* * * * * * HASSAN DISTRICT POLICE

Thursday, November 15, 2018

PRESS NOTE : 15-11-2018

ಪತ್ರಿಕಾ ಪ್ರಕಟಣೆ                        ದಿನಾಂಕ: 15-11-2018.

                            ರಾಷ್ಟ್ರೀಯ ತಂಬಾಕು ನಿಯಂತ್ರಣದ ಕಾರ್ಯಗಾರ ಕುರಿತು.
   ದಿನಾಂಕ: 15-11-2018 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಜಿಲ್ಲಾ ಪೊಲೀಸ್ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಧಿಕಾರಿ ಡಾ|| ಸತೀಶ್, ಮತ್ತು ಪೊಲೀಸ್ ವರಿಷ್ಠಾಧಿಕಾರಿ ಡಾ|| ಎ.ಎನ್. ಪ್ರಕಾಶ್, ರವರುಗಳ ನೇತೃತ್ವದಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣದ  ಉದ್ಘಾಟನೆ ನೇರವೇರಿಸಿ, ನಂತರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳೊಂದಿಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣದ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.








ಜಿಲ್ಲೆಯ ಸಕಲೇಶಪುರ ಪಟ್ಟಣ ಮತ್ತು ಕೊಣನೂರು ಹೋಬಳಿಯಲ್ಲಿ ಮದ್ಯ ಸಾಗಿಸುತ್ತಿದ್ದ ಹಾಗೂ ಮಾರಾಟ ಮಾಡುತ್ತಿದ್ದ ಮೂವರ ಬಂಧನ, 13,988/- ಬೆಲೆಯ ಮದ್ಯ ವಶ:
ಪ್ರಕರಣ-01, ದಿನಾಂಕ: 14-11-2018 ರಂದು ಬೆಳಿಗ್ಗೆ 9-40 ಗಂಟೆ ಸಮಯದಲ್ಲಿ ಸಕಲೇಶಪುರ ಪಟ್ಟಣದ ಬಾಳೆಗದ್ದೆ ಬಡಾವಣೆಯಲ್ಲಿರುವ ಸೀಮಾ ವೈನ್ಸ್ನಿಂದ ಮದ್ಯದ ಟೆಟ್ರಾ ಪ್ಯಾಕ್ ತುಂಬಿರುವ ಬಾಕ್ಸ್ಗಳನ್ನು ಸಕಲೇಶಪುರ-ಬೇಲೂರು ರಸ್ತೆಯಲ್ಲಿ ಸಾಗಿಸುತ್ತಿದ್ದಾರೆಂದು ಶ್ರೀ ಎಸ್.ಹೆಚ್. ವಸಂತ್, ಸಿಪಿಐ, ಸಕಲೇಶಪುರ ವೃತ್ತ, ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ಕೆಎ-04, ಇಕ್ಯೂ-6821 ರ ಬೈಕ್ನ್ನು ತಡೆದು ತಪಾಸಣೆ ನಡೆಸಿ ಯಾವುದೇ ಪರವಾನಿಗೆಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಕುಮಾರ ಬಿನ್ ತಿಮ್ಮಪ್ಪ, ಸೀಮಾ ವೈನ್ಸ್ನಲ್ಲಿ ಮ್ಯಾನೇಜರ್, ಬಾಳೆಗದ್ದೆ ಬಡಾವಣೆ, ಸಕಲೇಶಪುರ ಟೌನ್ ಎಂದು ತಿಳಿಸಿದ್ದವನನ್ನು ದಸ್ತಗಿರಿ ಮಾಡಿಕೊಂಡು ಬೈಕ್ ಸಮೇತ ಸುಮಾರು 11,642/- ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಪ್ರಕರಣ-02 : ದಿನಾಂಕ: 14-11-2018 ರಂದು ಬೆಳಿಗ್ಗೆ 5-30 ಗಂಟೆ ಸಮಯದಲ್ಲಿ ಶ್ರೀ ಎಸ್.ಎಲ್. ಸಾಗರ್, ಪಿಎಸ್ಐ, ಕೊಣನೂರು ಪೊಲೀಸ್ ಠಾಣೆ, ರವರು ಸಿಬ್ಬಂದಿಗಳೊಂದಿಗೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬಸವಾಪಟ್ಟಣದಿಂದ ಬೆಳವಾಡಿ ರಸ್ತೆ ಹತ್ತಿರ ಬೈಕ್ನಲ್ಲಿ ಮದ್ಯವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದಾರೆಂದು ಮತ್ತು ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಸರಗೂರು ಗ್ರಾಮದ ವಾಸಿ ಶ್ರೀ ವೆಂಕಟೇಶ್, ರವರ ಮನೆಯ ಮುಂಭಾಗದಲ್ಲಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಶ್ರೀ ತಿಮ್ಮಪ್ಪ, ಎಎಸ್ಐ, ಕೊಣನೂರು ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಯಾವುದೇ ಪರವಾನಿಗೆಲ್ಲದೆ ಕೆಎ-13, ಇಎಂ-5928 ರ ಬೈಕ್ನಲ್ಲಿ ಮದ್ಯ ಸಾಗಿಸುತ್ತಿದ್ದವನನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಶ್ರೀ ಶಂಕರ ಬಿನ್ ಲೇಟ್ ಮುತ್ತೇಗೌಡ, 35 ವರ್ಷ, ಕೋಳಿ ಅಂಗಡಿ ವ್ಯಾಪಾರ, ಬಸವಾಪಟ್ಟಣ ಗ್ರಾಮ, ರಾಮನಾಥಪುರ ಹೋಬಳಿ, ಅರಕಲಗೂಡು ತಾಲ್ಲೂಕು 2) ವೆಂಕಟೇಶ್ ಬಿನ್ ಲೇಟ್ ತಿಮ್ಮಯ್ಯ, 42 ವರ್ಷ, ಸರಗೂರು ಗ್ರಾಮ, ಕೊಣನೂರು ಹೋಬಳಿ, ಅರಕಲಗೂಡು ತಾಲ್ಲೂಕು ಎಂದು ತಿಳಿಸಿದ್ದವರನ್ನು ದಸ್ತಗಿರಿ ಮಾಡಿಕೊಂಡು ಸುಮಾರು 2,346/-ಬೆಲೆಯ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿರುತ್ತೆ.

ಚಿನ್ನ ಮತ್ತು ಬೆಳ್ಳಿ ಆಭರಣಗಳ ಕಳವು
ದಿನಾಂಕ : 17-10-2018 ರಂದುರಾತ್ರಿ 09-00 ಗಂಟೆ ಸಮಯದಲ್ಲಿಚನ್ನರಾಯಪಟ್ಟಣ, ಸಂಪಿಗೆ ರಸ್ತೆಕೋಟರ್್ ಹತ್ತಿರದ ನವದೀಪ ನಿಲಯದ ವಾಸಿ ನಂಜುಂಡೇಗೌಡ ಕೆ.ಬಿ. ರವರು ಪತ್ನಿ ಶ್ರೀಮತಿ ರಾಧಮ್ಮರವರೊಂದಿಗೆಆಯುಧ ಪೂಜೆ ಹಬ್ಬದ ಪ್ರಯುಕ್ತತಮ್ಮ ಸಂಬಂಧಿಕರ ಮನೆಗೆ ಬೆಂಗಳೂರಿಗೆ ಹೋಗಿ ಒಂದು ವಾರಗಳ ಕಾಲ ಅಲ್ಲೇ ಉಳಿದಿದ್ದು, ನಂತರ ದಿನಾಂಕ : 25-10-2018 ರಂದು ಸಂಜೆ 06-00 ಗಂಟೆಗೆ ವಾಪಸ್ಚನ್ನರಾಯಪಟ್ಟಣದ ಮನೆಗೆ ಬಂದು  ಬಾಗಿಲು ತೆಗೆದು ಒಳಗೆ ಹೋಗಿ ನೋಡಲಾಗಿರೂಮಿನಲ್ಲಿದ್ದ ಬೀರುವಿನ ಬಾಗಿಲು ತೆರೆದಿದ್ದು, ಯಾರೋ ಕಳ್ಳರು ಮನೆಯ ಹಿಂಭಾಗಿಲನ್ನು ಮೀಟಿತೆಗೆದು ಒಳ ಪ್ರವೇಶ ಮಾಡಿ ಬೀರುವಿನಲ್ಲಿದ್ದ ಸುಮಾರು 45 ಸಾವಿರ ಬೆಲೆ ಬಾಳುವ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ದಿನಾಂಕ : 13-11-2018 ರಂದು ನಂಜುಂಡೇಗೌಡರವರ ಪತ್ನಿ ಬೆಂಗಳೂರಿನಿಂದ ಮನೆಗೆ ಬಂದ ನಂತರ ಆಭರಣಗಳ ಮಾಹಿತಿ ಪಡೆದು, ಪತ್ತೆ ಮಾಡಿಕೊಡಬೇಕೆಂದು ಶ್ರೀ ನಂಜುಂಡೇಗೌಡರವರು ದಿನಾಂಕ : 15-11-2018 ರಂದುಕೊಟ್ಟದೂರಿನ ಮೇರೆಗೆಚನ್ನರಾಯಪಟ್ಟಣ ನಗರ ಪೊಲೀಸ್ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಕೈಗೊಂಡಿರುತ್ತದೆ.

   ಮಹಿಳೆಯೊಬ್ಬರು ಕೆಎಸ್ಆರ್ಟಿಸಿ ಬಸ್ ಇಳಿಯುತ್ತಿದ್ದಾಗ ಪರ್ಸ್ನಲ್ಲಿಟ್ಟಿದ್ದ ನಗದು ಮತ್ತು ಚಿನ್ನಾಭರಣಗಳ ಕಳವು: ದಿನಾಂಕ: 14-11-2018 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಕಸಬಾ ಹೋಬಳಿ, ಹಳೇಬೇಲೂರು ಗ್ರಾಮದ ವಾಸಿ ಶ್ರೀಮತಿ ಕುಸುಮ, ರವರು ಕೆಎಸ್ಆರ್ಟಿಸಿ ಬಸ್ನಲ್ಲಿ  ಸಕಲೇಶಪುರದ ಹೊಳೆ ಮಲ್ಲೇಶ್ವರ ದೇವಸ್ಥಾನ ಬಸ್ ಇಳಿಯುತ್ತಿದ್ದಾಗ ವ್ಯಾನಟಿ ಬ್ಯಾಗಿನ ಪಸರ್್ನಲ್ಲಿಟ್ಟಿದ್ದ 42 ಗ್ರಾಂ ತೂಕದ ಚಿನ್ನದ ಸರ, 6 ಗ್ರಾಂ ತೂಕದ 2 ಜೊತೆ ಓಲೆ ಮತ್ತು 1,400/- ನಗದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಶ್ರೀಮತಿ ಕಸುಮ, ರವರು ಕೊಟ್ಟ ದೂರಿನ ಮೇರೆಗೆ ಹಾಸನ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಲಾರಿ ಬೈಕ್ಗೆ ಡಿಕ್ಕಿ, ಬೈಕ್ ಸವಾರ ಸಾವು : ದಿನಾಂಕ: 14-11-2018 ರಂದು ಸಂಜೆ 7-45 ಗಂಟೆ ಸಮಯದಲ್ಲಿ ಬೇಲೂರು ಪಟ್ಟಣದ ದೇವಸ್ಥಾನ ಬೀದಿ, ವಾಸಿ ಶ್ರೀ ಸೋಮಶೇಖರ, ರವರು ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಘದ ವಾಹನಕ್ಕೆ ಚಾಲಕರಾಗಿದ್ದು, ಪಿರ್ಯಾದಿ ರವರ ಬಾಬ್ತು ಕೆಎ-13, ಕ್ಯೂ-9026 ರ ಟಿವಿಎಸ್, ಬೈಕ್ನಲ್ಲಿ ಅಕ್ಕನ ಮನೆಗೆ ಹೋಗಲು ಬೇಲೂರು ಪಟ್ಟಣ ಜೆ.ಪಿ. ನಗರ ಹತ್ತಿರ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-01, ಎಎಫ್, 0699 ರ ಲಾರಿಯ ಚಾಲಕ ತನ್ನ ವಾಹನವನ್ನು ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಬೈಕ್ಗೆ ಡಿಕ್ಕಿ ಮಾಡಿದ ಪರಿಣಾಮ ಶ್ರೀ ಸೊಮಶೇಖರ, 36 ವರ್ಷ, ದೇವಸ್ಥಾನದ ಬೀದಿ, ಬೇಲೂರು ಟೌನ್, ರವರಿಗೆ ತೀವ್ರ ಸ್ವರೂಪದ ರಕ್ತಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾರೆಂದು ಮೃತರ ಪತ್ನಿ ಶ್ರೀಮತಿ ಆಶಾ, ರವರು ಕೊಟ್ಟ ದೂರಿನ ಮೇರೆಗೆ  ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ.

ಬೈಕ್ ಡಿಕ್ಕಿ, ಪಾದಚಾರಿಗೆ ರಕ್ತಗಾಯ: ದಿನಾಂಕ: 14-11-2018 ರಂದು ಬೆಳಿಗ್ಗೆ 9-30 ಗಂಟೆ ಸಮಯದಲ್ಲಿ ಚನ್ನರಾಯಪಟ್ಟಣ ತಾಲ್ಲೂಕು, ದಂಡಿಗನಹಳ್ಳಿ ಹೋಬಳಿ, ನಂಬಿಹಳ್ಳಿ ಗ್ರಾಮದ ವಾಸಿ ಶ್ರೀ ಮೋಹನ್ಗೌಡ, ರವರು ಗ್ರಾಮದ ಶಂಕರಣ್ಣ, ರವರ ಮನೆಯ ಹತ್ತಿರ ನಡೆದುಕೊಂಡು ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಕೆಎ-13, ಬಿ-9996 ರ ಬೈಕ್ನಲ್ಲಿ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಶ್ರೀ ಮೋಹನ್ಗೌಡ, ರವರಿಗೆ ಡಿಕ್ಕಿ ಪರಿಣಾಮ ರಕ್ತಗಾಯಗಳಾಗಿದ್ದು, ಚನ್ನರಾಯಪಟ್ಟಣದ ಪುಣ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಗಾಯಾಳು ಸ್ನೇಹಿತರಾದ ಸ್ನೇಹಿತರಾದ ಶ್ರೀ ಲೋಕೇಶ್, ರವರು ಕೊಟ್ಟ ದೂರಿನ ಮೇರೆಗೆ  ಚನ್ನರಾಯಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆಯಲ್ಲಿರುತ್ತೆ. 

ವಿದ್ಯಾರ್ಥಿ ಕಾಣೆ : ದಿನಾಂಕ: 13-11-2018 ರಂದು ಬೆಳಿಗ್ಗೆ 9-00 ಗಂಟೆ ಸಮಯದಲ್ಲಿ ಅರಸೀಕೆರೆ ತಾಲ್ಲೂಕು, ಗಂಡಸಿ ಹೋಬಳಿ, ಆದಿಹಳ್ಳಿ ಗ್ರಾಮದ ವಾಸಿ ಶ್ರೀ ಸುರೇಶ್, ರವರ ಮಗ ಕು|| ಆಕಾಶ್, ಗಂಡಸಿ ಫ್ರೌಡಶಾಲೆಯಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ಶಾಲೆಗೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವನು ಇದುವರೆವಿಗೂ ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ, ಪತ್ತೆಮಾಡಿಕೊಡಬೇಕೆಂದು ಕು|| ಆಕಾಶ್ನ ತಾಯಿ ಶ್ರೀಮತಿ ರತ್ನಮ್ಮ ರವರು ಕೊಟ್ಟ ದೂರಿನ ಮೇರೆಗೆ ಗಂಡಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾಣೆಯಾದ ಹುಡುಗನ ಚಹರೆ: ಕು|| ಆಕಾಶ್ ಬಿನ್ ಸುರೇಶ್ 15 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಮೈಕಟ್ಟು, ಮನೆಯಿಂದ ಹೋಗುವಾಗ ಬಿಳಿ ಶರ್ಟ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಈ ಹುಡುಗನ ಸುಳಿವು ಸಿಕ್ಕಲ್ಲಿ 08174-220630 ಕ್ಕೆ ಸಂಪರ್ಕಿಸುವುದು.

ಹುಡುಗಿ ಕಾಣೆ : ದಿನಾಂಕ: 05-11-2018 ರಂದು ಬೆಳಿಗ್ಗೆ 8-00 ಗಂಟೆ ಸಮಯದಲ್ಲಿ ಸಕಲೇಶಪುರ ತಾಲ್ಲೂಕು, ಬೆಳಗೋಡು ಹೋಬಳಿ, ಕೊಲ್ಲಹಳ್ಳಿ ಕುಶಾಲನಗರದ ವಾಸಿ ಶ್ರೀ ಮಂಜುನಾಥಚಾರ್, ರವರ ಮಗಳು ಕು|| ಪ್ರೀತಿ, ಸಕಲೇಶಪುರ ಪಟ್ಟಣದ ಬಾಳಗದ್ದೆ ಬಡಾವಣೆಯಲ್ಲಿರುವ ಎಆರ್ಟಿಓ ಆಫೀಸ್ ಎದುರುಗಡೆ ಇರುವ ಪ್ರಭು ಆಟೋಲಿಂಕ್ಸ್ನಲ್ಲಿ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಕಾಣೆಯಾದ ಹುಡುಗಿಯ ಚಹರೆ: ಕು|| ಪ್ರೀತಿ ಬಿನ್ ಮಂಜುನಾಥಚಾರ್, 17 ವರ್ಷ, 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾಧಾರಣಾ ಬಣ್ಣ, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಈ ಹುಡುಗಿಯ ಸುಳಿವು ಸಿಕ್ಕಲ್ಲಿ 08173-244100 ಕ್ಕೆ ಸಂಪರ್ಕಿಸುವುದು.

No comments: