸ ಬಸ್ ನಿಲ್ದಾಣದಲ್ಲಿ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದು, ಅಂಗಡಿ ವ್ಯಾಪಾರ ಮುಗಿಸಿಕೊಂಡು ವಾಪಸ್ ಮನೆಗೆ ಹೋಗಲು ಬೈಕ್ನಲ್ಲಿ ಹೋಗುತ್ತಿದ್ದಾಗ ಸ್ನೇಹಿತನಾದ ಶ್ರೀ ಆಕಾಶ್, ರವರು ಹೌಸಿಂಗ್ ಬೋರ್ಡ್ಗೆ ಡ್ರಾಪ್ ಕೊಡುವಂತೆ ಕೇಳಿದಾಗ ಬೈಕ್ನಲ್ಲಿ ಕೂರಿಸಿಕೊಂಡು ಚನ್ನರಾಯಪಟ್ಟಣದ ಅಂಬೇಡ್ಕರ್ ವೃತ್ತ ಬಳಿ ಇರುವ ತಗಿನಮ್ಮ ದೇವಸ್ಥಾನದ ಬಳಿ ರಸ್ತೆಗೆ ಪರಿಚಯವಿದ್ದ ಚನ್ನರಾಯಪಟ್ಟಣ ತಾಲ್ಲೂಕು, ಮಾರನಹಳ್ಳಿ ಗ್ರಾಮದ ವಾಸಿಗಳಾದ ಶ್ರೀ ವಿನಿ, ಶ್ರೀ ವಿಜಿ, ಶ್ರೀ ಅಭಿ ಹಾಗೂ ಇತರೆ ಒಬ್ಬ ಒಟ್ಟು 4 ಜನರು ಬೈಕ್ಗೆ ಅಡ್ಡ ಬಂದು ಪಿರ್ಯಾದಿಯೊಂದಿಗೆ ಜಗಳ ತೆಗೆದು ದೊಣ್ಣೆ ಮತ್ತು ಕಬ್ಬಿಣದ ರಾಡಿನಿಂದ ಶ್ರೀ ಮೋಹನ್ @ ರವಿ ಹಾಗೂ ಶ್ರೀ ಆಕಾಶ್, ರವರುಗಳಿಗೆ ಹೊಡೆದು  ರಕ್ತಗಾಯಪಡಿಸಿ, ಬೈಕ್ ಜಖಂಗೊಳಿಸಿ ಗಲಾಟೆಯಲ್ಲಿ ಚಿನ್ನದ ಸರ ಕಳೆದು ಹೋಗಿರುತ್ತದೆಂದು ಪಿರ್ಯಾದಿಯವರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಮಾವ-ಸೊಸೆಯ ನಡುವೆ ಕ್ಷುಲ್ಲಕ ಜಗಳ, ದೊಣ್ಣೆಯಿಂದ ಹೊಡೆದು ರಕ್ತಗಾಯ: ದಿನಾಂಕ: 12-11-2018 ರಂದು ರಾತ್ರಿ 9-00 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಕೆ.ಜಿ. ಕೊಪ್ಪಲು ಹೂವಿನಹಳ್ಳಿ ಗ್ರಾಮದ ವಾಸಿ ಶ್ರೀ ಸಿದ್ದಲಿಂಗೇಗೌಡ, ರವರ ತಮ್ಮನ ಮಗನಾದ ಶ್ರೀ ಸಂತೋಷನ ಬೈಕ್ನಲ್ಲಿ ಪಿರ್ಯಾದಿ  ಸೊಸೆ ಶ್ರೀಮತಿ ಭವ್ಯ, ರವರು ಅರಕಲಗೂಡು ಟೌನ್ಗೆ ಹೋಗಿ ಬಂದಿದ್ದು, ಶ್ರೀ ಸಿದ್ದಲಿಂಗೇಗೌಡ, ರವರು ಸೊಸೆಗೆ ಸಂತೋಷನ ಜೊತೆ ಏಕೆ ಹೋಗಿದ್ದೆ ಎಂದು ಕೇಳಿದ್ದಕ್ಕೆ ನಾನು ಯಾರ ಜೊತೆಯಾದರೂ ಹೋಗುತ್ತೇನೆಂದು ಹೇಳಿದ್ದಕ್ಕೆ ಮಾವ ಮತ್ತು ಸೊಸೆಯ ನಡುವೆ ಜಗಳವಾಗುತ್ತಿದ್ದಾಗ ಏಕಾ-ಏಕಿ ಶ್ರೀ ಸಂತೋಷ ಮತ್ತು ಶ್ರೀ ಸತೀಶ್ ರವರುಗಳು ಬಂದು ಅವಾಚ್ಯಶಬ್ಧಗಳಿಂದ ನಿಂದಿಸಿ, ದೊಣ್ಣೆಯಿಂದ ಪಿರ್ಯಾದಿಗೆ ಮತ್ತು ಮಗ ಶ್ರೀ ಬಸವೇಗೌಡ ರವರಿಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಹಳೇ ದ್ವೇಷ, ದೊಣ್ಣೆ ಮತ್ತು ಮಚ್ಚಿನಿಂದ ಹೊಡೆದು ರಕ್ತಗಾಯ: ದಿನಾಂಕ: 14-11-2018 ರಂದು ಸಂಜೆ 7-30 ಗಂಟೆ ಸಮಯದಲ್ಲಿ ಅರಕಲಗೂಡು ತಾಲ್ಲೂಕು, ಮೊಕಲಿ ಗ್ರಾಮದ ವಾಸಿ ಶ್ರೀ ಚಂದ್ರು, ರವರ ಬಾಬ್ತು ಜಮೀನಿನ ಹತ್ತಿರ ಹೋಗಿ ಗದ್ದೆಗೆ ನೀರು ಕಟ್ಟಿ, ವಾಪಸ್ ಮನೆಗೆ ಹೋಗಲು ಅರಕಲಗೂಡು ತಾಲ್ಲೂಕು, ಮೊಕಲಿ ಗ್ರಾಮದ ಸಕರ್ಾರಿ ಫ್ರೌಡಶಾಲೆಯ ಹತ್ತಿರ ಬೈಕ್ನಲ್ಲಿ ಹೋಗುತ್ತಿದ್ದಾಗ ಅದೇ ಗ್ರಾಮದ ವಾಸಿ ಶ್ರೀ ಚನ್ನ, ಮಗ ಶ್ರೀ ಸುದರ್ಶನ, ಶ್ರೀ ಸುಚೇತನ, ಶ್ರೀಮತಿ ಜಯಲಕ್ಷ್ಮೀ, ಶ್ರೀ ಲಕ್ಷ್ಮಯ್ಯ, ಶ್ರೀ ಪುಟ್ಟಸ್ವಾಮಿ, ರವರುಗಳು ಅಕ್ರಮಕೂಟ ಕಟ್ಟಿಕೊಂಡು ಬೈಕ್ನ್ನು ಅಡ್ಡಗಟ್ಟಿ, ಅವಾಚ್ಯಶಬ್ಧಗಳಿಂದ ನಿಂದಿಸಿ, ನ್ಯಾಯಾಲಯದಲ್ಲಿರುವ ಕೇಸನ್ನು ರಾಜಿ ಮಾಡಿಕೋ ಎಂದು ದೊಣ್ಣೆ ಮತ್ತು ಮಚ್ಚುಗಳಿಂದ ಹೊಡೆದು ರಕ್ತಗಾಯಪಡಿಸಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಪಿರ್ಯಾದಿಯವರು ಹಾಸನ ಎನ್ಡಿಆರ್ಕೆ ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಟ್ರ್ಯಾಕ್ಟರ್ ಕಳವು : ದಿನಾಂಕ: 14-11-2018 ರಂದು ರಾತ್ರಿ 10-00 ಗಂಟೆ ಸಮಯದಲ್ಲಿ ಹೊಳೆನರಸೀಪುರ ತಾಲ್ಲೂಕು, ಹಳೇಕೋಟೆ ಹೋಬಳಿ, ಬಸವನಾಯಕನಹಳ್ಳಿ ಗ್ರಾಮದ ವಾಸಿ ಶ್ರೀ ರಘುನಾಥ, ರವರ ಬಾಬ್ತು ಕೆಎ-13, ಟಿ.ಸಿ. 0286 ರ ಟ್ರ್ಯಾಕ್ಟರ್ನ್ನು ಪ್ರತಿ ದಿನ ಕೆಲಸ ಮುಗಿದ ತಕ್ಷಣ, ನ್ಯಾಮನಹಳ್ಳಿ ಸಮುದಾಯ ಭವನದ ಹತ್ತಿರ ನಿಲ್ಲಿಸಿದ್ದು, ದಿನಾಂಕ: 15-11-2018 ರಂದು ಬೆಳಿಗ್ಗೆ 6-00 ಗಂಟೆಗೆ  ಟ್ರ್ಯಾಕ್ಟರ್ ಹೋಗಿ ನೋಡಲಾಗಿ ಟ್ರ್ಯಾಕ್ಟರ್ ಇರಲಿಲ್ಲ, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಪಿರ್ಯಾದಿ ಕೊಟ್ಟ ದೂರಿನ ಮೇರೆಗೆ ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ಗಳ ಮುಖಾ-ಮುಖಿ ಡಿಕ್ಕಿ, ಬೈಕ್ನಿಂದ ಬಿದ್ದು, ರಕ್ತಗಾಯ:  ದಿನಾಂಕ: 15-11-2018 ರಂದು ಮಧ್ಯಾಹ್ನ 2-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಯಾದಪುರ ಗ್ರಾಮದ ವಾಸಿ ಶ್ರೀ ರಾಜು, ರವರ ಬಾಬ್ತು ಕೆಎ-18, ವೈ-5271 ರ ಬೈಕ್ನಲ್ಲಿ ಭಾಮೈದ ಶ್ರೀ ಶಿವಕುಮಾರ್, ರವರೊಂದಿಗೆ ಅರಸೀಕೆರೆ ತಾಲ್ಲೂಕು, ಕಸಬಾ ಹೋಬಳಿ, ಬೆಳಗುಂಬ ಗೇಟ್ ಎನ್ಹೆಚ್-206 ರಸ್ತೆಯಲ್ಲಿ ತಿಪಟೂರು ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-44, ಆರ್-2290 ರ ಬೈಕ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ 2 ಬೈಕ್ಗಳು ಜಖಂಗೊಂಡು ಪಿರ್ಯಾದಿ ಬೈಕ್ನಿಂದ ಬಿದ್ದು ಕಾಲುಗಳಿಗೆ ಮುಖ, ಮತ್ತು ಬಾಯಿಗೆ ರಕ್ತಗಾಯವಾಗಿರುತ್ತದೆಂದು ಪಿರ್ಯಾದಿಯವರು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಮೇರೆಗೆ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

No comments: